valentine’s day : ದ್ವೇಷ ಪ್ರೀತಿಯಾಗಿ ಬದಲಾಯಿತು ಅವನಿಂದ!
valentine's day : ಅವನನ್ನು ದ್ವೇಷಿಸುತ್ತಿದ್ದ ನನ್ನ ಮನ ಅಂದಿನಿಂದ ದ್ವೇಷವನ್ನೇ ಮರೆಸಿ ಬಿಟ್ಟಿತ್ತು. ಅವನ ಬರುವಿಕೆಗಾಗಿ ಮನ ಹಾತೊರೆಯುತ್ತಿತ್ತು, ನನಗೆ ಅರಿವಾಗದ ಹಾಗೇಯೇ ಅವನನ್ನು ಕಂಡು ಮುಗುಳ್ನಗೆ ಬೀರುತ್ತಿತ್ತು. ಹಾಗಾದರೆ ನಾನು ದ್ವೇಷಿಸುವುದನ್ನು ಬಿಟ್ಟು ಪ್ರೀತಿಸಲು ಆರಂಭಿಸಿದೆನೇ ಎಂದು ನನಗೆ ನಾನೇ ಪ್ರಶ್ನೆ ಕೇಳಿದಾಗ ಮನ ಹುಂ ಎಂದು ಮೆಲ್ಲಗೆ ನುಡಿಯಿತು. ಪ್ರೀತಿಯ ಪಯಣ ಆರಂಭವಾಯಿತು.
ಪ್ರೀತಿ ಎಂದರೇನು? ಎಂಬ ಪ್ರಶ್ನೆಗೆ ಉತ್ತರದ ಮೂಲಕ ವ್ಯಾಖ್ಯಾನಿಸಲು ಅಸಾಧ್ಯ. ಪ್ರೀತಿ ಎಂದರೆ ಆಕರ್ಷಕಣೆಯೇ ಅಥವಾ ಮನದಲ್ಲಿ ಮೂಡುವ ನವಿರಾದ ಭಾವನೆಯೇ ತಿಳಿಯದು ಏನೇ ಇರಲಿ ಪ್ರೀತಿ ಪ್ರೀತಿಯೇ. ನನಗೂ ಪ್ರೀತಿ ಎಂದರೆ ಏನು ಎಂದು ನಿಜವಾಗಿಯೂ ಗೊತ್ತಿಲ್ಲ. ನಮ್ಮ ಕ್ಲಾಸ್ ನಲ್ಲಿ ತುಂಬಾ ಸೈಲೆಂಟ್ ಆಗಿರುವ ಹುಡುಗಿ ಎಂದರೆ ಅದು ನಾನೇ ಎಂದು ನನ್ನ ತರಗತಿಯಲ್ಲಿರುವ ಸ್ನೇಹಿತರ ಭಾವನೆ ಕಾರಣ ನಾನು ಮಾತನಾಡುವುದೇ ಅಪರೂಪ, ನನ್ನಷ್ಟಕ್ಕೆ ನಾನು ಇರುತ್ತಿದೆ. ನನ್ನ ಕಾಲೇಜುನಲ್ಲಿ ಆ ಹುಡುನ್ನೊಬ್ಬನು ಕಂಡರೆ ನನಗೆ ಯಾಕೋ ಕೋಪ, ನಾನು ಮಾತಿಗೆ ಹೇಳುವುದುಂಟು, ಅವನನ್ನು ಕಂಡರೆ ನನಗೆ ಆಗುವುದಿಲ್ಲ ಎಂದು. ಆದರೆ ನನಗೆ ಯಾಕೆ ಅವನ ಮೇಲೆ ಕೋಪ ಎಂದು ಕೇಳಿದರೆ ನನ್ನಲ್ಲಿ ಉತ್ತರ ಇಲ್ಲ. ಹೀಗೆ ನನ್ನ ಕಾಲೇಜು ಲೈಫ್ ಸಾಗುತ್ತಿತ್ತು. ಆ ಹುಡುಗ ಪ್ರತಿ ದಿನ ತರಗತಿಯಲ್ಲಿ ಕುಳಿತಾಗ ನನ್ನನ್ನೆ ನೋಡುತ್ತಿದ್ದ ನನಗೆ ಅದರ ಅರಿವೇ ಇರಲಿಲ್ಲ ನಂತರದಲ್ಲಿ ನನ್ನ ಗೆಳತಿ ನನಗೆ ಆ ನೋಟದ ಬಗ್ಗೆ ತಿಳಿಸಿದಳು ನಾನು ಅವನನ್ನು ಗಮನಿಸಲು ಆರಂಭಿಸಿದೆ, ಅವಳು ಹೇಳಿದ ಮಾತು ಸತ್ಯವೋ ಸುಳೋ, ಅಥವಾ ನನ್ನ ಕಾಲೆಳೆಯಲು ಆ ರೀತಿ ಹೇಳಿದಳೋ ಗೊತ್ತಿಲ್ಲ, ಮೊದಲೇ ಅವನನ್ನು ಕಂಡರೆ ಆಗದ ನನಗೆ ಅವನು ನನ್ನನ್ನೇ ಗೂರಾಯಿಸುತ್ತಿರುವುದು ಗಮನಕ್ಕೆ ಬಂತು.
