AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Winter Special: ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಉಪಯುಕ್ತವಾದ 5 ತರಹದ ಬೀಟ್ರೂಟ್ ಸೂಪ್‌ಗಳು

ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ನೀಡುವ ಹಾಗೂ ಪ್ಲೇಟ್‌ಗಳಲ್ಲಿ ಸುವಾಸನೆ ಹಾಗೂ ಅತ್ಯಾಕರ್ಷಕ ಬಣ್ಣದಿಂದ ಕೂಡಿದ ಆಹಾರವು ಬೀಟ್ರೂಟ್ ಆಗಿದೆ. ಹೇರಳವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಬೀಟ್ರೂಟ್ ಕಡಿಮೆ ಕ್ಯಾಲೋರಿಯಿಂದ ಕೂಡಿದೆ ಮತ್ತು ಅತ್ಯಲ್ಪ ಪ್ರಮಾಣದ ಕೊಬ್ಬಿನಾಂಶವನ್ನು ಹೊಂದಿದೆ.

Winter Special: ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಉಪಯುಕ್ತವಾದ 5 ತರಹದ ಬೀಟ್ರೂಟ್ ಸೂಪ್‌ಗಳು
ಸಾಂದರ್ಭಿಕ ಚಿತ್ರImage Credit source: iStock
TV9 Web
| Updated By: ಅಕ್ಷತಾ ವರ್ಕಾಡಿ|

Updated on:Dec 27, 2022 | 5:47 PM

Share

ಬೀಟ್ರೂಟ್(Beetroot) ಕಬ್ಬಿಣಾಂಶದ ಅತ್ಯಮೂಲ್ಯ ಮೂಲವಾಗಿದೆ. ಆದ್ದರಿಂದ ಆರೋಗ್ಯಕರ ಹಿಮೋಗ್ಲೋಬಿನ್ ಮಟ್ಟವನ್ನು ಕಾಪಡಿಕೊಳ್ಳಲು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬೀಟ್ರೂಟ್ ಉತ್ತಮವಾಗಿದೆ. ಇದು ಚಳಿಗಾಲದಲ್ಲಿ ಸಿಗುವಂತಹ ಸೀಸನಲ್ ತರಕಾರಿಯಾಗಿದೆ. ಇದನ್ನು ಹಲವಾರು ವೈವಿಧ್ಯಮಯ ಅಡುಗೆಗಳಲ್ಲಿ ಬಳಸುತ್ತಾರೆ. ಚಳಿಗಾಲದ ರೋಗನಿರೋಧಕ ಶಕ್ತಿಗೆ ಅತ್ತುತ್ಯಮವಾದ ಕೆಲವು ಬೀಟ್ರೂಟ್ ಸೂಪ್‌ಗಳು ಇಲ್ಲಿವೆ.ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ನೀಡುವ ಹಾಗೂ ನಮ್ಮ ಪ್ಲೇಟ್‌ಗಳಲ್ಲಿ ಸುವಾಸನೆ ಹಾಗೂ ಅತ್ಯಾಕರ್ಷಕ ಬಣ್ಣದಿಂದ ಕೂಡಿದ ಆಹಾರವು ಬೀಟ್ರೂಟ್ ಆಗಿದೆ. ಹೇರಳವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಬೀಟ್ರೂಟ್ ಕಡಿಮೆ ಕ್ಯಾಲೋರಿಯಿಂದ ಕೂಡಿದೆ ಮತ್ತು ಅತ್ಯಲ್ಪ ಪ್ರಮಾಣದ ಕೊಬ್ಬಿನಾಂಶವನ್ನು ಹೊಂದಿದೆ.

ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹಾಗೂ ಕೆಂಪು ರಕ್ತಕಣಗಳ ಉತ್ಪಾದನೆಗೆ ಸಹಾಯ ಮಾಡುವುದರ ಜೊತೆಗೆ ನೈಸರ್ಗಿಕ ರಕ್ತ ಶುದ್ಧಿಕಾರಕವಾಗಿದೆ. ಇಂತಹ ಬೀಟ್ರೂಟ್‌ನ್ನು ಸಲಾಡ್, ಪಲ್ಯ, ಸಂಡ್ವಿಚ್‌ಗಳಲ್ಲಿ ಬಳಸಲಾಗುತ್ತದೆ.

