Art Of Yoga: ಅಪಾನವಾಯು ಎಂದರೇನು? ತತ್ವ, ಚಕ್ರಗಳ ಬಗ್ಗೆ ಮಾಹಿತಿ ಇಲ್ಲಿದೆ
Art Of Yoga: ಶ್ವಾಸಕೋಶಗಳು ಮತ್ತು ವಿಸರ್ಜನಾ ವ್ಯವಸ್ಥೆಯ ಮೂಲಕ ದೇಹದಿಂದ ತ್ಯಾಜ್ಯ ಉತ್ಪನ್ನಗಳನ್ನು ತೆಗೆದುಹಾಕುವುದು ಅಪಾನವಾಯುವಿನ ಕೆಲಸವಾಗಿದೆ. ಹೊಟ್ಟೆಯನ್ನು, ಹೊಕ್ಕುಳ ಪ್ರದೇಶದ ಕೆಳಗೆ, ಮತ್ತು ದೊಡ್ಡ ಕರುಳು, ಮೂತ್ರಪಿಂಡಗಳು, ಗುದದ್ವಾರ ಮತ್ತು ಜನನಾಂಗಗಳಿಗೆ ಶಕ್ತಿಯನ್ನು ಒದಗಿಸುತ್ತದೆ.
ಅಪಾನವಾಯು ಸ್ಥಳ: ಮೂತ್ರಪಿಂಡ
ತತ್ವ: ಭೂಮಿ
ಚಕ್ರ: ಮೂಲಾಧಾರ ಚಕ್ರ
ಸಕ್ರಿಯಗೊಳಿಸುವುದು ಹೇಗೆ: ನೌಲಿ ಕ್ರಿಯಾ, ಅಗ್ನಿಸಾರ ಕ್ರಿಯಾ, ಅಶ್ವಿನಿ ಮುದ್ರ ಹಾಗೂ ಮೂಲಬಂಧ
ಶ್ವಾಸಕೋಶಗಳು ಮತ್ತು ವಿಸರ್ಜನಾ ವ್ಯವಸ್ಥೆಯ ಮೂಲಕ ದೇಹದಿಂದ ತ್ಯಾಜ್ಯ ಉತ್ಪನ್ನಗಳನ್ನು ತೆಗೆದುಹಾಕುವುದು ಅಪಾನವಾಯುವಿನ ಕೆಲಸವಾಗಿದೆ. ಹೊಟ್ಟೆಯನ್ನು, ಹೊಕ್ಕುಳ ಪ್ರದೇಶದ ಕೆಳಗೆ, ಮತ್ತು ದೊಡ್ಡ ಕರುಳು, ಮೂತ್ರಪಿಂಡಗಳು, ಗುದದ್ವಾರ ಮತ್ತು ಜನನಾಂಗಗಳಿಗೆ ಶಕ್ತಿಯನ್ನು ಒದಗಿಸುತ್ತದೆ. ಇದು ದೇಹದಿಂದ ತ್ಯಾಜ್ಯವನ್ನು ಹೊರಹಾಕುವುದಕ್ಕೆ ಸಂಬಂಧಿಸಿದೆ.
ನಮ್ಮ ಜೀರ್ಣಾಂಗ ವ್ಯವಸ್ಥೆಯ ಯಾವುದೇ ಭಾಗದಲ್ಲಿ ವಾಯು ಉತ್ಪತ್ತಿಯಾಗಬಹುದು, ಅಂದರೆ ಹೊಟ್ಟೆಯಿಂದ ಗುದದ್ವಾರದವರೆಗೆ ಎಲ್ಲೂ ಉತ್ಪತ್ತಿಯಾಗಬಹುದು. ಅಷ್ಟೇ ಅಲ್ಲ, ನಾವು ಅಗಿದು ನುಂಗುವ ಆಹಾರದೊಂದಿಗೂ ಕೊಂಚ ಪ್ರಮಾಣದ ಗಾಳಿ ಹೊಟ್ಟೆಯನ್ನು ಸೇರುತ್ತದೆ. ವಾಯು ಎಂಬುದು ಸಂಸ್ಕೃತ ಪದವಾಗಿದ್ದು ಗಾಳಿ ಮತ್ತು ಅಪಾನ ವಾಯು ಎಂದರೆ ದೂರ ಚಲಿಸುವ ಗಾಳಿ. ಅಪಾನ ವಾಯುವು ಭೂಮಿಯ ಅಂಶದೊಂದಿಗೆ ಸಂಪರ್ಕ ಹೊಂದಿದೆ ಮತ್ತು ಮೂಲಾಧಾರ ಚಕ್ರದ ಶಕ್ತಿಯಾಗಿದೆ.
