Propose Day 2022 Date: ಪ್ರಪೋಸ್ ಮಾಡಬೇಕು ಅಂತ ಅಂದುಕೊಂಡಿದ್ದೀರಾ? ಈ ದಿನ ಸೂಕ್ತವಾಗಿದೆ
Valentine’s Week 2022: ಗಂಡು ಅಥವಾ ಹೆಣ್ಣು ತನ್ನ ಕನಸಿನ ಹುಡುಗ/ ಹುಡುಗಿ ಕಣ್ಣು ಮುಂದೆ ಬಂದಾಗ ಮನಸ್ಸು ಖುಷಿಯಲ್ಲಿ ತೇಲುತ್ತದೆ. ಎಂದೂ ಸಿಗದ ಆನಂದ ಆ ಘಳಿಗೆ ಗಳಿಸುತ್ತದೆ. ಆದರೆ ಕದ್ದು ಕುಳಿತಿರುವ ಪ್ರೀತಿಯನ್ನು ಹೇಳಲು ಭಯ ಬಿಡಲ್ಲ.
ಫೆಬ್ರವರಿ ಬಂದರೆ ಸಾಕು ಪ್ರೇಮಿಗಳ (Lovers) ಮನದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಕೋಪ, ಮನಸ್ತಾಪ, ಸಿಟ್ಟು ಎಷ್ಟೇ ಇದ್ದರೂ ಪ್ರೀತಿ ಮಾತ್ರ ಕಡಿಮೆ ಆಗಲ್ಲ. ಇದೇ ಅಲ್ವಾ ನಿಜವಾದ ಪ್ರೀತಿ? ಹೌದು, ಪ್ರೀತಿ ಎಲ್ಲಿ ಇರುತ್ತೋ.. ಜಗಳನೂ ಅಲ್ಲೇ ಇರುತ್ತದೆ. ಇದೇನೇಯಿರಲಿ, ಏಳು ವಿಶೇಷ ದಿನಗಳಲ್ಲಿ ಎರಡನೇ ದಿನ ಅಂದರೆ ಫೆಬ್ರವರಿ 8ಕ್ಕೆ ತೀರಾ ವಿಶೇಷವಾಗಿರುತ್ತದೆ. ಕಾರಣ ಬೆಟ್ಟದಷ್ಟು ಪ್ರೀತಿಯನ್ನು ಭದ್ರವಾಗಿ ಕಾಪಾಡಿಕೊಂಡು ತನ್ನ ಸಂಗಾತಿಗೆ ತಿಳಿಸುವ ದಿನವಾಗಿರುತ್ತದೆ. ಅದೇ ಪ್ರಪೋಸ್ ಡೇ (Propose Day).
ಗಂಡು ಅಥವಾ ಹೆಣ್ಣು ತನ್ನ ಕನಸಿನ ಹುಡುಗ/ ಹುಡುಗಿ ಕಣ್ಣು ಮುಂದೆ ಬಂದಾಗ ಮನಸ್ಸು ಖುಷಿಯಲ್ಲಿ ತೇಲುತ್ತದೆ. ಎಂದೂ ಸಿಗದ ಆನಂದ ಆ ಘಳಿಗೆ ಗಳಿಸುತ್ತದೆ. ಆದರೆ ಕದ್ದು ಕುಳಿತಿರುವ ಪ್ರೀತಿಯನ್ನು ಹೇಳಲು ಭಯ ಬಿಡಲ್ಲ. ಒಂದು ಹೆಜ್ಜೆ ಮುಂದೆ ಇಟ್ಟು ಪ್ರೀತಿಯನ್ನು ಹೇಳಲೇಬೇಕು ಅನಿಸುತ್ತದೆ. ಎಷ್ಟೇ ಕಷ್ಟವಾದರೂ ಪರವಾಗಿಲ್ಲ ಧೈರ್ಯ ಮಾಡಿ ಪ್ರೀತಿ ವಿಷಯ ತಿಳಿಸಿಬಿಡೋಣ ಅನಿಸುತ್ತೆ. ಆದರೆ ಅದಕ್ಕೆ ಒಳ್ಳೆಯ ದಿನ ಯಾವಾಗ ಬರುತ್ತೆ ಅಂತ ತಲೆಬಿಸಿಯೂ ಶುರುವಾಗುತ್ತೆ. ಈ ಬಗ್ಗೆ ಚಿಂತೆ ಬೇಡ. ಫೆಬ್ರವರಿ 8ಕ್ಕೆ ಒಳ್ಳೆಯ ದಿನ. ಪ್ರಪೋಸ್ ಡೇ ದಿನ ನಿಮ್ಮ ಕನಸಿನ ಹುಡುಗ/ ಹುಡುಗಿಗೆ ಪ್ರಪೋಸ್ ಮಾಡಿಬಿಡಿ.
ರೋಸ್ ಡೇ ನಂತರ ಬುರುವುದೇ ಪ್ರಪೋಸ್ ಡೇ. ರೋಸ್ ಹಿಡಿದು ಪ್ರೀತಿ ಪಾತ್ರರಿಗೆ ನಿಮ್ಮ ಪ್ರೀತಿಯ ಸಂದೇಶವನ್ನು ಹೇಳಲು ಇದೇ ಒಳ್ಳೆಯ ದಿನ. ತಮ್ಮ ಭಾವನೆಗಳನ್ನ ವ್ಯಕ್ತಪಡಿಸಲು ಅತ್ಯದ್ಭುತ ದಿನ.
ಪ್ರಪೋಸ್ ಮಾಡುವಾಗ ಈ ಬಗ್ಗೆ ಗಮನವಿರಲಿ: * ಕಡಲತೀರ ಪ್ರೇಮಿಗಳಿಗೆ ಸುಂದರವಾದ ತಾಣ. ಹೀಗಾಗಿ ಮೊದಲ ಪ್ರೀತಿಯನ್ನು ಹೇಳಲು ಕಡಲತೀರವನ್ನು ಆಯ್ಕೆ ಮಾಡಿಕೊಳ್ಳಿ. * ಊಟ ಮಾಡುವಾಗ ನಿಧಾನವಾಗಿ, ರೊಮ್ಯಾಂಟಿಕ್ ಆಗಿ ತಮ್ಮ ಪ್ರೀತಿ ವಿಷಯವನ್ನು ಪ್ರಸ್ತಾಪಿಸಿ. * ಮೊದಲು ನೋಡಿದ ಸ್ಥಳದಲ್ಲಿ ಮತ್ತೆ ಸಿಕ್ಕು ಪ್ರಪೋಸ್ ಮಾಡಿ. * ಸಿನಿಮಾ ನೋಡುವಾಗ ತಾನೂ ಹೀಗೆ ಪ್ರಪೋಸ್ ಮಾಡಬೇಕು ಅಂತ ಅನಿಸುವುದು ಸಹಜ. ಹಾಗಾಗಿ ಸಿನಿಮಾ ಶೈಲಿಯಲ್ಲೊ ಪ್ರಪೋಸ್ ಮಾಡಿ. ಹೀರೋ ಹೇಗೆ ಹೀರೋಯಿನ್ನ ಒಲಿಸುತ್ತಾನೋ ಹಾಗೇ ಮಾಡಿ.
ಇದನ್ನೂ ಓದಿ
Rose Day 2022: ನಾಳೆಯ ರೋಸ್ ಡೇಗೆ ಯಾವ ಬಣ್ಣದ ಗುಲಾಬಿ ಹೂವು ಕೊಡಬೇಕು? ಇಲ್ಲಿದೆ ನಿಮ್ಮ ಗೊಂದಲಕ್ಕೆ ಉತ್ತರ