ಮೇಕೆ ಮಾಂಸಕ್ಕಿಂತ ರಕ್ತ ತಿನ್ನುವುದು ಉತ್ತಮ, ಯಾಕೆ? ಅತಿಯಾದರೆ ಸಮಸ್ಯೆ ಖಂಡಿತ

ಮಾಂಸ ತಿನ್ನುವುದು ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದು, ಆದರೆ ಅದನ್ನು ಮಿತಿಯಲ್ಲಿ ತಿನ್ನುವುದು ಉತ್ತಮ ಅತಿಯಾದರೆ ವಿಷವಾಗುವುದು ಖಂಡಿತ, ಪ್ರಾಣಿಗಳ ಮಾಂಸಕ್ಕಿಂತ ಅವುಗಳ ರಕ್ತ, ಯಕೃತ್ತು, ಕರುಳು, ತಲೆ ಮತ್ತು ಮೆದುಳು ಉತ್ತಮ ಎನ್ನುವುದು ತಜ್ಞರ ವಾದ. ಅದರಲ್ಲೂ ಮೇಕೆಯ ಮಾಂಸವು ಉತ್ತಮ ಹಾಗೂ ಅದರ ರಕ್ತವು ಇನ್ನು ಉತ್ತಮ ಎಂದು ಹೇಳಲಾಗಿದೆ. ಮೇಕೆಯ ರಕ್ತ ದೇಹದ ಮೇಲೆ ಹೇಗೆಲ್ಲ ಪರಿಣಾಮವನ್ನು ಉಂಟು ಮಾಡುತ್ತದೆ. ಆರೋಗ್ಯಕ್ಕೆ ಇದು ಯಾಕೆ ಒಳ್ಳೆಯದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಮೇಕೆ ಮಾಂಸಕ್ಕಿಂತ ರಕ್ತ ತಿನ್ನುವುದು ಉತ್ತಮ, ಯಾಕೆ? ಅತಿಯಾದರೆ ಸಮಸ್ಯೆ ಖಂಡಿತ
ಸಾಂದರ್ಭಿಕ ಚಿತ್ರ
Image Credit source: pinterest
Updated By: ಅಕ್ಷಯ್​ ಪಲ್ಲಮಜಲು​​

Updated on: Apr 28, 2025 | 5:20 PM

ಮನುಷ್ಯನ ಆರೋಗ್ಯಕ್ಕೆ (health benefits) ಸಸ್ಯಹಾರಿ ಮಾತ್ರವಲ್ಲ ಮಾಂಸ ಕೂಡ ಒಳ್ಳೆಯದು, ಮಾಂಸ ತಿನ್ನುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಉಂಟಾಗುವುದಿಲ್ಲ, ಆದರೆ ಅದು ಅತಿಯಾಗಬಾರದು. ಮಾಂಸ ತಿನ್ನುವುದು ರಕ್ತದ ಶುದ್ಧೀಕರಣಕ್ಕೆ ಒಳ್ಳೆಯದು. ಅದರಲ್ಲೂ ಈ ಕುರಿ ಮೇಕೆ, ಆಡುಗಳ ಮಾಂಸ ಒಳ್ಳೆಯದು. ಇದಕ್ಕಿಂದಲ್ಲೂ ಅವುಗಳು ರಕ್ತ, ಯಕೃತ್ತು, ಕರುಳು, ತಲೆ ಮತ್ತು ಮೆದುಳು ಬೇಯಿಸಿ ತಿಂದರೆ ಆರೋಗ್ಯದ ಮೇಲೆ ಸಕಾರಾತ್ಮಕ ಬದಲಾವಣೆಗಳನ್ನು ತರುವುದು. ಅವುಗಳ ಅಂಗಗಳಲ್ಲಿ ವಿಶೇಷವಾದ ಆರೋಗ್ಯ ಗುಣಗಳು ಇರುತ್ತದೆ. ಮನುಷ್ಯನ ಕಣ್ಣಿನ ಚೂರುತನಕ್ಕೆ, ಮೆದುಳಿಗೆ ಹೀಗೆ ಹಲವು ಪ್ರಯೋಜಗಳು ಇದೆ. ಇದರಲ್ಲೂ ಮೇಕೆ ರಕ್ತ ತಿನ್ನುವುದು ಒಳ್ಳೆಯದ? ಮೇಕೆ ರಕ್ತವು (Goat blood benefits) ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ.

