
ಮೊಬೈಲ್ (mobile) ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಅನೇಕರು ಮೊಬೈಲ್ ಇಲ್ಲದೆ ಒಂದು ಕ್ಷಣವೂ ಇರೋದಿಲ್ಲ, ಯಾವಾಗಲೂ ಮೊಬೈಲ್ ಫೋನ್ ಕೈಯಲ್ಲೇ ಹಿಡಿದಿಟ್ಟುಕೊಂಡಿರುತ್ತಾರೆ. ಹೀಗೆ ಜಾಸ್ತಿ ಮೊಬೈಲ್ ಬಳಕೆ ಮಾಡಿದಾಗ ಚಾರ್ಜ್ ಕೂಡ ವೇಗವಾಗಿ ಖಾಲಿಯಾಗುತ್ತವೆ. ಹೀಗೆ ಚಾರ್ಜ್ ಖಾಲಿಯಾದಾಗಲ ಫೋನ್ ಚಾರ್ಜಿಂಗ್ ಮಾಡಲು ಫಾಸ್ಟ್ ಚಾರ್ಜರ್‌ಗಳನ್ನು ಬಳಕೆ ಮಾಡುತ್ತಾರೆ. 50-ವ್ಯಾಟ್, 64-ವ್ಯಾಟ್ ಚಾರ್ಜರ್‌ಗಳನ್ನು ಬಳಸಿ ಅರ್ಧಗಂಟೆಯಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡುತ್ತಾರೆ. ಅನೇಕ ಬಾರಿ ಫಾಸ್ಟ್ ಚಾರ್ಜರ್ ಬಳಕೆ ಮಾಡಿದ್ರೂ ಮೊಬೈಲ್ ತ್ವರಿತವಾಗಿ ಚಾರ್ಜ್ ಆಗದೆ, ಆಮೆಗತಿಯಲ್ಲಾಗುತ್ತಿರುತ್ತದೆ. ಇದೇ ರೀತಿ ನಿಮ್ಮ ಮೊಬೈಲ್ ಕೂಡ ಸಂಪೂರ್ಣವಾಗಿ ಚಾರ್ಜ್ ಆಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆಯೇ, ಹಾಗಿದ್ರೆ ಮ್ಯಾಜಿಕ್ ಟ್ರಿಕ್ಸ್‌ಗಳನ್ನು ಪಾಲಿಸಿ, ಮೊಬೈಲ್ ಫುಲ್ ಸ್ಪೀಡ್‌ನಲ್ಲಿ ಚಾರ್ಜ್ ಆಗುತ್ತದೆ.
ವಾಸ್ತವವಾಗಿ, ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡುವುದರಿಂದ ಫೋನ್‌ನ ನೆಟ್‌ವರ್ಕ್ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಜೊತೆಗೆ ಫೋನ್‌ನ ಇಂಟರ್ನೆಟ್, ಜಿಪಿಎಸ್ ಮತ್ತು ನೆಟ್‌ವರ್ಕ್ ಸೇವೆಗಳು ಸಂಪೂರ್ಣವಾಗಿ ನಿಂತು ಹೋಗುತ್ತದೆ. ಫೋನ್‌ನಲ್ಲಿ ಹೀಗೆ ಕಾರ್ಯಗಳು ನಡೆಯದಿದ್ದಾಗ, ಫೋನ್ ವೇಗವಾಗಿ ಚಾರ್ಜ್ ಆಗಲು ಪ್ರಾರಂಭಿಸುತ್ತದೆ.
ನಿಮ್ಮ ಮೊಬೈಲ್ ಫೋನ್ ಅನ್ನು ತ್ವರಿತವಾಗಿ ಚಾರ್ಜ್ ಮಾಡಲು, ಯಾವಾಗಲೂ ಉತ್ತಮ ಗುಣಮಟ್ಟದ ಚಾರ್ಜರ್ ಮತ್ತು ಕೇಬಲ್ ಅನ್ನು ಬಳಸಿ. ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಥಳೀಯ ಅಥವಾ ನಕಲಿ ಚಾರ್ಜರ್‌ಗಳಿಂದ ನಿಮ್ಮ ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡುವುದರಿಂದ ಬ್ಯಾಟರಿ ಹಾನಿಗೊಳಗಾಗಬಹುದು ಮತ್ತು ನಿಮ್ಮ ಫೋನ್ ತುಂಬಾ ನಿಧಾನವಾಗಿ ಚಾರ್ಜ್ ಆಗಬಹುದು. ಹಾಗಾಗಿ ಕಂಪನಿ ಪ್ರಮಾಣೀಕೃತವಾಗಿರುವ ಉತ್ತಮ ಗುಣಮಟ್ಟದ ಫಾಸ್ಟ್ ಚಾರ್ಜರ್ ಬಳಸಿ.
