Teachers’ Day 2022: ಶಿಕ್ಷಕರ ದಿನಾಚರಣೆಯ ನಿಮಿತ್ಯ ಶಿಕ್ಷಕರಿಗೆ ನೀವು ನೀಡಬಹುದಾದ ವಿಶಿಷ್ಟ ಉಡುಗೊರೆಗಳ ಸಲಹೆ ಇಲ್ಲಿದೆ

Teachers’ Day 2022: ಶಿಕ್ಷಕರ ದಿನಾಚರಣೆಯ ನಿಮಿತ್ಯ ನೀವು ನಿಮ್ಮ ಅಚ್ಚುಮೆಚ್ಚಿನ ಶಿಕ್ಷಕರಿಗೆ ಈ ಉಡುಗೊರೆಗಳನ್ನು ನೀಡಿದರೆ ಅವರು ಸಂತಸಗೊಳ್ಳಬಹುದು

Teachers’ Day 2022: ಶಿಕ್ಷಕರ ದಿನಾಚರಣೆಯ ನಿಮಿತ್ಯ ಶಿಕ್ಷಕರಿಗೆ ನೀವು ನೀಡಬಹುದಾದ ವಿಶಿಷ್ಟ ಉಡುಗೊರೆಗಳ ಸಲಹೆ ಇಲ್ಲಿದೆ
ಸಾಂಧರ್ಬಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on: Sep 05, 2022 | 7:00 AM

ಗುರು ದೇವೋ ಭವ ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಪ್ರತಿಯೊಂದು ಅಕ್ಷರವನ್ನು ಕಲಿಸದವನು ಗುರು. ಈ ದಿನ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಸಮರ್ಪಣೆ ಮಾಡುತ್ತಾರೆ. ವಿಶೇಷವಾದ ಉಡುಗರೆಗಳನ್ನು ಕೊಡುವುದರ ಮುಖಾಂತರ ಅವರಿಗೆ ಗುರು ಕಾಣಿಕೆ ಅಥವಾ ಅವರನ್ನು ಮೆಚ್ಚಿಸುತ್ತಾರೆ.

ಗುರುವಿನ ಗುಲಾಮನಾಗುವವರೆಗೆ ದೊರೆಯದಣ್ಣ ಮುಕುತಿ ಎಂಬ ಮಾತಿನಂತೆ ಪ್ರತಿಯೊಬ್ಬ ಶಿಷ್ಯನು ಗುರುವಿನ ಗುಲಾಮನಾಗುವವರಗೆ ಆತನಿಗೆ ವಿದ್ಯೆ ಒಲಿಯುವುದಿಲ್ಲ. ವಿದ್ಯೆ ಪಡೆಯಬೇಕಾದರೆ ಮೊದಲು ಗುರುವಿಗೆ ವಿನಯನಾಗಿ ನಡೆದುಕೊಳ್ಳುವುದನ್ನು ಕಲಿಯಬೇಕು. ನಮ್ಮ ಭಾರತೀಯ ಪರಂಪರೆಯಲ್ಲಿ ಗುರು ಶಿಷ್ಯ ನಡುವಿನ ಒಳ್ಳೆಯ ಬಾಂಧವ್ಯದ ಕುರಿತು ಅನೇಕ ಕಥೆಗಳನ್ನು ಓದಿದ್ದೇವೆ. ಮತ್ತು ಪ್ರಸ್ತುತ ಸಮಾಜದಲ್ಲಿ ಕಂಡಿದ್ದೇವೆ.

ಶಿಶುನಾಳ ಶರೀಫರು ಮತ್ತು ಗುರು ಗೋವಿಂದ ಭಟ್ಟರ, ಗುರು ಶಿಷ್ಯ ಸಂಬಂಧ ಅವರ್ಣೀಯ. ಶರೀಫರು ಗುರು ಗೋವಿಂದ ಭಟ್ಟರನ್ನು ಗಂಡ ಎಂದು ಸಂಬೋಧಿಸಿದ್ದಾರೆ. ಶರೀಫರೇ ತಮ್ಮ ಹಾಡಿನಲ್ಲಿ ಹೇಳುವ ಹಾಗೆ “ಎಲ್ಲರಂತವನಲ್ಲ ನನ್ನ ಗಂಡ ಬಲ್ಲಿದನು ಪುಂಡ” ಎಂದು ತಮ್ಮ ತತ್ವ ಪದದ ಮೂಲಕ ಗುರುವನ್ನು ಗಂಡನಿಗೆ ಹೋಲಿಸಿದ್ದಾರೆ.