ಚಳಿಗಾಲದ ರೋಗನಿರೋಧಕ ಶಕ್ತಿಗಾಗಿ 5 ತರಹೇವಾರಿ ಬೀಟ್ರೂಟ್ ಸೂಪ್‌ಗಳು ಇಲ್ಲಿವೆ:

1. ಬೀಟ್ರೂಟ್ ಸೂಪ್: ಮೊದಲು ಸಾಂಪ್ರದಾಯಿಕ ಶೈಲಿಯೊಂದಿಗೆ ಪ್ರಾರಂಭಿಸೋಣ. ಈ ಬಳಿಗಾಲದಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸುಲಭ ಮತ್ತು ತ್ವರಿತ ಪಾಕ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

ಸಿಪ್ಪೆ ಸುಳಿದು ಕತ್ತರಿಸಿದ ಬೀಟ್ರೂಟ್ 1 ಕಪ್ ಸಿಪ್ಪೆ ಸುಳಿದ ಬಾಟಲ್ ಸೋರೆಕಾಯಿ 1 ಕಪ್ ಈರುಳ್ಳಿ 1/2 ಕಪ್ ಟೊಮೆಟೊ 1/2 ಕಪ್ ಆಲುಗಡ್ಡೆ 4 ಕಪ್ ಸಕ್ಕರೆ 4 ಟೀ ಸ್ಪೂನ್ ಉಪ್ಪು ರುಚಿಗೆ ತಕ್ಕಷ್ಟು ಕರಿಮೆಣಸಿನ ಪುಡಿ 1/4 ಟೀಸ್ಪೂನ್ ಫ್ರೆಶ್ ಕ್ರೀಂ ಸ್ವಲ್ಪ ಕೊತ್ತಂಬರಿ ಸೊಪ್ಪು

ಬೀಟ್ರೂಟ್ ಸೂಪ್ ವಿಧಾನ:

ಕತ್ತರಿಸಿದ ಬೀಟ್ರೂಟ್, ಸೋರೆಕಾಯಿ, ಈರುಳ್ಳಿ, ಟೊಮೆಟೊ, ಆಲುಗಡ್ಡೆಯನ್ನು ೨ ಕಪ್ ನೀರು ಸೇರಿಸಿ ಬಾಣಲೆಯಲ್ಲಿ ಚೆನ್ನಾಗಿ ಬೇಯಿಸಿ. ತರಕಾರಿಗಳು ಚೆನ್ನಾಗಿ ಬೆಂದ ಬಳಿಕ ಅದರ ನೀರನ್ನು ಜರಡಿ ಮೂಲಕ ಸೋಸಿಕೊಳ್ಳಿ. ಅದಕ್ಕೆ ಸಕ್ಕರೆ, ಉಪ್ಪು ಮತ್ತು ಕರಿ ಮೆಣಸು ಸೇರಿಸಿ. ಫ್ರೆಶ್ ಕ್ರೀಮ್ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬೀಟ್ರೂಟ್ ಸೂಪ್ ಸವಿಯಲು ಸಿದ್ಧ.

2. ಬೀಟ್ರೂಟ್ ಮತ್ತು ತೆಂಗಿನಕಾಯಿ ಸೂಪ್:

ಲೆಮೆನ್‌ಗ್ರಾಸ್, ತರಕಾರಿಗಳು ಹಾಗೂ ತೆಂಗಿನ ಹಾಲಿನಿಂದ ತಯಾರಿಸುವ ಈ ರುಚಿಕರವಾದ ಪಾಕ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು 2 ಸಣ್ಣ ಕತ್ತರಿಸಿದ ಈರುಳ್ಳಿ ಆಲಿವ್ ಎಣ್ಣೆ ತುರಿದ ಕ್ಯಾರೆಟ್ 1 ಕೊಚ್ಚಿದ ಶುಂಠಿ 1/2 ಟೀ ಸ್ಪೂನ್ ಕತ್ತರಿಸಿ ಲೆಮೆನ್ ಗ್ರಾಸ್ 1 ನಿಂಬೆ ಎಳೆಗಳು 5-7 ಕತ್ತರಿಸಿದ ಬೀಟ್‌ರೂಟ್ 1 ಬಿಳಿ ವಿನಿಗರ್/ ಅಕ್ಕಿ ವಿನಿಗರ್/ ಬಿಳಿ ವೈನ್ 1/2 ಟೀ ಸ್ಪೂನ್ ತೆಂಗಿನಕಾಯಿ ಹಾಲು 250 ಮಿಲಿ ವೆಜಿಟೇಬಲ್ ಸ್ಟಾರ್ 250 ಮಿಲಿ ಉಪ್ಪು ಮತ್ತು ಕಾಳು ಮೆಣಸಿನ ಪುಡಿ ಕ್ರೀಮ್

