Rose Day 2025 Date: ರೋಸ್ ಡೇ ವಿಶೇಷತೆ ಏನು? ಇತಿಹಾಸ, ಮಹತ್ವವನ್ನು ತಿಳಿದುಕೊಳ್ಳಿ
Valentine’s Week 2025: ವ್ಯಾಲೆಂಟೈನ್ಸ್ ವೀಕ್ 2025 ಇನ್ನೇನು ಆರಂಭವಾಗಲಿದ್ದು, ಫೆ. 7ರಿಂದ 14ರ ವರೆಗೆ ಪ್ರೇಮಿಗಳ ವಾರವಾಗಿ ಆಚರಣೆ ಮಾಡಲಾಗುತ್ತದೆ. ಜೋಡಿ ಹಕ್ಕಿಗಳು ತಮ್ಮ ಪ್ರೀತಿಯನ್ನು ಆಚರಿಸುವ ಮೊದಲ ದಿನವೇ ರೋಸ್ ಡೇ. ಪ್ರೇಮಿಗಳು ಹೆಚ್ಚಾಗಿ ಇಷ್ಟ ಪಡುವ ಗುಲಾಬಿ ಹೂಗಳಿಂದ ಈ ವಾರ ಆರಂಭವಾಗುತ್ತದೆ. ಅದರಲ್ಲಿಯೂ ಗುಲಾಬಿಯನ್ನು ಇಷ್ಟಪಡದ ಹುಡುಗಿಯರು ಬಹಳ ಕಡಿಮೆ. ಹಾಗಾಗಿ ಪ್ರೇಮಿಗಳಿಗೂ ಮತ್ತು ಗುಲಾಬಿಗೂ ಬಹಳ ನಿಕಟ ಸಂಬಂಧ. ಹಾಗಾದರೆ ರೋಸ್ ಡೇಯನ್ನು ಯಾಕಾಗಿ ಆಚರಿಸಲಾಗುತ್ತದೆ? ಅದರ ಇತಿಹಾಸ, ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರೇಮಿಗಳು ಕಾತುರದಿಂದ ಕಾದು ಕುಳಿತಿದ್ದ ವ್ಯಾಲೆಂಟೈನ್ಸ್ ವೀಕ್ 2025 ಇನ್ನೇನು ಆರಂಭವಾಗಲಿದ್ದು, ಫೆ. 7ರಿಂದ 14ರ ವರೆಗೆ ಪ್ರೇಮಿಗಳ ವಾರವಾಗಿ ಆಚರಣೆ ಮಾಡಲಾಗುತ್ತದೆ. ಜೋಡಿ ಹಕ್ಕಿಗಳು ತಮ್ಮ ಪ್ರೀತಿಯನ್ನು ಆಚರಿಸುವ ಮೊದಲ ದಿನವೇ ರೋಸ್ ಡೇ. ಈ ದಿನ ನಾವು ನಮ್ಮ ಪ್ರೀತಿಪಾತ್ರರಿಗೆ ಪದಗಳ ಮೂಲಕ ಏನೂ ಹೇಳದೆ ಪ್ರೀತಿಯನ್ನು ಹೂವಿನ ಮೂಲಕ ಹೇಳುವ ದಿನವಾಗಿದೆ. ಹಾಗಾಗಿ ಈ ದಿನ ಗುಲಾಬಿ ಹೂವುಗಳನ್ನು ತಮ್ಮ ಸಂಗಾತಿಗೆ ನೀಡುವ ಮೂಲಕ ರೋಸ್ ಡೇಯನ್ನು ಆಚರಿಸುತ್ತಾರೆ. ಈ ಗುಲಾಬಿ ಹೂವುಗಳು ವ್ಯಾಲೆಂಟೈನ್ಸ್ ಡೇ ವಾರದ ಕೇಂದ್ರಬಿಂದು ಎಂದರೆ ತಪ್ಪಾಗಲಾರದು. ಏಕೆಂದರೆ ಪ್ರೇಮಿಗಳು ಹೆಚ್ಚಾಗಿ ಇಷ್ಟ ಪಡುವ ಗುಲಾಬಿ ಹೂಗಳಿಂದ ಈ ವಾರ ಆರಂಭವಾಗುತ್ತದೆ. ಅದರಲ್ಲಿಯೂ ಗುಲಾಬಿಯನ್ನು ಇಷ್ಟಪಡದ ಹುಡುಗಿಯರು ಬಹಳ ಕಡಿಮೆ. ಹಾಗಾಗಿ ಪ್ರೇಮಿಗಳಿಗೂ ಮತ್ತು ಗುಲಾಬಿಗೂ ಬಹಳ ನಿಕಟ ಸಂಬಂಧ. ಹಾಗಾದರೆ ರೋಸ್ ಡೇಯನ್ನು ಯಾಕಾಗಿ ಆಚರಿಸಲಾಗುತ್ತದೆ? ಅದರ ಇತಿಹಾಸ, ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ರೋಸ್ ಡೇ ಯಾವಾಗ?
