AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯಲ್ಲಿ ಬೆವರಿನ ದುರ್ವಾಸನೆಯನ್ನು ಹೋಗಲಾಡಿಸಲು ಸ್ನಾನದ ನೀರಿಗೆ ಈ ವಸ್ತುವನ್ನು ಸೇರಿಸಿ

ಬೇಸಿಗೆಯ ಸಮಯದಲ್ಲಿ ನಮ್ಮ ದೇಹ ವಿಪರೀತವಾಗಿ ಬೆವರುತ್ತವೆ. ಈ ಅತಿಯಾದ ಬೆವರಿನ ಕಾರಣದಿಂದ ದೇಹದಲ್ಲಿ ದುರ್ವಾಸನೆ ಉಂಟಾಗುತ್ತದೆ. ಬೆವರಿನ ವಾಸನೆ ಅನೇಕರಿಗೆ ಮುಜುಗರವನ್ನು ಉಂಟು ಮಾಡುತ್ತದೆ. ಹೀಗಿರುವಾಗ ಸ್ನಾನದ ನೀರಿಗೆ ಈ ಕೆಲವೊಂದು ವಸ್ತುಗಳನ್ನು ಬೆರೆಸಿ ಸ್ನಾನ ಮಾಡುವುದರಿಂದ ಬೆವರಿನ ದುರ್ವಾಸನೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಜೊತೆಗೆ ದೇಹವನ್ನು ರಿಫ್ರೆಶ್‌ ಆಗಿ ಇಟ್ಟುಕೊಳ್ಳಬಹುದು.

ಬೇಸಿಗೆಯಲ್ಲಿ ಬೆವರಿನ ದುರ್ವಾಸನೆಯನ್ನು ಹೋಗಲಾಡಿಸಲು ಸ್ನಾನದ ನೀರಿಗೆ ಈ ವಸ್ತುವನ್ನು ಸೇರಿಸಿ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: May 04, 2026 | 7:13 PM

Share

ಬೇಸಿಗೆಯಲ್ಲಿ ಬೆವರುವುದು (sweat)  ಸಾಮಾನ್ಯ. ಕೆಲವೊಮ್ಮೆ ಈ ಸಮಯದಲ್ಲಿ ದೇಹ ವಿಪರೀತವಾಗಿ ಬೆವರುತ್ತದೆ. ಈ ಅತಿಯಾದ ಬೆವರು ದೇಹದಲ್ಲಿ ದುರ್ವಾಸನೆ ಉಂಟಾಗಲು ಕಾರಣವಾಗುತ್ತದೆ.  ಚರ್ಮದ ಮೇಲಿರುವ ಬ್ಯಾಕ್ಟೀರಿಯಾಗಳು ಬೆವರಿನೊಂದಿಗೆ ಸಂವಹನ ನಡೆಸಿದಾಗ ವಾಸನೆ ಉಂಟಾಗುತ್ತದೆ. ಈ ದುರ್ವಾಸನೆಯಿಂದಾಗಿ ಅನೇಕರು ಮುಜುಗರಕ್ಕೆ ಒಳಗಾಗುವುದುಂಟು ಮತ್ತು ಬೆವರಿನ ವಾಸನೆಯನ್ನು ಹೋಗಲಾಡಿಸಲು ಪರ್‌ಫ್ಯೂಮ್‌ ಸಹ ಹಾಕ್ತಾರೆ. ಹಾಗಿದ್ರೂ ಕೂಡ ಬೆವರಿನ ವಾಸನೆ ಹೋಗುವುದಿಲ್ಲ. ನೀವು ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ? ಹಾಗಿದ್ರೆ ಸ್ನಾನದ ರೀತಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿ, ಇದು ಬೆವರಿನ ದುರ್ವಾಸನೆಯನ್ನು ಹೋಗಲಾಡಿಸುವುದು ಮಾತ್ರವಲ್ಲ ನಿಮ್ಮನ್ನು ದಿನವಿಡೀ ತಾಜಾತನದಿಂದ ಇರಿಸುತ್ತದೆ.

ಬೆವರಿನ ವಾಸನೆಯನ್ನು ಹೋಗಲಾಡಿಸಲು ಸ್ನಾನದ ನೀರಿಗೆ ಈ ವಸ್ತುವನ್ನು ಬೆರೆಸಿ:

ಬೇವು:   ಬೇವಿನ ನೀರಿನಿಂದ ಸ್ನಾನ ಮಾಡುವುದರಿಂದ ದೇಹದ ವಾಸನೆಯೂ ಕಡಿಮೆಯಾಗುತ್ತದೆ. ಬೇವು ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದ್ದು ಅದು ಚರ್ಮವನ್ನು ಸ್ವಚ್ಛವಾಗಿರಿಸುತ್ತದೆ ಮತ್ತು ವಾಸನೆ ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ಬೇಸಿಗೆಯಲ್ಲಿ ಸ್ನಾನದ ನೀರಿನಲ್ಲಿ ಬೇವಿನ ಎಲೆಗಳು ಅಥವಾ ಬೇವಿನ ಎಣ್ಣೆಯನ್ನು ಬೆರೆಸಿ ಬಳಸಬಹುದು. ಇದು ಚರ್ಮದ ತುರಿಕೆ, ದದ್ದುಗಳು ಮತ್ತು ಕಿರಿಕಿರಿಯನ್ನು ತಡೆಯಲು ಸಹಾಯ ಮಾಡುತ್ತದೆ, ಇದು ದಿನವಿಡೀ ನಿಮ್ಮನ್ನು ಉಲ್ಲಾಸದಿಂದ ಇರಿಸುತ್ತದೆ.

