Relationship: ಕೆಲವರೊಂದಿಗೆ ಮಾತನಾಡಲು ನಾವು ಹಿಂಜರಿಯುತ್ತೇವೆ ಏಕೆ?

ನಮ್ಮ ಭಾವನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಮಾತು ಅಥವಾ ಭಾಷೆಯನ್ನು ಸಂವಹನ ಮಾಧ್ಯಮವನ್ನಾಗಿ ಬಳಸುತ್ತೇವೆ.

Relationship: ಕೆಲವರೊಂದಿಗೆ ಮಾತನಾಡಲು ನಾವು ಹಿಂಜರಿಯುತ್ತೇವೆ ಏಕೆ?
Conversation
Follow us
TV9 Web
| Updated By: ನಯನಾ ರಾಜೀವ್

Updated on: Aug 24, 2022 | 1:48 PM

ನಮ್ಮ ಭಾವನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಮಾತು ಅಥವಾ ಭಾಷೆಯನ್ನು ಸಂವಹನ ಮಾಧ್ಯಮವನ್ನಾಗಿ ಬಳಸುತ್ತೇವೆ. ಕೆಲವರೊಂದಿಗೆ ಮಾತನಾಡಲು ತುಂಬಾ ಖುಷಿಯಾಗುತ್ತದೆ ಏಕೆಂದರೆ ಏನೋ ಒಂದು ರೀತಿಯ ಆತ್ಮೀಯತೆ, ಮೊದಲ ಬಾರಿ ಮಾತನಾಡಿದರೂ ನಮ್ಮವರೆಂಬ ಭಾವ ಮೂಡುತ್ತದೆ. ಎಲ್ಲವನ್ನೂ ಮನಸ್ಸು ಬಿಚ್ಚಿ ಹೇಳಿಕೊಳ್ಳುವ ತವಕ ಉಂಟಾಗುತ್ತದೆ. ಆದರೆ ಎಲ್ಲರೊಂದಿಗೂ ಒಂದೇ ರೀತಿ ಮಾತನಾಡಲು ಸಾಧ್ಯವಿಲ್ಲ.

ಆದರೆ ಇನ್ನೂ ಕೆಲವರು ನಮ್ಮವರೇ ಆಗಿದ್ದರೂ ಅವರ ಬಳಿ ಮಾತನಾಡಲು ಇಷ್ಟವೇ ಆಗುವುದಿಲ್ಲ. ಕೆಲವರು ಸದಾ ಮುಖವನ್ನು ಗಂಟು ಹಾಕಿಕೊಂಡಿದ್ದರೆ, ಇನ್ನೂ ಕೆಲವರು ನಮ್ಮ ಮಾತುಗಳಿಗೆ ಸ್ಪಂದಿಸುವುದೇ ಇಲ್ಲ, ಇನ್ನೂ ಕೆಲವರು ಕೇಳಿಸಿಕೊಂಡೂ ಕೇಳಿಸಿಕೊಳ್ಳದವರಂತಿರುತ್ತಾರೆ, ಇನ್ನೂ ಕೆಲವರು ನಾವು ಏನೋ ಹೇಳುವ ಮುನ್ನವೇ ಅವರೇ ಏನೋ ಹೇಳಿ ಬಾಯಿ ಮುಚ್ಚಿಸಿ ಬಿಡುತ್ತಾರೆ ಇಂತಹವರ ಬಳಿ ಮಾತನಾಡಲು ಹಿಂಜರಿಕೆಯಾಗುವುದುಂಟು.

ಇನ್ನೂ ಕೆಲವು ಕಾರಣಗಳು ಇಲ್ಲಿವೆ ಅಭದ್ರತೆ ಹೊಂದಿರುವವರು: ಅಭದ್ರತೆ ಹೊಂದಿರುವ ಜನರು ತಮ್ಮ ಕ್ರಿಯೆಗಳನ್ನು ಸಮರ್ಥಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ ಮತ್ತು ಅವರೊಂದಿಗೆ ಮಾತನಾಡಲು ಕಷ್ಟವಾಗಬಹುದು.

ನಿಮ್ಮ ವಿಷಯವನ್ನು ಬೇರೊಬ್ಬರಲ್ಲಿ ಚರ್ಚಿಸುವವರು ನಿಮ್ಮ ಬಳಿ ವಿನಯದಿಂದ ಮಾತನಾಡಿ ನಿಮ್ಮೆಲ್ಲಾ ವಿಷಯವನ್ನು ಕೇಳಿಸಿಕೊಂಡು ಬೇರೆಯವರ ಬಳಿ ಮಾತನಾಡುವವರನ್ನು ಕಂಡರೆ ಹಿಂಜರಿಕೆಯಾಗುತ್ತದೆ.

ನಿಮ್ಮ ಮಾತನ್ನು ಆಲಿಸದವರು: ನಿಮ್ಮ ಮಾತನ್ನು ಆಲಿಸದವರು ಉತ್ತಮ ಕೇಳುಗರಾಗಿರಲು ಸಾಧ್ಯವಿಲ್ಲ.

ಮಾತು ಕೇಳದೆಯೇ ಸಲಹೆ ನೀಡುವವರು: ನಿಮ್ಮ ಸಂಪೂರ್ಣ ಮಾತನ್ನು ಆಲಿಸದೆಯೇ ಕೆಲವರು ನಿಮಗೆ ಸಲಹೆ ನೀಡುತ್ತಾರೆ ಅಂದರೆ ನಿಮ್ಮ ಮಾತನ್ನು ಕೇಳುವ ವ್ಯವಧಾನ ಅವರಿಗಿರುವುದಿಲ್ಲ. ಅಂತವರ ಬಳಿ ಮಾತನಾಡಲು ಹಿಂಜರಿಯುವುದು ಸಾಮಾನ್ಯ.

ಬೇಡದ ಸಲಹೆಗಳು: ಅವರು ನಿಮ್ಮ ಹಿತೈಷಿಗಳಲ್ಲದಿದ್ದರೆ ನಿಮ್ಮ ಕಷ್ಟವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ, ಸಾಗ ಬೇಡದ ಸಲಹೆಗಳನ್ನು ನೀಡುತ್ತಾರೆ ಇಂಥವರಿಂದ ನೀವು ದೂರ ಇರುವಿರಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