ವ್ಯಾಲೆಂಟೈನ್ಸ್ ವೀಕ್ ಆರಂಭವಾಗುವುದು ರೋಸ್ ಡೇ ಇಂದ. ಈ ದಿನವನ್ನು ಪ್ರತಿ ವರ್ಷವೂ ಫೆಬ್ರವರಿ 7ರಂದು ಆಚರಿಸಲಾಗುತ್ತದೆ. ರೋಸ್ ಡೇ ದಿನ ಪ್ರೇಮಿಗಳು ತಮ್ಮ ಪ್ರೀತಿಪಾತ್ರರಿಗೆ ತಮ್ಮ ಭಾವನೆಗಳನ್ನು ತಿಳಿಸಲು ಗುಲಾಬಿ ಹೂವುಗಳನ್ನು ನೀಡುತ್ತಾರೆ. ಹಾಗಂತ ಇದು ಪ್ರೇಮಿಗಳಿಗೆ ಸೀಮಿತವಾದ ದಿನವಲ್ಲ. ನಾವು ಪ್ರೀತಿಸುವ ಅಪ್ಪ-ಅಮ್ಮ ಅಥವಾ ಸ್ನೇಹಿತರಿಗೆ ಕೂಡ ಗುಲಾಬಿ ಹೂವುಗಳನ್ನು ನೀಡಬಹುದು. ಏಕೆಂದರೆ ಪ್ರೀತಿ ಕೇವಲ ಜೋಡಿ ಹಕ್ಕಿಗಳಿಗೆ ಮಾತ್ರವಲ್ಲ, ಬದಲಾಗಿ ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ಈ ದಿನ ತಮ್ಮ ಪ್ರೀತಿ ಪಾತ್ರರಿಗೆ ಗುಲಾಬಿ ಹೂವನ್ನು ನೀಡುವ ಮೂಲಕ ಆಚರಣೆ ಮಾಡಬಹುದು.
ರೋಸ್ ಡೇ ಇತಿಹಾಸ ಮತ್ತು ಮಹತ್ವ:
ರೋಮನ್ ಪುರಾಣಗಳಲ್ಲಿ ಗುಲಾಬಿ ಹೂವುಗಳು ಪ್ರೀತಿ ಮತ್ತು ಉತ್ಸಾಹದ ಸಂಕೇತವಾಗಿದೆ. ವಿಶೇಷವಾಗಿ ಸೌಂದರ್ಯ ಮತ್ತು ಪ್ರೀತಿಯೊಂದಿಗೆ ಸಂಬಂಧಿಸಿದ ದೇವತೆಯಾದ ಶುಕ್ರಕ್ಕೆ ಗುಲಾಬಿ ಹೂವುಗಳನ್ನು ಯೆಥೇಚ್ಛವಾಗಿ ಬಳಸಲಾಗುತ್ತಿತ್ತು. ಅದರ ಪರಿಮಳ ಮತ್ತು ಆಕರ್ಷಕ ಬಣ್ಣದಿಂದಾಗಿ ಗುಲಾಬಿ ಹೂವುಗಳು ಏಷ್ಯನ್ ಮತ್ತು ಅರಬ್ ಸಂಸ್ಕೃತಿಗಳಂತಹ ಪೂರ್ವ ನಾಗರಿಕತೆಗಳಲ್ಲಿ ಪ್ರೀತಿಯೊಂದಿಗೆ ಸಂಬಂಧ ಹೊಂದಿವೆ. ವಿಕ್ಟೋರಿಯನ್ನರು ತಮ್ಮ ಪ್ರೀತಿಯ ಸಂಕೇತವಾಗಿ ಗುಲಾಬಿ ಹೂವುಗಳನ್ನು ನೀಡುವ ಮೂಲಕ ಪರಸ್ಪರ ಪ್ರೀತಿಯನ್ನು ಪ್ರದರ್ಶಿಸುತ್ತಿದ್ದರು. ಆ ಸಮಯದಿಂದ ಪ್ರತಿ ವರ್ಷ ಫೆಬ್ರವರಿ 7ರಂದು ಗುಲಾಬಿ ಹೂವುಗಳನ್ನು ನೀಡುವುದು ಮತ್ತು ಸ್ವೀಕರಿಸುವುದನ್ನು“ಗುಲಾಬಿ ದಿನ” ಎಂದು ಸ್ಮರಿಸಲಾಗುತ್ತದೆ.
ಇದನ್ನೂ ಓದಿ: ನಿಮ್ಮನ್ನು ಎಲ್ಲರೂ ಇಷ್ಟಪಡ್ಬೇಕಾ? ಈ ಗುಣಗಳನ್ನು ಅಳವಡಿಸಿಕೊಳ್ಳಿ ಎನ್ನುತ್ತಾರೆ ಚಾಣಕ್ಯ
ಸಂಗಾತಿಗೆ ಪ್ರಪೋಸ್ ಮಾಡಲು ಯಾವ ಬಣ್ಣದ ಗುಲಾಬಿ ಒಳ್ಳೆಯದು?
ಪ್ರೀತಿ ಪಾತ್ರರಿಗೆ ಪ್ರಪೋಸ್ ಮಾಡಲು ಕೆಂಪು ಗುಲಾಬಿ ಒಳ್ಳೆಯದು. ಆದರೆ ನೀವು ವಿನೂತನವಾಗಿ, ಒಂದು ರೀತಿಯ ಹೊಸತನದಲ್ಲಿ ಪ್ರಪೋಸ್ ಮಾಡಲು ಬಯಸಿದಲ್ಲಿ ಬಿಳಿ ಗುಲಾಬಿ ಉತ್ತಮ. ಪ್ರೇಮಿ ತಜ್ಞರ ಪ್ರಕಾರ ಈ ಪ್ರೇಮಿಗಳ ದಿನದಂದು, ನಿಮ್ಮ ಪ್ರೀತಿಪಾತ್ರರಿಗೆ ಬಿಳಿ ಗುಲಾಬಿಯೊಂದಿಗೆ ಪ್ರಪೋಸ್ ಮಾಡಿ ನಿಮ್ಮ ಸಂಗಾತಿಯ ಮನವೊಲಿಸಿ. ಏಕೆಂದರೆ ಬಿಳಿ ಗುಲಾಬಿ ಮುಗ್ಧತೆ ಮತ್ತು ಶುದ್ಧತೆಯನ್ನು ಪ್ರತಿನಿಧಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:33 pm, Thu, 6 February 25




