Sign In

By signing in or creating an account, you agree with Associated Broadcasting Company's Terms & Conditions and Privacy Policy.

Washing Machine: ಮನೆಯಲ್ಲಿ ಬಟ್ಟೆ ಒಗೆಯುವ ವಾಷಿಂಗ್ ಮೆಷಿನ್ ಎಲ್ಲಿಟ್ಟರೆ ಒಳ್ಳೆಯದು?

ಬಾಲ್ಕನಿಯಲ್ಲಿ ವಾಷಿಂಗ್ ಮೆಷಿನ್ ಇರಿಸಬಹುದಾದರೂ ಬಾಲ್ಕನಿಯಲ್ಲಿ ಇಡುವುದು ಉತ್ತಮವೇ? ಎಂಬ ಪ್ರಶ್ನೆ ಅನೇಕರಿಗೆ ಕಾಡುತ್ತದೆ. ಬಾಲ್ಕನಿಯಲ್ಲಿ ವಾಷಿಂಗ್ ಯಂತ್ರವನ್ನು ಇರಿಸಬಹುದು. ಆದರೆ ಇದಕ್ಕಾಗಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಬಾಲ್ಕನಿಯಲ್ಲಿ ವಾಷಿಂಗ್ ಮೆಷಿನ್ ಹಾಕಬೇಕೆಂದರೆ... ಸ್ವಲ್ಪ ಎತ್ತರದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಮಳೆ ನೀರು ಬಾಲ್ಕನಿಯಲ್ಲಿ ಬಂದರೂ ವಾಷಿಂಗ್ ಮೆಷಿನ್ ಒಳಗೆ ಬರುವಂತೆ ಇಡಬಾರದು.

Washing Machine: ಮನೆಯಲ್ಲಿ ಬಟ್ಟೆ ಒಗೆಯುವ ವಾಷಿಂಗ್ ಮೆಷಿನ್ ಎಲ್ಲಿಟ್ಟರೆ ಒಳ್ಳೆಯದು?
ಮನೆಯಲ್ಲಿ ವಾಷಿಂಗ್ ಮೆಷಿನ್ ಎಲ್ಲಿಟ್ಟರೆ ಒಳ್ಳೆಯದು?
Follow us
ಸಾಧು ಶ್ರೀನಾಥ್​
|

Updated on:Aug 31, 2023 | 2:07 PM

ಮನೆಗೆ ವಾಸ್ತು ಎಷ್ಟು ಮುಖ್ಯವೋ ಹಾಗೆಯೇ ಮನೆಯೊಳಗಿರುವ ವಸ್ತುಗಳಿಗೆ ಮತ್ತು ಅಗತ್ಯ ವಸ್ತುಗಳಿಗಾಗಿಯೂ ವಾಸ್ತುವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ವಾಸ್ತುವನ್ನು ಚೆನ್ನಾಗಿ ತಿಳಿದಿರುವ ಜನರು ಈಶಾನ್ಯದಲ್ಲಿ ಯಾವುದೇ ತೂಕದ ವಸ್ತುವನ್ನು ಇಡುವುದಿಲ್ಲ. ಬೀರು, ಫ್ರಿಡ್ಜ್​​ನಂತಹ ಭಾರೀ ತೂಕದ ವಸ್ತುಗಳನ್ನು ಇಡುವುದಿಲ್ಲ… ಕನಿಷ್ಠ ಆ ದಿಕ್ಕಿಗೆ ಕುರ್ಚಿಯನ್ನೂ ಹಾಕುವುದಿಲ್ಲ. ವಾಸ್ತುವನ್ನು ಅನೇಕ ವಿಷಯಗಳಲ್ಲಿ ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ. ಗಿಡಗಳನ್ನು ಹಾಕಲೂ ವಾಸ್ತುವಿನ ಬಗ್ಗೆ ಕಾಳಜಿ ವಹಿಸುವವರು ಇದ್ದಾರೆ ಎಂದರೆ ನೀವು ನಂಬುತ್ತೀರಾ!