ಅಪಾನ ವಾಯು ಮತ್ತು ಪ್ರಾಣವಾಯು ವಿರುದ್ಧ ಮಾರ್ಗಗಳಲ್ಲಿ ಚಲಿಸುವ ಮೂಲಕ ಒಟ್ಟಿಗೆ ಕೆಲಸ ಮಾಡುತ್ತವೆ. ಅಪಾನ ವಾಯುವು ಭೌತಿಕವಾಗಿ ದೇಹದಲ್ಲಿನ ತ್ಯಾಜ್ಯವನ್ನು ತೆಗೆದುಹಾಕುವುದನ್ನು ನಿಯಂತ್ರಿಸುವ ಶಕ್ತಿಯಾಗಿದೆ. ಜನನಾಂಗಗಳು, ಕರುಳು, ಮೂತ್ರಪಿಂಡಗಳಲ್ಲಿ ಕಾರ್ಯನಿರ್ವಹಿಸುತ್ತದೆ.
ಗರ್ಭಾವಸ್ಥೆಯಲ್ಲಿ ಅಪಾನವಾಯು ತುಂಬಾ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತದೆ, ಮಗುವನ್ನು ತಾಯಿ ತನ್ನ ದೇಹದಿಂದ ಹೊರ ಹಾಕುವಾಗ ಇರುವಂತಹ ವಾಯು ಅಪಾನವಾಯು, ಗರ್ಭಿಣಿಯರು ಮೂರನೇ ತಿಂಗಳಿನಿಂದ ಅಪಾನವಾಯುವನ್ನು ಪ್ರಾಕ್ಟೀಸ್ ಮಾಡಲು ಸಲಹೆ ನೀಡಲಾಗುತ್ತದೆ. ತಲೆಯು ಸರಿಯಾಗಿ ಫಿಕ್ಸ್ ಆದಾಗ ಸಹಜವಾಗಿ ಪ್ರಸವವಾಗುತ್ತದೆ.
ಅಪಾನ ವಾಯುವು ಪ್ರಾಣದ ಐದು ಶಕ್ತಿಯ ಉಪವಿಭಾಗಗಳಲ್ಲಿ ಒಂದಾಗಿದೆ ಮತ್ತು ಇದನ್ನು ಅತ್ಯಂತ ಪ್ರಮುಖವಾದದ್ದು ಎಂದು ಪರಿಗಣಿಸಲಾಗಿದೆ. ಜೀರ್ಣಕ್ರಿಯೆ, ನಿರ್ಮೂಲನೆ ಮತ್ತು ಸಂತಾನೋತ್ಪತ್ತಿಯ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ, ಇದು ಕೆಳ ಹೊಟ್ಟೆಯ ಪ್ರದೇಶಗಳಲ್ಲಿ ಸಕ್ರಿಯವಾಗಿದೆ.
ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ.
ಅವರು ಜೈನ್ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ. ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್ಗಳನ್ನು ಮಾಡಿದ್ದಾರೆ. ಚಕ್ರ ಹಾಗೂ ಯೋಗದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. astroyoga.co.in ಭೇಟಿ ನೀಡಿ, ಉಚಿತವಾಗಿ ನಿಮ್ಮ ಚಕ್ರಗಳ ಬಗ್ಗೆ ತಿಳಿದುಕೊಳ್ಳಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