Travel: ಗೋವಾ ಬೀಚ್​ನಲ್ಲಿ ಜನಸಂದಣಿ, ಪಾರ್ಟಿ ಕಿರಿಕಿರಿಯಿಂದ ದೂರವಿರಬೇಕಾ? ಇಲ್ಲಿದೆ ನೋಡಿ ಪ್ರಶಾಂತವಾದ ಕಡಲತೀರ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 29, 2023 | 6:21 PM

ಗೋವಾ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಅಲ್ಲಿಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ಕಾರಣ ಅಲ್ಲಿ ಹೆಚ್ಚಿನ ಜನಸಂದಣಿಯಿಂದ ತುಂಬಿರುತ್ತದೆ. ಗೋವಾಗೆ ಹೋಗಬೇಕು, ಆದರೆ ಪ್ರಶಾಂತತೆಯಿಂದ ತುಂಬಿರುವ ಬೀಚ್‌ಗಳಿಗೆ ಭೇಟಿ ನೀಡಬೇಕು ಎಂದಿದ್ದರೆ, ಸೂಕ್ತವಾದ ಶಾಂತಿಯುತವಾದ ಬೀಚ್‌ಗಳ ಕುರಿತ ಮಾಹಿತಿ ಇಲ್ಲಿದೆ.

1 / 8
ಗೋವಾಗೆ ಹೋಗಬೇಕೆಂಬುವುದು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಿರುತ್ತದೆ. ಅಲ್ಲಿನ ಬೀಚ್ ಸೌಂದರ್ಯವನ್ನು ಸವಿಯುತ್ತಾ, ಸಂಜೆಯ ವೇಳೆ ಪಾರ್ಟಿ ಮಾಡುತ್ತಾ ಎಂಜಾಯ್ ಮಾಡಬೇಕೆಂಬುದು ಅನೇಕರ ಆಸೆ. ಇನ್ನೂ ಕೆಲವರು ಜನಸಂದಣಿಯಿಂದ ಹಾಗೂ ಪಾರ್ಟಿ ವಾತಾವರಣದಿಂದ ದೂರವಿದ್ದು, ಶಾಂತಯುತವಾದ ಪ್ರಕೃತಿಯ ಸೌಂದರ್ಯವನ್ನು ಸವಿಯಬೇಕು ಎಂದು ಬಯಸುತ್ತಾರೆ. ಆದರೆ ಗೋವಾದ ಬೀಚ್‌ಗಳು ಹೆಚ್ಚಾಗಿ ಜನಸಂದಣಿಯಿಂದ ತುಂಬಿರುತ್ತವೆ. ಬದಲಾಗಿ  ಶಾಂತಿಯುತ ಹಾಗೂ ಏಕಾಂತ ಕಡಲತೀರಗಳ ರಮಣೀಯ ಅನುಭವಗಳನ್ನು ಸವಿಯಬೇಕು ಎಂಬ ಬಯಕೆಯನ್ನು ಹೊಂದಿದ್ದೀರಾ, ಗೋವಾದಲ್ಲೂ ಕೂಡಾ ಏಳು ಪ್ರಶಾಂತವಾದ ಕಡಲತೀರಗಳಿವೆ. ಅಂತಹ ಪ್ರಶಾಂತ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಮನಸ್ಸನ್ನು ಶಾಂತಗೊಳಿಸಬಹುದು.

2 / 8
ಬಟರ್‌ಫ್ಲೆ ಬೀಚ್: ದಕ್ಷಿಣ ಗೋವಾದಲ್ಲಿರುವ ಬಟರ್‌ಫ್ಲೆ ಬೀಚ್ ಅದ್ಭುತವಾದ ಕಡಲತೀರವಾಗಿದೆ. ದೋಣಿಯ ಮೂಲಕ ಈ ಬೀಚ್ ತಲುಪಬಹುದು. ಇದು ಒಂದು ಚಿಕ್ಕದಾದ ಏಕಾಂತವಾದ ಕಡಲತೀರವಾಗಿದ್ದು, ಅಲ್ಲಿಗೆ ಹೋಗುವ ಮೂಲಕ ಮನಸ್ಸನ್ನು ಶಾಂತಗೊಳಿಸಬಹುದು.

