ಪ್ರತಿದಿನ ಬಿಂದಿ ಧರಿಸುವುದರ ಹಿಂದಿರುವ ವೈಜ್ಞಾನಿಕ ಕಾರಣ ನಿಮಗೆ ಗೊತ್ತಾ? ಚರ್ಮವನ್ನು ಸುಂದರವಾಗಿರಿಸಲು ಸಹಾಯ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

| Updated By: ಅಕ್ಷತಾ ವರ್ಕಾಡಿ

Updated on: Apr 19, 2023 | 6:53 PM

ಭಾರತೀಯ ಮಹಿಳೆಯರು ಶತಮಾನಗಳಿಂದ ಪ್ರತಿದಿನವೂ ಬಿಂದಿ ಹಚ್ಚುತ್ತಾ ಬಂದಿದ್ದಾರೆ. ಇದು ಕೇವಲ ಫ್ಯಾಷನ್ ಗಾಗಿ ಎಂದು ಜನರು ಭಾವಿಸಬಹುದು ಆದರೆ ಅದರ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಅವು ಯಾವುದು ಇಲ್ಲಿದೆ ಮಾಹಿತಿ.

ಪ್ರತಿದಿನ ಬಿಂದಿ ಧರಿಸುವುದರ ಹಿಂದಿರುವ ವೈಜ್ಞಾನಿಕ  ಕಾರಣ ನಿಮಗೆ ಗೊತ್ತಾ? ಚರ್ಮವನ್ನು ಸುಂದರವಾಗಿರಿಸಲು  ಸಹಾಯ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
Image Credit source: pixabay
Follow us on

ಭಾರತದಲ್ಲಿ, ಪ್ರತಿಯೊಬ್ಬ ಮಹಿಳೆಯರ ಬ್ಯಾಗ್ನಲ್ಲಿ ಕನಿಷ್ಠ ಒಂದು ಬಿಂದಿ ಡಬ್ಬ ಖಂಡಿತವಾಗಿಯೂ ಕಾಣಬಹುದು. ಸಾಂಪ್ರದಾಯಿಕ ಏನನ್ನಾದರೂ ಧರಿಸುವ ಸಮಯ ಬಂದಾಗಲೆಲ್ಲಾ, ಹೆಚ್ಚಿನ ಮಹಿಳೆಯರು ಸುಂದರವಾಗಿ ಕಾಣಲು ಬಿಂದಿ ಹಾಕಲು ಬಯಸುತ್ತಾರೆ. ಅದರಲ್ಲಿಯೂ ಭಾರತೀಯ ಮಹಿಳೆಯರು ಶತಮಾನಗಳಿಂದ ಪ್ರತಿದಿನವೂ ಬಿಂದಿ ಹಚ್ಚುತ್ತಾ ಬಂದಿದ್ದಾರೆ. ಇದು ಕೇವಲ ಫ್ಯಾಷನ್ ಗಾಗಿ ಎಂದು ಜನರು ಭಾವಿಸಬಹುದು ಆದರೆ ಅದರ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಯೋಗದ ಪ್ರಕಾರ, ಮಹಿಳೆಯರು ತಮ್ಮ ಬಿಂದಿಯನ್ನು ಧರಿಸುವ ಸ್ಥಳವನ್ನು ಅಜ್ನಾ ಚಕ್ರ ಎಂದು ಕರೆಯಲಾಗುತ್ತದೆ, ಮತ್ತು ಈ ಬಿಂದುವನ್ನು ದಿನಕ್ಕೆ ಅನೇಕ ಬಾರಿ ಒತ್ತುವುದರಿಂದ(ಪ್ರೆಸ್) ಹಲವಾರು ಪ್ರಯೋಜನಗಳಿವೆ.

