AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hacks for Long Hair: ಉದ್ದವಾದ ಕೂದಲು ಪಡೆಯಲು ಇಲ್ಲಿವೆ ಸಿಂಪಲ್​ ಸೂತ್ರ

ಎಳೆಯ ಕೂದಲು ಅಥವಾ ಆಗ ತಾನೆ ಹುಟ್ಟುತ್ತಿರುವ ಕೂದಲಿಗೆ ಅಗಸೆ ಬೀಜಗಳ ಹೇರ್​ ಪ್ಯಾಕ್​ ಹಾಕಿದರೆ ಅವುಗಳು ಬುಡದಿಂದಲೇ ಬಲವಾಗಿ ಅರ್ಧದಲ್ಲೇ ತುಂಡಾಗುವುದನ್ನು ತಡೆಯುತ್ತದೆ.

Hacks for Long Hair: ಉದ್ದವಾದ ಕೂದಲು ಪಡೆಯಲು ಇಲ್ಲಿವೆ ಸಿಂಪಲ್​ ಸೂತ್ರ
ಸಾಂದರ್ಭಿಕ ಚಿತ್ರ
TV9 Web
| Updated By: Digi Tech Desk|

Updated on:Jan 26, 2022 | 3:48 PM

Share

ಪ್ರತಿಯೊಬ್ಬರಿಗೂ ಉದ್ದನೆಯ ಕೂದಲನ್ನು (Long Hair) ಪಡೆಯುವ ಆಸೆ ಇದ್ದೇ ಇರುತ್ತದೆ. ಕೂದಲು ಹೆಂಗಳೆಯರ ಅಂದವನ್ನೂ ಹೆಚ್ಚಿಸುತ್ತದೆ. ಹೀಗಾಗಿ ಉದ್ದವಾದ ದಪ್ಪನೆಯ, ಕಪ್ಪು ಕೂದಲನ್ನು ಪಡೆಯಲು ಸದಾ ಒಂದಲ್ಲ ಒಂದು ಪ್ರಯತ್ನದಲ್ಲಿ ಮಹಿಳೆಯರು ತೊಡಗಿಕೊಳ್ಳುತ್ತಾರೆ. ತಿನ್ನುವ ಆಹಾರ (Food), ದಿನನಿತ್ಯದ ಓಡಾಟ ಎಲ್ಲವೂ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೂದಲಿಗೆ ಬೇಕಾದ ಪೋಷಕಾಂಶ ಮತ್ತು ಪ್ರೋಟೀನ್ ದೊರೆತರೆ ಅಂದವಾದ ಕೂದಲು (Hair) ಬೆಳೆಯಲು ಸಾಧ್ಯ. ಅದಕ್ಕಾಗಿ ಪಾರ್ಲರ್​ (Parlour)ಗಳಿಗೆ ಭೇಟಿ ನೀಡುವ ಬದಲು ಒಂದಷ್ಟು ಆಯುರ್ವೇದ (Ayurveda) ಮದ್ದುಗಳನ್ನು ಮನೆಯಲ್ಲಿಯೇ ತಯಾರಿಸಿ ಪ್ರಯತ್ನಿಸಿ. ಇದರಿಂದ ನಿಮ್ಮ ಕೂದಲ ಬೆಳವಣಿಗೆಯೂ ಆಗುತ್ತದೆ. 

ಸಮೃದ್ಧ ಕೂದಲ ಬೆಳವಣಿಗೆಗೆ ನ್ಯೂಟ್ರಿಷಿಯನ್​​ ತಜ್ಞೆ ಪೂಜಾ ಮಖಿಜಾ ಅವರು ಇಂಡಿಯನ್​ ಎಕ್ಸ್​ಪ್ರೆಸ್​ಗೆ ಒಂದಷ್ಟು ಮಾಹಿತಿ ನೀಡಿದ್ದಾರೆ. ಸುಲಭವಾಗಿ ಸಿಗುವ ಪದಾರ್ಥಗಳ ಬಳಕೆಯಿಂದ ನೀಳವಾದ ಕೂದಲನ್ನು ಪಡೆಯಬಹುದು ಎನ್ನುತ್ತಾರೆ ಡಾ.ಪೂಜಾ. ಈ ವಸ್ತುಗಳನ್ನು ಬಳಸಿ ನೀವು ಉದ್ದವಾದ ಕೂದಲನ್ನು ಪಡೆಯಬಹುದು.

