Toothache: ಹಲ್ಲುನೋವಿನಿಂದ ತಕ್ಷಣ ಪರಿಹಾರ ಬೇಕೆ? ಈ 3 ವಿಧಾನಗಳನ್ನು ಅನುಸರಿಸಿ

ಹಲ್ಲು ನೋವು ಯಾವ ಸಂದರ್ಭದಲ್ಲಿ ಬೇಕಾದರೂ ನಿಮ್ಮನ್ನು ಕಾಡಬಹುದು, ಹುಳುಕು ಹಲ್ಲು, ಗಟ್ಟಿ ಆಹಾರ ಸೇವನೆ, ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು, ಕ್ಯಾಲ್ಸಿಯಂ ಕೊರತೆ, ಬ್ಯಾಕ್ಟೀರಿಯಾದ ಸೋಂಕು, ದುರ್ಬಲ ಹಲ್ಲುಗಳಂತಹ ಹಲವು ಕಾರಣಗಳಿಂದ ಹಲ್ಲುನೋವು ಉಂಟಾಗುತ್ತದೆ.

Toothache: ಹಲ್ಲುನೋವಿನಿಂದ ತಕ್ಷಣ ಪರಿಹಾರ ಬೇಕೆ? ಈ 3 ವಿಧಾನಗಳನ್ನು ಅನುಸರಿಸಿ
Toothache
Follow us
TV9 Web
| Updated By: ನಯನಾ ರಾಜೀವ್

Updated on: Aug 24, 2022 | 11:09 AM

ಹಲ್ಲು ನೋವು ಯಾವ ಸಂದರ್ಭದಲ್ಲಿ ಬೇಕಾದರೂ ನಿಮ್ಮನ್ನು ಕಾಡಬಹುದು, ಹುಳುಕು ಹಲ್ಲು, ಗಟ್ಟಿ ಆಹಾರ ಸೇವನೆ, ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು, ಕ್ಯಾಲ್ಸಿಯಂ ಕೊರತೆ, ಬ್ಯಾಕ್ಟೀರಿಯಾದ ಸೋಂಕು, ದುರ್ಬಲ ಹಲ್ಲುಗಳಂತಹ ಹಲವು ಕಾರಣಗಳಿಂದ ಹಲ್ಲುನೋವು ಉಂಟಾಗುತ್ತದೆ.

ಯಾವುದೇ ಹಲ್ಲಿನ ಸಮಸ್ಯೆಯ ಚಿಕಿತ್ಸೆಗಾಗಿ ನಾವು ದಂತವೈದ್ಯರ ಬಳಿಗೆ ಹೋಗುತ್ತೇವೆ. ಕೆಲವೊಮ್ಮೆ ಹಲ್ಲು ನೋವು ರಾತ್ರಿ ಶುರುವಾಗುತ್ತದೆ, ಆ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಾವು ನೋವಿನಿಂದ ನರಳುತ್ತೇವೆ. ನಿಮಗೂ ಹಠಾತ್ ಹಲ್ಲು ನೋವು ಕಾಣಿಸಿಕೊಂಡು ವೈದ್ಯರ ಬಳಿ ಹೋಗಲಾಗದಿದ್ದರೆ.. ಕೆಲವು ಮನೆಮದ್ದು ಸಲಹೆಗಳನ್ನು ಅನುಸರಿಸಬಹುದು.

ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಹಲ್ಲುನೋವಿನಿಂದ ಶೀಘ್ರ ಪರಿಹಾರವನ್ನು ಪಡೆಯಬಹುದು. ಹಲ್ಲುನೋವು ಮತ್ತು ಸೋಂಕನ್ನು ಪರಿಣಾಮಕಾರಿಯಾಗಿ ಗುಣಪಡಿಸುವ ಕೆಲವು ಮನೆಮದ್ದುಗಳಿವೆ ತಿಳಿಯೋಣ.

ಬೆಚ್ಚಗಿನ ನೀರಿನಿಂದ ತೊಳೆಯಿರಿ ಹಲ್ಲುನೋವು ನಿವಾರಿಸಲು ಬೆಚ್ಚಗಿನ ನೀರಿನಿಂದ ಗಾರ್ಗ್ಲ್ ಮಾಡಿ. ಬೆಚ್ಚಗಿನ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಿಯಲ್ಲಿ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡಬಹುದು. ಇದು ನೋವನ್ನು ಸಹ ನಿವಾರಿಸುತ್ತದೆ.

ನೀವು ಕೆಲವು ಸೆಕೆಂಡುಗಳ ಕಾಲ ನಿಮ್ಮ ಬಾಯಿಯಲ್ಲಿ ಬೆಚ್ಚಗಿನ ನೀರನ್ನು ಹಿಡಿದಿಟ್ಟುಕೊಳ್ಳಿ ಮತ್ತು ನಂತರ ಅದನ್ನು ಉಗುಳಿ, ಬೆಚ್ಚಗಿನ ನೀರಿನಿಂದ ಗಾರ್ಗ್ಲಿಂಗ್ ಮಾಡಿ ಒಸಡುಗಳಲ್ಲಿನ ನೋವನ್ನು ಕಡಿಮೆ ಮಾಡಿ.

ಪುದೀನಾ ಟೀ ಯಾವುದೇ ಚಹಾವನ್ನು ಕುಡಿಯುವುದರಿಂದ ಹಲ್ಲುನೋವು ನಿವಾರಿಸಲು ಸಹಾಯ ಮಾಡುತ್ತದೆ. ಪುದೀನಾ ಚಹಾವು ನೋವನ್ನು ಶಮನಗೊಳಿಸಲು ಸಹಾಯ ಮಾಡುವ ಗುಣಗಳನ್ನು ಹೊಂದಿದೆ. ಹಲ್ಲುನೋವು ಕಡಿಮೆ ಮಾಡಲು ಪುದೀನಾ ಚಹಾ ತುಂಬಾ ಪರಿಣಾಮಕಾರಿಯಾಗಿದೆ.

ಲವಂಗದ ಎಣ್ಣೆ ಹಲ್ಲುನೋವು ಕಡಿಮೆ ಮಾಡುವಲ್ಲಿ ಲವಂಗದ ಎಣ್ಣೆ ತುಂಬಾ ಪರಿಣಾಮಕಾರಿ. ತಜ್ಞರ ಪ್ರಕಾರ, ಲವಂಗದ ಎಣ್ಣೆಯ ಕೆಲವು ಹನಿಗಳನ್ನು ನೋಯುತ್ತಿರುವ ಹಲ್ಲಿನ ಮೇಲೆ ಹಚ್ಚುವುದರಿಂದ ಹಲ್ಲುನೋವು ಮತ್ತು ಉರಿಯೂತವನ್ನು ತುಂಬಾ ಸಮಯದವರೆಗೆ ಕಡಿಮೆ ಮಾಡಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು