
ಭಾರತದಲ್ಲಿ ಹುಲಿಗಳ ಸಂರಕ್ಷಣೆಯನ್ನು (Tiger Reserves) ವ್ಯಾಪಕವಾಗಿ ಮಾಡಲಾಗುತ್ತಿದೆ. ಅವುಗಳಿಗಾಗಿ ಉದ್ಯಾನವನಗಳನ್ನು ಮಾಡಿ. ಇದರ ಜತೆಗೆ ಜನರಿಗೂ ಇದು ಪ್ರೇಕ್ಷಣಿಯ ತಾಣವನ್ನಾಗಿ ಮಾಡಿದ್ದಾರೆ. ಭಾರತದಲ್ಲಿ 57 ಗೊತ್ತುಪಡಿಸಿದ ಹುಲಿ ಮೀಸಲು ಪ್ರದೇಶಗಳು ಇದೆ. ಅವುಗಳಲ್ಲಿ ಕೆಲವೊಂದು ಸೌಂದರ್ಯ ಮತ್ತು ವಿಲಕ್ಷಣ ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ. ಇಂತಹ ಮೀಸಲು ಪ್ರದೇಶದಲ್ಲಿ ಹುಲಿ ನೋಡಲು ಇಷ್ಟಪಟ್ಟರೆ ಈ 10 ಅತ್ಯುತ್ತಮ ಹುಲಿ ಮೀಸಲು ಪ್ರದೇಶಗಳನ್ನು ನೋಡಬಹುದು ಹಾಗೂ ಅಲ್ಲಿ ನೀವು ಉಳಿದುಕೊಳ್ಳಲು ಉತ್ತಮವಾದ ಐಷಾರಾಮಿ ರೆಸಾರ್ಟ್‌ಗಳು ಯಾವುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಇನ್ನು ಕರ್ನಾಟಕದಲ್ಲಿ (Karnataka) ಯಾವುದು ಬೇಸ್ಟ್ ಎಂಬುದನ್ನು ಕೂಡ ಇಲ್ಲಿ ತಿಳಿಸಲಾಗಿದೆ.
ಅರಾವಳಿ ಮತ್ತು ವಿಂಧ್ಯ ಶ್ರೇಣಿಗಳ ನಡುವೆ ಇರುವ ರಣಥಂಬೋರ್ ಹುಲಿ ಅಭಯಾರಣ್ಯವು ಭಾರತದ ಅತಿದೊಡ್ಡ ಮತ್ತು ಅತ್ಯಂತ ಪ್ರಸಿದ್ಧ ಹುಲಿ ಅಭಯಾರಣ್ಯಗಳಲ್ಲಿ ಒಂದಾಗಿದೆ. ಇದು ಅತ್ಯಂತ ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದು. ಈ ಅಭಯಾರಣ್ಯವು ಬಂಗಾಳ ಹುಲಿಗಳು ಮತ್ತು ಸುಂದರವಾದ ರಣಥಂಬೋರ್ ಕೋಟೆ ಇದೆ. ರಣಥಂಬೋರ್‌ನಲ್ಲಿ ಹುಲಿಯನ್ನು ನೋಡಲು ಬೇಸಿಗೆಯಲ್ಲಿ ಮೇ ನಿಂದ ಜೂನ್ ವರೆಗೆ ಮತ್ತು ಚಳಿಗಾಲದಲ್ಲಿ ಅಕ್ಟೋಬರ್ ಮತ್ತು ಫೆಬ್ರವರಿ ನಡುವೆ ಸೂಕ್ತ ಸಮಯ.
ಉಳಿದುಕೊಳ್ಳುವ ಹೋಟೆಲ್ ಕೋಣೆಯಿಂದಲ್ಲೇ ನೀವು ವನ್ಯಜೀವಿಗಳ ದೃಶ್ಯಗಳನ್ನು ವೀಕ್ಷಿಸಬೇಕೆಂದರೆ ಅಮನ್-ಇ-ಖಾಸ್ ಉತ್ತಮ ಆಯ್ಕೆ. ಇದು ಐಷಾರಾಮಿ ಟೆಂಟ್ಡ್ ಶಿಬಿರವಾಗಿದ್ದು, ಇದು ಸಫಾರಿ ಸಾಹಸಗಳು ಮತ್ತು ಪ್ರಶಾಂತ ನೈಸರ್ಗಿಕ ಪರಿಸರ, ರಾಜಮನೆತನದ ಅನುಭವವನ್ನು ನೀಡುತ್ತದೆ.
