AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mosquito Prevention Tips: ಸೊಳ್ಳೆಗಳು ಮನೆಯೊಳಗೆ ಬಾರದಂತೆ ತಡೆಯಲು ಇಲ್ಲಿವೆ ಸರಳ ಮಾರ್ಗಗಳು

ಬೇಸಿಗೆ ಮತ್ತು ಮಳೆಗಾಲದಲ್ಲಿ ಸೊಳ್ಳೆಗಳ ಹಾವಳಿ ತೀರಾ ಹೆಚ್ಚಿರುತ್ತವೆ. ಅದರಲ್ಲೂ ಮಳೆಗಾಲದ ತೇವಭರಿತ ವಾತಾವರಣವು ಸೊಳ್ಳೆಗಳಿಗೆ ಅನುಕೂಲಕರ ಸಂತಾನೋತ್ಪತ್ತಿ ವಾತಾವರಣವನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಸೊಳ್ಳೆಗಳು ವೇಗವಾಗಿ ಸಂತಾನೋತ್ಪತ್ತಿ ಮಾಡುತ್ತವೆ ಮತ್ತು ಈ ಋತುವಿನಲ್ಲಿ ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್‌ಗುನ್ಯಾದಂತಹ ಸೊಳ್ಳೆಗಳಿಂದ ಹರಡುವ ರೋಗಗಳ ಅಪಾಯ ಹೆಚ್ಚಾಗುತ್ತದೆ. ಹೀಗಿರುವಾಗ ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಮನೆಯೊಳಗೆ ಸೊಳ್ಳೆಗಳು ಪ್ರವೇಶಿಸುವುದನ್ನು ತಡೆಯಿರಿ.

Mosquito Prevention Tips: ಸೊಳ್ಳೆಗಳು ಮನೆಯೊಳಗೆ ಬಾರದಂತೆ ತಡೆಯಲು ಇಲ್ಲಿವೆ ಸರಳ ಮಾರ್ಗಗಳು
ಸಾಂದರ್ಭಿಕ ಚಿತ್ರ Image Credit source: Unsplash
ಮಾಲಾಶ್ರೀ ಅಂಚನ್​
|

Updated on: Aug 20, 2026 | 5:52 PM

Share

ನೋಡಲು ತುಂಬಾನೇ ಸಣ್ಣದಾಗಿರುವ ಸೊಳ್ಳೆಗಳು (mosquitoes) ಡೆಂಗ್ಯೂ, ಮಲೇರಿಯಾ, ಚಿಕನ್‌ಗುನ್ಯಾದಂತಹ ಮಾರಕ ಕಾಯಿಲೆಗಳನ್ನು ಹರಡುತ್ತವೆ. ಇಂತಹ ಕಾಯಿಲೆಗಳಿಗೆ ತುತ್ತಾಗಿಯೇ ಪ್ರಪಂಚದಾದ್ಯಂತ ಲಕ್ಷಾಂತರ ಜನ ಸಾವನ್ನಪ್ಪುತ್ತಿದ್ದಾರೆ. ಮಳೆಗಾಲದಲ್ಲಿ ಸೊಳ್ಳೆಗಳ ಹಾವಳಿ ತೀರಾ ಹೆಚ್ಚಿರುತ್ತದೆ, ಇದರಿಂದಾಗಿ ಈ ಸಮಯದಲ್ಲಿ ಡೆಂಗ್ಯೂನಂತಹ ಕಾಯಿಲೆಗಳು ಕೂಡ ಹೆಚ್ಚಾಗುತ್ತದೆ.  ಹಾಗಾಗಿ ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಮನೆಯೊಳಗೆ ಪ್ರವೇಶಿಸುವ ಸೊಳ್ಳೆಗಳನ್ನು ಓಡಿಸಲು ಅನೇಕರು ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಇವುಗಳ ಬದಲು ಈ ಕೆಲವು ಸರಳ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಸೊಳ್ಳೆಗಳು ಮನೆಗೆ ಪ್ರವೇಶಿಸುವುದನ್ನು ಸಂಪೂರ್ಣವಾಗಿ ತಡೆಗಟ್ಟಬಹುದು.

