Viruddha Ahara: ಯಾವೆಲ್ಲಾ ಆಹಾರವನ್ನು ಒಟ್ಟಿಗೆ ಸೇವಿಸಬಾರದು? ಆರೋಗ್ಯದ ಬಗ್ಗೆ ಕಾಳಜಿ ಇರಲಿ
ಆಯುರ್ವೇದದ ಪ್ರಕಾರ, ಪ್ರತಿಯೊಂದು ಆಹಾರ ಪದಾರ್ಥವು ವಿಭಿನ್ನ ಶಕ್ತಿ, ರುಚಿಯನ್ನು ಹೊಂದಿದೆ. ಹೀಗಾಗಿ, ಕೆಲವು ಆಹಾರ ಪದಾರ್ಥಗಳನ್ನು ಒಟ್ಟಿಗೆ ಸೇವಿಸುವಾಗ ಜಾಗರೂಕರಾಗಿರಬೇಕು.
ಯಾವುದೇ ಮನುಷ್ಯ ಆಹಾರವಿಲ್ಲದೆ ಬದುಕಲು ಸಾಧ್ಯವಿಲ್ಲ. ಆದರೆ, ನಾವು ತಿನ್ನುವ ಆಹಾರ ನಮ್ಮನ್ನು ಜೀವಂತವಾಗಿರಿಸಬೇಕು ಎನ್ನುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಆರೋಗ್ಯ ಕಾಪಾಡಿಕೊಳ್ಳುವುದು. ಇಷ್ಟ ಎಂದು ಎಲ್ಲಾ ಆಹಾರ ಒಟ್ಟಿಗೆ ಸೇವಿಸುವವರು ಹೆಚ್ಚು ಗಮನಹರಿಸುವುದು ಸೂಕ್ತ. ಏಕೆಂದರೆ ಕೆಲವೊಮ್ಮೆ ಒಟ್ಟಿಗೆ ಸೇವಿಸಿದ ಆಹಾರ (Food) ದೇಹಕ್ಕೆ ಹಾನಿಯುಂಟು ಮಾಡುತ್ತದೆ. ಆಹಾರ ಸೇವನೆಯ ವಿಷಯದಲ್ಲಿ ಸುಮಾರು 99 ಪ್ರತಿಶತ ಜನರು ಇಂತಹ ಸಣ್ಣ ತಪ್ಪುಗಳನ್ನು ಮಾಡುತ್ತಾರೆ. ಈ ರೀತಿಯ ತಪ್ಪುಗಳನ್ನು ಮಾಡುವ ಜನರು, ತಮ್ಮ ಅಭ್ಯಾಸಗಳನ್ನು ಬದಲಿಸುವುದು ಉತ್ತಮ. ಹಾಗಿದ್ದರೆ ಯಾವೆಲ್ಲಾ ಆಹಾರವನ್ನು ಒಟ್ಟಿಗೆ ಸೇವಿಸಬಾರದು ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ಆಯುರ್ವೇದದ ಪ್ರಕಾರ, ಪ್ರತಿಯೊಂದು ಆಹಾರ ಪದಾರ್ಥವು ವಿಭಿನ್ನ ಶಕ್ತಿ, ರುಚಿಯನ್ನು ಹೊಂದಿದೆ. ಹೀಗಾಗಿ, ಕೆಲವು ಆಹಾರ ಪದಾರ್ಥಗಳನ್ನು ಒಟ್ಟಿಗೆ ಸೇವಿಸುವಾಗ ಜಾಗರೂಕರಾಗಿರಬೇಕು. ಆಯುರ್ವೇದ ವೈದ್ಯೆ ಡಾ. ದೀಕ್ಷಾ ಭಾವಸರ್ ಈ ಬಗ್ಗೆ ಸಲಹೆ ನೀಡಿದ್ದಾರೆ ಮತ್ತು ಯಾವ ಆಹಾರವನ್ನು ಒಟ್ಟಿಗೆ ಸೇವಿಸಬಾರದು ಎಂದು ತಿಳಿಸಿದ್ದಾರೆ.
ಹಾಲು ಮತ್ತು ಮೀನು ಈ ಎರಡು ಆಹಾರಗಳು ಹೊಂದಿಕೆಯಾಗದ ಕಾರಣ ಹಾಲನ್ನು ಮೀನಿನೊಂದಿಗೆ ಸೇವಿಸಬಾರದು. ಹಾಲು ತಣ್ಣಗಿರುತ್ತದೆ ಮತ್ತು ಮೀನು ಹೆಚ್ಚು ಉಷ್ಣಾಂಶವನ್ನು ಹೊಂದಿದೆ ಅಥವಾ ಬಿಸಿ ಮಾಡುವ ಅಂಶಗಳಿಂದ ಕೂಡಿದೆ. ಇವೆರಡರ ಸಂಯೋಜನೆಯು ರಕ್ತವನ್ನು ವಿಟಿಯೇಟ್ ಮಾಡುತ್ತದೆ ಮತ್ತು ದೇಹದ ಆರೋಗ್ಯಕ್ಕೆ ಅಡಚಣೆಯುಂಟು ಮಾಡುತ್ತದೆ.
ಉಪ್ಪು ಮತ್ತು ಹಾಲು ಉಪ್ಪು ಮತ್ತು ಹಾಲು ಒಟ್ಟಿಗೆ ಸೆವಿಸಬಾರದಾದ ಮತ್ತೊಂದು ಸಂಯೋಜನೆಯಾಗಿದ್ದು, ಎರಡರಲ್ಲಿರುವ ವಿರೋಧಾಭಾಸದ ಗುಣಗಳಿದೆ. ಇದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ ಎಂದು ಡಾ.ದೀಕ್ಷಾ ಭಾವಸರ್ ಹೇಳಿದ್ದಾರೆ.