ನಿಂಬೆ: ನಿಂಬೆಹಣ್ಣಿನ ವಾಸನೆಯು ಬೆವರಿನ ವಾಸನೆಯನ್ನು ಕಡಿಮೆ ಮಾಡುತ್ತದೆ . ನೀವು ನಿಂಬೆ ರಸವನ್ನು ನೀರಿನೊಂದಿಗೆ ಬೆರೆಸಬಹುದು ಅಥವಾ ನಿಂಬೆ ಸಿಪ್ಪೆಗಳನ್ನು ನೀರಿನಲ್ಲಿ ನೆನೆಸಬಹುದು. ಇದಲ್ಲದೆ ನೀರಿಗೆ 5 ಹನಿ ನಿಂಬೆ ಸಾರಭೂತ ಎಣ್ಣೆಯನ್ನು ಸೇರಿಸಿ ಸ್ನಾನ ಮಾಡಬಹುದು.

ಅಡುಗೆ ಸೋಡಾ: ಸ್ನಾನದ ನೀರಿಗೆ ಒಂದು ಚಿಟಿಕೆ ಅಡುಗೆ ಸೋಡಾ ಸೇರಿಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಇದು ನಿಮ್ಮ ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ, ಹೌದು ಇದು ಚರ್ಮವನ್ನು ಮೃದುಗೊಳಿಸುತ್ತದೆ ಇದಲ್ಲದೆ, ಈ ನೀರಿನಿಂದ ಸ್ನಾನ ಮಾಡುವುದರಿಂದ ದೇಹದ ವಾಸನೆಯೂ ಕಡಿಮೆಯಾಗುತ್ತದೆ.

ರೋಸ್ ವಾಟರ್: ನೀವು ಸ್ನಾನದ ನೀರಿಗೆ ಗುಲಾಬಿ ದಳಗಳು ಅಥವಾ ರೋಸ್ ವಾಟರ್ ಸೇರಿಸಬಹುದು. ಇದು ದೇಹದ ವಾಸನೆಯನ್ನು ಕಡಿಮೆ ಮಾಡಲು ಉತ್ತಮ ಮಾರ್ಗವಾಗಿದೆ. ರೋಸ್ ವಾಟರ್ ನೈಸರ್ಗಿಕ ಮಾಯಿಶ್ಚರೈಸರ್‌ಗಳನ್ನು ಹೊಂದಿದ್ದು, ಇದು ಶುಷ್ಕತೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಗಿಡಗಳನ್ನು ಮನೆ ಸುತ್ತ ನೆಟ್ಟರೆ ಇನ್ನೆಂದೂ ಸೊಳ್ಳೆಗಳ ಹಾವಳಿಯೇ ಇರೋದಿಲ್ಲ

ಪಟಿಕ: ಪಟಿಕವನ್ನು ಬಳಸುವುದರಿಂದ ದೇಹದ ವಾಸನೆಯನ್ನು ನಿವಾರಿಸಬಹುದು. ಬೆವರಿನಿಂದ ಉಂಟಾಗುವ ವಾಸನೆಯನ್ನು ನಿಯಂತ್ರಿಸುವಲ್ಲಿ ಪಟಿಕವು ತುಂಬಾ ಸಹಾಯಕವಾಗಿದೆ. ಸ್ನಾನದ ನಂತರ ಒದ್ದೆ ಚರ್ಮದ ಮೇಲೆ ಪಟಿಕದ ತುಂಡನ್ನು ಉಜ್ಜುವುದರಿಂದ ಬೆವರು ಉಂಟುಮಾಡುವ ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತವೆ ಮತ್ತು ದಿನವಿಡೀ ತಾಜಾತನದಿಂದ ಇರಬಹುದು.

ಸ್ನಾನದ ನಂತರ ಸರಿಯಾದ ಆರೈಕೆಯೂ ಅಗತ್ಯ:

ಸ್ನಾನ ಮಾಡಿದ  ನಂತರ ನಿಮ್ಮ ದೇಹವನ್ನು ಚೆನ್ನಾಗಿ ಒಣಗಿಸುವುದು ಸಹ ಮುಖ್ಯವಾಗಿದೆ. ಒದ್ದೆಯಾದ ಚರ್ಮದ ಮೇಲೆ ಬ್ಯಾಕ್ಟೀರಿಯಾಗಳು ವೇಗವಾಗಿ ಗುಣಿಸುತ್ತವೆ, ಇದು ವಾಸನೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಹಾಗಾಗಿ ದೇಹವನ್ನು ಸರಿಯಾಗಿ ಒಣಗಿಸಿ. ಇದಲ್ಲದೆ ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ ಏಕೆಂದರೆ ಅದು ಬೆವರು ಹೀರಿಕೊಳ್ಳುತ್ತದೆ ಮತ್ತು ಚರ್ಮವು ಉಸಿರಾಡಲು ಅನುವು ಮಾಡಿಕೊಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​