ಅಡುಗೆ ರುಚಿ ಹೆಚ್ಚಿಸುವ ಈ ಪುದಿನಾ ಸರ್ವರೋಗಗಳಿಗೂ ರಾಮಬಾಣ

ನಾವು ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಉಪಯೋಗಿಸುವ ಸೊಪ್ಪುಗಳಲ್ಲಿ ಪುದಿನಾ ಕೂಡ ಒಂದು. ವಿಶೇಷ ಬಗೆಯ ಅಡುಗೆ ಜ್ಯೂಸ್ ಹಾಗೂ ಸಲಾಡ್ ಗಳಲ್ಲಿ ಹೆಚ್ಚಾಗಿ ಬಳಸಲಾಗುವ ಪುದಿನಾದಲ್ಲಿ ವಿಟಮಿನ್ ಸಿ, ಡಿ, ಇ ಮತ್ತು ಬಿ ಹಾಗೂ ಕ್ಯಾಲ್ಸಿಯಂ ಮತ್ತು ರಂಜಕವು ಹೇರಳವಾಗಿದೆ. ಅಡುಗೆಯಲ್ಲಿ ಪುದಿನಾ ಬಳಕೆ ಮಾಡುವುದರಿಂದ ಆಹಾರ ರುಚಿಕರವಾಗುವುದಲ್ಲದೇ, ಆರೋಗ್ಯವನ್ನು ವೃದ್ಧಿಸಿ ಹಲವು ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತವೆ.

ಅಡುಗೆ ರುಚಿ ಹೆಚ್ಚಿಸುವ ಈ ಪುದಿನಾ ಸರ್ವರೋಗಗಳಿಗೂ ರಾಮಬಾಣ
Updated By: ಅಕ್ಷಯ್​ ಪಲ್ಲಮಜಲು​​

Updated on: Jan 20, 2024 | 5:04 PM

ಆರೋಗ್ಯ ಭಾಗ್ಯ ಎನ್ನುವ ಮಾತಿದ್ದು, ಆರೋಗ್ಯವು ಕೈಕೊಟ್ಟರೆ ಅದಕ್ಕಿಂತ ದೊಡ್ಡ ಸಮಸ್ಯೆಯು ಮತ್ತೊಂದಿಲ್ಲ. ಇತ್ತೀಚೆಗಿನ ದಿನಗಳಲ್ಲಿ ನಮ್ಮ ಆರೋಗ್ಯ ಶೈಲಿ ಹಾಗೂ ಜೀವನ ಶೈಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಬಂದಾಗ ವೈದ್ಯರನ್ನು ಭೇಟಿಯಾಗುವ ಬದಲು ಮನೆ ಮದ್ದಿನ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು.

* ಪುದಿನಾ ಸೊಪ್ಪಿನ ರಸಕ್ಕೆ ನಿಂಬೆ ಹಾಕಿ ಸೇವಿಸಿದರೆ ವಾಂತಿಯಾಗುವುದು ನಿಲ್ಲುತ್ತದೆ.

* ಈ ಪುದಿನಾ ಎಲೆಗಳನ್ನು ಊಟಕ್ಕೆ ಮುಂಚೆ ಮತ್ತು ಊಟದ ನಂತರ ಅಗಿದು ತಿಂದರೆ ಬಾಯಿಯ ದುರ್ಗಂಧವು ದೂರವಾಗುವುದು.

*ಪುದಿನಾ ಸೊಪ್ಪಿನ್ನು ಅಡುಗೆಯಲ್ಲಿ ಬಳಸುವುದರಿಂದ ಜೀರ್ಣ ಕ್ರಿಯೆ ಸಮಸ್ಯೆ ಇರುವವರಿಗೆ ಪರಿಣಾಮಕಾರಿಯಾಗಿದೆ.

* ಪುದಿನಾ ಸೊಪ್ಪಿನ ಕಷಾಯ ಮಾಡಿ, ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ಕಡಿಮೆಯಾಗುತ್ತದೆ.

* ಸಮ ಪ್ರಮಾಣದಲ್ಲಿ ಪುದಿನಾ ಸೊಪ್ಪಿನ ರಸ ಹಾಗೂ ಜೇನುತುಪ್ಪ ಬೆರೆಸಿ ಸೇವಿಸಿದರೆ ಗ್ಯಾಸ್ ಟ್ರಬಲ್ ಸಮಸ್ಯೆಯು ಕಡಿಮೆಯಾಗುತ್ತದೆ.

ಇದನ್ನೂ ಓದಿ: ಎದೆಹಾಲು ಕುಡಿಸುವವರು ಪುದೀನಾ ಸೇವಿಸುವುದು ಸುರಕ್ಷಿತವೇ?

* ಚರ್ಮದ ಮೇಲಿರುವ ದದ್ದುಗಳು, ಮೊಡವೆ, ತುರಿಕೆ ಸೇರಿದಂತೆ ಇನ್ನಿತ್ತರ ಸಮಸ್ಯೆಗಳು ಇದ್ದರೆ, ಪುದಿನಾ ಎಲೆಗಳನ್ನು ಜಜ್ಜಿ ಅದರ ರಸ ತೆಗೆದುಕೊಂಡು, ಚರ್ಮದ ಆ ಜಾಗಕ್ಕೆ ಹಚ್ಚುವುದರಿಂದ ಚರ್ಮದ ಸಮಸ್ಯೆಗಳು ಕಡಿಮೆಯಾಗುತ್ತದೆ.

* ಪುದಿನಾ ಎಲೆಯ ರಸಕ್ಕೆ ಜೀರಿಗೆ, ನಿಂಬೆ ಹಣ್ಣಿನ ರಸ, ಜೇನು ತುಪ್ಪ ಸೇರಿಸಿ, ಪ್ರತಿ ದಿನ ಕುಡಿದರೆ ರಕ್ತ ಶುದ್ಧಿಯಾಗುತ್ತದೆ.

* ಪ್ರತಿದಿನ ಪುದೀನಾ ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ದೇಹದ ತೂಕವನ್ನು ಕಡಿಮೆಯಾಗುತ್ತದೆ.

* ಜ್ವರ ಬಂದ ಸಂದರ್ಭದಲ್ಲಿ ಪುದಿನಾ ಚಹಾ ಕುಡಿಯುವುದರಿಂದ ಹಲವಾರು ವೈರಸ್ ಗಳ ವಿರುದ್ಧ ಹೋರಾಡಿ ಔಷಧಿಯಾಗಿ ಕೆಲಸ ಮಾಡುತ್ತದೆ.

*ಪುದಿನಾ ಎಲೆಯ ಹಬೆಯನ್ನು ತೆಗೆದುಕೊಳ್ಳುವುದರಿಂದ ಕಟ್ಟಿದ ಮೂಗಿನ ಸಮಸ್ಯೆಯನ್ನು ದೂರ ಮಾಡುತ್ತದೆ. ಎರಡು ಲೋಟ ನೀರಿಗೆ, ಪುದಿನಾ ಎಲೆಗಳನ್ನು ಸೇರಿಸಿ ಕುದಿಸಿ, ಹಬೆಯನ್ನು ಉಸಿರಾಡಿದರೆ ಮೂಗು ಕಟ್ಟಿದ ಸಮಸ್ಯೆಯು ಕಡಿಮೆಯಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