3 / 8
ಕೋಲಾ ಬೀಚ್: ಕೋಲಾ ಬೀಚ್ ದಕ್ಷಿಣ ಗೋವಾದಲ್ಲಿದೆ. ಇದೊಂದು ಶಾಂತವಾದ ಬೀಚ್ ಆಗಿದ್ದು, ಇಲ್ಲಿ ಗೋವಾದ ನೈಸರ್ಗಿಕ ಸೌಂದರ್ಯವನ್ನು ಆನಂದಿಸುತ್ತಾ ವಿಶ್ರಾಂತಿ ಪಡೆಯಬಹುದು. ಕಿಕ್ಕಿರಿದ ಜನಸಂದಣಿಯಿಂದ ದೂರವಿದ್ದು, ಶಾಂತಯುವ ವಾತವರಣದಲ್ಲಿ ಪ್ರವಾಸವನ್ನು ಆನಂದಿಸಲು ಬಯಸುವವರಿಗೆ ಈ ಸ್ಥಳ ಸೂಕ್ತವಾಗಿದೆ.

4 / 8
ಗಲ್ಗಿಬಾಗ ಬೀಚ್: ಈ ಪ್ರಾಚೀನವಾದ ಬೀಚ್ ದಕ್ಷಿಣ ಗೋವಾದಲ್ಲಿದೆ. ಇದು ಅದ್ಭುತವಾದ ನೈಸರ್ಗಿಕ ಸೌಂದರ್ಯ ಮತ್ತು ಪ್ರಶಾಂತವಾದ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಅಲ್ಲದೆ ಇದು ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಡಿ ಜಾತಿಯ ಆಮೆಗಳು ವಾಸಿಸುವ ತಾಣವಾಗಿದೆ.

5 / 8
ಮೊರ್ಜಿಮ್ ಬೀಚ್: ಉತ್ತರ ಗೋವಾದಲ್ಲಿ ನೆಲೆಗೊಂಡಿರುವ ಮೊರ್ಜಿಮ್ ಕಡಲತೀರವು ಏಕಾಂತ ಮತ್ತು ಶಾಂತಯುತವಾದ ಬೀಚ್ ಆಗಿದೆ. ಇದು ರೋಮಾಂಚಕ ಪಕ್ಷಿ ಸಂಕುಲದ ನೆಲೆಗೆ ಹೆಸರುವಾಸಿಯಾಗಿದೆ ಮತ್ತು ಪ್ಕಷಿ ವೀಕ್ಷಣೆಗೆ ಜನಪ್ರಿಯ ತಾಣವಾಗಿದೆ.

6 / 8
ಕಾಕೋಲೆಮ್ ಬೀಚ್: ದಕ್ಷಿಣ ಗೋವಾದಲ್ಲಿನ ದೂರದ ಮತ್ತು ಏಕಾಂತವಾದ ಕಡಲತೀರ ಇದಾಗಿದೆ. ಇದು ಪ್ರಾಚೀನ ಬೀಚ್ ಸ್ಥಳವಾಗಿದ್ದು, ಇದು ಎತ್ತರದ ಬಂಡೆಗಳಿAದ ಆವೃತವಾಗಿದೆ. ಸರ್ಫಿಂಗ್ ಮತ್ತು ಈಜಲು ಇದು ಉತ್ತಮ ಸ್ಥಳವಾಗಿದೆ.

7 / 8
ಅಗೋಂಡಾ ಬೀಚ್: ದಕ್ಷಿಣ ಗೋವಾದಲ್ಲಿ ನೆಲೆಗೊಂಡಿರುವ ಅಗೋಂಡಾ ಬೀಚ್ ಗೋವಾದ ಶಾಂತಿಯುತ ಬೀಚ್‌ಗಳಲ್ಲಿ ಒಂದಾಗಿದೆ. ಜನಸಂದಣಿಯಿAದ ದೂರವಿದ್ದು, ಆರಾಮದಾಯಕವಾದ ಪ್ರವಾಸವನ್ನು ಆನಂದಿಸಲು ಬಯಸುವವರಿಗೆ ಈ ಬೀಚ್ ಸೂಕ್ತವಾಗಿದೆ.  ಕಯಾಕಿಂಗ್, ಪ್ಯಾಡಲ್‌ಬೋರ್ಡಿಂಗ್‌ನAತಹ ಜಲ ಕ್ರೀಡೆಗಳನ್ನು ಇಲ್ಲಿ ಆಡಬಹುದು.

8 / 8
ಅಶ್ವೆಮ್ ಬೀಚ್: ಇದು ಉತ್ತರ ಗೋವಾದಲ್ಲಿರುವ ಪ್ರಶಾಂತವಾದ ಕಡಲತೀರವಾಗಿದೆ. ಇದು ಅದ್ಭುತವಾದ ಸೂರ್ಯಸ್ತದ ವೀಕ್ಷಣೆಗೆ ಹೆಸರುವಾಸಿಯಾದ ಸ್ಥಳವಾಗಿದೆ. ಅಲ್ಲದೆ ಇದೊಂದು ಜನಪ್ರಿಯ ಛಾಯಾಗ್ರಹಣ ತಾಣವಾಗಿದೆ.

Published On - 6:21 pm, Wed, 29 March 23