AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weight Gain Tips: ತೂಕ ಹೆಚ್ಚಿಸಿಕೊಳ್ಳಬೇಕಾ? ಇಲ್ಲಿದೆ ಸುಲಭ ಮಾರ್ಗ

ತೂಕ ಹೆಚ್ಚಿಸಲು ಆರೋಗ್ಯಕರ ತಿಂಡಿ ಮತ್ತು ನಿಯಮಿತ ಊಟವನ್ನು ಸೇವಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಮೂರು ಹೊತ್ತಿನ ಊಟದ ಜೊತೆಗೆ, ಆರೋಗ್ಯಕರ ಸ್ನಾಕ್ಸ್​ಗಳನ್ನು ಕೂಡಾ ತಿನ್ನಬೇಕು. ಇದನ್ನು ನೀವು ಮಧ್ಯಂತರದಲ್ಲಿನ ಹಸಿವಿನ ಸಮಯದಲ್ಲಿ ತಿನ್ನುವುದು ಒಳ್ಳೆಯದು.

Weight Gain Tips: ತೂಕ ಹೆಚ್ಚಿಸಿಕೊಳ್ಳಬೇಕಾ? ಇಲ್ಲಿದೆ ಸುಲಭ ಮಾರ್ಗ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Mar 01, 2023 | 3:57 PM

Share

ನೀವು ದೇಹದ ತೂಕ ಹೆಚ್ಚಿಸಲು ಆರೋಗ್ಯಕರ ಹಾಗೇನೆ ತ್ವರಿತ ಮತ್ತು ಸುಲಭ ಪಾಕವಿಧಾನವನ್ನು ಹುಡುಕುತ್ತಿದ್ದರೆ, ಈ ಓಟ್ಸ್ ಬಾಳೆಹಣ್ಣಿನ ಸ್ಮೂಥಿಯನ್ನು ನೀವೊಮ್ಮೆ ಟ್ರೈ ಮಾಡಲೇಬೇಕು. ಉತ್ತಮ ಆರೋಗ್ಯಕ್ಕಾಗಿ ಆದರ್ಶ ತೂಕವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅಧಿಕ ತೂಕ ಅಥವಾ ಕಡಿಮೆ ತೂಕವನ್ನು ಆರೋಗ್ಯ ತಜ್ಞರು ಶಿಫಾರಸ್ಸು ಮಾಡುವುದಿಲ್ಲ. ಕೆಲವು ಜನರು ಆ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಹೆಣಗಾಡಿದರೆ, ಇನ್ನೂ ಕೆಲವರು ತೂಕ ಹೆಚ್ಚಿಸಿಕೊಳ್ಳಲು ಪರದಾಡುತ್ತಾರೆ. ಕೆಲವು ಜನರಿಗೆ ದೇಹ ತೂಕವನ್ನು ಹೆಚ್ಚಿಸಿಕೊಳ್ಳುವುದು ಕಠಿಣ ಪ್ರಕ್ರಿಯೆಯಾಗಿರುತ್ತದೆ. ಅವರು ಜೆನೆಟಿಕ್ಸ್ ಅಥವಾ ವೇಗದ ಚಯಾಪಚಯ ಕ್ರಿಯೆಯಂತಹ ಕಾರಣಗಳಿಂದಾಗಿ ಈ ಸಮಸ್ಯೆಯನ್ನು ಎದುರಿಸಬಹುದು. ಅವರಿಗೆ ತಮ್ಮ ದೇಹ ತೂಕ ಹೆಚ್ಚು ಮಾಡುವುದು ಮೊದಲ ಆದ್ಯತೆಯಾಗಿರುತ್ತದೆ. ಹೆಚ್ಚಿನ ಪ್ರಮಾಣದ ಕ್ಯಾಲೋರಿಯನ್ನು ಹೊಂದಿರುವ ಆಹಾರವನ್ನು ಸೇವನೆ ಮಾಡುವ ಮೂಲಕ ತೂಕವನ್ನು ಹೆಚ್ಚಿಸಬಹುದು. ಆದರೆ ತೂಕವನ್ನು ಹೆಚ್ಚಿಸುವ ಸಲುವಾಗಿ ಹೆಚ್ಚಿನ ಕ್ಯಾಲೋರಿ ಹೊಂದಿರುವ ಜಂಕ್ ಫುಡ್‌ಗಳನ್ನು ಸೇವಿಸುವುದು ಸೂಕ್ತವಲ್ಲ. ಬದಲಿಗೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವನೆ ಮಾಡುವುದು ಸೂಕ್ತವಾಗಿರುತ್ತದೆ.

ತೂಕ ಹೆಚ್ಚಿಸಲು ಆರೋಗ್ಯಕರ ತಿಂಡಿ ಮತ್ತು ನಿಯಮಿತ ಊಟವನ್ನು ಸೇವಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಮೂರು ಹೊತ್ತಿನ ಊಟದ ಜೊತೆಗೆ, ಆರೋಗ್ಯಕರ ಸ್ನಾಕ್ಸ್​ಗಳನ್ನು ಕೂಡಾ ತಿನ್ನಬೇಕು. ಇದನ್ನು ನೀವು ಮಧ್ಯಂತರದಲ್ಲಿನ ಹಸಿವಿನ ಸಮಯದಲ್ಲಿ ತಿನ್ನುವುದು ಒಳ್ಳೆಯದು. ಇದರಿಂದ ಆಹಾರವು ಜೀರ್ಣವಾಗುತ್ತದೆ ಮತ್ತು ಹೊಟ್ಟೆಯಲ್ಲಿ ಹೆಚ್ಚಿನ ಸ್ಥಳಾವಕಾಶ ಕೂಡಾ ಇರುತ್ತದೆ ಎಂದು ಪೌಷ್ಟಿಕತಜ್ಞೆ ರೂಪಾಲಿ ದತ್ತಾ ಅವರು ಹೇಳುತ್ತಾರೆ. ಆದ್ದರಿಂದ ನೀವು ತೂಕ ಹೆಚ್ಚಿಸಲು ತ್ವರಿತ ಮತ್ತು ಸುಲಭ ಪಾಕವಿಧಾನವನ್ನು ಹುಡುಕುತ್ತಿದ್ದರೆ, ಈ ಓಟ್ಸ್ ಹಾಗೂ ಬಾಳೆ ಹಣ್ಣಿನ ಸ್ಮೂದಿಯನ್ನು ಪ್ರಯತ್ನಿಸಿ.

