ಗುಚ್ಚಿ ಅಣಬೆಗಳ ಬಗ್ಗೆ ಎಂದಾದರೂ ಕೇಳಿದ್ದೀರಾ? ಪ್ರಪಂಚದ ಅತ್ಯಂತ ದುಬಾರಿ ಫಂಗಸ್ ಎಷ್ಟು ಆರೋಗ್ಯಕರ ಎಂದು ತಿಳಿಯಿರಿ

ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ಹಿಂದಿ ಬಿಗ್ ಬಾಸ್ ಖ್ಯಾತಿಯ ರುಬಿನಾ ದಿಲಾಯಿಕ್ ಈ ಹುರಿದ ಅಣಬೆಗಳ ಪ್ಲೇಟ್ ಅನ್ನು ಸವಿಯುತ್ತಿರುವುದನ್ನು ನೋಡಲಾಗಿದೆ. ಈ 500 ಗ್ರಾಂ ಅಣಬೆ ಬೆಲೆ ಬರೋಬ್ಬರಿ ರೂ.18000

ಗುಚ್ಚಿ ಅಣಬೆಗಳ ಬಗ್ಗೆ ಎಂದಾದರೂ ಕೇಳಿದ್ದೀರಾ? ಪ್ರಪಂಚದ ಅತ್ಯಂತ ದುಬಾರಿ ಫಂಗಸ್ ಎಷ್ಟು ಆರೋಗ್ಯಕರ ಎಂದು ತಿಳಿಯಿರಿ
ವಿಶ್ವದ ಅತ್ಯಂತ ದುಬಾರಿ ಗುಚ್ಚಿ ಅಣಬೆಗಳು
Follow us
TV9 Web
| Updated By: ನಯನಾ ಎಸ್​ಪಿ

Updated on:Apr 20, 2023 | 1:17 PM

ಹಲವಾರು ರೀತಿಯ ಅಣಬೆಗಳು (Mushrooms) ಸವಿಯಲು ಸಿಗುತ್ತದೆ. ಪ್ರತಿಯೊಂದು ಅಣಬೆಯು ಅವುಗಳ ಸುವಾಸನೆ, ವಿನ್ಯಾಸ, ಅಡುಗೆ ತಂತ್ರಗಳು ಅಥವಾ ಪೌಷ್ಟಿಕಾಂಶದ ಅಂಶದಲ್ಲಿ ವಿಬ್ಭಿನ್ನವಾಗಿರುತ್ತದೆ. ಅವು ಎಲ್ಲ ರೀತಿಯಲ್ಲೂ ಆರೋಗ್ಯಕ್ಕೆ ಉತ್ತಮವಾಗಿದೆ, ಆದರೆ ಇದರಿಂದ ದೇಹಕ್ಕೆ ವಿಟಮಿನ್ ಡಿ (Vitamin D) ಹೆಚ್ಚು ಸಿಗುತ್ತದೆ. ಜನ ಬಟನ್ ಅಥವಾ ಶಿಟೇಕ್‌ ಅಣಬೆಗಳನ್ನು ಹೆಚ್ಚಾಗಿ ಸೇವಿಸಲು ಇಷ್ಟಪಡುತ್ತಾರೆ. ಆದರೂ ಕೆಲವು ಪ್ರಭೇದಗಳು ವಿಷಕಾರಿ ಮತ್ತು ಎಂದಿಗೂ ಸೇವಿಸಬಾರದು. ಆದರೆ ಬೆಟ್ಟದ ತಪ್ಪಲಿನಲ್ಲಿ ಅಥವಾ ಹಿಮಾಲಯದಲ್ಲಿ ಪ್ರತ್ಯೇಕವಾಗಿ ಕಂಡುಬರುವ ಈ ಗುಚ್ಚಿ ಅಣಬೆಗಳು (Gucchi Mushrooms) ವಿಶಿಷ್ಟವಾಗಿದೆ. ಜೊತೆಗೆ ನಂಬಲಾಗದಷ್ಟು ದುಬಾರಿಯಾಗಿದೆ.

ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ಬಿಗ್ ಬಾಸ್ ಖ್ಯಾತಿಯ ರುಬಿನಾ ದಿಲೈಕ್ ಈ ಹುರಿದ ಅಣಬೆಗಳನ್ನ ಸವಿಯುತ್ತಿರುವುದನ್ನು ನೋಡಬಹುದು, ಇದು ‘ಆರ್ಗಾನಿಕ್ ಕಾಶ್ಮೀರ’ ಪ್ರಕಾರ 500 ಗ್ರಾಂ ಗುಚ್ಚಿ ಅಣಬೆಯ ಬೆಲೆ 18000 ರೂ.

