Walking Style : ನಡಿಗೆಯಿಂದಲೂ ಅಳೆಯಬಹುದು ನಿಮ್ಮ ವ್ಯಕ್ತಿತ್ವ
ಒಬ್ಬ ವ್ಯಕ್ತಿಯ ಸ್ವಭಾವವನ್ನು ಅವನ ಡ್ರೆಸ್ಸಿಂಗ್ ಸೆನ್ಸ್ ಮತ್ತು ಅವನು ಮಾತನಾಡುವ ರೀತಿಯಿಂದ ಮಾತ್ರ ನಿರ್ಧರಿಸಬಹುದು ಎಂದು ಹೆಚ್ಚಿನ ಜನರು ಭಾವಿಸುತ್ತಾರೆ. ಆದರೆ ನಿಮ್ಮ ಈ ಯೋಚನೆಯು ನಿಜಕ್ಕೂ ಸುಳ್ಳು. 'ಹ್ಯೂಮನ್ ಸೈಕಾಲಜಿ ಮತ್ತು ಪರ್ಸನಾಲಿಟಿ ಟ್ರೇಟ್ಸ್' ಆಧಾರಿತ ಅಧ್ಯಯನದ ಪ್ರಕಾರ, ವ್ಯಕ್ತಿಯ ನಡಿಗೆಯ ಶೈಲಿಯು ಅವನ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ ಎನ್ನಲಾಗಿದೆ. ಹಾಗಾದ್ರೆ ನಡೆಯುವ ನಡಿಗೆಯ ಗುಣವನ್ನು ಹೇಗೆ ರಿವೀಲ್ ಮಾಡುತ್ತದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಒಬ್ಬ ವ್ಯಕ್ತಿಗೆ ಹೋಲಿಸಿದರೆ ಮತ್ತೊಬ್ಬ ವ್ಯಕ್ತಿಯ ಗುಣ ಸ್ವಭಾವಗಳು ಭಿನ್ನವಾಗಿರುತ್ತದೆ. ಹೀಗಾಗಿ ನಮ್ಮ ಸುತ್ತಮುತ್ತಲಿನ ನಡವಳಿಕೆಗಳ ಮೂಲಕ ಅವರು ಹೇಗೆ ಎಂದು ನಿರ್ಧರಿಸುತ್ತೇವೆ. ಆದರೆ ವ್ಯಕ್ತಿಯ ನಡಿಗೆಯಿಂದಲೂ ಆತನ ವ್ಯಕ್ತಿತ್ವ ಹೇಗೆ ಎಂದು ತಿಳಿಯಬಹುದಂತೆ. ಪ್ರತಿಯೊಬ್ಬ ವ್ಯಕ್ತಿಯ ನಡಿಗೆಯು ವಿಭಿನ್ನ ಮತ್ತು ವಿಶಿಷ್ಟವಾಗಿದೆ. ಕೆಲವರು ವೇಗವಾಗಿ ನಡೆಯುತ್ತಾರೆ, ಇನ್ನು ಕೆಲವರು ನಿಧಾನವಾಗಿ ನಡೆಯಲು ಇಷ್ಟಪಡುತ್ತಾರೆ. ಆದರೆ ಈ ನಡೆಯುವ ರೀತಿಯು ಆ ವ್ಯಕ್ತಿಯು ಎಂತಹವರು ಎನ್ನುವುದನ್ನು ಹೇಳುತ್ತದೆ.
- ಕೆಲವರು ತುಂಬಾ ಆರಾಮವಾಗಿ ನಡೆಯಲು ಇಷ್ಟ ಪಡುತ್ತಾರೆ. ಈ ರೀತಿಯಾಗಿ ಸಣ್ಣ ಹೆಜ್ಜೆಗಳನ್ನು ಇಡುವವರು ತುಂಬಾ ಶಾಂತ ಸ್ವಭಾವದವರಾಗಿರುತ್ತಾರೆ. ಈ ಜನರು ಜೀವನದಲ್ಲಿ ತಮ್ಮದೇ ರೀತಿಯಲ್ಲಿ ಬದುಕಲು ಇಷ್ಟ ಪಡುತ್ತಾರೆ. ಅವರು ತನ್ನ ಶಾಂತ ಹಾಗೂ ಆಕರ್ಷಿಸುವ ಸ್ವಭಾವದಿಂದ ಹೆಚ್ಚು ಜನರ ಸ್ನೇಹವನ್ನು ಸಂಪಾದಿಸುತ್ತಾರೆ.