ಮಧ್ಯಪ್ರದೇಶದ ಈ ಹುಲಿ ಅಭಯಾರಣ್ಯವು ರುಡ್ಯಾರ್ಡ್ ಕಿಪ್ಲಿಂಗ್ ಅವರ ಪ್ರಮುಖ ಕೃತಿ ‘ ದಿ ಜಂಗಲ್ ಬುಕ್’ ನ ಹಿಂದಿನ ಸ್ಫೂರ್ತಿ ಎಂದು ಹೇಳಬಹುದು. ಈ ಅಭಯಾರಣ್ಯವು ಹಚ್ಚ ಹಸಿರಿನ ಕಾಡುಗಳು, ಹುಲ್ಲುಗಾವಲುಗಳು ಮತ್ತು ಹುಲಿಗಳು ಮತ್ತು ಚಿರತೆಗಳ ಸಮೃದ್ಧ ಜನಸಂಖ್ಯೆಗೆ ಹೆಸರುವಾಸಿಯಾಗಿದೆ. ಜಂಗಲ್ ಸಫಾರಿ ಮತ್ತು ಹುಲಿಗಳನ್ನು ನೋಡಬೇಕೆಂದರೆ ಮಾರ್ಚ್ ಮತ್ತು ಮೇ ತಿಂಗಳು ಉತ್ತಮ ಸಮಯವಾಗಿದೆ.
ಕನ್ಹಾ ಅರ್ಥ್ ಲಾಡ್ಜ್ 16 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಐಷಾರಾಮಿ ರೆಸಾರ್ಟ್. ಈ ರೆಸಾರ್ಟ್ 12 ಐಷಾರಾಮಿ ಬಂಗಲೆಗಳನ್ನು ಹೊಂದಿದೆ. ವಿಶಾಲವಾದ ಲೌಂಜ್ ಮತ್ತು ಬಾರ್ ಕೂಡ ಇದೆ. ಇನ್ನು ಪುಸ್ತಕ ಪ್ರಿಯರಿಗೆ ಗ್ರಂಥಾಲಯ, ಹಾಗೂ ಇಲ್ಲಿ ವನ್ಯಜೀವಿ ಸಾಕ್ಷ್ಯಚಿತ್ರಗಳನ್ನು ನಿಮ್ಮ ರೂಮ್ನಿಂದಲ್ಲೇ ನೀಡಬಹುದು, ಒಂದು ಒಳ್ಳೆಯ ಹಳ್ಳಿಗಾಡಿನ ಅನುಭವವನ್ನು ನೀಡುತ್ತದೆ.
ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವು ಏಷ್ಯಾದ ಮೊದಲ ರಾಷ್ಟ್ರೀಯ ಉದ್ಯಾನವನ, 936 ರಲ್ಲಿ ಸ್ಥಾಪನೆಯಾದ ಈ ಅಭಯಾರಣ್ಯವು ಹುಲಿಗಳ ಸಂಖ್ಯೆ ಮತ್ತು ಪಕ್ಷಿ ಸಂಕುಲ ಮತ್ತು ಬೆಟ್ಟಗಳು, ನದಿ ದಂಡೆಗಳು ಮತ್ತು ಹುಲ್ಲುಗಾವಲುಗಳ ಸುಂದರ ಪ್ರಕೃತಿಯ ಸೌಂದರ್ಯವನ್ನು ನೀಡುತ್ತದೆ. ಹುಲಿಗಳ ಅಪರೂಪದ ದೃಶ್ಯಗಳನ್ನು ನೋಡಬೇಕಾದರೆ ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡಿ. ತೆರೆದ ಜೀಪಿನಲ್ಲಿ ಪ್ರಾಣಿಯನ್ನು ಟ್ರ್ಯಾಕ್ ಮಾಡುವ ರೋಮಾಂಚನ ಕ್ಷಣವನ್ನು ಕಳೆಯಬಹುದು.
