AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti : ಚಾಣಕ್ಯ ಹೇಳುವಂತೆ ಪಹಲ್ಗಾಮ್ ದಾಳಿಯಂತೆ ದೇಶದ ಮೇಲೆ ದಾಳಿ ನಡೆದಾಗ ನಾಗರಿಕನು ಈ ಕೆಲಸ ಮೊದ್ಲು ಮಾಡಬೇಕಂತೆ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ದಾಳಿಯ ಬಗ್ಗೆಯೇ ಎಲ್ಲರಿಗೂ ತಿಳಿದೇ ಇದೆ. ಅದೆಷ್ಟೋ ಮುಗ್ಧ ಜೀವಗಳು ಈ ದಾಳಿಗೆ ಬಲಿಯಾಗಿದೆ. ಆದರೆ ಆಚಾರ್ಯ ಚಾಣಕ್ಯರು ಇಂತಹ ದಾಳಿಗಳು ನಡೆದಾಗ ಏನು ಮಾಡಬೇಕು ಎನ್ನುವ ಬಗ್ಗೆ ಈ ಮೊದಲೇ ತಮ್ಮ ಚಾಣಕ್ಯ ನೀತಿಯಲ್ಲಿ ತಿಳಿಸಿದ್ದಾರೆ. ಹಾಗಾದ್ರೆ ಚಾಣಕ್ಯರು ಹೇಳುವ ಯುದ್ಧಗಳು, ದಾಳಿ ಹಾಗೂ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಈ ಕೆಲಸಗಳನ್ನು ತಪ್ಪದೇ ಮಾಡಬೇಕು ಎಂದಿದ್ದಾರೆ. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Chanakya Niti : ಚಾಣಕ್ಯ ಹೇಳುವಂತೆ ಪಹಲ್ಗಾಮ್ ದಾಳಿಯಂತೆ ದೇಶದ ಮೇಲೆ ದಾಳಿ ನಡೆದಾಗ ನಾಗರಿಕನು ಈ ಕೆಲಸ ಮೊದ್ಲು ಮಾಡಬೇಕಂತೆ
Chanakya NitiImage Credit source: Wikimedia commns
ಸಾಯಿನಂದಾ
|

Updated on:Apr 27, 2025 | 6:00 PM

Share

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಜಮ್ಮು ಮತ್ತು ಕಾಶ್ಮೀರ (jammu kashmir) ದ ಪಹಲ್ಗಾಮ್‌ (pahalgam) ದಲ್ಲಿ ಒಟ್ಟು 26 ಜನರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಏಕಾಏಕಿ ಉಗ್ರರು ನಡೆಸಿದ ದಾಳಿಯೂ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಈಗಾಗಲೇ ದೇಶದಾದ್ಯಂತ ಉಗ್ರರ ಈ ಕೃತ್ಯಕ್ಕೆ ಭಾರೀ ಆಕ್ರೋಶಗಳು ವ್ಯಕ್ತವಾಗಿದೆ. ಇತ್ತ ಆಚಾರ್ಯ ಚಾಣಕ್ಯ (acharya chanakya) ರು ತಮ್ಮ ನೀತಿಯಲ್ಲಿ ಈ ದಾಳಿಗೆ ಸಂಬಂಧ ಪಟ್ಟ ಕೆಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಶತ್ರು ರಾಷ್ಟ್ರಗಳು ಏಕಾಏಕಿ ದಾಳಿ ಅಥವಾ ಯುದ್ಧಗಳನ್ನು ಸಾರಬಹುದು. ಅದಲ್ಲದೇ ದೇಶದಲ್ಲಿ ತುರ್ತುಪರಿಸ್ಥಿತಿಗಳು ಏರ್ಪಡಬಹುದು. ಈ ಸಮಯದಲ್ಲಿ ನಾಗರಿಕರಾಗಿ ಮೊದಲು ಏನು ಮಾಡಬೇಕು ಎನ್ನುವುದನ್ನು ನೀತಿ ಯಲ್ಲಿ ತಿಳಿಸಿದ್ದಾರೆ .

ಜೀವನವೆಂದ ಮೇಲೆ ಕೆಟ್ಟ ಹಾಗೂ ಒಳ್ಳೆಯ ಘಟನೆಗಳು ಸಂಭವಿಸುತ್ತದೆ. ಅದೇ ರೀತಿ ದೇಶದಲ್ಲಿ ಸಹಜವಾಗಿ ಕೆಲವೊಮ್ಮೆ ಅಹಿತಕರ ಘಟನೆಗಳು ಹಾಗೂ ಶತ್ರು ರಾಷ್ಟ್ರಗಳು ದಾಳಿ ನಡೆಸಬಹುದು. ದೇಶದಲ್ಲಿ ಹಿಂಸೆ, ದಾಳಿಯ ವಾತಾವರಣವು ಏರ್ಪಟ್ಟಾಗ ಒಬ್ಬ ನಾಗರಿಕನಿಗೆ ಕೆಲವು ಕರ್ತವ್ಯಗಳಿರುತ್ತದೆ. ಅದಲ್ಲದೇ ಭಯೋತ್ಪಾದಕತೆಯಲ್ಲೇ ಮುಳುಗಿರುವ ದುಷ್ಟ ಜನರನ್ನು ಎದುರಿಸುವುದು ಕೂಡ ಬಹಳ ಅಗತ್ಯವಾಗಿರುತ್ತದೆ.

