ಅವರೆಕಾಳು ದೊನ್ನೆ ಬಿರಿಯಾನಿ ಹೇಗೆ ಮಾಡೋದು? ಇಲ್ಲಿದೆ ಸುಲಭ ರೆಸಿಪಿ
ತಿಂಡಿಗೂ, ಊಟಕ್ಕೂ ಆಗುವ ಹಾಗೆ ಮಾಡಬಹುದಾದ ಕೆಲವು ರೆಸಿಪಿಗಳೂ ಇದ್ದರೂ ಕೂಡ ವಿನೂತನ ಮತ್ತು ಆರೋಗ್ಯಕರವಾಗಿರುವ ರುಚಿ ಸವಿಯಲು ಇಷ್ಟ ಪಡುವವರಿಗೆ ಇಲ್ಲಿದೆ ಒಂದು ಸರಳ ರೆಸಿಪಿ. ಏನು? ಹೇಗೆ ಮಾಡುವುದು ಅನ್ನುತ್ತೀರಾ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಮನೆಯಲ್ಲಿ ಬೆಳಿಗ್ಗೆ ತಿಂಡಿ ಏನು ಮಾಡಬೇಕು ಎಂಬುದೇ ಅಮ್ಮಂದಿರ ದಿನ ನಿತ್ಯದ ಚಿಂತೆ. ಹೊಸ ಹೊಸ ರುಚಿಯ ಸವಿಯುವ ಬಯಕೆ ಇದ್ದರೂ ಕೂಡ ಸುಲಭವಾಗಿ ಮಾಡಬಹುದಾದ ತಿಂಡಿ ಮಾಡುವುದು ಕಷ್ಟವೇ ಸೈ. ಹಾಗಾಗಿ ತಿಂಡಿಗೂ, ಊಟಕ್ಕೂ ಆಗುವ ಹಾಗೆ ಮಾಡಬಹುದಾದ ಕೆಲವು ರೆಸಿಪಿಗಳೂ ಇದ್ದರೂ ಕೂಡ ವಿನೂತನ ಮತ್ತು ಆರೋಗ್ಯಕರವಾಗಿರುವ ರುಚಿ ಸವಿಯಲು ಇಷ್ಟ ಪಡುವವರಿಗೆ ಇಲ್ಲಿದೆ ಒಂದು ಸರಳ ರೆಸಿಪಿ. ಏನು? ಹೇಗೆ ಮಾಡುವುದು ಅನ್ನುತ್ತೀರಾ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೀನ್ಸ್ ನಲ್ಲಿ ಕೂಡ ಹಲವಾರು ಪ್ರಭೇದಗಳಿವೆ. ಇವುಗಳಲ್ಲಿ ಅವರೆ ಕಾಳುಕೂಡ ಒಂದು. ಇದರಲ್ಲಿ ಹಲವಾರು ಬಗೆಯ ವಿಟಮಿನ್ಗಳು, ಖನಿಜಾಂಶಗಳು, ಪ್ರೋಟೀನ್ ಮತ್ತು ನಾರಿನಾಂಶವು ಇದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ನೀವು ಇದರ ಬಗ್ಗೆ ಕೇಳಿರಬಹುದು ಅಥವಾ ಅದರಿಂದ ಅನೇಕ ರೀತಿಯ ತಿಂಡಿಗಳನ್ನು ತಯಾರಿಸಿರಬಹುದು. ಆದರೆ ಎಂದಾದರೂ ಅವರೆಕಾಳು ದೊನ್ನೆ ಬಿರಿಯಾನಿ ಸವಿದಿದ್ದೀರಾ? ಇದನ್ನು ಮಾಡುವ ಸುಲಭ ವಿಧಾನ ಇಲ್ಲಿದೆ.
