AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಡವಳಿಕೆ ಪುರುಷರಲ್ಲಿ ಕಂಡು ಬಂದ್ರೆ ದುರ್ಬಲ ವ್ಯಕ್ತಿತ್ವವುಳ್ಳ ವ್ಯಕ್ತಿ ಎಂದರ್ಥ

ನಮ್ಮ ವ್ಯಕ್ತಿತ್ವವು ನಾವು ಇರುವ ರೀತಿ ಮತ್ತು ನಾವು ವರ್ತಿಸುವ ರೀತಿಯನ್ನು ಸೂಚಿಸುತ್ತದೆ. ಕೆಲವರು ವ್ಯಕ್ತಿಗಳ ಸುತ್ತ ಜನರು ಇರುವೆಯಂತೆ ಮುತ್ತಿಕೊಳ್ಳುತ್ತಾರೆ. ಅವರ ವ್ಯಕ್ತಿತ್ವ ಹಾಗೂ ಗುಣಸ್ವಭಾವವು ಎಲ್ಲರನ್ನು ಸೆಳೆಯುವಂತೆ ಮಾಡುತ್ತದೆ. ಒಂದು ವೇಳೆ ನಿಮ್ಮ ಸುತ್ತಮುತ್ತಲಿನಲ್ಲಿ ಪುರುಷರು ಈ ನಡವಳಿಕೆಗಳಿಂದ ದುರ್ಬಲ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಹಾಗಾದ್ರೆ ದುರ್ಬಲ ವ್ಯಕ್ತಿತ್ವ ಹೊಂದಿರುವ ಪುರುಷರ ನಡವಳಿಕೆಗಳು ಹೇಗಿರುತ್ತದೆ? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ನಡವಳಿಕೆ ಪುರುಷರಲ್ಲಿ ಕಂಡು ಬಂದ್ರೆ ದುರ್ಬಲ ವ್ಯಕ್ತಿತ್ವವುಳ್ಳ ವ್ಯಕ್ತಿ ಎಂದರ್ಥ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on:Jan 14, 2025 | 3:03 PM

Share

ಒಬ್ಬ ವ್ಯಕ್ತಿಯನ್ನು ಮತ್ತೊಬ್ಬ ವ್ಯಕ್ತಿಯೊಂದಿಗೆ ಹೋಲಿಸಿದ್ರೆ ವ್ಯಕ್ತಿತ್ವದಲ್ಲಿ ತುಂಬಾನೇ ಭಿನ್ನತೆಯಿರುತ್ತದೆ. ಆದರೆ ಕೆಲವು ವ್ಯಕ್ತಿಗಲನ್ನು ಒಮ್ಮೆ ನೋಡಿದ್ರೆ ನೋಡ್ತಾನೇ ಇರ್ಬೇಕು, ಅವರೊಂದಿಗೆ ಸಮಯ ಕಳೆಯಲು ಹಾಗೂ ಸ್ನೇಹ ಸಂಬಂಧ ಹೊಂದಲು ಮನಸ್ಸು ಬಯಸುತ್ತದೆ. ಇಂತಹ ವ್ಯಕ್ತಿಗಳು ನಮ್ಮ ಸುತ್ತಮುತ್ತಲಿನಲ್ಲಿರುತ್ತಾರೆ. ಇನ್ನು ಕೆಲ ವ್ಯಕ್ತಿಗಳು ತಮ್ಮ ಕೆಳಮಟ್ಟದ ಗುಣಸ್ವಭಾವದಿಂದಲೇ ಮೂಲೆಗುಂಪಾಗಿರುತ್ತಾರೆ. ಅದರಲ್ಲಿ ಕೆಲವು ಪುರುಷರು ದುರ್ಬಲ ವ್ಯಕ್ತಿತ್ವದಿಂದಲೇ ಸಮಾಜದಲ್ಲಿ ಕೆಳಮಟ್ಟದಲ್ಲೇ ಗುರುತಿಸಿಕೊಳ್ಳುತ್ತಾರೆ. ಹಾಗಾದ್ರೆ ದುರ್ಬಲ ವ್ಯಕ್ತಿತ್ವ ಹೊಂದಿರುವ ಪುರುಷರ ನಡವಳಿಕೆ ಹೇಗಿರುತ್ತದೆ ಎಂದು ನೀವಿಲ್ಲಿ ತಿಳಿದುಕೊಳ್ಳಿ.

