ಕೂದಲು ಆರೋಗ್ಯಕರವಾಗಿ ಮತ್ತು ದೃಢವಾಗಿರಲು ಕಾಲಕಾಲಕ್ಕೆ ಎಣ್ಣೆ ಹಚ್ಚುವುದು ಅವಶ್ಯಕ. ಕೂದಲಿಗೆ ಎಣ್ಣೆ ಹಚ್ಚುವುದರಿಂದ ನೆತ್ತಿ ಒಣಗುವುದಿಲ್ಲ. ಕೂದಲು ನಿರ್ಜೀವವಾಗುವುದಿಲ್ಲ. ಕೆಲವರು ಶಾಂಪೂ ಹಚ್ಚುವ ಮೊದಲು ಎಣ್ಣೆ ಹಚ್ಚಿದರೆ, ಇನ್ನು ಕೆಲವರು ಶಾಂಪೂ ಹಾಕಿದ ನಂತರ ಎಣ್ಣೆ ಹಚ್ಚುತ್ತಾರೆ. ಆದರೆ ಹೆಚ್ಚಿನವರು ಕೂದಲು ಜಿಡ್ಡು ಜಿಡ್ಡಾಗುವುದನ್ನು ತಪ್ಪಿಸಲು ಸ್ನಾನ ಮಾಡುವ ಮೊದಲೇ ಎಣ್ಣೆಯನ್ನು ಹಚ್ಚುತ್ತಾರೆ.
ಏನೇ ಆಗಲಿ – ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲು ಆರೋಗ್ಯಕರವಾಗಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಎಣ್ಣೆಯನ್ನು ಹಚ್ಚುವುದರ ಸರಿಯಾದ ವಿಧಾನ/ಮಾರ್ಗವನ್ನು ತಿಳಿದುಕೊಳ್ಳುವುದು ಮುಖ್ಯ. ಕೂದಲಿಗೆ ಎಣ್ಣೆಯನ್ನು ಸರಿಯಾಗಿ ಹಚ್ಚದಿದ್ದರೆ ಕೂದಲು ದುರ್ಬಲವಾಗುತ್ತದೆ ಮತ್ತು ನಿರ್ಜೀವವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೂದಲಿಗೆ ಎಣ್ಣೆ ಹಚ್ಚುವುದಕ್ಕೆ ಸೂಕ್ತ ಸಮಯ ಯಾವಾಗ ಎಂದು ತಿಳಿಯೋಣ..
ನಿಮ್ಮ ಕೂದಲಿಗೆ ಎಣ್ಣೆ ಹಚ್ಚಲು ನೀವು ಬಯಸಿದರೆ, ಸ್ನಾನ ಮಾಡುವ ಮೊದಲು ಅದನ್ನು ಹಚ್ಚಿ. ತಲೆಗೆ ಸ್ನಾನ ಮಾಡುವ ಕನಿಷ್ಠ 1 ಗಂಟೆ ಮೊದಲು ಎಣ್ಣೆಯನ್ನು ಹಚ್ಚಬೇಕು ಎಂದು ತಜ್ಞರು ಹೇಳುತ್ತಾರೆ. ಇದರ ನಂತರ ತಲೆ ಸ್ನಾನ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದು ಕೂದಲು ಉದುರುವಿಕೆ ಮತ್ತು ಮಂದ ಕೂದಲಿನ ಸಮಸ್ಯೆಯನ್ನು ನಿವಾರಿಸುತ್ತದೆ.
ಆರೋಗ್ಯಕರ ಕೂದಲಿಗೆ ಪ್ರೋಟೀನ್ ಬಹಳ ಮುಖ್ಯ. ಶಾಂಪೂ ಮಾಡುವ ಮೊದಲು ತೆಂಗಿನ ಎಣ್ಣೆಯನ್ನು ಹಚ್ಚವುದರಿಂದ ಅದು ರಕ್ಷಣಾತ್ಮಕ ಪದರವನ್ನು ರಚಿಸುತ್ತದೆ ಎಂದು ಬಹಳಷ್ಟು ಸಂಶೋಧನೆಗಳು ತೋರಿಸುತ್ತವೆ. ಹಾಗೆ ಮಾಡುವುದರಿಂದ ಪ್ರೋಟೀನ್ ಕೊರತೆಯನ್ನು ನಿವಾರಿಸುತ್ತದೆ. ಕೂದಲಲ್ಲಿ ಪ್ರೋಟೀನ್ ಕೊರತೆಯಿಂದ ಕೂದಲು ದುರ್ಬಲವಾಗುತ್ತದೆ.
ಶಾಂಪೂ ಮಾಡುವ 1 ಗಂಟೆ ಮೊದಲು ಕೂದಲಿಗೆ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಸಮೃದ್ಧವಾಗಿ ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತದೆ. ಕೂದಲಿಗೆ ಎಣ್ಣೆಯನ್ನು ಹಚ್ಚುವುದರಿಂದ ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರಿಂದ ಕೂದಲಿನ ಕಿರುಚೀಲಗಳು ಕ್ರಿಯಾಶೀಲವಾಗುತ್ತವೆ ಮತ್ತು ಕೂದಲು ಉದ್ದುದ್ದವಾಗಿ ಬೆಳೆಯುತ್ತದೆ.
ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲು ಗಟ್ಟಿಯಾಗುತ್ತದೆ. ನೆತ್ತಿಯಲ್ಲಿ ಉತ್ತಮ ರಕ್ತ ಪರಿಚಲನೆಯಾಗಿ, ಕೂದಲಿನ ಬೇರುಗಳಿಗೆ ಆಮ್ಲಜನಕ ಮತ್ತು ರಕ್ತದ ಉತ್ತಮ ಪೂರೈಕೆ ಸಿಗುತ್ತದೆ. ಇದು ಕೂದಲಿಗೆ ಸರಿಯಾದ ಪೋಷಣೆಯನ್ನು ನೀಡುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(ಗಮನಿಸಿ: ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ವಿವರಗಳನ್ನು ನಿಮಗೆ ಒದಗಿಸಲಾಗಿದೆ. ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಟಿವಿ9 ಕನ್ನಡ ಡಿಜಿಟಲ್ ಯಾವುದೇ ಪ್ರತಿಕೂಲ ಪರಿಣಾಮಗಳಿಗೆ ಜವಾಬ್ದಾರವಾಗಿರುವುದಿಲ್ಲ)