ಸೊಳ್ಳೆಗಳು ಮನೆಯೊಳಗೆ ಬರುವುದನ್ನು ತಡೆಯಲು ಪಾಲಿಸಬೇಕಾದ ಕ್ರಮಗಳು:

ನಿಮ್ಮ ಮನೆಯ ಸುತ್ತಲೂ ನೀರು ಸಂಗ್ರಹವಾಗುವುದನ್ನು ತಡೆಯಿರಿ:

ಮಳೆ ಬಂದ ನಂತರ, ಛಾವಣಿಗಳು, ಹೂವಿನ ಕುಂಡಗಳು, ಕೂಲರ್‌ಗಳು, ಹಳೆಯ ಟೈರ್‌ಗಳು ಅಥವಾ ಯಾವುದೇ ಇತರ ತೆರೆದ ಪಾತ್ರೆಗಳಲ್ಲಿ ನೀರು ಸಂಗ್ರಹವಾಗಬಹುದು. ಇವುಗಳಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುವ ಸಾಧ್ಯತೆ ಹೆಚ್ಚು. ಆದ್ದರಿಂದ ಮನೆ ಸುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ. ಮನೆ ಸುತ್ತ ನಿಯಮಿತವಾಗಿ ಸ್ವಚ್ಛವಾಗಿಟ್ಟುಕೊಳ್ಳಿ.

ಕಿಟಕಿಗಳ ಮೇಲೆ ಜಾಲರಿ ಪರದೆಗಳನ್ನು ಅಳವಡಿಸಿ:

ಬಾಗಿಲುಗಳನ್ನು ಮುಚ್ಚಿದ್ದರೂ ಸೊಳ್ಳೆಗಳು ಕಿಟಕಿ ಮೂಲಕ ಮನೆಯೊಳಗೆ ಪ್ರವೇಶಿಸುತ್ತವೆ. ಹಾಗಾಗಿ ಕಿಟಕಿಗಳಿಗೆ ಜಾಲರಿ ಪರದೆಗಳನ್ನು ಅಳವಡಿಸಿಕೊಳ್ಳಿ. ಸಂಜೆ ಬಾಗಿಲು ಮತ್ತು ಪರದೆಗಳನ್ನು ಅನಗತ್ಯವಾಗಿ ತೆರೆದಿಡುವುದನ್ನು ತಪ್ಪಿಸಿ.

ಕೂಲರ್‌ಗಳು ಮತ್ತು ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛವಾಗಿಡಿ:

ಕೂಲರ್‌ಗಳಲ್ಲಿ ದೀರ್ಘಕಾಲದವರೆಗೆ ನೀರು ನಿಂತರೆ ಅಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಮಾಡಬಹುದು. ಆದ್ದರಿಂದ ಕೂಲರ್‌ಗಳನ್ನು ನಿಯಮಿತವಾಗಿ ಖಾಲಿ ಮಾಡಿ ಸ್ವಚ್ಛಗೊಳಿಸಿ. ನೀರಿನ ಟ್ಯಾಂಕ್‌ಗಳು ಮತ್ತು ಇತರ ದೊಡ್ಡ ಪಾತ್ರೆಗಳಲ್ಲಿ ಸೊಳ್ಳೆಗಳು ಮೊಟ್ಟೆ ಇಡುವುದನ್ನು ತಡೆಯಲು ಅವುಗಳನ್ನು ಮುಚ್ಚಿಡಿ ಮತ್ತು ನಿಯಮಿತವಾಗಿ ಅವುಗಳನ್ನು ಸ್ವಚ್ಛಗೊಳಿಸಿ.

