AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day Gift Ideas: ಪ್ರೇಮಿಗಳ ದಿನದಂದು ನಿಮ್ಮ ಪ್ರೇಮಿಗೆ ಈ ಉಡುಗೊರೆ ನೀಡಿ, ಬೇಗ ಇಂಪ್ರೆಸ್ ಆಗುತ್ತಾರೆ

Valentine’s Week 2022: ಪ್ರೇಮಿಗಳಿಗೆ ಫೆಬ್ರವರಿ 14 ತೀರಾ ವಿಶೇಷ ದಿನ. ಈ ದಿನದಂದು ಪ್ರೇಮಿಗಳು ಉಡುಗೊರೆ ನೀಡಿ ಮನಸಿನಲ್ಲಿರುವ ಭಾವನೆಗಳನ್ನ ಹಂಚಿಕೊಳ್ಳುತ್ತಾರೆ. ನಾಳೆ ಬರುವ ಪ್ರೇಮಿಗಳ ದಿನ ಕೆಲ ಜೋಡಿಗೆ ವರ್ಷಕ್ಕೊಮ್ಮೆ ಬರುವ ವಿಶೇಷ ದಿನ ಅನಿಸಬಹುದು.

Valentine’s Day Gift Ideas: ಪ್ರೇಮಿಗಳ ದಿನದಂದು ನಿಮ್ಮ ಪ್ರೇಮಿಗೆ ಈ ಉಡುಗೊರೆ ನೀಡಿ, ಬೇಗ ಇಂಪ್ರೆಸ್ ಆಗುತ್ತಾರೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Feb 13, 2022 | 4:53 PM

Share

ನಂಬಿಕೆ, ಹೊಂದಾಣಿಕೆ, ಪ್ರಾಮಾಣಿಕತೆಯ ಗುಚ್ಚಕ್ಕೆ ಪ್ರೀತಿ ಎಂದು ಹೇಳಬಹುದು. ಪ್ರೀತಿ (Love) ಎನ್ನುವುದು ಕೇವಲ ಎರಡು ಅಕ್ಷರ ಇರುವ ಶಬ್ದವಲ್ಲ. ಪ್ರೀತಿ ಎಂದರೆ ಏನು ಅಂತ ಕೇವಲ ಪದಗಳಿಂದ ವಿವರಿಸಲೂ ಆಗಲ್ಲ. ಇತ್ತೀಚೆಗೆ ಪ್ರೀತಿ ಹೆಸರಲ್ಲಿ ಹಲವರು ಬೇರೆ ದಾರಿ ಹಿಡಿದಿದ್ದಾರೆ. ಪ್ರೀತಿ, ಪ್ರೇಮ ಅಂತ ಮೊಸ ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ. ಪ್ರೀತಿಗೆ ಬೆಲೆನೇ ಇಲ್ವಾ? ಅನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ. ಆದರೂ ನಿಜವಾದ ಪ್ರೀತಿಗೆ ಕೊನೆಯಿಲ್ಲ. ನಾಳೆ (ಫೆ.14) ಪ್ರೇಮಿಗಳ ದಿನ. ಮನಸಿನಲ್ಲಿ ಪ್ರೇಮಿಗಾಗಿ ಪುಟ್ಟ ಅರಮನೆ ಕಟ್ಟಿ ಕಾಪಾಡುವ ಜೀವಗಳಿಗೆ ಸಂಭ್ರಮದ ದಿನ.

ಪ್ರೇಮಿಗಳಿಗೆ ಫೆಬ್ರವರಿ 14 ತೀರಾ ವಿಶೇಷ ದಿನ. ಈ ದಿನದಂದು ಪ್ರೇಮಿಗಳು ಉಡುಗೊರೆ ನೀಡಿ ಮನಸಿನಲ್ಲಿರುವ ಭಾವನೆಗಳನ್ನ ಹಂಚಿಕೊಳ್ಳುತ್ತಾರೆ. ನಾಳೆ ಬರುವ ಪ್ರೇಮಿಗಳ ದಿನ ಕೆಲ ಜೋಡಿಗೆ ವರ್ಷಕ್ಕೊಮ್ಮೆ ಬರುವ ವಿಶೇಷ ದಿನ ಅನಿಸಬಹುದು. ಇನ್ನು ಕೆಲವರಿಗೆ ಮನಸಿನಲ್ಲಿ ಅಡಗಿರುವ ಪ್ರೀತಿಯನ್ನು ತನ್ನ ಕನಸಿನ ರಾಣಿ ಅಥವಾ ರಾಜನಿಗೆ ತಿಳಿಸಲು ಅತ್ಯದ್ಭುತ ದಿನ. ಭಾವನೆಗಳನ್ನ ಹಂಚಿಕೊಳ್ಳಲು ಕೇವಲ ಮಾತು ಸಾಲದು. ಇಂಪ್ರೆಸ್ ಮಾಡಲು ಉಡುಗೊರೆಯನ್ನೂ ನೀಡಬೇಕು. ಆದರೆ ಯಾವ ಉಡುಗೊರೆ ನೀಡಬೇಕು ಎನ್ನುವ ಬಗ್ಗೆ ಬಹಳಷ್ಟು ಗೊಂದಲ ಇರುತ್ತದೆ. ಆದರೆ ಈಗ ಈ ಗೊಂದಲವನ್ನು ದೂರ ಮಾಡಿಕೊಳ್ಳಿ. ನಾವು ನಿಮಗೆ ಕೆಲ ಸಲಹೆ ನೀಡುತ್ತೇವೆ.