ಆಮ್ಲಾ (ನೆಲ್ಲಿಕಾಯಿ) ನೆಲ್ಲಿಕಾಯಿ ದೇಹಕ್ಕೂ ಉತ್ತಮ ಆಹಾರವಾಗಿದೆ. ಅಲ್ಲದೆ ಕೂದಲಿನ ಬೆಳವಣಿಗೆಗೂ ನೆಲ್ಲಿಕಾಯಿ ಬಳಕೆಯಾಗುತ್ತದೆ ಎನ್ನುತ್ತಾರೆ ತಜ್ಞರು. ನೆಲ್ಲಿಕಾಯಿಯಲ್ಲಿರುವ ಮಿನರಲ್ಸ್​, ವಿಟಮಿನ್​ಗಳು ಕೂದಲ ಬೆಳವಣಿಗೆಗೆ ಸಹಕಾರಿಯಾಗಿದೆ. ನೆಲ್ಲಿಕಾಯಿ ಕೂದಲನ್ನು ಬುಡದಿಂದ ಬಲಗೊಳಿಸಿ, ತಲೆಯ ಮೇಲಾಗುವ ಹೊಟ್ಟನ್ನೂ ಕಡಿಮೆಗೊಳಿಸುತ್ತದೆ. ಅಲ್ಲದೆ ಚರ್ಮ ಏಳುವ ಸಮಸ್ಯೆ ಅಥವಾ ಕೂದಲಿನ ತುದಿಯಲ್ಲಿ ಆಗುವ ಸೀಳು ಕೂದಲಿಗೂ ಉತ್ತಮ ಪರಿಹಾರವಾಗಿದೆ.

ಅಗಸೆ ಬೀಜಗಳು ಅಗಸೆ ಬೀಸದಲ್ಲಿನ ವಿಟಮಿನ್​ ಇ ಅಂಶ ಕೂದಲು ಮತ್ತು ಚರ್ಮದ ಬೆಳವಣಿಗೆಗೆ ನೆರವಾಗುತ್ತದೆ. ಎಳೆಯ ಕೂದಲು ಅಥವಾ ಆಗ ತಾನೆ ಹುಟ್ಟುತ್ತಿರುವ ಕೂದಲಿಗೆ ಅಗಸೆ ಬೀಜಗಳ ಹೇರ್​ ಪ್ಯಾಕ್​ ಹಾಕಿದರೆ ಅವುಗಳು ಬುಡದಿಂದಲೇ ಬಲವಾಗಿ ಅರ್ಧದಲ್ಲೇ ತುಂಡಾಗುವುದನ್ನು ತಡೆಯುತ್ತದೆ. ಹೀಗಾಗಿ ವಾರದಲ್ಲಿ ಒಂದು ದಿನಾವದರೂ ಅಗಸೆ ಬೀಜದ ಹೇರ್​ ಪ್ಯಾಕ್​ ಹಾಕಿರಿ. ಅಗಸೆ ಬೀಜದಿಂದ ನಿಮ್ಮ ಕೂದಲು ಸಿಕ್ಕಾಗುವ ಸಮಸ್ಯೆಯೂ ನಿವಾರಣೆಯಾಗುತ್ತದೆ.

