ಭಾರತ್ ಜೋಡೋ ಯಾತ್ರೆ(Bharat Jodo Yatra) ಪ್ರಾರಂಭದಿಂದಲೂ ರಾಹುಲ್ ಗಾಂಧಿ(Rahul Gandhi ) ಧರಿಸಿಸುವ ಟೀ ಶರ್ಟ್ನ ಬೆಲೆಯಿಂದ ಹಿಡಿದು , ಯಾತ್ರೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದರಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ.ಇದು ರಾಹುಲ್ ಗಾಂಧಿಯವರ ಇತ್ತೀಚಿನ ರಾಜಕೀಯ ಇತಿಹಾಸದಲ್ಲಿ ಅತಿದೊಡ್ಡ ಘಟನೆಗಳಲ್ಲಿ ಒಂದಾಗಿದೆ. ಕಾಂಗ್ರೆಸ್ ನಾಯಕನಾಗಿ ಭಾರತದ ಬೀದಿಗಳಲ್ಲಿ ಓಡಾಡುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನವೂ ಆಕರ್ಷಿಸುತ್ತಿವೆ. ಆದಾಗ್ಯೂ, ಕೊನೆಯ ಫೋಟೋಗಳು ಕೆಲವು ರಾಜಕೀಯ ವಿವಾದಗಳನ್ನು ಹುಟ್ಟುಹಾಕಿವೆ ಮತ್ತು ಅನೇಕ ಆಶ್ಚರ್ಯಗಳಿಗೆ ಕಾರಣವಾಗಿವೆ. ದೆಹಲಿಯ ಕೊರೆಯುವ ಚಳಿಯಲ್ಲಿ ರಾಹುಲ್ ಗಾಂಧಿ ಟೀ ಶರ್ಟ್ ಧರಿಸಿರುವ ಫೋಟೋಗಳು ಇದೀಗಾ ಸಾಕಷ್ಟು ಸುದ್ದಿಯಾಗಿದೆ. ಇದು ಅನೇಕರಲ್ಲಿ ಆಶ್ಚರ್ಯ ಪಡುವಂತೆ ಮಾಡಿದೆ. ಚಳಿಗಾಲದಲ್ಲಿ ಸಾಕಷ್ಟು ಜನ ಗಡ ಗಡ ನಡುಗುತ್ತಿದ್ದರೆ, ರಾಹುಲ್ ಗಾಂಧಿಗೆ ಏಕೆ ಚಳಿಯ ಅನುಭವವಾಗುವುದಿಲ್ಲ?, ಇದಕ್ಕೆ ವೈಜ್ಞಾನಿಕ ಕಾರಣಗಳಿವೆ ಎಂದು ತಜ್ಞರು ಹೇಳುತ್ತಾರೆ.
ಡಿಸೆಂಬರ್ 26, ಸೋಮವಾರ ರಾಹುಲ್ ಗಾಂಧಿ ತಮ್ಮ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನವ ದೆಹಲಿಯ ವೀರ ಭೂಮಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ಫೋಟೋಗಳು ಇದೀಗಾ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಒಂದು ಕಡೆ ಇದನ್ನು ಗಿಮಿಕ್ ಎಂದು ಕರೆಯುತ್ತಿದ್ದರೆ, ಇನ್ನೊಂದು ಕಡೆ ಗಾಂಧಿಯನ್ನು ಅತಿಮಾನುಷ ಎಂದು ಶ್ಲಾಘಿಸಿದೆ.ಹವಾಮಾನ ವೈಪರೀತ್ಯದ ಸಮಯದಲ್ಲಿಯೂ ಸಹ ಕೆಲವರು ಏಕೆ ಶೀತ ಅನುಭವಿಸುವುದಿಲ್ಲ ಎಂಬುದರ ಹಿಂದಿನ ವಿಜ್ಞಾನದಲ್ಲಿ ತಿಳಿದಿರುವ ಅಂಶಗಳು ಇಲ್ಲಿವೆ. ಸಾಮಾನ್ಯವಾಗಿ ಮಾನವನ ದೇಹದಲ್ಲರುವ ಜೀನೋಮಿಕ್ ಕೋಡ್‌ನ ಅಂದರೆ ಡಿ ಎನ್ ಎ ಗಳ ವಿಶಿಷ್ಟ ಬದಲಾವಣೆಗಳೊಂದಿಗೆ ಸಂಬಂಧವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಜೀನೋಮಿಕ್ ಕೋಡ್‌ನಲ್ಲಿನ ವಿಶಿಷ್ಟ ಬದಲಾವಣೆಗಳು ನಮ್ಮಲ್ಲಿ ಕೆಲವು ಬದಲಾವಣೆಗೆ ಕಾರಣವಾಗಿವೆ.