ದುಷ್ಟ ಜನರು ಯಾರಿಗೂ ಹಾಗೂ ಯಾವತ್ತಿಗೂ ಒಳ್ಳೆಯದನ್ನು ಬಯಸುವುದಿಲ್ಲ. ಆ ವ್ಯಕ್ತಿಗಳು ಮುಳ್ಳಿಗೆ ಸಮಾನ. ಈ ಮುಳ್ಳುಗಳು ಹೇಗೆ ಪಾದವನ್ನು ಚುಚ್ಚುತ್ತದೆಯೋ ಅದೇ ರೀತಿ ಕೆಟ್ಟ ಜನರು ಭಯೋತ್ಪಾದಕರು ದೇಶಕ್ಕೆ ಹಾನಿಕಾರಕ ವ್ಯಕ್ತಿಗಳಾಗಿರುತ್ತಾರೆ. ಹೀಗಾಗಿ ಚಾಣಕ್ಯನು ದುಷ್ಟ ಜನರನ್ನು ಹಿಂದೆ ಮುಂದೇ ನೋಡದೆ ನಿರ್ನಾಣ ಮಾಡಿಬಿಡಬೇಕು. ಆ ವ್ಯಕ್ತಿಗಳಿಂದ ದೂರವಿದ್ದು, ಬುಡಸಮೇತವಾಗಿ ಆ ವ್ಯಕ್ತಿಗಳನ್ನು ಕಿತ್ತು ಹಾಕಬೇಕು ಎಂದು ತಮ್ಮ ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ
Image
ಕುಡಿಯೋ ನೀರನ್ನು ಹೆಚ್ಚು ಹೊತ್ತು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡಬಾರದಂತೆ
Image
ಸಿಂಧೂ ನದಿಯ ಹುಟ್ಟು ಎಲ್ಲಿ? ಇದರ ಉದ್ದ ಎಷ್ಟು ಗೊತ್ತೇ?
Image
ಮನುಷ್ಯರು ಮಾತ್ರವಲ್ಲ ಹಾವುಗಳು ಹನಿಮೂನ್​​​​ಗೆ ಹೋಗುತ್ತೆ!
Image
ಬಾಯಿ ತೆರೆದು ಮಲಗುತ್ತೀರಾ? ಇದು ಅಪಾಯದ ಸೂಚನೆ

ಇದನ್ನೂ ಓದಿ : World Day of Safety and Health at Work 2025: ಕೆಲಸದ ಸ್ಥಳದಲ್ಲಿ ಸುರಕ್ಷತೆ ಹಾಗೂ ಆರೋಗ್ಯಕ್ಕಾಗಿ ವಿಶ್ವ ದಿನ, ಏನಿದರ ಮಹತ್ವ? ಇಲ್ಲಿದೆ ಮಾಹಿತಿ

ಒಳ್ಳೆಯದು ಮಾಡುವವರಿಗೆ ಒಳ್ಳೆಯದನ್ನೇ ಬಯಸುವ ಗುಣವಿರಬೇಕು. ಆದರೆ ಬುದ್ಧಿವಂತ ಹಾಗೂ ಕುತಂತ್ರಿ ವ್ಯಕ್ತಿಗಳ ಕುತಂತ್ರ, ಒಳಸಂಚನ್ನು ಮೊದಲೇ ತಿಳಿದುಕೊಳ್ಳುವ ಜ್ಞಾನವೂ ನಮ್ಮಲ್ಲಿರಬೇಕು. ಹಿಂಸಾತ್ಮಕ ಕೃತ್ಯದಲ್ಲಿ ತೊಡಗಿಕೊಳ್ಳುವ ವ್ಯಕ್ತಿಗಳ ವಿರುದ್ಧ ಸೇಡು ತೀರಿಸಿಕೊಳ್ಳುವುದರಲ್ಲಿ ಹಿಂದೆ ಮುಂದೆ ಯೋಚಿಸಬಾರದು. ಇಂತಹ ಜನರಿಂದ ನಮಗೇ ಯಾವತ್ತಿಗೂ ತೊಂದರೆಯೂ ತಪ್ಪಿದ್ದಲ್ಲ. ಆ ವ್ಯಕ್ತಿಗಳಿಗೆ ನೀಡುವ ಉತ್ತರವು ಆ ವ್ಯಕ್ತಿಗಳ ಎದೆಯಲ್ಲಿ ನಡುಕ ಹುಟ್ಟಿಸಬೇಕು ಎಂದು ಚಾಣಕ್ಯ ತಿಳಿಸಿದ್ದಾರೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:28 pm, Sun, 27 April 25