ವಾಕಿಂಗ್​ನಿಂದ ಆಗುವ ಪ್ರಯೋಜನೆಗಳೇನು?; ನಡಿಗೆಯನ್ನು ಹೆಚ್ಚಿಸುವುದು ಹೇಗೆ?

|

Updated on: Jan 19, 2024 | 7:16 PM

ನೀವು ದಿನವೂ ಎಷ್ಟು ಸಮಯ ವಾಕ್ ಮಾಡಬೇಕೆಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ದಿನವೂ ನಿಮ್ಮ ನಡಿಗೆಯ ಸಮಯವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸಿ. ಇದರಿಂದ ನಿಮ್ಮ ದೇಹ ವಾಕಿಂಗ್​ಗೆ ಹೊಂದಿಕೊಳ್ಳಲು ಸಹಾಯಕವಾಗುತ್ತದೆ.

ವಾಕಿಂಗ್​ನಿಂದ ಆಗುವ ಪ್ರಯೋಜನೆಗಳೇನು?; ನಡಿಗೆಯನ್ನು ಹೆಚ್ಚಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us on

ಬೆಳಗಿನ ಜಾವದ ವೇಗದ ನಡಿಗೆಯಾಗಿರಲಿ ಅಥವಾ ಊಟದ ನಂತರ ನಡೆದಾಡುವುದಾಗಲಿ ದಿನವೂ ನಡೆಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ನಾವಿಡುವ ಪ್ರತಿ ಹೆಜ್ಜೆಯೂ ನಮ್ಮನ್ನು ಆರೋಗ್ಯಕರ ದೇಹ ಮತ್ತು ಮನಸ್ಸಿನ ಕಡೆಗೆ ಚಲಿಸಲು ಸಹಾಯ ಮಾಡುತ್ತದೆ. ತಂತ್ರಜ್ಞಾನವು ನಮ್ಮ ಜಗತ್ತನ್ನು ಆಕ್ರಮಿಸಿಕೊಂಡಿರುವುದರಿಂದ ಮತ್ತು ಎಲ್ಲವೂ ಮನೆ ಬಾಗಿಲಲ್ಲಿ ಲಭ್ಯವಿರುವುದರಿಂದ ನಾವು ನಡೆಯುವುದೇ ಕಡಿಮೆಯಾಗಿದೆ. ಇದರಿಂದ ಹೃದಯರಕ್ತನಾಳದ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಕೀಲು ನೋವುಗಳಂತಹ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಪ್ರತಿದಿನ ನಿಮ್ಮ ವಾಕಿಂಗ್​ ಸುಧಾರಿಸುವ ಮಾರ್ಗಗಳು ಇಲ್ಲಿವೆ:

– ನೀವು ದಿನವೂ ಎಷ್ಟು ಸಮಯ ವಾಕ್ ಮಾಡಬೇಕೆಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ದಿನವೂ ನಿಮ್ಮ ನಡಿಗೆಯ ಸಮಯವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸಿ. ಇದರಿಂದ ನಿಮ್ಮ ದೇಹ ವಾಕಿಂಗ್​ಗೆ ಹೊಂದಿಕೊಳ್ಳಲು ಸಹಾಯಕವಾಗುತ್ತದೆ.

ಇದನ್ನೂ ಓದಿ: ದೇಹದ ಕೊಬ್ಬು ಕರಗಲು ವಾಕಿಂಗ್ ಒಳ್ಳೆಯದಾ? ಯೋಗ ಉತ್ತಮವಾ?

– ನಿಮ್ಮ ದೈನಂದಿನ ದಿನಚರಿಯಲ್ಲಿ ಆಗಾಗ ಸ್ವಲ್ಪ ಸ್ವಲ್ಪ ನಡೆಯುವುದನ್ನು ರೂಢಿಸಿಕೊಳ್ಳಿ. ದೀರ್ಘ ಕಾಲದವರೆಗೆ ಕುಳಿತಿರುವುದರ ಬದಲು ಆಚೀಚೆ ಓಡಾಡುತ್ತಿರಿ.

– ಪೆಡೋಮೀಟರ್ ಅಥವಾ ಫಿಟ್‌ನೆಸ್ ಟ್ರ್ಯಾಕರ್ ಮೂಲಕ ನೀವು ದಿನವೂ ಎಷ್ಟು ನಡೆದಿದ್ದೀರೆಂದು ಟ್ರ್ಯಾಕ್ ಮಾಡಿ. ಇದರಿಂದ ಮರುದಿನ ಹೆಚ್ಚು ನಡೆಯಲು ನಿಮಗೆ ಪ್ರೇರಣೆ ಸಿಗುತ್ತದೆ.

– ಸಾಧ್ಯವಾದಾಗಲೆಲ್ಲಾ ಲಿಫ್ಟ್‌ಗಳ ಬದಲಿಗೆ ಮೆಟ್ಟಿಲುಗಳ ಮೂಲಕ ಹತ್ತಿ, ಇಳಿಯಲು ಅಭ್ಯಾಸ ಮಾಡಿ. ಮೆಟ್ಟಿಲುಗಳನ್ನು ಹತ್ತುವುದರಿಂದ ನಿಮ್ಮ ದೇಹದ ಹಲವು ಅಂಗಗಳಿಗೆ ವ್ಯಾಯಾಮ ಸಿಗುತ್ತದೆ.

– ವಾಕಿಂಗ್​ಗೆ ಸಮಯ ಮೀಸಲಿಡಲು ಸಾಧ್ಯವಾಗದಿದ್ದರೆ ಫೋನ್​ನಲ್ಲಿ ಮಾತನಾಡುವಾಗ ನಡೆಯುತ್ತಾ ಮಾತನಾಡಿ. ಮನೆಯಲ್ಲಾಗಲಿ ಅಥವಾ ಕೆಲಸದಲ್ಲಾಗಲಿ ಫೋನ್‌ನಲ್ಲಿರುವಾಗ ವೇಗವಾಗಿ ನಡೆಯಿರಿ.

ಇದನ್ನೂ ಓದಿ: Winter Tips: ಚಳಿಗಾಲದಲ್ಲಿ ಬೆಳಗ್ಗೆ ಎಷ್ಟು ಹೊತ್ತು ವಾಕಿಂಗ್ ಮಾಡಬೇಕು?

– ನಿಮ್ಮ ದೈನಂದಿನ ವೇಳಾಪಟ್ಟಿಯಲ್ಲಿ ವಾಕಿಂಗ್​ಗೂ ಜಾಗವಿರಲಿ. ಬೆಳಗ್ಗೆ ಅಥವಾ ಸಂಜೆ ಅಥವಾ ಮಧ್ಯಾಹ್ನ ಊಟದ ಬಳಿಕ ವಾಕ್ ಮಾಡಲು ಮರೆಯದಿರಿ.

ದಿನವೂ ಹೊಸ ಹೊಸ ಸ್ಥಳಗಳಿಗೆ ವಾಕ್ ಹೋಗಿ. ಇದರಿಂದ ನಿಮಗೆ ಬೋರ್ ಆಗುವುದಿಲ್ಲ. ಹೊಸ ಹೊಸ ರಸ್ತೆಗಳು, ಪಾರ್ಕ್, ಕೆರೆಯ ಏರಿ ಹೀಗೆ ಜಾಗವನ್ನು ಬದಲಿಸುತ್ತಾ ಇರಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