- ಕೆಲ ವ್ಯಕ್ತಿಗಳು ಹೆಜ್ಜೆಗಳನ್ನು ಎಣಿಸುವಂತೆ ನಡೆಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ವಾಸ್ತವವಾಗಿ ಈ ಜನರು ತಮ್ಮ ಸುತ್ತಲಿನ ಪರಿಸರದ ಬಗ್ಗೆ ಚಿಂತಿತರಾಗಿರುತ್ತಾರೆ. ಶಾಂತ ಹಾಗೂ ನಾಚಿಕೆ ಸ್ವಭಾವವನ್ನು ಹೊಂದಿರುತ್ತಾರೆ. ಅನೇಕ ಅಂತರ್ಮುಖಿ ವ್ಯಕ್ತಿತ್ವವುಳ್ಳ ಜನರು ತಲೆಯನ್ನು ಕೆಳಗೆ ಹಾಕಿ ಈ ರೀತಿ ನಡೆಯುವುದು ನೋಡಿರಬಹುದು..
- ಪಾದಗಳನ್ನು ಎಳೆದುಕೊಂಡಂತೆ ನಡೆಯುವ ವ್ಯಕ್ತಿಗಳು ಸದಾ ದುಃಖದ ಸ್ವಭಾವವನ್ನು ಹೊಂದಿರುತ್ತಾರೆ. ಸಣ್ಣ ಪುಟ್ಟ ವಿಷಯಕ್ಕೂ ಚಿಂತೆ ಮಾಡಿಕೊಳ್ಳುತ್ತಾರೆ. ಯಾವಾಗಲೂ ಒತ್ತಡವನ್ನು ಹೊಂದಿದ್ದು, ಸದಾ ಭಯದಲ್ಲೇ ಇರುತ್ತಾರೆ. ಏನೇ ಮಾಡಿದರೂ ಈ ವ್ಯಕ್ತಿಗಳಿಂದ ಒತ್ತಡದಿಂದ ಹೊರಬರುವುದು ಕಷ್ಟದಾಯಕವಾಗಿರುತ್ತದೆ.
- ಜೋರಾಗಿ ಸಪ್ಪಳ ಮಾಡಿ ನಡೆಯುವವರು ಬಹುಬೇಗನೇ ಕೋಪಗೊಳ್ಳುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರ ಸುತ್ತಲಿನ ಜನರನ್ನು ಕೆರಳಿಸುವ ಸ್ವಭಾವವನ್ನು ಹೊಂದಿದ್ದು, ಈ ವ್ಯಕ್ತಿತ್ವವು ತುಂಬಾನೇ ಬಾಲಿಶವಾಗಿದೆ.
- ದೊಡ್ಡದಾದ ಹೆಜ್ಜೆಯನ್ನಿಟ್ಟು ನಡೆಯುವ ವ್ಯಕ್ತಿಗಳು ಅತೀ ಬುದ್ಧಿವಂತಾರಾಗಿರುತ್ತಾರೆ. ಈ ಜನರ ವಿಶೇಷತೆಯೆಂದರೆ ಅವರು ಒಂದೇ ಸಮಯದಲ್ಲಿ ಅನೇಕ ಕೆಲಸಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ಇತರರು ತಮ್ಮಂತೆ ವರ್ತಿಸಬೇಕೆಂದು ನಿರೀಕ್ಷಿಸುತ್ತಾರೆ.
- ಯಾವುದೇ ವ್ಯಕ್ತಿಯು ತನ್ನ ಭುಜಗಳನ್ನು ಸ್ವಲ್ಪ ಮುಂದಕ್ಕೆ ಬಾಗಿಸಿ ನಡೆದರೆ, ಅವರು ಅಂತರಂಗವನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಅಂತಹ ವ್ಯಕ್ತಿಗಳಲ್ಲಿ ಕೆಲವು ಆಘಾತಗಳನ್ನು ಅನುಭವಿಸಿದ್ದಿರಬಹುದು. ಆದರಿಂದ ಚೇತರಿಸಿಕೊಂಡಿರುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