AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಟರ್ ಪಾರ್ಕ್​ನಲ್ಲಿ ಎಂಜಾಯ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ; ಚರ್ಮ ಮತ್ತು ಕೂದಲಿಗೆ ಹಾನಿ ಆಗಬಹುದು

ಬೇಸಿಗೆಯಲ್ಲಿ ವಾಟರ್ ಪಾರ್ಕ್‌ನಲ್ಲಿ ಮೋಜು ಮಾಡಲು ಹೋಗುವವರು ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸದಿದ್ದರೆ ಚರ್ಮ ಮತ್ತು ಕೂದಲಿಗೆ ಹಾನಿಯಾಗಬಹುದು. ಸ್ವಿಮ್ಮಿಂಗ್ ಪೂಲ್‌ನಲ್ಲಿರುವ ಕ್ಲೋರಿನ್ ಹಾಗೂ ಇತರ ರಾಸಾಯನಿಕಗಳು ಚರ್ಮವನ್ನು ಒಣಗಿಸಿ, ತುರಿಕೆ ಮತ್ತು ಅಲರ್ಜಿ ಉಂಟುಮಾಡಬಹುದು. ಕೂದಲು ಸಹ ನಿರ್ಜೀವವಾಗಿ ಉದುರುವ ಸಾಧ್ಯತೆ ಇದೆ.

ವಾಟರ್ ಪಾರ್ಕ್​ನಲ್ಲಿ ಎಂಜಾಯ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ; ಚರ್ಮ ಮತ್ತು ಕೂದಲಿಗೆ ಹಾನಿ ಆಗಬಹುದು
Water Park
ಮಾಲಾಶ್ರೀ ಅಂಚನ್​
| Edited By: |

Updated on: Jul 18, 2026 | 10:59 AM

Share

ಮುಖ್ಯಾಂಶಗಳು

  • ಕ್ಲೋರಿನ್‌ನಿಂದ ಚರ್ಮ, ಕೂದಲಿಗೆ ಹಾನಿ ಸಾಧ್ಯ.
  • ಪೂಲ್‌ಗೆ ಮುನ್ನ ಮತ್ತು ಬಳಿಕ ಸರಿಯಾದ ಆರೈಕೆ ಅಗತ್ಯ.
  • ಸ್ನಾನದ ಬಳಿಕ ಶುದ್ಧ ನೀರಿನಿಂದ ತೊಳೆದು ಮಾಯಿಶ್ಚರೈಸರ್ ಬಳಸಿ.

ಬೇಸಿಗೆಯಲ್ಲಿ (Summer) ಅಥವಾ ವಿಶ್ರಾಂತಿಗಾಗಿ ಹಲವರು ಸ್ವಿಮ್ಮಿಂಗ್ ಪೂಲ್‌, ವಾಟರ್ ಪಾರ್ಕ್​ನಲ್ಲಿ ಆನಂದಿಸಲು ಮಾಡಲು ಇಷ್ಟಪಡುತ್ತಾರೆ. ಈಜುವುದು ಆರೋಗ್ಯಕ್ಕೆ ಉತ್ತಮ ವ್ಯಾಯಾಮವಾಗಿದ್ದರೂ, ಪೂಲ್‌ನಲ್ಲಿರುವ ಕ್ಲೋರಿನ್ ಮತ್ತು ಇತರ ರಾಸಾಯನಿಕಗಳು ಚರ್ಮ ಹಾಗೂ ಕೂದಲಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಸರಿಯಾದ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಚರ್ಮ ಒಣಗುವುದು, ತುರಿಕೆ, ಅಲರ್ಜಿ, ಕೂದಲು ಒಡೆಯುವುದು ಮತ್ತು ಕೂದಲು ಉದುರುವ ಸಮಸ್ಯೆಗಳು ಕಾಣಿಸಬಹುದು ಎಂದು ಚರ್ಮರೋಗ ತಜ್ಞರು ಎಚ್ಚರಿಸುತ್ತಾರೆ.