ಮಟನ್​​​ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು, ಇದರ ಬಗ್ಗೆ ವೈದ್ಯರು ಕೂಡ ಸಲಹೆ ನೀಡುತ್ತಾರೆ. ಆದರೆ ಕೆಲವೊಂದು ಆರೋಗ್ಯ ಸಮಸ್ಯೆ ಇರುವವರು ಮಟನ್​​​ ತಿನ್ನಬಾರದು ಎಂದು ಹೇಳಲಾಗುತ್ತದೆ. ಆದರೆ ಮಟನ್​​​ ಪೋಷಕಾಂಶದಿಂದ ಕೂಡಿದೆ. ಮಟನ್ ವಿಟಮಿನ್ ಬಿ1, ಬಿ2, ಬಿ3, ಬಿ6 ಮತ್ತು ಬಿ12 ಅನ್ನು ಹೊಂದಿರುತ್ತದೆ. ಇದರಲ್ಲಿ ವಿಟಮಿನ್ ಇ, ವಿಟಮಿನ್ ಕೆ, ನೈಸರ್ಗಿಕ ಕೊಬ್ಬುಗಳು, ಜೊತೆಗೆ ಕೊಲೆಸ್ಟ್ರಾಲ್, ಒಮೆಗಾ-3 ಕೊಬ್ಬಿನಾಮ್ಲಗಳು, ಒಮೆಗಾ-6 ಕೊಬ್ಬಿನಾಮ್ಲಗಳು, ಕ್ಯಾಲ್ಸಿಯಂ, ಸತು, ರಂಜಕ, ತಾಮ್ರ, ಸೆಲೆನಿಯಮ್, ಅಮೈನೋ ಆಮ್ಲಗಳು, ಪ್ರೋಟೀನ್ಗಳು ಮತ್ತು ಪೋಷಕಾಂಶಗಳಿವೆ.

ಇದನ್ನೂ ಓದಿ: 25, 45, 60 ನಿಮಿಷ ಈ ಕ್ರಮ ಪಾಲಿಸಿ, ದೈಹಿಕ, ಮಾನಸಿಕ ಆರೋಗ್ಯದಲ್ಲಿ ಬದಲಾವಣೆ ಖಂಡಿತ

ಇದನ್ನೂ ಓದಿ
ದೇಶದ ಮೇಲೆ ದಾಳಿ ಮಾಡಿದ ದುಷ್ಟರಿಗೆ ಹೀಗೆ ಉತ್ತರ ನೀಡಿ ಎನ್ನುತ್ತಾರೆ ಚಾಣಕ್ಯ
ಸಾವಿನ ನಂತರವೂ ಕೂದಲು ಮತ್ತು ಉಗುರುಗಳು ಬೆಳೆಯುತ್ತವೆ
ಕುಡಿಯೋ ನೀರನ್ನು ಹೆಚ್ಚು ಹೊತ್ತು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡಬಾರದಂತೆ
ಸಿಂಧೂ ನದಿಯ ಹುಟ್ಟು ಎಲ್ಲಿ? ಇದರ ಉದ್ದ ಎಷ್ಟು ಗೊತ್ತೇ?

ಇಂತಹ ಮೇಕೆಯ ರಕ್ತದಿಂದ ಮಾಡಿದ ಖಾದ್ಯಗಳನ್ನು ತಿಂದರೆ ಇನ್ನು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದರ ರಕ್ತದಲ್ಲಿ ಹಿಮೋಗ್ಲೋಬಿನ್, ಪ್ರೋಟೀನ್, ಕಬ್ಬಿಣ, ವಿಟಮಿನ್ ಬಿ12 ಮತ್ತು ಅಮೈನೋ ಆಮ್ಲಗಳಿವೆ. ಮೇಕೆಯ ರಕ್ತವು ಪೋಷಕಾಂಶಗಳಿಂದ ತುಂಬಿದ್ದರೂ, ಸೋಂಕುಗಳಿಂದ ಮುಕ್ತಿಯನ್ನು ನೀಡುತ್ತದೆ. ಇದರ ರಕ್ತವನ್ನು ಬೇಯಿಸಿ ಅಥವಾ ಮಸಾಲೆಯನ್ನು ಉರಿದು ಮಾಡಿದ್ರೆ ಒಳ್ಳೆಯದು. ಆದರೆ ಮೇಕೆಯ ರಕ್ತದಲ್ಲಿ ಪ್ಯೂರಿನ್ ಅಧಿಕವಾಗಿರುತ್ತದೆ. ಆ ಕಾರಣದಿಂದ ಕರುಳಿನ ಸಮಸ್ಯೆ ಇರುವವರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ರಕ್ತದಲ್ಲಿ ಕಬ್ಬಿಣದ ಅಂಶ ಹೆಚ್ಚಿರುವುದರಿಂದ, ಅತಿಯಾಗಿ ತಿನ್ನುವುದರಿಂದ ದೇಹದಲ್ಲಿ ಬಹಳಷ್ಟು ಸಮಸ್ಯೆಗಳು ಉಂಟಾಗಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