ಹಾಸಿಗೆಯ ಪಕ್ಕದಲ್ಲಿ ಈ ವಸ್ತುಗಳಿದ್ದರೆ ಒಳ್ಳೆಯದು!
ವಾಸ್ತು ತತ್ವಗಳ ಪ್ರಕಾರ, ಮಲುಗುವ ಕೋಣೆಯಲ್ಲಿ ಯಾವಾಗಲೂ ಶಾಂತಿ ಮತ್ತು ಪ್ರೀತಿ ಸದಾಕಾಲ ತುಂಬಿರಬೇಕು. ಇದನ್ನು ಆಕರ್ಷಿಸಲು ನಿಮ್ಮ ಹಾಸಿಗೆಯ ಪಕ್ಕದಲ್ಲಿ ಕೆಲವು ವಸ್ತುಗಳನ್ನು ಇಡುವುದು ತುಂಬಾ ಒಳ್ಳೆಯದು. ಇದರಿಂದ ನಿಮಗೆ ಮತ್ತು ನಿಮ್ಮ ಪ್ರೀತಿ ಪಾತ್ರರಿಗೆ ಒಳ್ಳೆಯ ವಾತಾವರಣ ಸಿಗುತ್ತದೆ ಆದರೆ ಅದರ ಮೊದಲು ಕೆಲವು ನಿರ್ದಿಷ್ಟ ವಾಸ್ತು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹಾಗಾದರೆ ಆ ವಸ್ತುಗಳು ಯಾವವು? ಇಲ್ಲಿದೆ ಮಾಹಿತಿ.
ನಿಮ್ಮ ಮನೆಯಲ್ಲಿ ಮಲಗುವ ಕೋಣೆ ಅತ್ಯಂತ ಖಾಸಗಿ ಪ್ರದೇಶಗಳಲ್ಲಿ ಒಂದಾಗಿದೆ. ಹಾಗಾಗಿ ವಾಸ್ತು ತತ್ವಗಳ ಪ್ರಕಾರ, ಈ ಕೋಣೆಯಲ್ಲಿ ಯಾವಾಗಲೂ ಶಾಂತಿ ಮತ್ತು ಪ್ರೀತಿ ಸದಾಕಾಲ ತುಂಬಿರಬೇಕು. ವಾಸ್ತು ಪ್ರಕಾರ ಇದನ್ನು ಆಕರ್ಷಿಸಲು ನಿಮ್ಮ ಹಾಸಿಗೆಯ ಪಕ್ಕದಲ್ಲಿ ಕೆಲವು ವಸ್ತುಗಳನ್ನು ಇಡುವುದು ತುಂಬಾ ಒಳ್ಳೆಯದು. ಇದರಿಂದ ನಿಮಗೆ ಮತ್ತು ನಿಮ್ಮ ಪ್ರೀತಿ ಪಾತ್ರರಿಗೆ ಒಳ್ಳೆಯ ವಾತಾವರಣ ಸಿಗುತ್ತದೆ ಆದರೆ ಅದರ ಮೊದಲು ಕೆಲವು ನಿರ್ದಿಷ್ಟ ವಾಸ್ತು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹಾಗಾದರೆ ಆ ವಸ್ತುಗಳು ಯಾವವು? ಇಲ್ಲಿದೆ ಮಾಹಿತಿ.
1. ನವಿಲು ಗರಿ
ವಾಸ್ತು ಪ್ರಕಾರ ನಿಮ್ಮ ಹಾಸಿಗೆಯ ಪಕ್ಕದಲ್ಲಿ ನವಿಲು ಗರಿ ಇಡುವುದು ತುಂಬಾ ಒಳ್ಳೆಯದು. ಇದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ.
