ಹೆಂಡತಿ ಮಾಡುವ ಈ ತಪ್ಪುಗಳು ದಾಂಪತ್ಯ ಜೀವನವನ್ನೇ ಹಾಳು ಮಾಡಬಹುದು

ಗಂಡ ಹೆಂಡತಿಯ ಸಂಬಂಧ ತುಂಬಾನೇ ಸುಂದರವಾದುದು. ಈ ಸುಂದರ ಸಂಬಂಧ ಪ್ರೀತಿ ಮಾತ್ರವಲ್ಲ ನಂಬಿಕೆ ಹಾಗೂ ವಿಶ್ವಾಸದ ಮೇಲೂ ನಿಂತಿದೆ. ಹೀಗಿರುವಾದ ಗಂಡ ಅಥವಾ ಹೆಂಡತಿ ಮಾಡುವ ಕೆಲವು ತಪ್ಪುಗಳು ದಾಂಪತ್ಯ ಜೀವನದ ಸಂತೋಷವನ್ನೇ ಕಿತ್ತುಕೊಳ್ಳುತ್ತದೆ. ಅದರಲ್ಲೂ ಹೆಂಡತಿಯ ಈ ನಡವಳಿಕೆಗಳು ದಾಂಪತ್ಯ ಜೀವನವನ್ನೇ ಹಾಳು ಮಾಡುತ್ತದಂತೆ. ಆದ್ದರಿಂದ ವಿವಾಹಿತ ಮಹಿಳೆಯರು ಈ ಕೆಲವೊಂದು ನಡವಳಿಕೆಗಳ ಬಗ್ಗೆ ಆದಷ್ಟು ಜಾಗೂರಕರಾಗಿರಬೇಕು.

ಹೆಂಡತಿ ಮಾಡುವ ಈ ತಪ್ಪುಗಳು ದಾಂಪತ್ಯ ಜೀವನವನ್ನೇ ಹಾಳು ಮಾಡಬಹುದು
ಸಾಂದರ್ಭಿಕ ಚಿತ್ರ
Image Credit source: Pinterest

Updated on: May 31, 2026 | 10:58 PM

ಗಂಡ ಹೆಂಡತಿಯ ಸಂಬಂಧ (relationship) ಸುಂದರ ಮಾತ್ರವಲ್ಲ ಪವಿತ್ರವಾದುದು ಕೂಡ. ಈ ಸಂಬಂಧ ಜೀವನಪರ್ಯಂತ ಸುಂದರವಾಗಿರಲು ಗಂಡ-ಹೆಂಡತಿ ಒಬ್ಬರನ್ನೊಬ್ಬರು ಪ್ರೀತಿಸುವುದರ ಜೊತೆಗೆ ಸಂಗಾತಿಯನ್ನು ಅರ್ಥಮಾಡಿಕೊಂಡು ಅವರ ಆದ್ಯತೆಗಳಿಗೂ ಬೆಲೆ ಕೊಡುವುದು ಮುಖ್ಯವಾಗುತ್ತದೆ. ಅದೇ ಕೆಲವೊಂದು ತಪ್ಪು ತಿಳುವಳಿಕೆಗಳು, ಮನಸ್ತಾಪಗಳು ಸುಂದರ ಸಂಬಂಧವನ್ನು ಹಾಳು ಮಾಡುತ್ತದೆ. ಅದರಲ್ಲೂ ಹೆಂಡತಿಯ ಈ ನಡವಳಿಕೆಗಳು ಸಂಬಂಧವನ್ನು ಮತ್ತಷ್ಟು ಹದಗೆಡಿಸುತ್ತದೆ. ಆದ್ದರಿಂದ ವಿವಾಹಿತ ಸ್ತ್ರೀಯರು ತಮ್ಮ  ಈ ಕೆಲವೊಂದು ನಡವಳಿಕೆಗಳ ಬಗ್ಗೆ ಆದಷ್ಟು ಜಾಗೂರಕರಾಗಿರಬೇಕು.

ಹೆಂಡತಿಯ ಈ ನಡವಳಿಕೆಗಳು ದಾಂಪತ್ಯ ಜೀವನವನ್ನು ಹಾಳುಮಾಡಬಹುದು:

