AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಟಮಿನ್ ಕೊರತೆಯಲ್ಲ, ಮೂಳೆಗೆ ಸಂಬಂಧ ಪಟ್ಟ ಕಾಯಿಲೆಯೂ ಅಲ್ಲ; ಹಾಗಿದ್ರೆ ಯಾಕೆ ಬರುತ್ತೆ ಸ್ನಾಯು ನೋವು?

ಇತ್ತೀಚಿನ ದಿನಗಳಲ್ಲಿ ಸ್ನಾಯು ನೋವಿಗೆ ಸಂಬಂಧ ಪಟ್ಟ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವುದನ್ನು ನೋಡಿರಬಹುದು. ಈ ರೀತಿಯ ಸ್ನಾಯು ನೋವಿಗೆ ಹಲವು ಕಾರಣಗಳಿರುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾಗಿ ಕೆಲವು ಪರೀಕ್ಷೆಗಳನ್ನು ಮಾಡಿದ ನಂತರವೂ ಕೂಡ ಈ ರೀತಿ ಸಮಸ್ಯೆ ಮುಂದುವರಿದರೆ ಅದಕ್ಕೆ ಕಾರಣಗಳು ಮತ್ತು ತಡೆಗಟ್ಟುವ ವಿಧಾನಗಳ ಕುರಿತು ತಿಳಿದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಟಮಿನ್ ಕೊರತೆಯಲ್ಲ, ಮೂಳೆಗೆ ಸಂಬಂಧ ಪಟ್ಟ ಕಾಯಿಲೆಯೂ ಅಲ್ಲ; ಹಾಗಿದ್ರೆ ಯಾಕೆ ಬರುತ್ತೆ ಸ್ನಾಯು ನೋವು?
Muscle Pain
ಪ್ರೀತಿ ಭಟ್​, ಗುಣವಂತೆ
|

Updated on:Feb 07, 2026 | 6:35 PM

Share

ಇತ್ತೀಚಿನ ದಿನಗಳಲ್ಲಿ ಸ್ನಾಯು ನೋವು (Muscle Pain) ಹೆಚ್ಚಾಗಿ ಎಲ್ಲರಲ್ಲಿಯೂ ಕಂಡುಬರುತ್ತಿರುವುದನ್ನು ಗಮನಿಸಿರಬಹುದು. ಆದರೆ ಇದನ್ನು ನಿರ್ಲಕ್ಷ್ಯ ಮಾಡುವವರೇ ಹೆಚ್ಚಾಗಿರುತ್ತಾರೆ. ಕೆಲವರು ಈ ರೀತಿ ಕಂಡು ಬರುವ ನೋವು ವಿಟಮಿನ್ ಕೊರತೆ ಎಂದು ಅನೇಕರು ಅಂದುಕೊಳ್ಳುತ್ತಾರೆ. ಆದರೆ ಈ ರೀತಿ ಕಂಡು ಬರುವ ಸ್ನಾಯು ನೋವು ಯಾವುದೇ ವಿಟಮಿನ್ ಕೊರತೆ ಅಥವಾ ಮೂಳೆಗೆ ಸಂಬಂಧ ಪಟ್ಟ ಕಾಯಿಲೆ ಆಗಿರುವುದಿಲ್ಲ. ಈ ರೀತಿಯ ಸ್ನಾಯು ನೋವಿಗೆ ಹಲವು ಕಾರಣಗಳಿರುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾಗಿ ಕೆಲವು ಪರೀಕ್ಷೆಗಳನ್ನು ಮಾಡಿದ ನಂತರವೂ ಕೂಡ ಈ ರೀತಿ ಸಮಸ್ಯೆ ಮುಂದುವರಿದರೆ ಅದಕ್ಕೆ ಕಾರಣಗಳು ಮತ್ತು ತಡೆಗಟ್ಟುವ ವಿಧಾನಗಳ ಕುರಿತು ತಿಳಿದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಡಾ. ಅಖಿಲೇಶ್ ಅವರು ಹೇಳುವ ಪ್ರಕಾರ, ಈ ರೀತಿಯ ಸ್ನಾಯು ನೋವಿಗೆ ಹಲವು ಕಾರಣಗಳಿರುತ್ತವೆ. ಅವುಗಳಲ್ಲಿ ಒಂದು ಪ್ರಮುಖ ಕಾರಣವೆಂದರೆ ಒಂದೇ ಜಾಗದಲ್ಲಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದು, ಈ ರೀತಿ ಕುಳಿತುಕೊಳ್ಳುವ ಭಂಗಿ ಸರಿಯಾಗಿ ಇಲ್ಲದಿರುವುದು ಸ್ನಾಯು ನೋವಿಗೆ ಕಾರಣವಾಗುತ್ತದೆ. ಲ್ಯಾಪ್‌ಟಾಪ್‌ ಅಥವಾ ಫೋನ್‌ಗಳಲ್ಲಿ ಕೆಲಸ ಮಾಡುವಾಗ ನಿರಂತರವಾಗಿ ಕುತ್ತಿಗೆ ಬಾಗಿರುವುದು ಬೆನ್ನಿನ ಮೇಲೆ ಒತ್ತಡ ಬೀಳುತ್ತದೆ. ಇದು ಸಹ ನೋವಿಗೆ ಕಾರಣವಾಗುತ್ತದೆ. ಜೊತೆಗೆ ವಿಟಮಿನ್‌ಗಳು ಡಿ ಮತ್ತು ಕ್ಯಾಲ್ಸಿಯಂ ಸಾಮಾನ್ಯ ಮಟ್ಟದಲ್ಲಿದ್ದರೂ ಸಹ, ಈ ನೋವು ಕಡಿಮೆಯಾಗದೆಯೇ ಉಳಿಯುತ್ತದೆ.