ಹಣ್ಣುಗಳು ಮತ್ತು ಹಾಲು ಬಾಳೆಹಣ್ಣನ್ನು ಹಾಲು, ಮೊಸರು ಅಥವಾ ಮಜ್ಜಿಗೆಯೊಂದಿಗೆ ತಿನ್ನಬಾರದು. ಏಕೆಂದರೆ ಈ ಸಂಯೋಜನೆಯು ಜೀರ್ಣಕ್ರಿಯೆಯನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ ವಿಷವನ್ನು ಉಂಟುಮಾಡುತ್ತದೆ. ಈ ಸಂಯೋಜನೆಯನ್ನು ತಿನ್ನುವುದು ಶೀತ, ಕೆಮ್ಮು ಮತ್ತು ಅಲರ್ಜಿಗೆ ಕೂಡ ಕಾರಣವಾಗಬಹುದು.
ಬಿಸಿಮಾಡಿದ ಜೇನುತುಪ್ಪ ಜೇನುತುಪ್ಪವನ್ನು ಬಿಸಿ ಮಾಡುವುದರಿಂದ ಜೀರ್ಣಕ್ರಿಯೆಯನ್ನು ಬೆಂಬಲಿಸುವ ಕಿಣ್ವಗಳು ನಾಶವಾಗುತ್ತದೆ. ಆದ್ದರಿಂದ ಇದನ್ನು ಸೇವಿಸಿದಾಗ ದೇಹದಲ್ಲಿ ಟಾಕ್ಸಿನ್ ಉತ್ಪತ್ತಿಯಾಗುತ್ತದೆ. ಇದು ಆರೋಗ್ಯದ ಸ್ಥಿತಿ ಹದಗೆಡಿಸುತ್ತದೆ.
ತುಪ್ಪ ಮತ್ತು ಜೇನುತುಪ್ಪ ತುಪ್ಪ ಮತ್ತು ಜೇನುತುಪ್ಪವನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಬೇಡಿ. ಏಕೆಂದರೆ ಅವು ವಿರುದ್ಧವಾದ ಪ್ರತಿಕ್ರಿಯೆಗಳನ್ನು ಹೊಂದಿರುತ್ತವೆ. ಜೇನುತುಪ್ಪವು ತಾಪನ, ಒಣಗಿಸುವಿಕೆಯಂತಹ ಕ್ರಿಯೆಯನ್ನು ಹೊಂದಿದೆ. ಆದರೆ ತುಪ್ಪವು ತಂಪಾಗಿಸುವ, ಆರ್ಧ್ರಕ ಗುಣವನ್ನು ಹೊಂದಿದೆ. ತುಪ್ಪ ಮತ್ತು ಜೇನುತುಪ್ಪವನ್ನು ಒಟ್ಟಿಗೆ ತಿನ್ನುವಾಗ ಒಂದಕ್ಕಿಂತ ಇನ್ನೊಂದನ್ನು ಹೆಚ್ಚಿನ ಪ್ರಮಾಣದಲ್ಲಿ ಮಿಶ್ರಣ ಮಾಡಿ ಎಂದು ಡಾ. ದೀಕ್ಷಾ ಭಾವಸರ್ ಸಲಹೆ ನೀಡಿದ್ದಾರೆ.
ರಾತ್ರಿ ಮೊಸರು ಸೇವನೆ ಮೊಸರು (ಮೊಸರು, ಚೀಸ್) ಚಳಿಗಾಲದಲ್ಲಿ ತಿನ್ನಲು ಸೂಕ್ತ. ಆದರೆ ರಾತ್ರಿಯಲ್ಲಿ ಸೇವಿಸಬಾರದು. ಆಯುರ್ವೇದ ಪಠ್ಯ ಕಾರಕ-ಸಂಹಿತಾ (ಸೂತ್ರ 225-227) ಪ್ರಕಾರ, ಮೊಸರನ್ನು ಸಾಮಾನ್ಯವಾಗಿ ಬೇಸಿಗೆ ಮತ್ತು ವಸಂತಕಾಲದಲ್ಲಿ ದೂರವಿಡಲಾಗುತ್ತದೆ.
ಆಯುರ್ವೇದ ವೈದ್ಯರ ಪ್ರಕಾರ, ಉರಿಯೂತವನ್ನು ಕಡಿಮೆ ಮಾಡಲು, ಚರ್ಮದ ಅಸ್ವಸ್ಥತೆ, ಸ್ವಯಂ ನಿರೋಧಕ ಕಾಯಿಲೆಗಳನ್ನು ತಪ್ಪಿಸಲು ಮತ್ತು ಸದಾ ಆರೋಗ್ಯಕರವಾಗಿರಲು ಈ ಮೆಲ್ಕಂಡ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬಾರದು.
ಇದನ್ನೂ ಓದಿ: Dangerous Food: ಒಂದೇ ಬಾರಿ ಎರಡು ಪದಾರ್ಥಗಳನ್ನು ಸೇವಿಸುವ ಮುನ್ನ ನಿಮ್ಮ ಗಮನ ಆರೋಗ್ಯದ ಹಿತದೃಷ್ಟಿ ಮೇಲೆ ಇರಲಿ
Health Tips: ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿದೆಯೇ? ಆಹಾರ ಕ್ರಮದ ಬಗ್ಗೆ ಇರಲಿ ಎಚ್ಚರ