ಬರೀ ನೀರು ಮಾತ್ರವಲ್ಲ, ಕೋಳಿ ಮಾಂಸವನ್ನು ತೊಳೆಯಲು ಈ ಕ್ರಮವನ್ನು ಅನುಸರಿಸಲೇಬೇಕು
ನಾನ್ ವೆಜ್ ಪ್ರಿಯರಿಗೆ ಚಿಕನ್ ಇರ್ಲೇಬೇಕು. ಸಾಮಾನ್ಯವಾಗಿ ಹೆಚ್ಚಿನವರು ಮನೆಗೆ ತಂದ ಕೋಳಿ ಮಾಂಸವನ್ನು ಅಡುಗೆ ಮಾಡುವ ಮುನ್ನ ಬರಿ ನೀರಿನಿಂದ ಎರಡು ಮೂರು ಬಾರಿ ತೊಳೆಯುತ್ತಾರೆ. ಆದ್ರೆ ಇದು ಚಿಕನ್ ಕ್ಲೀನ್ ಮಾಡುವ ಸರಿಯಾದ ವಿಧಾನ ಅಲ್ವೇ ಅಲ್ಲಂತೆ. ಹಾಗಿದ್ರೆ ವಾಸನೆಯನ್ನು ಹೋಗಲಾಡಿಸಲು ಹಸಿ ಮಾಂಸದ ಮೇಲಿನ ಸೂಕ್ಷ್ಮ ಜೀವಿಗಳನ್ನು ತೊಡೆದು ಹಾಕಲು ಯಾವ ರೀತಿ ಚಿಕನ್ ಕ್ಲೀನ್ ಮಾಡಿದರೆ ಸೂಕ್ತ ಎಂಬುದನ್ನು ತಿಳಿಯಿರಿ.

ಮಾಂಸ ಪ್ರಿಯರಿಗೆ ಚಿಕನ್ (chicken) ಅಂದ್ರೆ ಎಲ್ಲಿಲ್ಲದ ಪ್ರೀತಿ. ಅದಕ್ಕಾಗಿ ವಾರಕ್ಕೆ ಒಂದು ಬಾರಿಯಾದರೂ ತಪ್ಪದೆ ಕೋಳಿ ಪದಾರ್ಥ ಮಾಡುತ್ತಾರೆ. ಹಲವರು ಈ ಕೋಳಿ ಮಾಂಸದಿಂದ ಬಗೆಬಗೆಯ ಭಕ್ಷ್ಯಗಳನ್ನು ತಯಾರು ಮಾಡುತ್ತಾರೆ, ಆದರೆ 99% ಜನರಿಗೆ ಕೋಳಿ ಮಾಂಸವನ್ನು ಕ್ಲೀನ್ ಮಾಡುವ ಸರಿಯಾದ ವಿಧಾನ ಗೊತ್ತೇ ಇಲ್ವಂತೆ. ಸಾಮಾನ್ಯವಾಗಿ ಹೆಚ್ಚಿನವರು ಮನೆಗೆ ತಂದ ಕೋಳಿ ಮಾಂಸವನ್ನು ಎರಡರಿಂದ ಮೂರು ಬಾರಿ ಬರೀ ನೀರಿನಿಂದ ಕ್ಲೀನ್ ಮಾಡುತ್ತಾರೆ. ಆದರೆ ಇದು ಸರಿಯಾದ ಕ್ರಮ ಅಲ್ವಂತೆ. ಹಾಗಿದ್ರೆ ಕೋಳಿ ಮಾಂಸವನ್ನು ತೊಳೆಯುವ ಸರಿಯಾದ ವಿಧಾನ ಯಾವುದು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.