ವಾಚ್: ಕೈಗೆ ಒಂದು ವಾಚ್ ಇದ್ದರೆ ಆ ಲುಕ್ಕೇ ಬೇರೆ. ಕೈ ಖಾಲಿ ಖಾಲಿ ಕಾಣಿಸುತ್ತಿದ್ದರೆ ಪ್ರೇಮಿಗಳ ದಿನಕ್ಕಾಗಿ ವಾಚ್​ನ ಉಡುಗೊರೆಯಾಗಿ ನೀಡಿ. ವಾಚ್ ಕೊಡುವಾಗ ಹೃದಯಕ್ಕೆ ನಾಟುವ ಎರಡು ಸಾಲುಗಳ ಡೈಲಾಗ್ ಹೇಳಿ.

ಬಟ್ಟೆ: ಕೆಲವರಿಗೆ ಬಟ್ಟೆ ಬಗ್ಗೆ ತುಂಬಾ ಕ್ರೇಜ್ ಇರುತ್ತದೆ. ಹೀಗಾಗಿ ಸಾಮಾನ್ಯವಾಗಿ ಬಟ್ಟೆಯನ್ನು ಉಡುಗೊರೆಯಾಗಿ ನೀಡಿದಾಗ ಬೇಗ ಇಂಪ್ರೆಸ್ ಆಗುತ್ತಾರೆ. ಬಟ್ಟೆ ಕೊಡುವಾಗ ಒಂದು ವಿಚಾರ ಗಮನದಲ್ಲಿ ಇರಲಿ. ಅವರಿಗೆ ಆಗುವ ಅಳತೆ, ಇಷ್ಟವಾಗುವ ಬಣ್ಣದ ಬಗ್ಗೆಯೂ ಮೊದಲು ತಿಳಿದುಕೊಳ್ಳಿ.

ಉಂಗುರ: ಉಂಗುರ ಪ್ರೀತಿಯ ಸಂಕೇತ. ಹೀಗಾಗಿ ಪ್ರೇಮಿಗಳ ದಿನ ಪ್ರಯುಕ್ತ ಉಂಗುರವನ್ನು ಉಡುಗೊರೆಯಾಗಿ ನೀಡಬಹುದು. ಚಿನ್ನದ ಉಂಗುರ ನೀಡಬೇಕು ಅಂತ ಅಲ್ಲ. ನಿಮ್ಮ ಆರ್ಥಿಕ ಮಟ್ಟಕ್ಕೆ ಅನುಕೂಲವಾಗುವಂತೆ ನೀಡಬಹುದು. ಹೊಸ ಹೊಸ ವಿನ್ಯಾಸದ ಬೆಳ್ಳಿ ಉಂಗುರವನ್ನೂ ನೀಡಬಹುದು.

ಮೊಬೈಲ್: ಇತ್ತೀಚಿಗೆ ಮೊಬೈಲ್ ಇಲ್ಲದೆ ಜೀವನವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಸಮಾಜ ಸಾಗುತ್ತಿದೆ. ಎಲ್ಲದಕ್ಕೂ ಅನಿವಾರ್ಯ ಆಗಿರುವ ಮೊಬೈಲ್​ನ ಉಡುಗೊರೆಯಾಗಿ ನಿಮ್ಮೆ ಪ್ರೇಮಿಗೆ ನೀಡುವ ಮೂಲಕ ಇಂಪ್ರೆಸ್ ಮಾಡಿ.

ಸೌಂದರ್ಯ ವರ್ಧಕಗಳು: ಹುಡುಗಿಯರಿಗೆ ತುಂಬಾ ಇಷ್ಟವಾಗುವ ಗಿಫ್ಟ್ ಎಂದರೆ ಸೌಂದರ್ಯ ವರ್ಧಕಗಳು. ಲಿಪ್​ಸ್ಟಿಕ್, ಕಾಡಿಗೆ, ನೈಲ್ ಪಾಲೀಶ್, ಹೇರ್ ಬ್ಯಾಂಡ್ಸ್ ಸೇರಿ ಹಲವು ಸೌಂದರ್ಯ ವರ್ಧಕಗಳನ್ನ ಸೇರಿಸಿ ಉಡುಗೊರೆಯಾಗಿ ನೀಡಬಹುದು.

ಇದನ್ನೂ ಓದಿ

Valentine’s Day 2022 : ವ್ಯಾಲೆಂಟೈನ್ಸ್‌ ಡೇ ಇತಿಹಾಸ ಹೇಗಿದೆ ಗೊತ್ತಾ? “ಲುಪರ್ಕಾಲಿಯಾ” ಹಬ್ಬವೇ ವ್ಯಾಲೆಂಟೈನ್ಸ್‌ ಡೇ

Valentines Day: ನಿಜವಾದ ಪ್ರೀತಿಯಂದ್ರೆ ಜನ್ಮ ಜನ್ಮಾಂತರಗಳ ಪ್ರೀತಿ, ಶಿವನನ್ನು ಪಡೆಯಲು ಕಠಿಣಾತಿ ಕಠಿಣ ತಪಸ್ಸುಗಳನ್ನು ಮಾಡಿದ್ದಳು ಪಾರ್ವತಿ