ಮಸಾಲೆ ಮಾಡಿಕೊಳ್ಳಲು ಬೇಕಾಗುವ ಸಾಮಗ್ರಿಗಳು; ಎಣ್ಣೆ, ದಾಲ್ಚಿನ್ನಿ, ಕರಿ ಮೆಣಸು ಅಥವಾ ಮೆಣಸಿನಕಾಳು, ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿ, ಈರುಳ್ಳಿ, ಪುದಿನಾ ಎಲೆಗಳು, ಕೊತ್ತಂಬರಿ ಸೊಪ್ಪು. ಅವರೆಕಾಳು ದೊನ್ನೆ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು; ತುಪ್ಪ, ಜೀರಿಗೆ, ದಾಲ್ಚಿನ್ನಿ, ಏಲಕ್ಕಿ, ಪಲಾವ್ ಎಲೆ, ಈರುಳ್ಳಿ, ಕ್ಯಾರೇಟು, ಬೀನ್ಸ್, ಆಲೂಗಡ್ಡೆ, ಮೊಸರು, ಬಾಸ್ಮತಿ ಅಕ್ಕಿ, ಉಪ್ಪು, ನಿಂಬೆ ರಸ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಮಾಡುವ ವಿಧಾನ:
ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಅದು ಕುದಿ ಬರುವಾಗ ಅದಕ್ಕೆ ಮೆಣಸಿನಕಾಳು, ಬೆಳ್ಳುಳ್ಳಿ, ಶುಂಠಿ, ಮೆಣಸಿನಕಾಯಿ ಹಾಕಿ ಹುರಿದುಕೊಳ್ಳಿ. ಬಳಿಕ ಅದಕ್ಕೆ ಈರುಳ್ಳಿ, ಪುದಿನಾ ಸೊಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಹುರಿದುಕೊಳ್ಳಿ, ಈ ಮಿಶ್ರಣ ತಣಿದ ಬಳಿಕ ಅದನ್ನು ಮಿಕ್ಸಿಯಲ್ಲಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಇನ್ನೊಂದು ಕಡೆ ಒಂದು ಕುಕ್ಕರಿನಲ್ಲಿ ಸ್ವಲ್ಪ ತುಪ್ಪ ಹಾಕಿ ಬಿಸಿ ಆಗುತ್ತಿದ್ದಂತೆ ಜೀರಿಗೆ, ದಾಲ್ಚಿನ್ನಿ, ಏಲಕ್ಕಿ, ಪಲಾವ್ ಎಲೆ ಹಾಕಿ ಪರಿಮಳ ಬರುವ ವರೆಗೆ ಹುರಿದು ಅದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿ. ಬಳಿ ಅದಕ್ಕೆ ನಿಮಗೆ ಬೇಕಾದ ತರಕಾರಿ ಉದಾಹರಣೆಗೆ ಕ್ಯಾರೇಟು, ಬೀನ್ಸ್, ಆಲೂಗಡ್ಡೆ ಎಲ್ಲವನ್ನು ಹಾಕಿ ಅದಕ್ಕೆ ಸ್ವಲ್ಪ ಅರಿಶಿನ ಪುಡಿ ಸೇರಿಸಿ ಅದಕ್ಕೆ ಅವರೆಕಾಳು ಹಾಕಿ ಬಳಿಕ ಅದಕ್ಕೆ ಪೇಸ್ಟ್ ಮಾಡಿಟ್ಟುಕೊಂಡ ಮಸಾಲಾ ಹಾಕಿ ನಂತರ ಮೊಸರು ಹಾಕಿ ಸರಿಯಾಗಿ ಕಲಸಿಕೊಳ್ಳಿ. ಬಳಿಕ ಅದಕ್ಕೆ ನಿಮಗೆ ಬೇಕಾದ ಅಳತೆಗನುಗುಣವಾಗಿ ಅಕ್ಕಿ ಸೇರಿಸಿಕೊಳ್ಳಿ. ನಂತರ ನಿಮ್ಮ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಬಳಿಕ ರುಚಿಗೆ ಅನುಗುಣವಾಗಿ ನಿಂಬೆ ರಸ ಹಿಂಡಿ ಅದನ್ನು ಬೇಯಿಸಿಕೊಂಡರೆ ಬಿಸಿ ಬಿಸಿ ಅವರೆಕಾಳು ದೊನ್ನೆ ಬಿರಿಯಾನಿ ಸವಿಯಲು ಸಿದ್ದವಾಗುತ್ತದೆ.
ಇದನ್ನೂ ಓದಿ: ವಾತ ಮತ್ತು ಕಫಕ್ಕೆ ಪುಲಿ ಚಾಲಿಚತು ಉತ್ತಮ, ಇದನ್ನು ಮಾಡುವುದು ಹೇಗೆ?
ಈ ವಿಡಿಯೋವನ್ನು bloggersmitha ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಈ ರೆಸಿಪಿಗೆ ಬಹಳ ಪ್ರಶಂಸೆ ವ್ಯಕ್ತವಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