ಜವಾಬ್ದಾರಿಯ ಕೊರತೆ:

ದುರ್ಬಲ ವ್ಯಕ್ತಿತ್ವ ಹೊಂದಿರುವ ಪುರುಷರು ಸಹಜವಾಗಿ ಜವಾಬ್ದಾರಿಗಳನ್ನು ಸ್ವೀಕರಿಸಲು ಹಾಗೂ ನಿಭಾಯಿಸಲು ಹೆಣಗಾಡುತ್ತಿರುತ್ತಾರೆ. ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು, ಇಲ್ಲದಿದ್ದರೆ ಜವಾಬ್ದಾರಿಯುತವಾಗಿ ವರ್ತಿಸದೇ ಇತರರ ತಪ್ಪುಗಳನ್ನು ದೂಷಿಸುತ್ತಾರೆ. ಭಯ ಹಾಗೂ ಟೀಕೆಗೆ ಒಳಗಾಗುವ ಅತಂಕದಿಂದ ಯಾವುದೇ ಕೆಲಸದ ಜವಾಬ್ದಾರಿ ತನ್ನ ಹೆಗಲ ಮೇಲೆ ಹೊತ್ತುಕೊಳ್ಳಲು ಇಷ್ಟ ಪಡದೇ ಇರಬಹುದು.

ಮಹತ್ವಾಕಾಂಕ್ಷೆಯ ಕೊರತೆ:

ದುರ್ಬಲ ವ್ಯಕ್ತಿತ್ವ ಹೊಂದಿರುವ ಪುರುಷರಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಗಳ ಮತ್ತೊಂದು ಲಕ್ಷಣಗಳೆಂದರೆ ಮಹತ್ವಾಕಾಂಕ್ಷೆಯ ಕೊರತೆ. ಈ ವ್ಯಕ್ತಿಗಳು ಸದಾ ಆರಾಮದಾಯಕವಾಗಿರಲು ಇಷ್ಟ ಪಡುತ್ತಾರೆ. ಗುರಿ ಸಾಧಿಸಲು ಹಾಗೂ ಇನ್ಯಾವುದೋ ಕೆಲಸ ಮಾಡಲು ಆಸಕ್ತಿ ತೋರಿಸುವುದಿಲ್ಲ. ಆದರೆ ಈ ಮಹತ್ವಾಕಾಂಕ್ಷೆಯು ಕೇವಲ ಆರ್ಥಿಕ ಯಶಸ್ಸಿಗಿಂತ ಹೆಚ್ಚಾಗಿದ್ದು, ವೈಯಕ್ತಿಕ ಬೆಳವಣಿಗೆ ಮತ್ತು ಜೀವನದ ವಿವಿಧ ಸಂದರ್ಭದಲ್ಲಿ ತನ್ನನ್ನು ತಾನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ.