ಅನೇಕ ಜನರು ಚಾರ್ಜ್ ಮಾಡುವಾಗಲು ಫೋನ್ ಬಳಕೆ ಮಾಡುತ್ತಾರೆ. ಹೌದು ರೀಲ್ಸ್, ನೋಡೋದು, ಗೇಮ್ಸ್ ಆಡೋದು ಹೀಗೆ ನಿರಂತರವಾಗಿ ಫೋನ್ ಯೂಸ್ ಮಾಡ್ತಾರೆ. ಹೀಗೆ ಚಾರ್ಜ್ ಮಾಡುವಾಗ ಮೊಬೈಲ್ ಬಳಕೆ ಮಾಡುವುದರಿಂದ ಬ್ಯಾಟರಿ ಬೇಗ ಖಾಲಿಯಾಗುತ್ತದೆ. ಇದು ಫೋನ್ ತ್ವರಿತವಾಗಿ ಚಾರ್ಜ್ ಆಗುವುದನ್ನು ತಡೆಯುತ್ತದೆ. ಆದ್ದರಿಂದ ಚಾರ್ಜ್ ಹಾಕುವ ವೇಳೆ ಫೋನ್ ಯೂಸ್ ಮಾಡ್ಬೇಡಿ ಜೊತೆಗೆ ಮೊಬೈಲ್ ನೆಟ್ವರ್ಕ್, ಬ್ಲೂಟೂತ್ ಮತ್ತು ಇತರೆ ವೈರ್‌ಲೆಸ್ ಸಂಪರ್ಕಗಳನ್ನು ಆಫ್ ಮಾಡಿ. ಇದರಿಂದ ಬ್ಯಾಟರಿ ಬಳಕೆ ಕಡಿಮೆಯಾಗಿ, ಫೋನ್ ವೇಗವಾಗಿ ಚಾರ್ಜ್ ಆಗುತ್ತದೆ.
ಇದನ್ನೂ ಓದಿ: ಸೊಳ್ಳೆಗಳು ಮನೆಯೊಳಗೆ ಬಾರದಂತೆ ತಡೆಯಲು ಇಲ್ಲಿವೆ ಸರಳ ಮಾರ್ಗಗಳು
ಕೆಲವರು ಜನರು ತಮ್ಮ ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡಲು ಚಾರ್ಜಿಂಗ್ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ, ಆದರೆ ಅಂತಹ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ನ ಚಾರ್ಜಿಂಗ್ ಅನ್ನು ನಿಧಾನಗೊಳಿಸುತ್ತವೆ. ಜೊತೆಗೆ ಚಾರ್ಜ್ ಮಾಡುವಾಗ ವಾಟ್ಸಾಪ್, ಯುಟ್ಯೂಬ್‌ನಂತಹ ಯಾವುದೇ ಆಪ್ಲಿಕೇಷನ್‌ಗಳನ್ನು ಬಳಸಬಾರದು ಇವೆಲ್ಲವೂ ಮೊಬೈಲ್ ವೇಗವಾಗಿ ಚಾರ್ಜ್ ಆಗುವುದನ್ನು ತಡೆಯುತ್ತವೆ.
ನೀವು ನಿಮ್ಮ ಫೋನ್ ಅನ್ನು ಯಾವಾಗಲೂ ಸರಿಯಾದ ತಾಪಮಾನದಲ್ಲಿ ಚಾರ್ಜ್ ಮಾಡಬೇಕು. ಫೋನ್ ಹೆಚ್ಚು ಬಿಸಿಯಾಗಿದ್ದರೆ ಅದು ಫೋನ್‌ನ ಬ್ಯಾಟರಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಚಾರ್ಜಿಂಗ್ ಅನ್ನು ಗಮನಾರ್ಹವಾಗಿ ನಿಧಾನಗೊಳಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:45 pm, Thu, 20 August 26