ತೂಕ ಹೆಚ್ಚಾಗಲು ಸ್ಮೂಥಿ ಏಕೆ? ಓಟ್ಸ್-ಬಾಳೆಹಣ್ಣಿನ ಸ್ಮೂಥಿ ತೂಕ ಹೆಚ್ಚಿಸಲು ಹೇಗೆ ಸಹಾಯ ಮಾಡುತ್ತದೆ?

ಪೌಷ್ಟಿಕ ತಜ್ಞೆ ರೂಪಾಲಿ ದತ್ತ ಬಹಿರಂಗಪಡಿಸಿದಂತೆ, ಹೆಚ್ಚಿನ ಕ್ಯಾಲೋರಿಯನ್ನು ಹೊಂದಿರುವ ಆಹಾರವನ್ನು ತಿನ್ನುವುದು ಮಾತ್ರವಲ್ಲದೆ ಆದರ ಜೊತೆಗೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಮುಖ್ಯವಾಗಿರುತ್ತದೆ. ತೂಕವನ್ನು ಪಡೆಯಲು ಪ್ರಯತ್ನಿಸುತ್ತಿರುವವರಿಗೆ ಅತ್ಯುತ್ತಮವಾದ ಲಘು ಊಟದ ಆಯ್ಕೆಯಾದ ಓಟ್ಸ್-ಬಾಳೆಹಣ್ಣಿನ ಸ್ಮೂದಿ ಉತ್ತಮ ಆಯ್ಕೆಯಾಗಿದೆ. ಆರೋಗ್ಯಕರವಾಗಿ ತೂಕ ಹೆಚ್ಚಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಇದರ ತಯಾರಿಕೆಯಲ್ಲಿ ಕೆನೆ ಹಾಲನ್ನು ಬಳಸಿ ಮತ್ತು ನೀವು ಅದಕ್ಕೆ ಕಡಲೆಕಾಯಿ ಬೆಣ್ಣೆಯನ್ನು ಕೂಡ ಸೇರಿಸಬಹುದು.

ಇದನ್ನೂ ಓದಿ: Anant Ambani Weight Gain: ಮಗ ಅನಂತ್ ಅಂಬಾನಿ ತೂಕ ಮತ್ತೆ ಹೆಚ್ಚಾಗಿರುವ ಬಗ್ಗೆ ನೀತಾ ಅಂಬಾನಿ ಹೇಳಿದ್ದೇನು?

ತೂಕ ಹೆಚ್ಚಾಗಿಸುವ ಓಟ್ಸ್-ಬಾಳೆಹಣ್ಣಿನ ಸ್ಮೂಥಿ ಮಾಡುವುದು ಹೇಗೆ:

ಈ ಆರೋಗ್ಯಕರ ರೆಸಿಪಿಯನ್ನು ಜನಪ್ರಿಯ ನೈಜೀರಿಯನ್ ಯೂಟ್ಯೂಬರ್ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು 2.7 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಸುಮಾರು 17 ಸಾವಿರ ಲೈಕ್ಸ್​ಗಳನ್ನು ಪಡೆದುಕೊಂಡಿದೆ. ಈ ಸರಳವಾದ ಪಾಕವಿಧಾನಕ್ಕೆ ನಮ್ಮ ಅಡುಗೆ ಮನೆಗಳಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ಪದಾರ್ಥಗಳು ಸಾಕಗುತ್ತದೆ.

ಓಟ್ಸ್-ಬಾಳೆಹಣ್ಣಿನ ಸ್ಮೂದಿ ತಯಾರಿಸಲು ಬೇಕಾಗುವ ಪದಾರ್ಥಗಳು:

1 ಕಪ್ ಬಿಳಿ ಓಟ್ಸ್, 2 ಮಧ್ಯಮ ಗಾತ್ರದ ಬಾಳೆಹಣ್ಣು, 1ಲೀ ಕಪ್ ಹಾಲು, 2 ರಿಂದ 3 ಚಮಚ ಜೇನುತುಪ್ಪ, 2 ಚಮಚ ಕಡಲೆಕಾಯಿ ಬೆಣ್ಣೆ.

ವಿಧಾನ: ಓಟ್ಸ್, ಬಾಳೆಹಣ್ಣು, ಕಡಲೆಕಾಯಿ ಬೆಣ್ಣೆ, ಜೀನುತುಪ್ಪ ಹಾಗೂ ಹಾಲನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿ, ಸ್ಮೂದಿಗೆ ಬೇಕಾದ ಕನ್ಸಿಸ್ಟೆನ್ಸಿ ಬರುವವರೆಗೆ ರುಬ್ಬಿಕೊಂಡರೆ ಆರೋಗ್ಯಕರ ಓಟ್ಸ್ ಬಾಳೆಹಣ್ಣಿನ ಸ್ಮೂಥಿ ರೆಡಿ.

Published On - 3:56 pm, Wed, 1 March 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