ಬೀಟ್ರೂಟ್ ಮತ್ತು ತೆಂಗಿನಕಾಯಿ ಸೂಪ್ ವಿಧಾನ:

ಒಂದು ಪಾತ್ರೆಯಲ್ಲಿ ಆಲಿವ್ ಎಣ್ಣೆ ಬಿಸಿ ಮಾಡಿ ಮತ್ತು ಕತ್ತರಿಸಿದ ಈರುಳ್ಳಿ, ಕ್ಯಾರೆಟ್, ಶುಂಠಿಯನ್ನು ಸೇರಿಸಿ, ಬೆರೆಸಿಕೊಳ್ಳಿ. ನಂತರ ಹಸಿ ಮೆಣಸು, ಲೆಮನ್‌ಗ್ರಾಸ್ ಹಾಗೂ ನಿಂಬೆ ಎಲೆಗಳನ್ನು ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಕತ್ತರಿಸಿಟ್ಟ ಬೀಟ್‌ರೂಟ್ ಸೇರಿಸಿ ಮತ್ತು ಎಲ್ಲಾ ಪದಾರ್ಥಳನ್ನು ಮಿಶ್ರಣ ಮಾಡಿ. ನಂತರ ಅಕ್ಕಿ ವಿನೆಗರ್ ಸೇರಿಸಿ. ಅದನ್ನು ತ್ವರಿತವಾಗಿ ಬೇಯಿಸಿದ ನಂತರ ತರಕಾರಿ ಸ್ಟಾಕ್‌ಗಳನ್ನು ಸೇರಿಸಿ. ಈಗ ಸ್ವಲ್ಪ ಉಪ್ಪು ಮತ್ತು ಕಾಳು ಮೆಣಸನ್ನು ಸೇರಿಸಿ ನಂತರ ತೆಂಗಿನ ಹಾಲನ್ನು ಸುರಿಯಿರಿ. ಸೂಪ್ ಸುಮಾರು ೧೦ ನಿಮಿಷಗಳ ಕಾಲ ಕುದಿಯಲು ಬಿಡಿ. ನಂತರ ಅದನ್ನು ಬ್ಲೆಂಡರ್‌ನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಅಲಂಕಾರಕ್ಕಾಗಿ ಕ್ರೀಮ್ ಮತ್ತು ಸೊಪ್ಪುಗಳನ್ನು ಸೇರಿಸಿ ನಂತರ ಬಿಸಿ ಬಿಸಿಯಾಗಿ ಸವಿಯಿರಿ.

3. ಬೀಟ್‌ರೂಟ್ ಚಿಕನ್ ಸೂಪ್:

ತರಕಾರಿಗಳು ಮಾತ್ರವಲ್ಲದೆ ಚಿಕನ್ ಜೊತೆಗೂ ಬೀಟ್‌ರೂಟ್ ರುಚಿಕರವಾದ ಸೂಪನ್ನು ತಯಾರಿಸಬಹುದು. ಈ ಸೂಪ್ ಕುಟುಂಬದ ಆರೋಗ್ಯವನ್ನು ಹೆಚ್ಚಿಸುವ ಆದರ್ಶ ಮಾರ್ಗವಾಗಿದೆ. ಮತ್ತು ಚಳಿಗಾಲಕ್ಕೆ ಬೇಕಾದ ಅಗತ್ಯ ರೋಗನಿರೋಧಕಗಳನ್ನು ಒದಗಿಸಿಕೊಡುತ್ತದೆ.ಚಳಿಗಾಲಕ್ಕೆ ಸೂಕ್ತವಾದ ಬೀಟ್‌ರೂಟ್ ಚಿಕನ್ ಸೂಪ್ ರೆಸಿಪಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: 250 ಗ್ರಾಂ ಚಿಕನ್ 5-7 ಬೆಳ್ಳುಳ್ಳಿ, ಲವಂಗ ಶುಂಠಿ ತುಂಡುಗಳು 2 ಮಧ್ಯಮ ಗಾತ್ರದ ಈರುಳ್ಳಿ 2 ಬೀಟ್‌ರೂಟ್ 1 ಟೀಸ್ಪೂನ್ ಕಾಳು ಮೆಣಸಿನ ಪುಡಿ 2 ಟೀ ಸ್ಪೂನ್ ಬೆಣ್ಣೆ ರುಚಿಗೆ ತಕ್ಕಷ್ಟು ಉಪ್ಪು ಕೊತ್ತಂಬರಿ ಸೊಪ್ಪು

ಇದನ್ನೂ ಓದಿ: ಕಡಿಮೆ ಖರ್ಚಿನಲ್ಲಿ ಬಾಯಿಯಲ್ಲಿ ನೀರೂರಿಸುವ ಭಕ್ಷ್ಯಗಳ ಪಟ್ಟಿ ಇಲ್ಲಿವೆ

ಬೀಟ್‌ರೂಟ್ ಚಿಕನ್ ಸೂಪ್ ತಯಾರಿಸುವ ವಿಧಾನ:

ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಚಿಕನ್, ಶುಂಠಿ, ಈರುಳ್ಳಿ, ಬೆಳ್ಳುಳ್ಳಿ, ಲವಂಗ, ಕರಿಮೆಣಸು, ಉಪ್ಪು ಹಾಗೂ 1 ಲೀ ನೀರನ್ನು ಸೇರಿಸಿ 5 ರಿಂದ 10 ನಿಮಿಷಗಳ ಕಾಲ ಕುದಿಯಲು ಬಿಡಿ. ನಂತರ ಆ ಬೇಯಿಸಿದ ಚಿಕನ್‌ನನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ. ನಂತರ ಇನ್ನೊಂದು ಬಾಣಲೆಯಲ್ಲಿ ಬೆಣ್ಣೆ ಹಾಗೂ ಉಳಿದಿರುವ ಬೆಳ್ಳುಳ್ಳಿ ಈರುಳ್ಳಿಯನ್ನು ಸೇರಿಸಿ, ಬೇಯಿಸಿಕೊಳ್ಳಿ. ನಂತರ ತುಂಡರಿಸಿ ಚಿಕನ್ ಸೇರಿಸಿಕೊಳ್ಳಿ. ಮತ್ತು ಕರಿಮೆಣಸು ಹಾಗು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಿ. ಸಣ್ಣ ತುಂಡು ಬೀಟ್‌ರೂಟ್ ಮತ್ತು ಸ್ವಲ್ಪ ನೀರನ್ನು ಸೇರಿಸಿ ಬೀಟ್‌ರೂಟ್ ಮೆತ್ತಗಾಗುವ ತನಕ ಕುದಿಯಲು ಬಿಡಿ. ಮಿಶ್ರಣ ಸಂಪೂರ್ಣ ಬೆಂದ ಬಳಿಕ ಕೊತ್ತಂಬರಿ ಸೊಪ್ಪು ಹಾಗೂ ಸ್ಪಿಂಗ್ ಆನಿಯನ್ ಹಾಕಿ ಅಲಂಕರಿಸಿ.

4. ಬೀಟ್‌ರೂಟ್ ಮತ್ತು ಗ್ರೀನ್ ಆಪಲ್ ಸೂಪ್:

