Life Partner: ಸಂಗಾತಿಯ ಜತೆ ಪದೇ ಪದೇ ಜಗಳವೇ? ಈ ಕೆಲವು ವಿಷಯಗಳನ್ನು ಅರಿತರೆ ಅನ್ಯೋನ್ಯತೆಯಿಂದ ಬಾಳಬಹುದು

ಕೆಲವು ಸಣ್ಣ ಪುಟ್ಟ ಕೋಪ ಮುನಿಸುಗಳು ಇದ್ದರೂ ಸಹ ಅವೆಲ್ಲವನ್ನು ಮೀರಿ ಸಾಗುವ ಪ್ರೀತಿ ದಂಪತಿಗಳಲ್ಲಿರಬೇಕು. ಮದುವೆಯಾದ ಕೆಲವು ತಿಂಗಳು ಹೆಚ್ಚು ಪ್ರೀತಿ ಇದ್ದರೂ ದಿನ ಸಾಗುತ್ತಿದ್ದಂತೆಯೇ ಪ್ರೀತಿ ಕಳೆದುಹೋಗುತ್ತಿದೆ ಎಂಬ ವಿಷಯವೇ ಸಾಕು! ಇಬ್ಬರ ನಡುವೆ ಬಿರುಕು ಬೀಳಲು.

Life Partner: ಸಂಗಾತಿಯ ಜತೆ ಪದೇ ಪದೇ ಜಗಳವೇ? ಈ ಕೆಲವು ವಿಷಯಗಳನ್ನು ಅರಿತರೆ ಅನ್ಯೋನ್ಯತೆಯಿಂದ ಬಾಳಬಹುದು
ಸಾಂದರ್ಭಿಕ ಚಿತ್ರ
Edited By:

Updated on: Jul 27, 2021 | 8:01 AM

ಗಂಡ- ಹೆಂಡತಿ ನಡುವಿನ ಸಂಬಂಧ ಒಂದು ಅದ್ಭುತ ಜೀವನ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಇಡೀ ಜೀವನವನ್ನು ಸಂತೋಷದಿಂದ ಸಾಗಿಸುವ ಬಾಂಧವ್ಯವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಆದರೆ ಕೆಲವು ದಂಪತಿಯನ್ನು ನೋಡಿದಾಗ ಎಷ್ಟೇ ಪ್ರೀತಿಯಿಂದ(Love) ಇದ್ದವರೂ ಸಹ ಕೆಲವು ಬಾರಿ ದೂರವಾಗುತ್ತಾರೆ. ಸಣ್ಣ-ಪುಟ್ಟ ಜಗಳವನ್ನೂ ಸಹ ಸರಿಪಡಿಸಿಕೊಂಡು ಹೋಗುವ ತಾಳ್ಮೆ ಇರುವುದಿಲ್ಲ. ಪದೇ ಪದೇ ಸಂಗಾಯಿಯೊಂದಿಗೆ(Wife) ಜಗಳವಾಗುತ್ತಿದೆ ಎಂದಾದರೆ ಈ ಕೆಲವು ವಿಷಯಗಳ ಕುರಿತಾಗಿ ಗಮನವಹಿಸಲೇಬೇಕು.

ಕೆಲವು ಸಣ್ಣ ಪುಟ್ಟ ಕೋಪ ಮುನಿಸುಗಳು ಇದ್ದರೂ ಸಹ ಅವೆಲ್ಲವನ್ನು ಮೀರಿ ಸಾಗುವ ಪ್ರೀತಿ ದಂಪತಿಗಳಲ್ಲಿರಬೇಕು. ಮದುವೆಯಾದ ಕೆಲವು ತಿಂಗಳು ಹೆಚ್ಚು ಪ್ರೀತಿ ಇದ್ದರೂ ದಿನ ಸಾಗುತ್ತಿದ್ದಂತೆಯೇ ಪ್ರೀತಿ ಕಳೆದುಹೋಗುತ್ತಿದೆ ಎಂಬ ವಿಷಯವೇ ಸಾಕು! ಇಬ್ಬರ ನಡುವೆ ಬಿರುಕು ಬೀಳಲು. ಹಾಗಿರುವಾಗ ಒಬ್ಬರಿಗೊಬ್ಬರು ಪರಸ್ಪರ ಗೌರವಿಸುವ ಮೂಲಕ ಸಂಬಂಧವನ್ನು ಕಾಪಾಡಿಕೊಂಡು ಹೋಗುವುದು ಮುಖ್ಯವಾಗಿರುತ್ತದೆ.