ತಜ್ಞರ ಪ್ರಕಾರ, ಸ್ವಿಮ್ಮಿಂಗ್ ಪೂಲ್‌ ಅಥವಾ ವಾಟರ್ ಪಾರ್ಕ್​ಗೆ ಇಳಿಯುವ ಮೊದಲು ದೇಹವನ್ನು ಶುದ್ಧ ನೀರಿನಿಂದ ಒದ್ದೆ ಮಾಡಿಕೊಳ್ಳುವುದು ಉತ್ತಮ. ಇದರಿಂದ ಚರ್ಮ ಮತ್ತು ಕೂದಲು ಕ್ಲೋರಿನ್ ಮಿಶ್ರಿತ ನೀರನ್ನು ಕಡಿಮೆ ಪ್ರಮಾಣದಲ್ಲಿ ಹೀರಿಕೊಳ್ಳುತ್ತವೆ. ಉದ್ದ ಕೂದಲು ಹೊಂದಿರುವವರು ಅದನ್ನು ಕಟ್ಟಿಕೊಳ್ಳುವುದು ಅಥವಾ ಸ್ವಿಮ್ಮಿಂಗ್ ಕ್ಯಾಪ್ ಧರಿಸುವುದು ಉತ್ತಮ. ಜೊತೆಗೆ, ನೀರು ತಡೆಯುವ (Water-resistant) ಸನ್‌ಸ್ಕ್ರೀನ್ ಅನ್ನು ಸುಮಾರು 20 ರಿಂದ 30 ನಿಮಿಷಗಳ ಮೊದಲು ಹಚ್ಚಿದರೆ ಸೂರ್ಯನ ಕಿರಣಗಳು ಮತ್ತು ಕ್ಲೋರಿನ್‌ನಿಂದ ಚರ್ಮಕ್ಕೆ ಆಗುವ ಹಾನಿಯನ್ನು ಕಡಿಮೆ ಮಾಡಬಹುದು.

ಅಲ್ಲಿಂದ ಹೊರಬಂದ ತಕ್ಷಣ ದೇಹ ಮತ್ತು ಕೂದಲನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಬೇಕು. ಕ್ಲೋರಿನ್ ದೀರ್ಘಕಾಲ ಚರ್ಮದ ಮೇಲೆ ಉಳಿದರೆ ಅದು ಚರ್ಮದ ಸಹಜ ತೇವಾಂಶವನ್ನು ಕಸಿದುಕೊಂಡು ಒಣಗುವಂತೆ ಮಾಡುತ್ತದೆ. ಅದೇ ರೀತಿ ಕೂದಲಿನ ಮೇಲೂ ಕ್ಲೋರಿನ್ ಉಳಿದರೆ ಕೂದಲು ನಿರ್ಜೀವವಾಗಿ, ಒಣಗಿದಂತೆ ಹಾಗೂ ಸುಲಭವಾಗಿ ಮುರಿಯುವ ಸಾಧ್ಯತೆ ಹೆಚ್ಚುತ್ತದೆ. ಆದ್ದರಿಂದ ಮೃದುವಾದ ಶಾಂಪೂ ಬಳಸಿ ಕೂದಲನ್ನು ತೊಳೆದು, ನಂತರ ಕಂಡೀಷನರ್ ಅಥವಾ ಹೇರ್ ಮಾಸ್ಕ್ ಬಳಸುವುದು ಉತ್ತಮ.

ನಿಮ್ಮ ಮನೆಯಲ್ಲಿ ದಾಸವಾಳ ಗಿಡ ಇದೆಯೇ? ವಾಸ್ತು ಪ್ರಕಾರ ಈ ದಿಕ್ಕಿನಲ್ಲಿಟ್ಟರೆ ಸಂಪತ್ತು ನಿಮ್ಮದಾಗುತ್ತದೆ!

ಸ್ನಾನದ ನಂತರ ಚರ್ಮಕ್ಕೆ ಮಾಯಿಶ್ಚರೈಸರ್ ಹಚ್ಚುವುದು ಅತ್ಯಗತ್ಯ. ಇದು ಚರ್ಮದ ಕಳೆದುಹೋದ ತೇವಾಂಶವನ್ನು ಮರಳಿ ನೀಡಲು ಸಹಾಯ ಮಾಡುತ್ತದೆ. ಚರ್ಮದಲ್ಲಿ ಕೆಂಪಾಗುವುದು, ತೀವ್ರ ತುರಿಕೆ ಅಥವಾ ಅಲರ್ಜಿ ಕಂಡುಬಂದರೆ ಅದನ್ನು ನಿರ್ಲಕ್ಷಿಸದೆ ಚರ್ಮರೋಗ ತಜ್ಞರನ್ನು ಸಂಪರ್ಕಿಸಬೇಕು.