ಬೇವಿನ ಎಲೆಗಳು ಬೇವಿನ ಎಲೆಗಳಲ್ಲಿರುವ ವಿಟಮಿನ್ಸ್​ಗಳು ಕೂದಲಿನ ಆರೋಗ್ಯಕ್ಕೆ ಉತ್ತಮವಾಗಿದೆ. ವಾರಕ್ಕೊಮ್ಮೆಯಾದರೂ ಬೇವಿನ ಎಲೆಯ ಜತೆ ಮೊಸರನ್ನು ಮಿಶ್ರಣ ಮಾಡಿ ತಲೆಗೆ ಹಚ್ಚಿರಿ. ಇದರಿಂದ  ತಲೆಯಲ್ಲಿರುವ ಹೊಟ್ಟು, ಕಡಿತದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಬೇವಿನ ಎಲೆಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್​ ಅಂಶಗಳು ತಲೆಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸಿ, ಕೂದಲ ಬೆಳವಣಿಗೆಗೆ ನೆರವಾಗುತ್ತದೆ.

ಕೊಬ್ಬರಿ ಎಣ್ಣೆ ಕೂದಲಿನ ಆರೋಗ್ಯಕ್ಕೆ ಕೊಬ್ಬರಿ ಎಣ್ಣೆ ಅತ್ಯುತ್ತಮ ಪದಾರ್ಥವಾಗಿದೆ. ಕೊಬ್ಬರಿ ಎಣ್ಣೆಗೆ ಬೇವಿನ ಎಲೆ ಅಥವಾ ಮೆಂತೆಯನ್ನು ಮಿಶ್ರಣ ಮಾಡಿ ಚೆನ್ನಾಗಿ ಕುದಿಸಿಟ್ಟುಕೊಳ್ಳಿ. ತಲೆ ಸ್ನಾನ ಮಾಡುವ ಮುನ್ನ ಎಣ್ಣೆಯನ್ನು ಹಚ್ಚಿ ಮಸಾಜ್​ ಮಾಡಿಕೊಳ್ಳಿ. ಇದರಿಂದ ಕೂದಲಿನ ಬೆಳವಣಿಗೆಯೂ ಉತ್ತಮವಾಗಿ ಆಗುತ್ತದೆ.

ಮೆಂತೆ ಮತ್ತು ಮೊಸರು ಮೆಂತೆಯನ್ನು ನೀರಿನಲ್ಲಿ 10 ನಿಮಿಷ ನೆನೆಸಿಡಿ. ನಂತರ ಅದನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಅದಕ್ಕೆ ಸ್ವಲ್ಪಮೊಸರನ್ನು ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಳ್ಳಿ. ತಲೆ ಸ್ನಾನ ಮಾಡುವ 20 ನಿಮಿಷ ಮೊದಲು ಹಚ್ಚಿಕೊಳ್ಳಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ಮೆಂತೆ ನಿಮ್ಮ ತಲೆಯ ಮೇಲಿನ ಚರ್ಮವನ್ನು ಆರೋಗ್ಯವಾಗಿಡುವಂತೆ ಮಾಡುತ್ತದೆ. ಅಲ್ಲದೆ ಕೂದಲಿನ ಬೆಳವಣಿಗೆಗೂ ಸಹಾಯಕವಾಗುತ್ತದೆ.

(ಇಲ್ಲಿರುವ ಸಲಹೆಗಳು ಟಿವಿ9 ಕನ್ನಡ ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ಇಂಡಿಯನ್​ ಎಕ್ಸ್​​ಪ್ರೆಸ್​ನಲ್ಲಿನ ಮಾಹಿತಿಯನ್ನು ಆಧರಿಸಿ ಮೇಲಿನ ಸಲಹೆಗಳನ್ನು ನೀಡಲಾಗಿದೆ)

ಇದನ್ನೂ ಓದಿ;

ಹಳದಿಯಾದ ಹಲ್ಲುಗಳನ್ನು ಬಿಳಿಯಾಗಿಸುವುದು ಹೇಗೆ? ಇಲ್ಲಿದೆ ಮನೆಮದ್ದು

Published On - 3:05 pm, Wed, 26 January 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