ಚಿಕನ್ ಕ್ಲೀನ್ ಮಾಡುವ ಸರಿಯಾದ ವಿಧಾನ:
ಬರೀ ನೀರಿನಿಂದ ಮಾತ್ರವಲ್ಲ ಕೋಳಿ ಮಾಂಸವನ್ನು ನಿಂಬೆ ನೀರಿನಿಂದ ಕ್ಲೀನ್ ಮಾಡಬೇಕಂತೆ. ಒಂದು ಲೀಟರ್ ಉಗುರು ಬೆಚ್ಚಗಿನ ನೀರಿಗೆ ಎರಡರಿಂದ ಮೂರು ಟೀ ಚಮಚ ನಿಂಬೆ ರಸವನ್ನು ಸೇರಿಸಿ ಅದಕ್ಕೆ ಒಮ್ಮೆ ತೊಳೆದಿಟ್ಟ ಕೋಳಿ ಮಾಂಸವನ್ನು ಹಾಕಿ 5 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ತಾಜಾ ನೀರಿನಲ್ಲಿ ತೊಳೆಯಿರಿ. ಹಸಿ ಕೋಳಿಯಲ್ಲಿ ಸೂಕ್ಷ್ಮ ಜೀವಿಗಳು ಹೆಚ್ಚು. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಸೂಕ್ಷ್ಮ ಜೀವಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ನಿಂಬೆಯಲ್ಲಿರುವ ನೈಸರ್ಗಿಕ ಆಮ್ಲಗಳು ಕೆಟ್ಟ ವಾಸನೆಯನ್ನು ತೊಡೆದುಹಾಕಲು ಮತ್ತು ಕೋಳಿಯನ್ನು ತಾಜಾವಾಗಿ ಕಾಣುವಂತೆ ಮಾಡಲು ಸಹಾಯ ಮಾಡುತ್ತದೆ.
ಇದಲ್ಲದೆ ಉಪ್ಪು ನೀರು ಸಹ ಕೋಳಿ ಮಾಂಸದಿಂದ ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ, ಒಂದು ಲೀಟರ್ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಎರಡು ಟೀ ಚಮಚ ಉಪ್ಪು ಸೇರಿಸಿ. ಇದಕ್ಕೆ ಅರಶಿನವನ್ನೂ ಸೇರಿಸಬಹುದು. ನಂತರ, ಮಾಂಸವನ್ನು ಅದರಲ್ಲಿ ನೆನೆಸಿ. ಉಪ್ಪಿನ ದ್ರಾವಣದಿಂದ ತೊಳೆದ ನಂತರ, ಕೋಳಿ ಮಾಂಸವನ್ನು ಶುದ್ಧ ನೀರಿನಿಂದ ತೊಳೆಯಿರಿ.
ಇದನ್ನೂ ಓದಿ: ಉಪ್ಪು ಹೆಚ್ಚಾಗಿ ಅಡುಗೆ ಕೆಟ್ಟು ಹೋದ್ರೆ, ರುಚಿ ಸರಿದೂಗಿಸಲು ಈ ಸರಳ ಸಲಹೆಯನ್ನು ಪಾಲಿಸಿ
ನಿಂಬೆಹಣ್ಣಿನ ನೀರಿನಿಂದ ಚಿಕನ್ ತೊಳೆಯುವುದು ಏಕೆ ಉತ್ತಮ?
ನಿಂಬೆಹಣ್ಣಿನ ಹುಳಿ ಮತ್ತು ಸುವಾಸನೆಯು ಹಸಿ ಕೋಳಿಯ ಕೆಟ್ಟ ವಾಸನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಆದ್ದರಿಂದ, ನೀವು ಕೋಳಿಯನ್ನು ಸ್ವಚ್ಛಗೊಳಿಸಲು ನಿಂಬೆಯನ್ನು ಬಳಸಬಹುದು. ಹೆಚ್ಚುವರಿಯಾಗಿ, ನಿಂಬೆಹಣ್ಣಿನ ನೀರಿನಿಂದ ಕೋಳಿ ಮಾಂಸವನ್ನು ತೊಳೆಯುವುದರಿಂದ ಅದರ ರುಚಿ ಹೆಚ್ಚಾಗುತ್ತದೆ. ಇದು ಕೋಳಿ ಮಾಂಸಕ್ಕೆ ಸೌಮ್ಯವಾದ, ತಾಜಾ ಪರಿಮಳವನ್ನು ನೀಡುತ್ತದೆ. ಅದಕ್ಕಾಗಿಯೇ ವೃತ್ತಿಪರ ಚೆಫ್‌ಗಳು ಮ್ಯಾರಿನೇಟ್ ಮಾಡುವ ಮೊದಲು ಕೋಳಿ ಮಾಂಸವನ್ನು ನಿಂಬೆ ಅಥವಾ ವಿನೆಗರ್ ನೊಂದಿಗೆ ತೊಳೆಯಲು ಶಿಫಾರಸು ಮಾಡುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