ಈಜು ಆರೋಗ್ಯಕ್ಕೆ ಅತ್ಯುತ್ತಮ ವ್ಯಾಯಾಮಗಳಲ್ಲಿ ಒಂದಾಗಿದೆ. ಆದರೆ ಪೂಲ್ ನೀರಿನಲ್ಲಿರುವ ರಾಸಾಯನಿಕಗಳ ಪರಿಣಾಮವನ್ನು ಕಡಿಮೆ ಮಾಡಲು ಈ ಸರಳ ಕ್ರಮಗಳನ್ನು ಪಾಲಿಸಿದರೆ ನಿಮ್ಮ ಚರ್ಮ ಮತ್ತು ಕೂದಲು ಆರೋಗ್ಯಕರವಾಗಿಯೇ ಉಳಿಯುತ್ತವೆ. ಈಜಿನ ಆನಂದದ ಜೊತೆಗೆ ಸೌಂದರ್ಯವನ್ನೂ ಕಾಪಾಡಿಕೊಳ್ಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸೌದಿ ಅರೇಬಿಯಾದಲ್ಲಿ ಮಂಗಳೂರಿನ ವಿಟ್ಲದ ಯುವಕನ ಸಾಧನೆ!
ಸೌದಿ ಅರೇಬಿಯಾದಲ್ಲಿ ಮಂಗಳೂರಿನ ವಿಟ್ಲದ ಯುವಕನ ಸಾಧನೆ!
ಚೆನ್ನಮ್ಮ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ
ಚೆನ್ನಮ್ಮ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ
ಬಂಟ್ವಾಳ ಕೊಲೆ ಆರೋಪಿ ಬಗ್ಗೆ ತಪ್ಪು ಮಾಹಿತಿ ಹರಡಿದವರ ವಿರುದ್ಧ ಕೇಸ್
ಬಂಟ್ವಾಳ ಕೊಲೆ ಆರೋಪಿ ಬಗ್ಗೆ ತಪ್ಪು ಮಾಹಿತಿ ಹರಡಿದವರ ವಿರುದ್ಧ ಕೇಸ್
ಮೆಕ್ಸಿಕೋದಲ್ಲಿ 7.4 ತೀವ್ರತೆಯ ಭೂಕಂಪ; ಸುನಾಮಿಯ ಮುನ್ನೆಚ್ಚರಿಕೆ
ಮೆಕ್ಸಿಕೋದಲ್ಲಿ 7.4 ತೀವ್ರತೆಯ ಭೂಕಂಪ; ಸುನಾಮಿಯ ಮುನ್ನೆಚ್ಚರಿಕೆ
ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ವಿಚಾರಿಸಿದ ಆರ್. ಅಶೋಕ್
ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ವಿಚಾರಿಸಿದ ಆರ್. ಅಶೋಕ್
ನೀರಾವರಿ ಪೈಪ್‌ಲೈನ್ ಒಡೆದು ಆಕಾಶದೆತ್ತರಕ್ಕೆ ಚಿಮ್ಮಿದ ನೀರು
ನೀರಾವರಿ ಪೈಪ್‌ಲೈನ್ ಒಡೆದು ಆಕಾಶದೆತ್ತರಕ್ಕೆ ಚಿಮ್ಮಿದ ನೀರು
ಅಲೆಗಳ ಮಧ್ಯೆ ಮುಳುಗುತ್ತಿದ್ದ ಮಾನಸಿಕ ಅಸ್ವಸ್ಥನ ಪ್ರಾಣ ಉಳಿಸಿದ ಖಾಕಿ ಪಡೆ
ಅಲೆಗಳ ಮಧ್ಯೆ ಮುಳುಗುತ್ತಿದ್ದ ಮಾನಸಿಕ ಅಸ್ವಸ್ಥನ ಪ್ರಾಣ ಉಳಿಸಿದ ಖಾಕಿ ಪಡೆ
ಬಿಡದಿ ಟೌನ್‌ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ
ಬಿಡದಿ ಟೌನ್‌ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ
ಉಳ್ಳಾಲ ಕಡಲತೀರಕ್ಕೆ ಅಪ್ಪಳಿಸಿದ ಲಕ್ಷಾಂತರ ಬೂತಾಯಿ ಮೀನಿನ ರಾಶಿ
ಉಳ್ಳಾಲ ಕಡಲತೀರಕ್ಕೆ ಅಪ್ಪಳಿಸಿದ ಲಕ್ಷಾಂತರ ಬೂತಾಯಿ ಮೀನಿನ ರಾಶಿ
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