ಗಂಡ- ಹೆಂಡತಿ ಎಂಬ ಅದ್ಭುತ ಸಂಬಂಧ ದೀರ್ಘಕಾಲದವರೆಗೆ ಪ್ರೀತಿಯಿಂದಿರಬೇಕು ಎಂದಾದರೆ ಸಹಬಾಳ್ವೆ ಮುಖ್ಯ

ದಂಪತಿ ಪರಸ್ಪರ ಪ್ರೀತಿ, ವಿಶ್ವಾಸದ ಜತೆಗೆ ಒಬ್ಬರನ್ನೊಬ್ಬರು ಗೌರವಿಸಬೇಕು

ಯಾವಾಗಲೂ ಒಬ್ಬರು ಮೇಲು- ಇನ್ನೊಬ್ಬರು ಕೀಳು ಎಂಬ ಭಾವನೆ ಬೇಡ. ಇಬ್ಬರ ಉದ್ಯೋಗದ ಮೇಲೂ ಪರಸ್ಪರ ಗೌರವಿರಬೇಕು

ಸಂಬಂಧ ಅಂದಾಕ್ಷಣ ಸಣ್ಣ- ಪುಟ್ಟ ಜಗಳ, ಮುನಿಸು ಸಾಮಾನ್ಯ. ಅದನ್ನೇ ದೊಡ್ಡದಾಗಿ ಸಾಧಿಸುವತ್ತ ಇಬ್ಬರೂ ಮುಂದಾಗಬಾರದು. ಆ ಕ್ಷಣದ ಜಗಳವನ್ನೂ ಮೀರಿದ ಪ್ರೀತಿ ಇಬ್ಬರಲ್ಲೂ ಇರಬೇಕು

ಇಬ್ಬರು ತಪ್ಪು ಮಾಡಿದಾಗ ಇನ್ನೊಬ್ಬರೆದುರು ಕ್ಷಮೆ ಕೇಳಲು ಎಂದಿಗೂ ನಾಚಿಕೆ ಬೇಡ. ತಮ್ಮ ಗೌರವಕ್ಕೇ ಕುತ್ತು ಎಂಬ ಯೋಚನೆ ಎಂದಿಗೂ ಬೇಡ. ಗಂಡ- ಹೆಂಡತಿ ಸಂಬಂಧದಲ್ಲಿ ಇಬ್ಬರೂ ಸಮಾನರು. ಹಾಗಿರುವಾಗ ಒಬ್ಬರಿಗೊಬ್ಬರು ಪ್ರೀತಿಯಿಂದ ನಡೆದುಕೊಳ್ಳಿ

ತಮ್ಮ ಯೋಚನೆ ಅಥವಾ ಏನೇ ಸಮಸ್ಯೆಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಯಾವುದೇ ಮುಚ್ಚು ಮರೆಯಿಲ್ಲದೆ ಇಬ್ಬರ ನಡುವಿನ ಸಾಮರಸ್ಯ ಗಟ್ಟಿಯಾಗಿರಬೇಕು. ಎಂದಿಗೂ ಗಂಡ- ಹೆಂಡತಿ ನಡುವೆ ಸುಳ್ಳಿನ ಮಾತುಗಳು ಹರಿದಾಡಲೇಬಾರದು

ಯಾವಾಗಲೂ ಪ್ರೀತಿಯನ್ನು ವ್ಯಕ್ತಪಡಿಸಲು ಹಿಂಜರಿಯಬಾರದು. ಪ್ರೀತಿಸುತ್ತಿದ್ದೇನೆ ಎಂಬ ಮಾತು ಹೇಳಲು ಹಿಂಜರಿಕೆ ಬೇಡ. ಒಳ್ಳೆಯ ಮಾತುಗಳು, ಸತ್ಯವಾದ ಮಾತುಗಳು ಸಂಬಂಧವನ್ನು ಬಲಪಡಿಸುತ್ತದೆ

ಇದನ್ನೂ ಓದಿ:

Viral Video: 72ವರ್ಷದ ಅನ್ಯೋನ್ಯ ದಾಂಪತ್ಯ; ಈ ಜಮಾನಾದ ಜೋಡಿಗಳಿಗೆ ಪ್ರೀತಿಯ ಗುಟ್ಟು ತಿಳಿಸಿದ ವೃದ್ಧ ದಂಪತಿ

ಸಂಗಾತಿಯ ಮಾನಹಾನಿ ಮಾಡುವುದು, ಗೌರವಕ್ಕೆ ಧಕ್ಕೆ ತರುವುದು ಮಾನಸಿಕ ಕ್ರೌರ್ಯ: ಸೇನಾಧಿಕಾರಿ ವಿಚ್ಛೇದನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟ ಉಲ್ಲೇಖ​

Follow Us