ಇನ್ಫಿನಿಟಿ ರೆಸಾರ್ಟ್ಸ್ ಕಾರ್ಬೆಟ್ ಐಷಾರಾಮಿ ಪ್ರಕೃತಿ ರೆಸಾರ್ಟ್, ಇದು 22 ಎಕರೆಗಳಲ್ಲಿ ನಿರ್ಮಾಣಗೊಂಡಿದೆ. ಸ್ನೇಹಶೀಲ ಕೊಠಡಿಗಳು ಮತ್ತು ಕುಟೀರಗಳನ್ನು ಹೊಂದಿದೆ. ಹಿಮಾಲಯದ ತಪ್ಪಲಿನಲ್ಲಿ ಈ ರೆಸಾರ್ಟ್ ಇದೆ. ವಿಹಂಗಮ ನೋಟಗಳು ಮತ್ತು ಸಫಾರಿಗಳು ಮತ್ತು ಪಕ್ಷಿ ವೀಕ್ಷಣಾ ಇಲ್ಲಿ ಕಾಣಸಿಗುತ್ತದೆ.
ವಿಶ್ವದ ಅತಿದೊಡ್ಡ ಮ್ಯಾಂಗ್ರೋವ್ ಅರಣ್ಯವಾದ ಸುಂದರ್‌ಬನ್ಸ್ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂಬ ಗೌರವವನ್ನು ಪಡೆದುಕೊಂಡಿದೆ. ಇದು ರಾಯಲ್ ಬೆಂಗಾಲ್ ಹುಲಿಗಳ ನೆಲೆಯಾಗಿದೆ. ಪ್ರಕೃತಿ ಪ್ರಿಯರಿಗೆ ಇದು ಸ್ವರ್ಗವಾಗಿದೆ. ಈ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲು ಸೆಪ್ಟೆಂಬರ್ ಮತ್ತು ಮೇ ತಿಂಗಳುಗಳು ಉತ್ತಮ. ಚಳಿಗಾಲದ ತಿಂಗಳುಗಳಲ್ಲಿ ಇಲ್ಲಿಗೆ ಭೇಟಿ ನೀಡುವುದರಿಂದ ಕೆಲವು ರಾಯಲ್ ಬೆಂಗಾಲ್ ಹುಲಿಗಳನ್ನು ನೋಡಲು ಸಿಗುತ್ತದೆ.
ಸೋನಾರ್ ಬಾಂಗ್ಲಾ 9 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದೆ. ಭವ್ಯವಾದ ಒಳಾಂಗಣ ಮತ್ತು ಸೊಗಸಾದ ಹೊರಾಂಗಣವನ್ನು ಆನಂದಿಸಬಹುದು. ಸುಸಜ್ಜಿತ ಕೊಠಡಿಗಳು ಮತ್ತು ಕುಟೀರಗಳನ್ನು ಹೊಂದಿದೆ. ದೋಣಿ ಸಫಾರಿ ಸ್ಥಳೀಯ ಪಾಕಪದ್ಧತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಇರುತ್ತದೆ. ಇದು ಮ್ಯಾಂಗ್ರೋವ್ ಕಾಡುಗಳಿಗೆ ಹತ್ತಿರವಾಗಿದೆ.
ಭಾರತದಲ್ಲಿ ಅತಿ ಹೆಚ್ಚು ಹುಲಿಗಳ ಸಾಂದ್ರತೆಯನ್ನು ಹೊಂದಿರುವುದು ಬಾಂಧವಗಢದಲ್ಲಿ. ಇದು ಇತಿಹಾಸ ಪ್ರಸಿದ್ಧವಾಗಿರುವ ಉದ್ಯಾನವನ, ಪ್ರಾಚೀನ ಗುಹೆಗಳು ಮತ್ತು ಭವ್ಯವಾದ ಕೋಟೆಯನ್ನು ಹೊಂದಿದೆ. ಈ ಸ್ಥಳವು ಅಕ್ಟೋಬರ್ 15 ರಿಂದ ಜೂನ್ 30 ರವರೆಗೆ ಪ್ರವಾಸಿಗರಿಗೆ ತೆರೆದಿರುತ್ತದೆ. ಆದರೆ ಹುಲಿಗಳನ್ನು ನೋಡಬೇಕೆಂದರೆ ಏಪ್ರಿಲ್ ಮತ್ತು ಜೂನ್ ನಡುವೆ ಇಲ್ಲಿಗೆ ಭೇಟಿ ನೀಡಬೇಕು.
ಒಬೆರಾಯ್ ವಿಂಧ್ಯವಿಲಾಸ್ ಹೊಸದಾಗಿ ಪ್ರಾರಂಭಿಸಲಾದ ಅಲ್ಟ್ರಾ-ಐಷಾರಾಮಿ ರೆಸಾರ್ಟ್. ಪೂಲ್‌ಗಳು, ಸೊಗಸಾದ ಒಳಾಂಗಣಗಳು, ವೈಯಕ್ತಿಕ ಸೇವೆಗಳು ಬೇಕಾದರೆ ಇದು ಬೆಸ್ಟ್. ಅರಣ್ಯದಿಂದ ಸುತ್ತುವರೆದಿರುವ ಇದು, ಸಫಾರಿಗಳು, ಉತ್ತಮ ಭೋಜನ ಮತ್ತು ಸ್ಪಾ ಚಿಕಿತ್ಸೆಗಳನ್ನು ನೀಡುತ್ತದೆ.
ಹುಲಿಗಳು, ಚಿರತೆಗಳು ಮತ್ತು ಕಾಡು ನಾಯಿಗಳಿಗೆ ಇದು ಪ್ರಖ್ಯಾತಿಯನ್ನು ಪಡೆದಿದೆ. ಸಮೃದ್ಧ ವನ್ಯಜೀವಿಗಳು, ಕಾಡುಗಳು ಮತ್ತು ಸುಂದರವಾದ ಭೂದೃಶ್ಯಗಳನ್ನು ಕಾಣಬಹುದು. ರುಡ್ಯಾರ್ಡ್ ಕಿಪ್ಲಿಂಗ್ ಅವರ ಜಂಗಲ್ ಬುಕ್ ಸೆಟ್ಟಿಂಗ್‌ನ ಭಾಗವಾಗಿರುವ ಇದು 87 ಬಂಗಾಳ ಹುಲಿಗಳಿಗೆ ನೆಲೆಯಾಗಿದೆ. ಇದು ಪೆಂಚ್ ಭಾರತದ ಮೊದಲ ಡಾರ್ಕ್ ಸ್ಕೈ ಪಾರ್ಕ್ ಆಗಿದೆ. ರಾತ್ರಿ ಹೊತ್ತಿನಲ್ಲಿ ಇಲ್ಲಿಗೆ ಬರಬೇಕು.
ಇದೊಂದು ಆಕರ್ಷಕ ಜಂಗಲ್ ಲಾಡ್ಜ್, ಇದು 12 ಐಷಾರಾಮಿ ಬಂಗಲೆಗಳನ್ನು ಹೊಂದಿದ್ದು, ಮೇಲ್ಛಾವಣಿಯ ಮ್ಯಾನ್ಸಾರ್ಡ್‌ಗಳು ಮತ್ತು ವಿಂಟೇಜ್ ವಾತಾವರಣವನ್ನು ಹೊಂದಿದೆ. ಲಾಡ್ಜ್ ಕ್ಯುರೇಟೆಡ್ ವನ್ಯಜೀವಿ ಸಫಾರಿಗಳು, ಪ್ರಕೃತಿ, ಸ್ಥಳೀಯ ಪಾಕಪದ್ಧತಿಯನ್ನು ಪಡೆಯಬಹುದು.
ಇದನ್ನೂ ಓದಿ: ಹುಡುಗರು ಮೊದಲ ಬಾರಿಗೆ ಹುಡುಗಿಯನ್ನು ಭೇಟಿಯಾದಾಗ ಈ ವಿಷಯಗಳನ್ನು ಗಮನಿಸುತ್ತಾರಂತೆ
ಸತ್ಪುರ ರಾಷ್ಟ್ರೀಯ ಉದ್ಯಾನವನವು ತನ್ನ ಸುತ್ತಲಿನ ಒರಟಾದ ಪರ್ವತ ಶ್ರೇಣಿಯಿಂದಲ್ಲೇ ಹೆಸರುವಾಸಿಯಾಗಿದೆ. ಇದು ಕಡಿಮೆ ಹುಲಿಗಳನ್ನು ಹೊಂದಿರುವ ಪ್ರದೇಶವಾಗಿದೆ, ಇಲ್ಲಿ ಒಂದು ಹುಲಿಯನ್ನು ನೋಡಿದ್ರೆ ಹೆಚ್ಚಿನ ಅನುಭವನ್ನು ಪಡೆಯುತ್ತೀರಾ. ಜೀಪ್, ದೋಣಿ ಮತ್ತು ವಾಕಿಂಗ್ ಸಫಾರಿ ಕೂಡ ಇದೆ.