ಇದನ್ನೂ ಓದಿ: ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಉಪಯುಕ್ತವಾದ 5 ತರಹದ ಬೀಟ್ರೂಟ್ ಸೂಪ್‌ಗಳು
ದೇಹದಲ್ಲಿನ ತಾಪಮಾನವನ್ನು ಮೆದುಳಿನಲ್ಲಿರುವ ಥರ್ಮೋರ್ಗ್ಯುಲೇಟರಿನಿಂದ ನಿಯಂತ್ರಿಸಲಾಗುತ್ತದೆ. ಇದು ಚಯಾಪಚಯ ದರ, ದೇಹದ ಕೊಬ್ಬಿನ ಸಂಯೋಜನೆ ಮತ್ತು ವೈದ್ಯಕೀಯ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಇದು ನಿಮ್ಮ ದೇಹದಲ್ಲಿ ಸ್ವಯಂ ನಿರೋಧಕ ವಿದ್ಯಮಾನವಾಗಿದೆ ಮತ್ತು ಥೈರಾಕ್ಸಿನ್ ಹಾರ್ಮೋನ್ ಶಾಖವನ್ನು ಉತ್ಪಾದಿಸಲು ಸಹ ಕಾರಣವಾಗಿದೆ. ಇದರಿಂದಾಗಿ ಹವಾಮಾನದಲ್ಲಿನ ಬದಲಾವಣೆಗಳನ್ನು ಉದಾಹರಣೆಗೆ ಚಳಿಗಾಲದಲ್ಲಿ ನಿಮ್ಮ ದೇಹಕ್ಕೆ ಚಳಿಯಾಗದಂತೆ ನೋಡಿಕೊಳ್ಳುತ್ತದೆ ಎಂದು ಆಕಾಶ್ ಹೆಲ್ತ್‌ಕೇರ್‌ನ ಹಿರಿಯ ಸಲಹೆಗಾರ ಡಾ. ಪ್ರಭಾತ್ ರಂಜನ್ ಸಿನ್ಹಾ ಇಂಡಿಯಾ ಟುಡೇಯ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮಾನವನ ನರಮಂಡಲವು ನಿರ್ದಿಷ್ಟ ನರ ಕೋಶ ಗ್ರಾಹಕಗಳನ್ನು ಹೊಂದಿದೆ. ಅದು ಬಾಹ್ಯ ಪರಿಸರದ ಬದಲಾವಣೆಗಳ ಅಂದರೆ ಮಳೆ, ಚಳಿ, ಬೇಸಿಗೆಯ ಸಂದರ್ಭದಲ್ಲಿ ಮೆದುಳನ್ನು ಕಾರ್ಯನಿರ್ವಹಿಸುವ ಕಡೆಗೆ ನಿರ್ದೇಶಿಸುತ್ತದೆ. ಈ ಕುರಿತು 2021 ರಲ್ಲಿ ನಡೆಸಿದ ಅಧ್ಯಯನವು ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವ ಆನುವಂಶಿಕ ರೂಪಾಂತರಗಳು ಕೆಲವು ಜನರಲ್ಲಿ ವಿಶಿಷ್ಟ ಬದಲಾವಣೆಗಳಿಗೆ ಕಾರಣವಾಗಬಹುದು. ಶಾಖ ಮತ್ತು ಶೀತಕ್ಕೆ ದೇಹವನ್ನು ಅಭಿವೃದ್ಧಿಪಡಿಸುವಂತೆ ಮಾಡುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕಡಿಮೆ ಖರ್ಚಿನಲ್ಲಿ ಬಾಯಿಯಲ್ಲಿ ನೀರೂರಿಸುವ ಭಕ್ಷ್ಯಗಳ ಪಟ್ಟಿ ಇಲ್ಲಿವೆ
ತೀವ್ರವಾದ ತಾಪಮಾನದಲ್ಲಿ ಕೆಲಸ ಮಾಡುವ ಸಾಮರ್ಥ್ಯವು ಪ್ರಪಂಚದ 8 ಶತಕೋಟಿ ಜನಸಂಖ್ಯೆಯ ಸುಮಾರು 1.5 ಶತಕೋಟಿ ಜನರಲ್ಲಿ ಕಂಡುಬರುತ್ತದೆ ಎಂದು ನಂಬಲಾಗಿದೆ. ಅಮೇರಿಕನ್ ಜರ್ನಲ್ ಆಫ್ ಹ್ಯೂಮನ್ ಜೆನೆಟಿಕ್ಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಇದು ಅವರ ವೇಗದ-ಸೆಳೆತ ಅಸ್ಥಿಪಂಜರದ ಸ್ನಾಯುವಿನ ನಾರಿನಲ್ಲಿ ಎ-ಆಕ್ಟಿನಿನ್ -3 ಎಂಬ ಪ್ರೋಟೀನ್ ಇಲ್ಲದಿರುವುದು ಎಂದು ತಿಳಿದುಬಂದಿದೆ.ಅಸ್ಥಿಪಂಜರದ ಸ್ನಾಯುಗಳು ಸ್ಲೋ-ಟ್ವಿಚ್ ಫೈಬರ್ ಮತ್ತು ಫಾಸ್ಟ್-ಟ್ವಿಚ್ ಫೈಬರ್‌ನ ಸಂಯೋಜನೆಯಾಗಿದೆ. ಈ ಎರಡು ಅಂಶಗಳು ಮನುಷ್ಯನ ದೇಹದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ನಿಮ್ಮ ದೇಹದ ಸ್ನಾಯುಗಳು ಎಷ್ಟು ವೇಗವಾಗಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ನಿರ್ಧರಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:22 am, Wed, 28 December 22