ಗುಚ್ಚಿ ಅಣಬೆಗಳು ಸ್ಪಂಜಿನಂತಿರುತ್ತವೆ, ಜೇನುಗೂಡಿನಂತೆ ಕಾಣುತ್ತದೆ ಮತ್ತು ಖಾರದ ಪರಿಮಳವನ್ನು ಹೊಂದಿರುತ್ತವೆ – ಅವು ಅಸ್ಕೊಮೈಕೋಟಾದ ಮೊರ್ಚೆಲೇಸಿ ಕುಟುಂಬದಿಂದ ಬಂದವು. ಅವು ತಿಳಿ ಹಳದಿ ಬಣ್ಣದಲ್ಲಿರುತ್ತವೆ. ಈ ವಿಶಿಷ್ಟ ಅಣಬೆಗಳನ್ನು ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಕೋನಿಫರ್ ಕಾಡುಗಳಲ್ಲಿ ವಾಣಿಜ್ಯಿಕವಾಗಿ ಬೆಳೆಸಲಾಗುತ್ತದೆ. ಅವುಗಳನ್ನು ಸಂಗ್ರಹಿಸಿ ಒಣಗಿಸಿ ಮಾರುಕಟ್ಟೆಗೆ ತರಲು ತಿಂಗಳುಗಟ್ಟಲೆ ಸಮಯ ಬೇಕಾಗುತ್ತದೆ.

ಸಾಂಪ್ರದಾಯಿಕವಾಗಿ, ಅಣಬೆಗಳು ಫೈಬರ್ ಜೊತೆಗೆ ವಿಟಮಿನ್ ಡಿ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಅವುಗಳು ಪೊಟ್ಯಾಸಿಯಮ್, ಬಿ-ವಿಟಮಿನ್‌ಗಳು, ಉತ್ಕರ್ಷಣ ನಿರೋಧಕಗಳು ಮತ್ತು ತಾಮ್ರವನ್ನು ಸಹ ನೀಡುತ್ತವೆ. ಇದರ ಸೇವನೆಯು ಮಧುಮೇಹ ಮತ್ತು ಹೃದ್ರೋಗಗಳ ಉತ್ತಮ ನಿರ್ವಹಣೆಯೊಂದಿಗೆ ಬಲವಾಗಿ ಸಂಬಂಧಿಸಿದೆ ಎಂದು ವೈದ್ಯರು ಹೇಳುತ್ತಾರೆ. ಅವು ದೇಹಕ್ಕೆ ಹಾನಿ ಮಾಡುವ ಆಕ್ಸಿಡೇಟಿವ್ ಒತ್ತಡವನ್ನು ಬಿಡುಗಡೆ ಮಾಡುತ್ತವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಈ ಬೇಸಿಗೆಯಲ್ಲಿ ಅತಿಯಾಗಿ ಬೆವರುವುದನ್ನು ತಡೆಗಟ್ಟುವುದು ಹೇಗೆ? ಇಲ್ಲಿದೆ ಸಲಹೆ

ಆಹಾರದಲ್ಲಿ ಗುಚ್ಚಿ ಮಶ್ರೂಮ್ ಅನ್ನು ಹೇಗೆ ಸೇರಿಸುವುದು ಎಂದು ಹಲವರು ಆಶ್ಚರ್ಯ ಪಡುತ್ತಾರೆ – ಗುಚ್ಚಿ ಅಣಬೆಯನ್ನು ಅರ್ಧ ಭಾಗವಾಗಿ ತುಂಡರಿಸಿ, ಹೆಚ್ಚಿನ ಶಾಖದಲ್ಲಿ ಹುರಿಯಿರಿ ಮತ್ತು ಸವಿಯಿರಿ. ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ರುಬಿನಾ ದಿಲೈಕ್ ಅಣಬೆಗಳನ್ನು ಸಣ್ಣ ತಟ್ಟೆಯಲ್ಲಿಟ್ಟು ಸವಿಯುವುದನ್ನು ನೋಡಬಹುದು

Published On - 1:13 pm, Thu, 20 April 23