ಮನೆಯೊಳಗೆ ಶುಚಿತ್ವವನ್ನು ಕಾಪಾಡಿಕೊಳ್ಳಿ:

ಕತ್ತಲೆ ಮತ್ತು ತೇವಾಂಶವುಳ್ಳ ಸ್ಥಳಗಳಲ್ಲಿ ಸೊಳ್ಳೆಗಳ ಹಾವಳಿ ತೀರಾ ಹೆಚ್ಚಿರುತ್ತದೆ. ಏಕೆಂದರೆ ಈ ಸ್ಥಳ  ಅವುಗಳಿಗೆ ಸಂತಾನೋತ್ಪತ್ತಿ ಮಾಡುವ ಸೂಕ್ತ ಸ್ಥಳಗಳಾಗಿವೆ. ಆದ್ದರಿಂದ, ನಿಮ್ಮ ಮನೆಯನ್ನು ಸ್ವಚ್ಛವಾಗಿಡಿ ಮತ್ತು ಕಸದ ತೊಟ್ಟಿಗಳನ್ನು ಮುಚ್ಚಿಡಿ. ಮನೆಯೊಳಗೆ ತೇವಾಂಶ ಇರದಂತೆ ನೋಡಿಕೊಳ್ಳಿ. ಸ್ನಾನಗೃಹಗಳು ಮತ್ತು ಅಡುಗೆಮನೆಗಳಂತಹ ಪ್ರದೇಶಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ.

ಇದನ್ನೂ ಓದಿ: ಇಂದು ‘ವಿಶ್ವ ಸೊಳ್ಳೆ ದಿನ’; ಸೊಳ್ಳೆಗಳ ವಿಸ್ಮಯಕಾರಿ ಜಗತ್ತು ಮತ್ತು ಆರೋಗ್ಯದ ಮೇಲಿನ ಅಪಾಯ

ಮನೆಯ ಸುತ್ತಲೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ:

ಸಸ್ಯಗಳು ಮತ್ತು ದಟ್ಟವಾದ ಪೊದೆಗಳು ತೇವಾಂಶವನ್ನು ಕಾಯ್ದುಕೊಳ್ಳುತ್ತವೆ, ಅಲ್ಲಿ ಸೊಳ್ಳೆಗಳು ಸುಲಭವಾಗಿ ಅಡಗಿಕೊಳ್ಳುತ್ತವೆ. ಹಾಗಾಗಿ ಪೊದೆಗಳನ್ನು ತೆಗೆದುಹಾಕಿ, ಗಿಡಗಳ ಸುತ್ತಲೂ ಸ್ವಚ್ಛವಾಗಿಟ್ಟುಕೊಳ್ಳಿ. ಗಿಡಗಳಿಗೆ ಅತಿಯಾಗಿ ನೀರು ಹಾಕಿದರೆ ಅಥವಾ ಸುತ್ತಮುತ್ತಲಿನ ಪ್ರದೇಶಗಳು ಸ್ವಚ್ಛವಾಗಿಲ್ಲದಿದ್ದರೆ, ಸೊಳ್ಳೆಗಳ ಸಂಖ್ಯೆ ಹೆಚ್ಚಾಗಬಹುದು. ಆದ್ದರಿಂದ, ನಿಯಮಿತವಾಗಿ ಸಸ್ಯಗಳನ್ನು ಕತ್ತರಿಸುವುದು ಮತ್ತು ಸ್ವಚ್ಛಗೊಳಿಸುವುದು ಮುಖ್ಯ.

ಸೊಳ್ಳೆ ತಡೆಗಟ್ಟುವ ಇತರೆ ಕ್ರಮಗಳು:

ಮಲಗುವಾಗ ಸೊಳ್ಳೆ ಪರದೆಯನ್ನು ಬಳಸಿ. ಅಗತ್ಯವಿದ್ದರೆ ಸೊಳ್ಳೆ ನಿವಾರಕವನ್ನು ಬಳಸಿ. ಇದಲ್ಲದೆ ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸುವುದನ್ನು ನಡೆಸಲು ಮನೆ ಅಂಗಳ, ಬಾಲ್ಕನಿಯಲ್ಲಿ ಚೆಂಡು ಹೂವು, ಲ್ಯಾವೆಂಡರ್‌, ರೋಸ್ಮೆರಿ, ತುಳಸಿಯಂತ ಗಿಡಗಳನ್ನು ಬೆಳೆಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್