Health Care Tips : ಮಹಿಳೆಯರೇ ಮುಟ್ಟಿನ ಸಮಯದಲ್ಲಿ ಹುಣಸೆಯ ಚಿಗುರೆಲೆ ಸೇವಿಸಿ, ಇಲ್ಲಿದೆ ಕಾರಣ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 11, 2024 | 1:59 PM

ಹುಣಸೆ ಹಣ್ಣಿನ ಹೆಸರು ಕೇಳಿದ ಕೂಡಲೇ ಬಾಯಲ್ಲಿ ನೀರು ಬರುತ್ತದೆ. ಸ್ವಲ್ಪ ಉಪ್ಪು ಬೆರೆಸಿ ಹದ ಹಣ್ಣಾಗಿರುವ ಈ ಹುಣಸೆ ಹಣ್ಣನ್ನು ಸವಿದರೆ ಸ್ವರ್ಗಕ್ಕೆ ಮೂರೇ ಗೇಣು. ಈ ಹುಳಿ ಹಾಗೂ ಸಿಹಿ ಮಿಶ್ರಿತ ಈ ಹಣ್ಣನ್ನು ಅಡುಗೆಯ ರುಚಿ ಹೆಚ್ಚಿಸಲು ಬಳಸಲಾಗುತ್ತದೆ. ಆದರೆ ಈ ಹುಣಸೆ ಹಣ್ಣು ಮಾತ್ರವಲ್ಲದೇ, ಇದರ ಚಿಗುರೆಲೆಗಳ ಸೇವಿಸುವುದರಿಂದ ಆರೋಗ್ಯ ಪ್ರಯೋಜನಗಳು ಹಲವಾರಿದೆ.

Health Care Tips : ಮಹಿಳೆಯರೇ ಮುಟ್ಟಿನ ಸಮಯದಲ್ಲಿ ಹುಣಸೆಯ ಚಿಗುರೆಲೆ ಸೇವಿಸಿ, ಇಲ್ಲಿದೆ ಕಾರಣ
ಸಾಂದರ್ಭಿಕ ಚಿತ್ರ
Follow us on

ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಿದಾಗ ನಮ್ಮ ಸುತ್ತಮುತ್ತಲಿನ ಗಿಡಮೂಲಿಕೆ ಸಸ್ಯಗಳಿಂದ ಪರಿಹಾರ ಕಂಡುಕೊಳ್ಳುವುದು ಕಷ್ಟವಲ್ಲ. ರೋಗವನ್ನು ಗುಣಪಡಿಸುವುದರಲ್ಲಿ ಈ ಹುಣಸೆ ಗಿಡದ ಚಿಗುರೆಲೆಗಳು ಬಹುಮುಖ್ಯ ಪಾತ್ರವಹಿಸುತ್ತದೆ. ಈ ಎಲೆಗಳನ್ನು ಜಗಿದು ತಿನ್ನುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ.

  • ಮುಟ್ಟಿನ ಸಮಯದಲ್ಲಿ ಮಹಿಳೆಯರಲ್ಲಿ ಕಾಡುವ ನೋವು, ಸೆಳೆತವನ್ನು ಕಡಿಮೆ ಮಾಡಿಕೊಳ್ಳಲು ಹುಣಸೆ ಎಲೆಗಳನ್ನು ಸೇವಿಸುವುದು ಉತ್ತಮ. ಇಲ್ಲವಾದರೆ ಈ ಚಿಗುರೆಲೆಗಳನ್ನು ನೀರಿನಲ್ಲಿ ಕುದಿಸಿ ಸೇವಿಸಿದರೆ ಪರಿಣಾಮಕಾರಿ.
  • ಈ ಹುಣಸೆ ಎಲೆಗಳನ್ನು ತಿನ್ನುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.
  • ಕೀಲು ನೋವು ಹಾಗೂ ಮಂಡಿ ನೋವಿನಂತಹ ಸಮಸ್ಯೆಯಿದ್ದರೆ ಹುಣಸೆ ಎಲೆಗಳನ್ನು ನಿಯಮಿತವಾಗಿ ಸೇವಿಸಿದರೆ ನೋವು ಮಾಯಾವಾಗುತ್ತದೆ
  • ಜಂತು ಹುಳು ಸಮಸ್ಯೆಯಿರುವವರು ನಿಯಮಿತವಾಗಿ ಹುಣಸೆ ಚಿಗುರೆಲೆ ಸೇವಿಸುತ್ತ ಬಂದರೆ ಈ ಸಮಸ್ಯೆಯು ದೂರವಾಗುತ್ತದೆ.
  • ಎದೆ ಹಾಲು ಕಡಿಮೆಯಿದ್ದರೆ, ಹುಣಸೆ ಮರದ ಚಿಗುರೆಲೆಯಿಂದ ಕಷಾಯ ಮಾಡಿ ನಿಯಮಿತವಾಗಿ ಸೇವಿಸಿದರೆ ತಾಯಿಯ ಎದೆ ಹಾಲು ಉತ್ಪತ್ತಿಯಾಗುತ್ತದೆ.
  • ದಿನನಿತ್ಯ ಈ ಹುಣಸೆಯ ಚಿಗುರೆಲೆಯನ್ನು ಸೇವಿಸುತ್ತಿದ್ದರೆ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಕಡಿಮೆಯಾಗುತ್ತದೆ.
  • ಮಲೇರಿಯಾಗೆ ಈ ಹುಣಸೆಯ ಚಿರುಗೆಲೆಯು ಉತ್ತಮವಾದ ಮನೆ ಮದ್ದಾಗಿದೆ.
  • ಮೂತ್ರ ವಿಸರ್ಜನೆ ಮತ್ತು ಮಲಬದ್ಧತೆಯ ಸಮಸ್ಯೆಯಿರುವವರು ಈ ಎಲೆಯಿಂದ ಮಾಡಿದ ಕಷಾಯವನ್ನು ಸೇವಿಸಬಹುದು.
  • ಹುಣಸೆ ಎಲೆ ಚಿಗುರನ್ನು ಒಣಗಿಸಿ ಪುಡಿಮಾಡಿ ನಿಂಬೆರಸದೊಂದಿಗೆ ನೋವು ಇದಲ್ಲಿ ಹಚ್ಚಿದರೆ ನೋವು ಕಡಿಮೆಯಾಗುತ್ತದೆ.

ಈ ಮನೆ ಮದ್ದನ್ನೊಮ್ಮೆ ಪ್ರಯತ್ನಿಸುವ ಮುನ್ನ ವೈದ್ಯರ ಸಲಹೆಗಳನ್ನು ಪಡೆಯುವುದು ಉತ್ತಮ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