ಇತರರನ್ನು ಕೀಳಾಗಿ ಕಾಣುವುದು:

ದುರ್ಬಲ ವ್ಯಕ್ತಿತ್ವ ಹೊಂದಿರುವ ಪುರುಷರಲ್ಲಿ ತಾವು ಮಾತ್ರ ಒಳ್ಳೆಯವರು, ಇತರರು ಏನೇ ಮಾಡಿದರೂ ಕೂಡ ತಪ್ಪಾಗಿ ಕಾಣುತ್ತಾರೆ. ತನ್ನ ಸುತ್ತಮುತ್ತಲಿನ ವ್ಯಕ್ತಿಗಳನ್ನು ಕೀಳಾಗಿ ಕಾಣುವ ಸ್ವಭಾವ ಹೊಂದಿರುತ್ತಾರೆ. ಅಗೌರವ ತೋರುವ ಮೂಲಕ ತನ್ನ ಸುತ್ತಲಿನ ಜನರನ್ನು ಮಾತಿನಿಂದ ಟೀಕಿಸುತ್ತಾರೆ. ಈ ಗುಣವು ನಾನು ಹೇಳುವುದೆಲ್ಲವು ಸರಿ, ನಿಮ್ಮಲ್ಲಿ ತಪ್ಪಿದೆ ಎನ್ನುವುದನ್ನು ತೋರಿಸುತ್ತದೆ.

ಬೇರೆಯವರ ಮಾತನ್ನು ಆಲಿಸದೇ ಇರುವುದು:

ಪ್ರತಿಯೊಬ್ಬರು ಸಂವಹನ ನಡೆಸುವಾಗ ಇತರರ ಮಾತುಗಳನ್ನು ಆಲಿಸುವುದು ಬಹಳ ಮುಖ್ಯ. ಈ ಗುಣವಿದ್ದರೆ ಮಾತ್ರ ಸಂವಹನವು ಪರಿಣಾಮಕಾರಿಯಾಗಲು ಸಾಧ್ಯ. ಆದರೆ ದುರ್ಬಲ ವ್ಯಕ್ತಿತ್ವ ಹೊಂದಿರುವ ಪರುಷರಲ್ಲಿ ಕಳಪೆ ಮಟ್ಟದ ಆಲಿಸುವ ಕೌಶಲ್ಯವಿರುತ್ತದೆ. ಹೀಗಾಗಿ ಇತರರ ಅಭಿಪ್ರಾಯ ಹಾಗೂ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋಲುತ್ತಾರೆ. ಇದರಿಂದ ತಪ್ಪುಗ್ರಹಿಕೆಗಳು, ಘರ್ಷಣೆಗಳು ಹಾಗೂ ಸಂಬಂಧವು ಆಳವಾಗಿ ಬೇರೂರದೇ ಇರಬಹುದು.

ಭಾವನೆಗಳನ್ನು ವ್ಯಕ್ತಪಡಿಸಲು ಅಸಮರ್ಥತೆ:

ದುರ್ಬಲವಾಗಿರುವ ಪುರುಷರು ಭಾವನೆಗಳನ್ನು ವ್ಯಕ್ತಪಡಿಸಲು ಸೋಲುತ್ತಾರೆ. ಅಳು, ನೋವು, ದುಃಖದಂತಹ ಭಾವನೆಗಳನ್ನು ಪುರುಷರು ತೋರ್ಪಡಿಸಿದರೆ ಸಮಾಜದಲ್ಲಿ ಅವರು ಭಾವನಾತ್ಮಕ ಜೀವಿಗಳು ಎಂದು ಗುರುತಿಸಿಕೊಳ್ಳುತ್ತಾರೆ. ಹೀಗಾಗಿ ಈ ವ್ಯಕ್ತಿತ್ವ ಹೊಂದಿರುವ ಪುರುಷರು ತಮ್ಮೆಲ್ಲ ಭಾವನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ. ಇದು ಸಂಬಂಧದಲ್ಲಿ ತಿಳುವಳಿಕೆ ಕೊರತೆಯನ್ನುಂಟು ಮಾಡುತ್ತದೆ.