ಸೇಬು ಮತ್ತು ಬೀಟ್ರೂಟ್‌ನ ತಾಜಾತನವು ಉತ್ತಮವಾಗಿದೆ. ಈ ರುಚಿಕರವಾದ ಪಾಕವಿಧಾನದ ಮಾಹಿತಿ ಇಲ್ಲಿದೆ ಬೇಕಾಗುವ ಸಾಮಗ್ರಿಗಳು: 4 ಮಧ್ಯಮ ಗಾತ್ರದ ಸಿಪ್ಪೆ ಸುಳಿದ ಬೀಟ್‌ರೂಟ್ 1 ಗ್ರೀನ್ ಆಪಲ್ 1 ಮಧ್ಯಮ ಗಾತ್ರದ ಈರುಳ್ಳಿ 1 ಚಮಚ ಆಲಿವ್ ಎಣ್ಣೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕಾಳು ಮೆಣಸಿನ ಪುಡಿ 4 ಟೀ ಸ್ಪೂನ್ ಬೆಣ್ಣೆ 2 1/4 ತರಕಾರಿಗಳು 1/4 ಫ್ರೆಶ್ ಕ್ರೀಮ್ 1 ಚಮಚ ನಿಂಬೆ ರಸ ರೆಡ್ ಚಿಲ್ಲಿ ಫ್ಲೆಕ್ಸ್

ಇದನ್ನೂ ಓದಿ: ಓವನ್ ಇಲ್ಲದೇ ಮನೆಯಲ್ಲಿಯೇ ತಯಾರಿಸಿ ಫ್ರೂಟ್ ಕೇಕ್‌

ಬೀಟ್‌ರೂಟ್ ಮತ್ತು ಗ್ರೀನ್ ಆಪಲ್ ಸೂಪ್ ವಿಧಾನ:

ನಾನ್‌ಸ್ಟಿಕ್ ಪಾತ್ರೆಯಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಕತ್ತರಿಸಿದ ಈರುಳ್ಳಿ ಸೇರಿಸಿ 1 ನಿಮಿಷಗಳ ಕಾಲ ಹುರಿಯಿರಿ. ನಂತರ ರುಬ್ಬಿದ ಮೆಣಸು ಮತ್ತು ಬೆಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ತರಕಾರಿಗಳನ್ನು ಸೇರಿಸಿ, ಬೀಟ್‌ರೂಟ್. ಮೃದುವಾಗುವವರೆಗೆ ಬೇಯಿಸಿ, ಶಾಖವನ್ನು ಆಫ್ ಮಾಡಿ ಮತ್ತು ಒಣಗಿದ ಗಿಡಮೂಲಿಕೆಗಳ ಮಿಶದರಣವನ್ನು ಸೇರಿಸಿ. ಸಿದ್ಧ ಪಡಿಸಿದ ಬೀಟ್‌ರೂಟ್ ಮಿಶ್ರಣವನ್ನು ತಾಜಾ ಕ್ರೀಮ್‌ನೊಂದಿಗೆ ಬೆರೆಸಿ ನಯವಾಗಿ ಪ್ಯೂರಿಯನ್ನು ತಯಾರಿಸಿ. ಅದೇ ನಾನ್‌ಸ್ಟಿಕ್ ಪಾತ್ರೆಗೆ ಪ್ಯೂರಿಯನ್ನು ಸೋಸಿ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲಾ ತಯಾರಾದ ಬಳಿಕ ಗಾಜಿನ ಲೋಟಕ್ಕೆ ಈ ಸೂಪನ್ನು ವರ್ಗಾಯಿಸಿ ಅದಕ್ಕೆ ಚಿಲ್ಲಿ ಫ್ಲೆಕ್ಸ್ ಸಿಂಪಡಿಸಿದರೆ ಸೂಪ್ ರೆಡಿ.

5. ಬೀಟ್‌ರೂಟ್ ಮತ್ತು ಕ್ಯಾರೆಟ್ ಸೂಪ್:

ಬೇಯಿಸಿದ ಬೀಟ್‌ರೂಟ್, ಕ್ಯಾರೆಟ್ ಟೊಮೆಟೊಗಳನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಅದನ್ನು ಒಂದು ಪಾತ್ರೆಗೆ ಸೋಸಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಮಸಾಲೆಗಳನ್ನು ಸೇರಿಸಿದರೆ ಸುಲಭವಾಗಿ ತಯಾರಿಸಬಹುದಾದ ಕ್ಯಾರೆಟ್ ಬೀಟ್‌ರೂಟ್ ಸೂಪ್ ಸವಿಯಲು ಸಿದ್ಧ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 5:47 pm, Tue, 27 December 22