ರೇನಿ ಪಾನಿ ಜಂಗಲ್ ಲಾಡ್ಜ್ ಒಂದು ಸೂಕ್ಷ್ಮ ಪ್ರದೇಶವಾಗಿದ್ದು, ಅರಣ್ಯ ವಾತಾವರಣದಿಂದ ಇದು ಕೂಡಿದೆ. ಸುತ್ತಲಿನ ಹಸಿರು ಮತ್ತು ನೀಲಿ ಬಣ್ಣದ ಕ್ಯಾನ್ವಾಸ್ ಉತ್ತಮ ಅನುಭವವನ್ನು ನೀಡುತ್ತದೆ. ಸತ್ಪುರ ಹುಲಿ ಅಭಯಾರಣ್ಯದಿಂದ ಸ್ವಲ್ಪ ದೂರದಲ್ಲಿರುವ ಈ ಸ್ಥಳವು ನೈಸರ್ಗಿಕ ಸೌಂದರ್ಯದೊಂದಿಗೆ ಐಷಾರಾಮಿ ಕುಟೀರಗಳು ಮತ್ತು ಮರದ ಮನೆಗಳನ್ನು ಕೂಡ ನೋಡಬಹುದು. ಜೀಪ್ ಸಫಾರಿಗಳು, ಕ್ಯಾನೋಯಿಂಗ್ ಮತ್ತು ವಾಕಿಂಗ್ ಸಫಾರಿಗಳನ್ನು ಮಾಡಬಹುದು.
ಡೋಬಾ ಭಾರತದ ಅತ್ಯಂತ ಹಳೆಯ ಮತ್ತು ದೊಡ್ಡ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದಾಗಿದೆ ಇದು ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿದೆ. ಈ ಉದ್ಯಾನವನದ ಜೀವವೈವಿಧ್ಯವು ಹುಲಿಗಳು, ಚಿರತೆಗಳು, ಕರಡಿಗಳು ಮತ್ತು ಮೊಸಳೆಗಳನ್ನು ಒಳಗೊಂಡಿದೆ.1,727 ಚದರ ಕಿ.ಮೀ. ವಿಸ್ತೀರ್ಣದಲ್ಲಿರುವ ಇದು ಪ್ರತಿ ಋತುವಿನಲ್ಲಿ ಅಕ್ಟೋಬರ್ 15 ರಿಂದ ಜೂನ್ 30 ರವರೆಗೆ ಪ್ರವಾಸಿಗರಿಗೆ ತೆರೆದಿರುತ್ತದೆ ಮತ್ತು ಪ್ರತಿ ಮಂಗಳವಾರ ಮುಚ್ಚಲಾಗುತ್ತದೆ. ಹುಲಿಗಳನ್ನು ನೋಡಲು ಉತ್ತಮ ಸಮಯವೆಂದರೆ ಮಾರ್ಚ್ ನಿಂದ ಮೇ ತಿಂಗಳವರೆಗೆ.
ವಾಘೋಬಾ ಇಕೋ ಲಾಡ್ಜ್ ಸ್ಥಳೀಯ ವಸ್ತುಗಳು ಮತ್ತು ಕಡಿಮೆ-ಪ್ರಭಾವದ ವಿನ್ಯಾಸದಿಂದ ನಿರ್ಮಿಸಲಾದ ಸುಸ್ಥಿರ ಐಷಾರಾಮಿ ರೆಸಾರ್ಟ್. ಇದು ಕನಿಷ್ಠೀಯತೆ, ಮಣ್ಣಿನ ಅಲಂಕಾರ ಮತ್ತು ಒಳ್ಳೆಯ ವಿವ್ ನೀಡುವ ಪ್ರದೇಶವಾಗಿದೆ. 14 ವಿಶಾಲವಾದ ಕುಟೀರಗಳನ್ನು ಹೊಂದಿದೆ. ಲಾಡ್ಜ್ ತಡೋಬಾದ ಪ್ರಮುಖ ವಲಯಗಳಿಗೆ ಸಫಾರಿ, ಈಜುಕೊಳ, ಪ್ರಕೃತಿ ಗ್ರಂಥಾಲಯ, ವಿಶ್ರಾಂತಿ ಕೋಣೆ ಮತ್ತು ಫೋಟೋಶೂಟ್ಗಳನ್ನು ಮಾಡಬಹುದು.