ಆಯುರ್ವೇದ ತಜ್ಞರೊಬ್ಬರು ಇತ್ತೀಚೆಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ಬಿಂದಿ ಹಚ್ಚುವುದರಿಂದ ಮಾನವ ದೇಹಕ್ಕೆ ಹೇಗೆ ಪ್ರಯೋಜನವಾಗುತ್ತದೆ ಎಂಬುದರ ಬಗ್ಗೆ ಮಾತನಾಡಿದ್ದರು. ಅಲ್ಲದೆ ಯೋಗದ ಪ್ರಕಾರ, ಈ ಬಿಂದುವನ್ನು ‘ಅಜ್ನಾ ಚಕ್ರ’ ಎಂದು ಕರೆಯಲಾಗುತ್ತದೆ – ಇದು ಮಾನವ ದೇಹದ ಆರನೇ ಮತ್ತು ಅತ್ಯಂತ ಶಕ್ತಿಯುತ ಚಕ್ರವಾಗಿದೆ ಮತ್ತು ಇದು ತಲೆ, ಕಣ್ಣುಗಳು, ಮೆದುಳು, ಪೀನಿಯಲ್ ಗ್ರಂಥಿ ಮತ್ತು ಪಿಟ್ಯುಟರಿ ಗ್ರಂಥಿಯನ್ನು ಒಳಗೊಂಡಿದೆ ಎಂದು ಡಾ.ದಿಕ್ಸಾ ಭಾವ್ಸರ್ ಸವಲಿಯಾ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುತ್ತಿದೆಯೇ? ಗ್ರಹಣಕಾಲದಲ್ಲಿ ಏನು ಮಾಡಬೇಕು ಏನೇನು ಮಾಡಬಾರದು; ಇಲ್ಲಿದೆ ಮಾಹಿತಿ

ಸಾಮಾನ್ಯವಾಗಿ ಮಹಿಳೆಯರಿಗೆ ಬಿಂದಿ ಧರಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ನೀವು ಗಮನಿಸಿರಬಹುದು ಅದನ್ನು ಇರಿಸಿ, ಸ್ವಲ್ಪ ಸರಿಹೊಂದಿಸಿ ಮತ್ತು ನಂತರ ಅದು ಸ್ಥಳದಲ್ಲಿಯೇ ಇದೆಯೆ ಎಂದು ಖಚಿತಪಡಿಸಿಕೊಳ್ಳಲು ಅದನ್ನು ದೃಢವಾಗಿ ಒತ್ತುತ್ತೀರಿ. ಇನ್ನು ಕೆಲವರಿಗೆ ಬಿದ್ದು ಹೋಗಬಹುದೆಂಬ ಭಯದಿಂದ ಹಾಗೆ ಮಾಡುತ್ತಾರೆ. ಪ್ರತಿದಿನ ಅನೇಕ ಬಾರಿ ಹೀಗೆ ಮಾಡುವುದರಿಂದ ಹಲವಾರು ಪ್ರಯೋಜನಗಳನ್ನು ಹೊಂದಿದೆ ಎಂಬುದು ತಿಳಿದು ಬಂದಿದೆ. ಇದು ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರಿಗೂ ಪ್ರಯೋಜನಕಾರಿಯಾಗಿದೆ. ಪುರುಷರು ಬಿಂದಿ ಧರಿಸಲು ಸಾಧ್ಯವಿಲ್ಲದ ಕಾರಣ, ಅವರು ಅಜ್ನಾ ಚಕ್ರದ ಮೇಲೆ ಪ್ರತಿದಿನ ಕುಂಕುಮ ತಿಲಕವನ್ನು ಹಾಕಬಹುದು ಅಥವಾ ಅವರು ದಿನಕ್ಕೆ 100 ಆ ಬಾರಿ ಬಿಂದುವನ್ನು ಒತ್ತಬಹುದು.

ಬಿಂದಿ ಇಡುವುದರಿಂದ ಆಗುವ ಪ್ರಯೋಜನಗಳೇನು?

  • ತಲೆನೋವನ್ನು ನಿವಾರಿಸುತ್ತದೆ.
  • ನಿಮ್ಮ ಸೈನಸ್ ಗಳನ್ನು ನಿವಾರಿಸುತ್ತದೆ.
  • ದೃಷ್ಟಿ ಮತ್ತು ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ.
  • ನಿಮ್ಮ ಚರ್ಮವನ್ನು ಕಾಂತಿಯುತವಾಗಿ ಮಾಡಿ ಚರ್ಮ ಸುಕ್ಕು ಗಟ್ಟದಂತೆ ನೋಡಿಕೊಳ್ಳುತ್ತದೆ.
  • ಖಿನ್ನತೆ ತಡೆಯುತ್ತದೆ.
  • ಶ್ರವಣ ಶಕ್ತಿಯನ್ನು ಸುಧಾರಿಸುತ್ತದೆ.
  • ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
  • ಒತ್ತಡದಿಂದ ಉಂಟಾಗುವ ಮೈಗ್ರೇನ್ ತಲೆನೋವನ್ನು ಕಡಿಮೆ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:53 pm, Wed, 19 April 23