ಪ್ರತಿಯೊಂದು ಸಣ್ಣ ವಿಷಯಕ್ಕೂ ಅನುಮಾನ ವ್ಯಕ್ತಪಡಿಸುವುದು: ಪ್ರತಿಯೊಂದು ವಿಚಾರದಲ್ಲೂ ಗಂಡನ ಮೇಲೆ ಅನುಮಾನ ವ್ಯಕ್ತಪಡಿಸಬಹುದು. ಈ ಅನುಮಾನ ಎಂಬ ಸಣ್ಣ ಹುಳ ಸುಂದರ ಸಂಸಾರವನ್ನೇ ಹಾಳು ಮಾಡುತ್ತದೆ. ಹಾಗಾಗಿ ಸುಮ್ಮಸುಮ್ಮನೆ ಅನುಮಾನ ಪಟ್ಟು ಗಂಡನ ಜೊತೆ ಜಗಳವಾಡಬಾರದು. ಅನುಮಾನ ಪಟ್ಟರೆ ಸಂಬಂಧದಲ್ಲಿ ಅಂತರ ಇನ್ನಷ್ಟು ಹೆಚ್ಚಾಗುತ್ತದೆ. ಅದೇ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಿದರೆ ಸಂಸಾರವೂ ತುಂಬಾನೇ ಚೆನ್ನಾಗಿರುತ್ತದೆ.

ಗಂಡನನ್ನು ಇತರರೊಂದಿಗೆ ಹೋಲಿಸುವುದು:  ಕೆಲವು  ಮಹಿಳೆಯರು ತಮ್ಮ ಗಂಡನನ್ನು ಇತರರೊಂದಿಗೆ ಹೋಲಿಸುತ್ತಾರೆ. ಹೌದು ಅವನು ತನ್ನ ಹೆಂಡತಿಗೆ ಗಿಫ್ಟ್‌ ತಂದುಕೊಟ್ಟ, ಹೆಂಡತಿಯನ್ನು ಟ್ರಿಪ್‌ ಕರೆದುಕೊಂಡು ಹೋದ, ಆದ್ರೆ ನೀವು ನನಗಾಗಿ ಏನು ಮಾಡಿಲ್ಲ ಅಂತೆಲ್ಲಾ ಇತರ ಪುರುಷರೊಂದಿಗೆ ಗಂಡನನ್ನು ಹೋಲಿಸುತ್ತಾರೆ.  ಹೆಂಡತಿಯರು ತಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವ ಈ ಅಭ್ಯಾಸವನ್ನು ಗಂಡಂದಿರು ಇಷ್ಟಪಡುವುದಿಲ್ಲ, ಇದು ಪ್ರೀತಿಯ ಸಂಬಂಧವನ್ನು ಹಾಳುಮಾಡುತ್ತದೆ. ಅಲ್ಲದೆ ಯಾವುದೇ ಪುರುಷನು ಸಹ ತನ್ನ ಹೆಂಡತಿ ತನ್ನ ಮುಂದೆ ಇನ್ನೊಬ್ಬ ಪುರುಷನನ್ನು ಹೊಗಳುವುದನ್ನು ಸಹಿಸುವುದಿಲ್ಲ. ಇದು ಸಂಬಂಧವನ್ನು ಮತ್ತಷ್ಟು ಹದಗೆಡಿಸುತ್ತದೆ.

ಇದನ್ನೂ ಓದಿ: ಮಹಿಳೆಯರೇ… ಗಾಜಿನ ಧರಿಸೋದು ಎಷ್ಟು ಪ್ರಯೋಜನಕಾರಿ ಗೊತ್ತೇ?

ಅತಿಯಾದ ಬೇಡಿ: ಕೆಲವು ಮಹಿಳೆಯರು ದೊಡ್ಡ ಮನೆ ಬೇಕು, ಚಿನ್ನ ಬೇಕು, ಶಾಪಿಂಗ್‌ ಮಾಡಲು ಸಾಕಷ್ಟು ಹಣ ಬೇಕು ಎಂದೆಲ್ಲಾ ಗಂಡನ ಮುಂದೆ ಬೇಡಿಕೆ ಇಡುತ್ತಾರೆ. ಈ ಅತಿಯಾದ ಬೇಡಿಕೆ ಅತಿಯಾಸೆ ಗಂಡನ ಮಾನಸಿಕ ಒತ್ತಡವನ್ನು ಹೆಚ್ಚು ಮಾಡುವುದಲ್ಲದೆ, ಹಣದ ವಿಚಾರವಾಗಿ ಜಗಳಗಳು ನಡೆಯಲು ಕಾರಣವಾಗುತ್ತದೆ. ಇದು ಸಂಬಂಧದ ಮಧುರತೆಯನ್ನು ಹಾಳು ಮಾಡುತ್ತದೆ.

ಇದಲ್ಲದೆ ಸಣ್ಣಪುಟ್ಟ ವಿಚಾರಕ್ಕೂ ಜಗಳವಾಡೋದು, ಕೆಲಸದಿಂದ ಬಂದ ತಕ್ಷಣ ಪ್ರೀತಿಯ ಮಾತುಗಳನ್ನಾಡದೆ ಕಿರಿಕಿರಿ ಮಾಡೋದು ಇವೆಲ್ಲವೂ ದಾಂಪತ್ಯ ಜೀವನದ ಅಂತರವನ್ನು ಹೆಚ್ಚಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us