ಇಂದಿನ ದಿನಗಳಲ್ಲಿ ಟಿವಿ, ಫ್ರಿಜ್ ಮತ್ತು ವಾಷಿಂಗ್ ಮೆಷಿನ್ (washing machine) ಇಲ್ಲದ ಮನೆಗಳು ಬಹಳ ಕಡಿಮೆ. ಬಿಡುವಿಲ್ಲದ ಜೀವನದಿಂದ ಯಂತ್ರಗಳು ನಮ್ಮ ಮನೆಗಳ ಅವಿಭಾಜ್ಯ ಭಾಗವಾಗುತ್ತಿವೆ. ಬಟ್ಟೆ ತೊಳೆಯುವ ವಾಷಿಂಗ್ ಮೆಷಿನ್ ಯಂತ್ರವನ್ನು ಎಲ್ಲಿ ಹಾಕಬೇಕೆಂದು ಅನೇಕ ಜನರು ಆಶ್ಚರ್ಯ ಪಡುತ್ತಾರೆ. ಕೆಲವರು ಅದನ್ನು ಸ್ನಾನದ ಗೃಹದಲ್ಲಿ ಇಡಲು ಬಯಸುತ್ತಾರೆ. ಇನ್ನು ಕೆಲವರು ಮನೆಯ ಹಿಂದೆ, ಅಥವಾ ಬಾಲ್ಕನಿ ಮೆಟ್ಟಿಲುಗಳ ಕೆಳಗಡೆ ಇಡುತ್ತಾರೆ. ವಾಷಿಂಗ್ ಮೆಷಿನ್ ಯಂತ್ರವನ್ನು ಮನೆಯೊಳಗೆ ಇಡುವುದಕ್ಕಿಂತ ಹೆಚ್ಚಾಗಿ ಮನೆಯ ಹೊರಗೆ ಇಡುತ್ತಾರೆ.

ಬಾಲ್ಕನಿಯಲ್ಲಿ ವಾಷಿಂಗ್ ಮೆಷಿನ್ ಇರಿಸಬಹುದಾದರೂ ವಾಷಿಂಗ್ ಮೆಷಿನ್ ಅನ್ನು ಬಾಲ್ಕನಿಯಲ್ಲಿ ಇಡುವುದು ಉತ್ತಮವೇ? ಎಂಬ ಪ್ರಶ್ನೆ ಅನೇಕರಿಗೆ ಕಾಡುತ್ತದೆ. ಬಾಲ್ಕನಿಯಲ್ಲಿ ವಾಷಿಂಗ್ ಯಂತ್ರವನ್ನು ಇರಿಸಬಹುದು. ಆದರೆ ಇದಕ್ಕಾಗಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಬಾಲ್ಕನಿಯಲ್ಲಿ ವಾಷಿಂಗ್ ಮೆಷಿನ್ ಹಾಕಬೇಕೆಂದರೆ… ಸ್ವಲ್ಪ ಎತ್ತರದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಮಳೆ ನೀರು ಬಾಲ್ಕನಿಯಲ್ಲಿ ಬಂದರೂ ವಾಷಿಂಗ್ ಮೆಷಿನ್ ಒಳಗೆ ಬರುವಂತೆ ಇಡಬಾರದು. ಇಲ್ಲದಿದ್ದರೆ ಯಂತ್ರ ಹಾಳಾಗುತ್ತದೆ ಎಂಬ ಟೆನ್ಷನ್ ಇರುತ್ತದೆ.

ಇದನ್ನೂ ಓದಿ:  Event Calendar September 2023: ಸೆಪ್ಟೆಂಬರ್​​ನಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಾಚರಣೆಗಳು ಇಲ್ಲಿದೆ

ವಾಷಿಂಗ್ ಮೆಷಿನ್ ಅನ್ನು ಬಾಲ್ಕನಿಯಲ್ಲಿ ಇರಿಸಿದರೆ, ಅದನ್ನು ಶೆಡ್​​ನಲ್ಲಿಡುವಂತೆ ಜೋಡಿಸಬೇಕು. ಬಿಸಿಲು ಮತ್ತು ಮಳೆಯಾಗದಂತೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ಹಾಳಾಗುವ ಅಪಾಯವಿದೆ. ವಾಷಿಂಗ್ ಮೆಷಿನ್ ಯಂತ್ರವು ನೀರಿನ ಬಳಕೆ ಮತ್ತು ನೀರಿನ ಹೊರಸೂಸುವಿಕೆಗಾಗಿ ರಂಧ್ರಗಳನ್ನು ಹೊಂದಿದೆ. ಯಾವುದೇ ಕೀಟವು ಅವುಗಳೊಳಗೆ ಪ್ರವೇಶಿಸಿದರೆ, ಅದು ಯಂತ್ರವನ್ನು ಹಾಳುಮಾಡಬಹುದು. ಆದ್ದರಿಂದ ಯಂತ್ರವನ್ನು ಕೀಟಗಳಿಂದ ರಕ್ಷಿಸಲು ಬಾಲ್ಕನಿಯ ಸುತ್ತಲೂ ಬಲೆ ಅಥವಾ ಗ್ರಿಲ್ ಅನ್ನು ಜೋಡಿಸಬೇಕು. ಅದರಲ್ಲೂ ವಾಷಿಂಗ್ ಮೆಷಿನ್ ನಲ್ಲಿ ಒದ್ದೆಯಾಗದಂತೆ ಮಳೆ ನಿರೋಧಕ ಶೀಟ್ ಅಳವಡಿಸಬೇಕು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ

Published On - 2:04 pm, Thu, 31 August 23