ನಕಾರಾತ್ಮಕ ಮನೋಭಾವ:

ದುರ್ಬಲ ವ್ಯಕ್ತಿತ್ವ ಹೊಂದಿರುವ ಪುರುಷರು ಸದಾ ನಕಾರಾತ್ಮಕ ಮನೋಭಾವವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ತನ್ನ ಸುತ್ತಮುತ್ತಲಿನಲ್ಲಿ ಜನರು ಮಾಡುವ ಕೆಲಸ ಕಾರ್ಯಗಳಲ್ಲಿ ಒಳ್ಳೆಯದನ್ನು ನೋಡುವ ಬದಲು ನಕಾರಾತ್ಮಕಯನ್ನೇ ಹುಡುಕುತ್ತಾರೆ. ತನ್ನ ಸ್ವಂತ ಅನುಭವ ಅಥವಾ ಇತರರ ಅನುಭವಗಳಲ್ಲಿ ನಕಾರಾತ್ಮಕ ಅಂಶಗಳ ಮೇಲೆ ಕೇಂದ್ರೀಕರಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಈ ನಡವಳಿಕೆಯು ವ್ಯಕ್ತಿಯನ್ನು ಸಂಪೂರ್ಣವಾಗಿ ಕುಗ್ಗಿಸುತ್ತದೆ. ವ್ಯಕ್ತಿತ್ವವನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ.

ಇದನ್ನೂ ಓದಿ: ಮಕರ ಸಂಕ್ರಾಂತಿ ಹಬ್ಬದ ದಿನವೇ ಗಾಳಿಪಟ ಹಾರಿಸುವುದು ಏಕೆ?

ಸ್ವಯಂ ಸುಧಾರಣೆಯ ಕೊರತೆ:

ಜೀವನದಲ್ಲಿ ತಾವು ಏನು ಮಾಡಬೇಕೆಂದು ಕೊಂಡಿದ್ದೇವೆ ಆ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಅದಲ್ಲದೆ ವೈಯುಕ್ತಿಕ ಜೀವನದ ಅಭಿವೃದ್ಧಿಗಾಗಿ ಬದಲಾವಣೆಗಳನ್ನು ಮಾಡಿಕೊಳ್ಳಲು ಇಷ್ಟ ಪಡುವುದಿಲ್ಲ.. ಆರೋಗ್ಯ ಕಾಳಜಿ ಹಾಗೂ ಕೌಶಲ್ಯಗಳ ಅಭಿವೃದ್ಧಿಯ ಕಡೆಗೆ ನಿರ್ಲಕ್ಷ್ಯ ವಹಿಸುವಂತಹ ನಡವಳಿಕೆಗಳು ಈ ವ್ಯಕ್ತಿಗಳಲ್ಲಿ ಕಂಡು ಬರುತ್ತದೆ.

ಅಪ್ರಮಾಣಿಕತೆ:

ದುರ್ಬಲ ವ್ಯಕ್ತಿತ್ವವುಳ್ಳ ಪುರುಷರು ತಾವು ಸ್ಟ್ರಾಂಗ್ ಎಂದು ತೋರಿಸಲು ಸದಾ ಒಂದಲ್ಲ ಒಂದು ಸುಳ್ಳು ಹೇಳುವ ಮೂಲಕ ಎಲ್ಲರನ್ನು ನಂಬಿಸುತ್ತಾರೆ. ತಮ್ಮತ್ತ ಎಲ್ಲರನ್ನು ಕೇಂದ್ರೀಕರಿಸಲು ಸುಳ್ಳು ಹೇಳುವುದನ್ನೇ ಬಂಡವಾಳವನ್ನಾಗಿಸಿಕೊಳ್ಳುತ್ತಾರೆ. ಸಂಬಂಧದಲ್ಲಿ ಅಪ್ರಮಾಣಿಕರಾಗಿದ್ದು, ಇತರರನ್ನು ಮೋಸಗೊಳಿಸಲು ಪ್ರಯತ್ನಿಸುವ ನಡವಳಿಕೆಗಳು ಈ ವ್ಯಕ್ತಿಗಳಲ್ಲಿ ಕಂಡು ಬರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:53 pm, Tue, 14 January 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