ಇವನು ಯಾಕಪ್ಪಾ ನನ್ನನ್ನು ಈ ರೀತಿ ಕಣ್ಣು ಮಿಟುಕಿಸದೆ ನೋಡುತ್ತಿದ್ದಾನೆ ಅವನನ್ನು ಕಂಡರೆ ಆಗದ ವಿಷಯ ಏನಾದರೂ ತಿಳಿಯಿತೆ ಎಂದು ನನ್ನ ಮನದಲ್ಲಿಯೇ ಭಯ ಆರಂಭವಾಯಿತು. ಇದೇ ನೋಟ ಪ್ರತಿ ದಿನ. ಆ ನೋಟ ಯಾಕೆಂದು ನನಗೆ ಅರಿವಿಗೆ ಬರಬೇಕಾದರೆ ನನ್ನ ಗೆಳತಿಯೇ ಬರಬೇಕಾಯಿತು. ಒಂದು ದಿನ ನನ್ನನ್ನು ಕರೆದು ಹೇಳಿದಳು ಆ ಹುಡುಗನಿಗೆ ನಿನ್ನ ಮೇಲೆ ಪ್ರೀತಿಯಾಗಿದೆಯಂತೆ, ನೀನೆಂದರೆ ಅವನಿಗೆ ಇಷ್ಟವಂತೆ, ನೀನು ಅವನನ್ನು ಪ್ರೀತಿಸುವೆಯಾ ಕೇಳಲು ಹೇಳಿದನು ಎಂದು ನನ್ನ ಗೆಳತಿ ಹೇಳಿದಳು ನನಗೆ ಆ ಕ್ಷಣಕ್ಕೆ ಆಶ್ಚರ್ಯವಾಯಿತು. ಎಲ್ಲಾ ಪ್ರೀತಿ ಕಥೆಯಲ್ಲಿಯೂ ಸ್ನೇಹಿತರ ಪಾತ್ರ ಮಹತ್ವವಾದದ್ದು ಇಬ್ಬರ ಪ್ರೀತಿ ಚಿಗುರೊಡೆಯಲು ಸ್ನೇಹಿತರು ಮುಖ್ಯ ಸೇತುವೇ ಮತ್ತು ಸಂದೇಶವನ್ನು ರವಾನಿಸಲು ಮಧ್ಯವರ್ತಿಗಳಾಗಿರುತ್ತಾರೆ.
ಅವನನ್ನು ದ್ವೇಷಿಸುತ್ತಿದ್ದ ನನ್ನ ಮನ ಅಂದಿನಿಂದ ದ್ವೇಷವನ್ನೇ ಮರೆಸಿ ಬಿಟ್ಟಿತ್ತು. ಅವನ ಬರುವಿಕೆಗಾಗಿ ಮನ ಹಾತೊರೆಯುತ್ತಿತ್ತು, ನನಗೆ ಅರಿವಾಗದ ಹಾಗೇಯೇ ಅವನನ್ನು ಕಂಡು ಮುಗುಳ್ನಗೆ ಬೀರುತ್ತಿತ್ತು. ಹಾಗಾದರೆ ನಾನು ದ್ವೇಷಿಸುವುದನ್ನು ಬಿಟ್ಟು ಪ್ರೀತಿಸಲು ಆರಂಭಿಸಿದೆನೇ ಎಂದು ನನಗೆ ನಾನೇ ಪ್ರಶ್ನೆ ಕೇಳಿದಾಗ ಮನ ಹುಂ ಎಂದು ಮೆಲ್ಲಗೆ ನುಡಿಯಿತು. ಪ್ರೀತಿಯ ಪಯಣ ಆರಂಭವಾಯಿತು. ಪ್ರೀತಿಗೆ ಕಣ್ಣಿಲ್ಲ, ಪ್ರೀತಿ ಹುಟ್ಟುವುದಕ್ಕೆ ಕಾರಣ ಬೇಕಿಲ್ಲ, ಎಂದು ಹೇಳುತ್ತಾರೆ ಅದು ನಿಜ, ಅಷ್ಟೊಂದು ದ್ವೇಷ ಮಾಡುತ್ತಿದ್ದ ಆ ವ್ಯಕ್ತಿಯನ್ನು ನಾನು ಹೇಗೆ ಪ್ರೀತಿಸಲು ಸಾಧ್ಯವಾಯಿತು ಗೊತ್ತಿಲ್ಲ, ಮೌನದಿಂದ ಕೂಡಿರುತ್ತಿದ್ದ ನನ್ನ ಜೀವನಕ್ಕೆ ಮಾತಾಗಿ ಬಂದವನೇ ಅವನು ದ್ವೇಷ ಪ್ರೀತಿಯಾಗಿ ಬದಲಾಗಿದ್ದೇ….. ಅವನಿಂದ.
ಕವಿತಾ ಆಳ್ವಾಸ್ ಕಾಲೇಜು ಮೂಡಬಿದಿರೆ