ಹಣೆಯ ಮೇಲೆ ಪದೇ ಪದೇ ಮೊಡವೆಗಳು ಕಾಣಿಸಿಕೊಳ್ಳುತ್ತಿವೆಯೇ? ಇಲ್ಲಿದೆ ಸುಲಭ ಮನೆಮದ್ದು

ಪದೇ ಪದೇ ಹಣೆಯ ಮೇಲೆ ಮೊಡವೆ ಕಾಣಿಸಿಕೊಳ್ಳುತ್ತಿದ್ದು, ಎಷ್ಟೇ ಪ್ರಯತ್ನ ಮಾಡಿದರೂ ಈ ಮೊಡವೆಗಳನ್ನು ಹೋಗಲಾಡಿಸಲು ಸಾಧ್ಯವಾಗದಿದ್ದರೆ, ಈ ಕೆಲವೊಂದು ಮನೆಮದ್ದುಗಳ ಸಹಾಯದಿಂದ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಿ.

ಹಣೆಯ ಮೇಲೆ ಪದೇ ಪದೇ ಮೊಡವೆಗಳು ಕಾಣಿಸಿಕೊಳ್ಳುತ್ತಿವೆಯೇ? ಇಲ್ಲಿದೆ ಸುಲಭ ಮನೆಮದ್ದು
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 30, 2023 | 4:34 PM

ಹಣೆಯ ಮೇಲೆ ಉಂಟಾಗುವ ಮೊಡವೆಗಳ ಸಮಸ್ಯೆ ಹೆಚ್ಚಿನ ಜನರನ್ನು ಭಾದಿಸುತ್ತಿರುತ್ತದೆ. ಈ ಸಮಸ್ಯೆ ಮಹಿಳೆಯರಲ್ಲಿ ಮಾತ್ರವಲ್ಲದೆ ಪುರುಷರಲ್ಲೂ ಕಂಡುಬರುತ್ತದೆ. ತ್ವಚೆಯ ಶುಚಿತ್ವದ ಬಗ್ಗೆ ಕಾಳಜಿ ವಹಿಸದಿರುವುದು, ಹಾರ್ಮೋನುಗಳ ಬದಲಾವಣೆ, ಎಣ್ಣೆಯುಕ್ತ ಚರ್ಮ ಅಥವಾ ಹೆಚ್ಚಾಗಿ ಒತ್ತಡಕ್ಕೆ ಒಳಗಾಗುವುದು ಹೀಗೆ ಹಲವು ಕಾರಣಗಳಿಂದ ಹಣೆಯ ಮೇಲೆ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಈ ಮೊಡವೆ ಸಮಸ್ಯೆ ಪದೇ ಪದೇ ಕಾಡಿದಾಗ ಮುಖದಲ್ಲಿ ಕಲೆಗಳು ಉಂಟಾಗಿ ತ್ವಚೆಯ ಸೌಂದರ್ಯವೂ ಹಾಳಾಗುತ್ತವೆ. ನೀವು ಎಷ್ಟೇ ಪ್ರಯತ್ನಪಟ್ಟರೂ ಈ ಒಂದು ಮೊಡವೆಗಳ ಸಮಸ್ಯೆ ಕಡಿಮೆಯಾಗುತ್ತಿಲ್ಲವೆ? ಹಾಗಿದ್ದರೆ ಈ ಕೆಲವೊಂದು ಮನೆಮದ್ದುಗಳ ಸಹಾಯದಿಂದ ಹಣೆಯ ಮೇಲೆ ಕಾಣಿಸಿಕೊಳ್ಳುವ ಮೊಡವೆಗಳ ಸಮಸ್ಯೆಗೆ ಪರಿಹಾರ ಪಡೆಯಬಹುದು.

ಹಣೆಯ ಮೇಲಿನ ಮೊಡವೆಗಳನ್ನು ತೊಡೆದುಹಾಕಲು ಸರಳ ಮನೆಮದ್ದುಗಳು:

ನಿಂಬೆ ರಸ:

ಮೊಡವೆಗಳಿಗೆ ಚಿಕಿತ್ಸೆ ನೀಡಲು ನಿಂಬೆ ರಸವು ಸೂಕ್ತವಾದ ಮನೆಮದ್ದಾಗಿದೆ. ನೀವು ನಿಂಬೆ ರಸವನ್ನು ಮೊಡವೆಗಳಿರುವ ಜಾಗಕ್ಕೆ ಹಂಚಿಕೊಳ್ಳಬಹುದು. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಹಣೆಯ ಮೇಲಿನ ಮೊಡವೆಗಳಿಗೆ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ ಅವುಗಳು ಮರುಕಳಿಸದಂತೆ ತಡೆಯುತ್ತದೆ.

ಅಲೋವೆರಾ:

ಅಲೋವೆರಾ ಸ್ಯಾಲಿಸಿಲಿಕ್ ಆಮ್ಲ ಮತ್ತು ಗಂಧಕವನ್ನು ಹೊಂದಿದ್ದು, ಇದು ಮೊಡವೆಗಳನ್ನು ತೊಡೆದುಹಾಕಲು ಸಹಕಾರಿಯಾಗಿದೆ. ಇದಕ್ಕಾಗಿ ತಾಜಾ ಅಲೋವೆರಾವನ್ನು ತೆಗೆದುಕೊಂದು, ಅದರ ತಿರುಳಿನಿಂದ ಜೆಲ್ ನ್ನು ತೆಗೆದು ಅದನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪೇಸ್ಟ್ ತಯಾರಿಸಿ. ಈ ಪೇಸ್ಟ್ ನ್ನು ಮೊಡವೆಗಳ ಮೇಲೆ ಹಚ್ಚಿ ಮತ್ತು ಸ್ವಲ್ಪ ಸಮಯದ ನಂತರ ಮುಖವನ್ನು ತೊಳೆಯಿರಿ. ಹೀಗೆ ಕೆಲವು ವಾರಗಳವರೆಗೆ ಈ ಮನೆಮದ್ದನ್ನು ಅನುಸರಿಸುವ ಮೂಲಕ ಮೊಡವೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ಟೀ ಟ್ರೀ ಆಯಿಲ್:

ಟೀ ಟ್ರೀ ಆಯಿಲ್ ಸಾರಭೂತ ತೈಲವಾಗಿದ್ದು, ಇದು ಮೊಡವೆಗಳನ್ನು ತೊಡೆದುಹಾಕಲು ಸಹಕಾರಿಯಾಗಿದೆ. ಇದಕ್ಕಾಗಿ ಒಂದು ಚಮಚದಷ್ಟು ನೀರನ್ನು ತೆಗೆದುಕೊಂಡು ಅದಕ್ಕೆ ಎರಡು ಹನಿ ಟೀ ಟ್ರೀ ಆಯಿಲ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಹತ್ತಿ ಉಂಡೆಯ ಸಹಾಯದಿಂದ ಈ ಮಿಶ್ರಣವನ್ನು ಮೊಡವೆಗಳ ಮೇಲೆ ಹಚ್ಚುವ ಮೂಲಕ ಮೊಡವೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ಕಡ್ಲೆ ಹಿಟ್ಟು ಮತ್ತು ಬಾದಾಮಿ ಪುಡಿ:

ಕಡ್ಲೆ ಹಿಟ್ಟು ಮತ್ತು ಬಾದಾಮಿ ಪುಡಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದರಲ್ಲಿ ಒಂದು ಚಿಟಿಕೆ ಅರಶಿನವನ್ನು ಬೆರೆಸಿ ಮತ್ತು ಸ್ವಲ್ಪ ನೀರನ್ನು ಸೇರಿಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ನ್ನು ಹಣೆಯ ಮೇಲೆ ಹಚ್ಚಿ 15 ನಿಮಿಷಗಳ ಬಳಿಕ ತೊಳೆಯಿರಿ . ಇದರಿಂದ ಮೊಡವೆಗಳು ಕಡಿಮೆಯಾಗುತ್ತದೆ.

ಇದನ್ನೂ ಓದಿ: ಮೊಡವೆ ನಿವಾರಣೆಗೆ ಸಿಂಪಲ್​​ ಮನೆಮದ್ದು

ಐಸ್ ಕ್ಯೂಬ್:

ಹಣೆಯ ಮೇಲಿನ ಮೊಡವೆಗಳನ್ನು ತೊಡೆದುಹಾಕಲು ಐಸ್ ಕ್ಯೂಬ್ ಕೂಡಾ ನಿಮಗೆ ಸಹಾಯವಾಗಲಿದೆ. ಐಸ್ ಕ್ಯೂಬ್ ನ್ನು ಒಂದು ಬಟ್ಟೆಯಲ್ಲಿ ಸುತ್ತಿ, ಹಣೆಯ ಮೇಲೆ ನಿಧಾನಕ್ಕೆ ಮಸಾಜ್ ಮಾಡಿ, ಹೀಗೆ ಸ್ವಲ್ಪ ದಿನಗಳವರೆಗೆ ಮಾಡುವುದರಿಂದ ಮೊಡವೆಗಳಿಂದ ಪರಿಹಾರ ಪಡೆಯಬಹುದು.

ಕಾಫಿ ಸ್ಕ್ರಬ್:

ಮೊಡವೆಗಳ ಸಮಸ್ಯೆಯಿಂದ ಮುಕ್ತಿ ಪಡೆಯಲು ಸ್ಕ್ರಬ್ ಕೂಡಾ ಉತ್ತಮ ಆಯ್ಕೆಯಾಗಿದೆ. ಮೊಡವಗಳನ್ನು ತೊಡೆದುಹಾಕಲು ಕಾಫಿ ಪುಡಿಯಿಂದ ನಿಮ್ಮ ಮುಖವನ್ನು ಸ್ಕ್ರಬ್ ಮಾಡಿ. ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಮೊಡವೆಗಳನ್ನು ಹೋಗಲಾಡಿಸುತ್ತದೆ.

ಮಾಯಿಶ್ಚರೈಸರ್ ಬಳಸಿ:

ಚರ್ಮವನ್ನು ಆರೋಗ್ಯಕರವಾಗಿ ಮತ್ತು ಮೊಡವೆ ಮುಕ್ತವಾಗಿಡಲು ತ್ವಚೆಯ ಮೇಲೆ ವಿಟಮಿನ್-ಎ ಮತ್ತು ಗ್ಲೈಕೋಲಿಕ್ ಆಮ್ಲವನ್ನು ಹೊಂದಿರುವ ಕ್ರೀಮ್ ಅಥವಾ ಮಾಯಿಶ್ಚರೈಸರ್ ನ್ನು ಬಳಸಿ. ಇದರ ಬಳಕೆಯಿಂದ ನಿಮ್ಮ ಚರ್ಮವು ಆರೋಗ್ಯಕರವಾಗಿ ಮತ್ತು ಸ್ವಚ್ಛವಾಗಿರುತ್ತದೆ. ಜೊತೆಗೆ ತ್ವಚೆಯ ಹೊಳಪು ಕೂಡಾ ಹೆಚ್ಚಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: