ಪಾತ್ರೆಗಳಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಅಡುಗೆ ಮನೆಯಲ್ಲಿ ಲಭ್ಯವಿರುವ ಈ ವಸ್ತುಗಳೇ ಸಾಕು

ವಿಶೇಷವಾಗಿ ನಾನ್‌ವೆಜ್‌ ಅಡುಗೆಗಳನ್ನು ಮಾಡುವ ಪಾತ್ರೆಗಳನ್ನು ಎಷ್ಟೇ ಕ್ಲೀನ್‌ ಮಾಡಿದ್ರು ಸಹ, ಅದರ ವಾಸನೆ ಹೋಗೋದೇ ಇಲ್ಲ. ಹೀಗಿರುವಾಗ ಅಡುಗೆ ಮನೆಯಲ್ಲೇ ಲಭ್ಯವಿರುವ ಈ ಒಂದಷ್ಟು ವಸ್ತುಗಳನ್ನು ಬಳಸಿ ಪಾತ್ರೆಯ ವಾಸನೆಯನ್ನು ಹೋಗಲಾಡಿಸಬಹುದು. ಈ ಸಿಂಪಲ್‌ ಟ್ರಿಕ್ಸ್‌ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಾತ್ರೆಗಳಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಅಡುಗೆ ಮನೆಯಲ್ಲಿ ಲಭ್ಯವಿರುವ ಈ ವಸ್ತುಗಳೇ ಸಾಕು
ಸಾಂದರ್ಭಿಕ ಚಿತ್ರ
Image Credit source: Getty Images

Updated on: Nov 25, 2025 | 4:48 PM

ಅಡುಗೆಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಅಡುಗೆ ಪಾತ್ರೆಗಳನ್ನು (utensils) ಕ್ಲೀನ್‌ ಆಗಿ ಇಟ್ಟುಕೊಳ್ಳುವುದು ಸಹ ಬಹಳ ಮುಖ್ಯ. ಅದಕ್ಕಾಗಿ ಸೋಪ್‌, ಲಿಕ್ವಿಡ್‌ ಬಳಸಿ ಪಾತ್ರೆಗಳನ್ನು ಕ್ಲೀನ್‌ ಮಾಡ್ತಾರೆ. ಆದ್ರೆ ಎಷ್ಟೇ ಕ್ಲೀನ್‌ ಮಾಡಿದ್ರೂ ನಾನ್‌ವೆಜ್‌ ಬೇಯಿಸಿದ ಪಾತ್ರೆಗಳ ವಾಸನೆ ಹಾಗೆಯೇ ಉಳಿದುಬಿಡುತ್ತದೆ. ನೀವು ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ? ಹಾಗಿದ್ರೆ ಈ ಟ್ರಿಕ್ಸ್‌ ಬಳಸಿ ಅಡುಗೆ ಪಾತ್ರೆಗಳ ದುರ್ವಾಸನೆಯನ್ನು ಕ್ಷಣಮಾತ್ರದಲ್ಲಿ ಹೋಗಲಾಡಿಸಿ.

ಪಾತ್ರೆಗಳಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಈ ಟ್ರಿಕ್‌ ಟ್ರೈ ಮಾಡಿ:

ನಿಂಬೆ, ಉಪ್ಪು: ಅರ್ಧ ನಿಂಬೆ ಹೋಳನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿ ಪಾತ್ರೆಯನ್ನು ಚೆನ್ನಾಗಿ ತಿಕ್ಕಿ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಸೋಪಿನಿಂದ ಕ್ಲೀನ್‌ ಮಾಡಿ. ಇದು ಪಾತ್ರೆಗಳ ದುರ್ವಾಸನೆ ಹೋಗಲಾಡಿಸಲು ಪರಿಣಾಮಕಾರಿ.

ದಾಲ್ಚಿನ್ನಿ ಪುಡಿ: ದುರ್ವಾಸನೆ ಬರುವ ಪಾತ್ರೆಗೆ ದಾಲ್ಚಿನ್ನಿ ಪುಡಿ ಮತ್ತು ಸ್ವಲ್ಪ ನೀರು ಸೇರಿಸಿ, 15 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ಲಿಕ್ವಿಡ್‌ನಿಂದ ಪಾತ್ರೆ ಕ್ಲೀನ್‌ ಮಾಡಿ.

ಆಲೂಗಡ್ಡೆ: ಆಲೂಗಡ್ಡೆಯಲ್ಲಿರುವ ಪಿಷ್ಟ ಪಾತ್ರೆಗಳಿಂದ ಬರುವ ಕೆಟ್ಟ ವಾಸನೆಯನ್ನು ತೆಗೆದುಹಾಕಲು ಸಹಕಾರಿ. ಇದಕ್ಕಾಗಿ ಒಂದು ತುಂಡು ಆಲೂಗಡ್ಡೆಗೆ ಉಪ್ಪನ್ನು ಸೇರಿಸಿ, ಪಾತ್ರೆಯನ್ನು ಚೆನ್ನಾಗಿ ತಿಕ್ಕಿ, 10 ನಿಮಿಷಗಳ ಬಳಿಕ ಪಾತ್ರೆಯನ್ನು ಕ್ಲೀನ್‌ ಮಾಡಿ.

ಇದನ್ನೂ ಓದಿ: ಸಕ್ಕರೆಯೊಂದಿಗೆ ಒಂದು ವಸ್ತು ಇದ್ರೆ ಸಾಕು, ಬಲು ಸುಲಭವಾಗಿ ಜಿರಳೆಗಳನ್ನು ಓಡಿಸಬಹುದು

ಕಾಫಿ ಪುಡಿ: ಪಾತ್ರೆ ಕೆಟ್ಟ ವಾಸನೆ ಬರುತ್ತಿದ್ದರೆ, ಆ ಪಾತ್ರೆಗೆ ಕಾಫಿ ಡಿಕಾಕ್ಷನ್‌ ಮತ್ತು ಸ್ವಲ್ಪ ನೀರು ಸೇರಿಸಿ, 2 ನಿಮಿಷಗಳ ಕಾಲ ಕುದಿಸಿ ಸ್ವವ್‌ ಆಫ್‌ ಮಾಡಿ 20 ನಿಮಿಷಗಳ ಬಳಿಕ ಸೋಪ್‌ನಿಂದ ತೊಳೆಯಿರಿ. ಇದು ವಾಸನೆಯನ್ನು ಹೋಲಾಡಿಸಲು ಪರಿಣಾಮಕಾರಿ.

ಇದಲ್ಲದೆ ಅಡುಗೆಸೋಡಾ, ವಿನೆಗರ್‌, ಕಿತ್ತಳೆ ಸಿಪ್ಪೆ ಸಹ ಪಾತ್ರೆಗಳ ವಾಸನೆಯನ್ನು ಹೋಗಲಾಡಿಸಲು ಸಹಕಾರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:44 pm, Tue, 25 November 25