2. ತಾಮ್ರದ ಪಾತ್ರೆಯಲ್ಲಿ ನೀರನ್ನು ಇಡುವುದು
ರಾತ್ರಿ ಸಮಯದಲ್ಲಿ, ನಿಮ್ಮ ಹಾಸಿಗೆಯ ಪಕ್ಕದಲ್ಲಿರುವ ಮೇಜಿನ ಮೇಲೆ ತಾಮ್ರದ ಬಾಟಲಿ ಅಥವಾ ಸಣ್ಣ ಬಿಂದಿಗೆಯಲ್ಲಿ ನೀರನ್ನು ಇಡುವುದು ತುಂಬಾ ಉತ್ತಮ. ಈ ನೀರನ್ನು ನಿಮ್ಮ ಮನೆಯಲ್ಲಿರುವ ಸಸ್ಯಗಳಿಗೆ ಹಾಕಲು ಬಳಸಿಕೊಳ್ಳಬಹುದು. ಇದು ನಕಾರಾತ್ಮಕ ಶಕ್ತಿಯನ್ನು ನಾಶ ಮಾಡುತ್ತದೆ ಜೊತೆಗೆ ಕೆಟ್ಟ ಕನಸುಗಳು ಬೀಳದಂತೆ ನೋಡಿಕೊಳ್ಳುತ್ತದೆ.
3. ಪ್ರೇಮಿಗಳು ಜೋಡಿಯಾಗಿರುವ ಶೋಪೀಸ್
ಇದನ್ನು ವಿಶೇಷವಾಗಿ ಹಾಸಿಗೆಯ ಪಕ್ಕದಲ್ಲಿ ಇಡಬೇಕು. ಇದು ನಿಮ್ಮ ಕೋಣೆಯ ಅಲಂಕಾರಕ್ಕೂ ಉತ್ತಮ ಆಯ್ಕೆಯಾಗಿದೆ. ಜೊತೆಗೆ ಇದು ಸಂಬಂಧಗಳಲ್ಲಿ ಶಾಂತಿ ಮತ್ತು ಪ್ರೀತಿಯನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುತ್ತದೆ.
4. ಲವ್ ಸ್ಟೋನ್
ಇದು ಮಲುಗುವ ಕೋಣೆಯಲ್ಲಿ ಇದ್ದರೆ ತುಂಬಾ ಒಳ್ಳೆಯದು. ಇದು ಸಾಮರಸ್ಯ, ಪ್ರೀತಿ ಮತ್ತು ಆರೋಗ್ಯಕರ ಸಂಬಂಧಗಳನ್ನು ಬೆಂಬಲಿಸುತ್ತದೆ. ಈ ರತ್ನವು ಕೋಣೆಯಲ್ಲಿರುವ ದೀಪದ ಬೆಳಕಿಗೆ ಹೊಂದಿಕೊಂಡಾಗ ಸುತ್ತಲಿನ ಪ್ರದೇಶವು ದಂಪತಿ ಮಧ್ಯೆ ಒಳ್ಳೆಯ ಬಾಂಧವ್ಯವನ್ನು ಬೆಸೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ರೊಟ್ಟಿ ತಿನ್ನುವಾಗ ಎಷ್ಟು ತಿಂದೆ ಎಂದು ಲೆಕ್ಕ ಹಾಕುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ, ಇದರ ಹಿಂದೆ ಈ ಕಾರಣವಿದೆ
5. ಲ್ಯಾವೆಂಡರ್ ಮತ್ತು ಇತರ ವಾಸ್ತು ಸಸ್ಯಗಳು
ಈ ಸಸ್ಯವು ಶುದ್ಧತೆ ಮತ್ತು ನೈರ್ಮಲ್ಯಕ್ಕೆ ಹೆಸರುವಾಸಿಯಾಗಿದೆ. ಅದಕ್ಕಾಗಿಯೇ ಇದನ್ನು ಮಲಗುವ ಕೋಣೆಯಲ್ಲಿ ಇಡಲಾಗುತ್ತದೆ. ಇದು ಶಾಂತ ವಾತಾವರಣವನ್ನು ಸೃಷ್ಟಿ ಮಾಡುತ್ತದೆ. ಜೊತೆಗೆ ಆಂತರಿಕ ನೆಮ್ಮದಿಯನ್ನು ನೀಡುತ್ತದೆ. ಮಲಗುವ ಕೋಣೆಗಳಿಗೆ ಇಡಬಹುದಾದ ಇತರ ವಾಸ್ತು ಸಸ್ಯಗಳೆಂದರೆ ಬಿದಿರು, ಮಲ್ಲಿಗೆ, ಲಿಲ್ಲಿ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