ಹೀಗೆ ಸಾಕಷ್ಟು ಜನರನ್ನು ನಾವು ಉದಾಹರಣೆಯಾಗಿ ನೋಡಬಹದು. ರಾಮಕೃಷ್ಣ ಪರಮಹಂಸ – ಸ್ವಾಮಿ ವಿವೇಕಾನಂದ, ಅರ್ಜುನ – ದ್ರೋಣಾಚಾರ್ಯ ಹೀಗೆ ಹೇಳುತ್ತಾ ಅಹೋದರೆ ಅನೇಕರು ನಮ್ಮ ಕಣ್ಣೆದುರಿಗೆ ಬರುತ್ತಾರೆ. ಇರಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಯಾವ ಯಾವ ಉಡುಗೊರೆ ಕೊಡಬಹದು ಇಲ್ಲಿದೆ ಸಲಹೆ

1. ಪ್ರದರ್ಶನ: ನಾವು ನಮ್ಮ ಶಿಕ್ಷಕರಿಗೆ ಇಷ್ಟವಾದ ಹಾಡುಗಳನ್ನು ಪಟ್ಟಿ ಮಾಡಬಹುದು. ನಂತರ ಅವರಿಗಾಗಿ ವಿಶೇಷ ಪ್ರದರ್ಶನವನ್ನು ಸಿದ್ಧಪಡಿಸಬಹುದು. ಇದು ಅವರಿಗೆ ವಿಶೇಷ ಅನುಭವವನ್ನು ನೀಡಬಹುದು.

2. ಶುಭಾಶಯ ಪತ್ರಗಳು: ನೀವು ನಮ್ಮ ಶಿಕ್ಷಕರಿಗೆ ನೀವು ಅವರೊಂದಿಗೆ ಕಳೆದ ಒಳ್ಳೆಯ ಕ್ಷಣಗಳನ್ನು ಬರೆದು ಶುಭಾಯ ಹೇಳಬಹುದು.

3. ಕೇಕ್, ಅಲಂಕಾರಗಳು: ನಾವು ಶಿಕ್ಷಕರ ಕೋಣೆಯನ್ನು ಅವರ ಇಚ್ಛೆಯಂತೆ ಅಲಂಕರಿಸಬಹುದು ಮತ್ತು ಅವರಿಗಾಗಿ ಕೇಕ್ ತಯಾರಿಸಬಹುದು. ಇದು ಅವರಿಗೆ ವಿಶೇಷ ಭಾವನೆ ಮೂಡಿಸಬಹುದು ಮತ್ತು ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕೇಕ್​ನ್ನು ಕತ್ತರಿಸಬಹುದು.

4. ಉತ್ತಮ ವಿದ್ಯಾರ್ಥಿ: ಪ್ರತಿಯೊಬ್ಬ ಶಿಕ್ಷಕನು ತನ್ನ ವಿದ್ಯಾರ್ಥಿ ಉತ್ತಮ ವಿದ್ಯಾರ್ಥಿಯಾಗಬೇಕು. ಉತ್ತಮ ಅಂಕ ಪಡೆಯಬೇಕು ಎಂದು ಆಶಿಸುತ್ತಾರೆ. ಈ ರೀತಿಯಾಗಿ ನೀವು ಮಾಡಿದರೆ ಅವರಿಗೆ ಸಂತೋಷವಾಗುತ್ತದೆ.

5. ಭಾವಚಿತ್ರ ಸಂಗ್ರಹ : ನಿಮ್ಮ ಶಿಕ್ಷಕರೊಂದಿಗೆ ನೀವು ಕಳೆದ ಅಮೂಲ್ಯ ಕ್ಷಣಗಳ ಭಾವಚಿತ್ರಗಳನ್ನು ಸಂಗ್ರಹಿಸಿ. ಅವುಗಳನ್ನು ಸುಂದರವಾದ ಫ್ರೇಂನಲ್ಲಿ ಉಡುಗೊರೆಯಾಗಿ ನೀಡಿ.