ಮಾನಸಿಕ ಒತ್ತಡವೂ ಒಂದು ಕಾರಣವಾಗಿರಬಹುದು:

ಕೆಲವೊಮ್ಮೆ ಮಾನಸಿಕ ಒತ್ತಡ ನೇರವಾಗಿ ಅಲ್ಲದಿದ್ದರೂ ಸ್ನಾಯು ನೋವಿಗೆ ಕಾರಣವಾಗಬಹುದು. ಮಾನಸಿಕ ಒತ್ತಡವು ಹಾರ್ಮೋನ್ ಸಮತೋಲನವನ್ನು ಅಡ್ಡಿಪಡಿಸುತ್ತದೆ, ಇದು ಸ್ನಾಯುಗಳನ್ನು ನಿರಂತರವಾಗಿ ಬಿಗಿಯಾಗಿರಿಸುವುದರಿಂದ ನೋವು ಉಂಟಾಗುತ್ತದೆ. ಇನ್ನು, ಮಾನಸಿಕ ಒತ್ತಡದ ಜೊತೆಗೆ, ನಿದ್ರೆ ಸರಿಯಾಗಿ ಆಗದಿದ್ದರೆ ಅದು ಕೂಡ ನೋವನ್ನು ಉಂಟುಮಾಡಬಹುದು.

ಇದನ್ನೂ ಓದಿ: ನೀವು ಕೆಲಸ ಮಾಡುವಾಗ ಕುಳಿತುಕೊಳ್ಳುವಂತಹ ಭಂಗಿಯಿಂದಲೂ ಬರಬಹುದು ಬೆನ್ನು ನೋವು ಎಚ್ಚರಿಕೆ ನೀಡಿದ ಡಾ ಅಜಯ್‌ ಹೆಗ್ಡೆ

ನಿರ್ಜಲೀಕರಣ:

ವಿಟಮಿನ್ ಕೊರತೆ ಇಲ್ಲದಿದ್ದರೂ, ದೇಹದಲ್ಲಿ ನೀರಿನ ಕೊರತೆಯಿಂದಾಗಿ ಸ್ನಾಯು ನೋವು ಉಂಟಾಗಬಹುದು. ನೀರಿನ ಕೊರತೆಯು ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳನ್ನು ಕಡಿಮೆ ಮಾಡುತ್ತದೆ. ಅದರಲ್ಲಿಯೂ ಅತಿಯಾಗಿ ಬೆವರುವವರು, ಕ್ರೀಡಾಪಟುಗಳು ಸ್ನಾಯು ನೋವಿನ ಸಮಸ್ಯೆಗಳನ್ನು ಹೆಚ್ಚಾಗಿ ಎದುರಿಸುತ್ತಾರೆ. ಅಂತವರು ಕ್ಯಾಲ್ಸಿಯಂ, ವಿಟಮಿನ್‌ ಅಥವಾ ಪ್ರೋಟೀನ್‌ನ ಸೇವನೆಯನ್ನು ಸರಿಯಾಗಿ ಮಾಡುತ್ತಿದ್ದರೂ ಕೂಡ ನಿರ್ಜಲೀಕರಣದಿಂದ ಸ್ನಾಯು ನೋವು ಉಂಟಾಗುತ್ತದೆ.

ಸ್ನಾಯು ನೋವನ್ನು ತಡೆಗಟ್ಟಲು ಸಲಹೆಗಳು:

  • ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ. ಒಂದು ಗಂಟೆಗಿಂತ ಹೆಚ್ಚು ಕಾಲ ಒಂದೇ ಕಡೆಯಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ.
  • ಪ್ರತಿನಿತ್ಯ ಲಘು ವ್ಯಾಯಾಮ ಮಾಡುವುದನ್ನು ಮರೆಯಬೇಡಿ.
  • ಹಗಲಿನಲ್ಲಿ ಕನಿಷ್ಠ 7 ರಿಂದ 8 ಗ್ಲಾಸ್ ನೀರು ಕುಡಿಯಿರಿ.
  • 7 ರಿಂದ 8 ಗಂಟೆ ಸರಿಯಾಗಿ ನಿದ್ದೆ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:25 pm, Sat, 7 February 26