ನೀಲಗಿರಿ ಜೀವಗೋಳ ಮೀಸಲು ಪ್ರದೇಶದ ಭಾಗವಾಗಿರುವ ನಾಗರಹೊಳೆ 644 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿರುವ ಹಚ್ಚ ಹಸಿರಿನ ಉದ್ಯಾನವನ, ಪಶ್ಚಿಮ ಘಟ್ಟಗಳಲ್ಲಿ ಕೇವಲ ಹುಲಿಗಳಲ್ಲದೆ ಆನೆಗಳು ಮತ್ತು 250 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ಕಾಣಬಹುದು. ವಿಶ್ವ ದರ್ಜೆಯ ಆತಿಥ್ಯವನ್ನು ಹಳ್ಳಿಗಾಡಿನ ಐಷಾರಾಮಿಯೊಂದಿಗೆ ಸಂಯೋಜಿಸುವ ಈ ಸ್ಥಳವು ಶಾಂತ ನೋಟಗಳಲ್ಲಿ ಮುಳುಗಿರುವ ವನ್ಯಜೀವಿ ಅನುಭವಗಳನ್ನು ನೀಡುತ್ತದೆ.
ಬುಡಕಟ್ಟು ವಾಸ್ತುಶಿಲ್ಪದಿಂದ ನಿರ್ಮಾಣ ಮಾಡಲಾಗಿರುವ ರೆಸಾರ್ಟ್ ಎವಾಲ್ವ್ ಬ್ಯಾಕ್ ಕಬಿನಿ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮತ್ತು ಕಬಿನಿ ನದಿಯ ನಡುವೆ ಇದೆ. ಪೂಲ್‌ಗಳನ್ನು ಹೊಂದಿರುವ ಐಷಾರಾಮಿ ರೂಮ್ಗಗಳನ್ನು ಕಾಣಬಹುದು. ಗೌರ್ಮೆಟ್ ಡೈನಿಂಗ್ ಮತ್ತು ದೋಣಿ ಮತ್ತು ಜೀಪ್ ಸಫಾರಿಗಳು ಸೇರಿದಂತೆ ಉತ್ತಮವಾಗಿ ಕ್ಯುರೇಟೆಡ್ ವನ್ಯಜೀವಿ ಅನುಭವಗಳನ್ನು ನೀಡುತ್ತದೆ.
ಪಶ್ಚಿಮ ಘಟ್ಟಗಳಲ್ಲಿರುವ ಭವ್ಯವಾದ ಪೆರಿಯಾರ್ ಸರೋವರದ ಸುತ್ತಲೂ ಇರುವ ಈ ಅಭಯಾರಣ್ಯ, ಇಲ್ಲಿ ಆನೆಗಳು, ಶ್ರೀಮಂತ ಸಸ್ಯವರ್ಗ ಮತ್ತು ದೋಣಿ ಸಫಾರಿಗಳಿಗೆ ಹೆಸರುವಾಸಿಯಾಗಿದೆ. ತಂಪಾದ ಮತ್ತು ಮಂಜಿನ ವಾತಾವರಣವಾಗಿದೆ. . ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಸೆಪ್ಟೆಂಬರ್ ನಿಂದ ಜೂನ್
ಹಿಲ್ಸ್ & ಹ್ಯೂಸ್ ಎಂಬ ಐಷಾರಾಮಿ ಹೋಟೆಲ್ನ ಮುಂಭಾಗದಲ್ಲೇ ಪಶ್ಚಿಮ ಘಟ್ಟಗಳ ವಿಹಂಗಮ ನೋಟಗಳನ್ನು ನೋಡಬಹುದು. ಈ ರೆಸರ್ಟ್ನ್ನು ಬಂಡೆಯ ಮೇಲೆ ನಿರ್ಮಿಸಲಾಗಿದೆ. ಶಾಂತ ವಾತಾವರಣವು ಪ್ರಶಾಂತವಾದ ಏಕಾಂತ ಸ್ಥಳವನ್ನು ನೀಡುತ್ತದೆ ಮತ್ತು ಪೆರಿಯಾರ್ ವನ್ಯಜೀವಿ ಅಭಯಾರಣ್ಯ ಮತ್ತು ಮಸಾಲೆ ತೋಟಗಳಿಗೆ ಇದು ಹತ್ತಿರ ಸಂಪರ್ಕವನ್ನು ಸಾಧಿಸಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