Women Safety Tips : ಮಹಿಳೆಯರೇ, ಕ್ಯಾಬ್ ನಲ್ಲಿ ಓಡಾಡುವಾಗ ನಿಮ್ಮ ಸುರಕ್ಷತೆಯನ್ನು ಹೇಗೆ ಮಾಡಿಕೊಳ್ಳಬಹುದು? ಇಲ್ಲಿದೆ ಸಲಹೆಗಳು
ಬೆಂಗಳೂರಿನಂತಹ ದೊಡ್ಡ ಪಟ್ಟಣಗಳಲ್ಲಿ ಹೆಣ್ಣು ಮಕ್ಕಳು ಹೆಚ್ಚಾಗಿ ಎಲ್ಲಿಗಾದರೂ ಹೋಗಬೇಕೆಂದರೆ ಈ ಕ್ಯಾಬ್ ಗಳನ್ನೇ ಹೆಚ್ಚು ಅವಲಂಬಿಸಿಕೊಂಡಿರುತ್ತಾರೆ. ನೈಟ್ ಪಾರ್ಟಿ, ಮದುವೆ ಸಮಾರಂಭ ಹಾಗೂ ಕೆಲವು ವೈಯುಕ್ತಿಕ ಕಾರಣದಿಂದಾಗಿ ಎಲ್ಲಿಗಾದರೂ ಹೋಗಲು ಕ್ಯಾಬ್ ಬುಕ್ ಮಾಡುತ್ತಾರೆ. ಒಂದು ವೇಳೆ ನೀವೇನಾದರೂ ಒಂಟಿಯಾಗಿದ್ದು ಕ್ಯಾಬ್ ಗಳನ್ನು ಬುಕ್ ಮಾಡುತ್ತಿದ್ದರೇ ಈ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯ.
ಈಗಿನ ಕಾಲದಲ್ಲಿ ಯಾರನ್ನು ನಂಬುವ ಆಗಿಲ್ಲ. ಹೀಗಾಗಿ ಹೆಣ್ಣು ಮಕ್ಕಳಿಗೆ ರಕ್ಷಣೆ ಅನ್ನೋದೇ ಇಲ್ಲ. ರಾತ್ರಿ ಬಿಡಿ ಹಗಲು ಹೋಗುವುದೇ ಕಷ್ಟ ಎನ್ನುವಂತಾಗಿದೆ. ಆದರೆ ದೊಡ್ಡ ದೊಡ್ಡ ನಗರಗಳಲ್ಲಿ ಮಹಿಳೆಯರು ಸಾಮಾನ್ಯವಾಗಿ ಎಲ್ಲೋ ಹೋಗಲು ಟ್ಯಾಕ್ಸಿ ಅಥವಾ ಕ್ಯಾಬ್‌ಗಳನ್ನು ಬುಕ್ ಮಾಡುತ್ತಾರೆ. ಕ್ಯಾಬ್-ಟ್ಯಾಕ್ಸಿ ಆನ್‌ಲೈನ್ ಬುಕಿಂಗ್ ಕಂಪನಿಗಳು ತಮ್ಮ ಕಡೆಯಿಂದ ಅನೇಕ ರೀತಿಯ ಸುರಕ್ಷತಾ ಸಲಹೆಗಳನ್ನು ನೀಡುತ್ತಿದ್ದರೂ, ನಮ್ಮ ಸುತ್ತಮುತ್ತಲಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದಾಗ ನಮ್ಮ ಸುರಕ್ಷತೆಯಲ್ಲಿ ನಾವಿರುವುದು ಅಗತ್ಯವಾಗಿದೆ. ಮಹಿಳೆಯರು ಆಟೋ ಅಥವಾ ಕ್ಯಾಬ್ ಬುಕ್ ಮಾಡುವಾಗ ಸುರಕ್ಷಿತ ಪ್ರಯಾಣಕ್ಕಾಗಿ ಈ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅವಶ್ಯಕ.
- ಚಾಲಕನಿಂದ ಫೋಟೋ ಐಡಿ ಪುರಾವೆಯನ್ನು ಕೇಳಿ : ಕ್ಯಾಬ್ ಹತ್ತುವ ಮೊದಲು, ನೀವು ಚಾಲಕನ ಡ್ರೈವಿಂಗ್ ಲೈಸೆನ್ಸ್, ಕಂಪನಿ ಐಡಿ ಅಥವಾ ಇನ್ನಾವುದೇ ಐಡಿ ಪ್ರೂಫ್ ಅನ್ನು ಪರಿಶೀಲಿಸಬೇಕು. ಈ ವೇಳೆ ಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೀವು ದಾಖಲೆಗಳ ಫೋಟೋ ತೆಗೆದುಕೊಂಡು ನಿಮ್ಮ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು.
- ನಂಬರ್ ಪ್ಲೇಟ್‌ನ ಫೋಟೋ ತೆಗೆದುಕೊಳ್ಳಿ : ಕ್ಯಾಬ್ ಹತ್ತುವ ಮೊದಲು ಕಾರಿನ ಫೋಟೋ ತೆಗೆದು ನಿಮ್ಮ ಸ್ನೇಹಿತರಿಗೆ ಕಳುಹಿಸಿ. ಅಲ್ಲದೆ, ವಾಹನದ ನಂಬರ್ ಪ್ಲೇಟ್‌ನ ಫೋಟೋ ತೆಗೆದುಕೊಳ್ಳುವುದನ್ನು ಮರೆಯದಿರಿ. ನೀವು ಮಾಹಿತಿಯ ಕಳುಹಿಸಿದ್ದೀರಿ ಎಂದು ಸ್ನೇಹಿತರಿಗೆ ತಿಳಿಸುವಾಗ ಡ್ರೈವರ್ ಗೆ ಗೊತ್ತಾದರೆ ಯಾವುದೇ ಸಮಸ್ಯೆಯಿಲ್ಲ.
- ಬುಕಿಂಗ್ ಮಾಡುವಾಗ ವಿವರಗಳ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ : ನೀವು ಕ್ಯಾಬ್ ಅನ್ನು ಬುಕ್ ಮಾಡಿದಾಗ, ವಾಹನದ ಬಣ್ಣ ಮತ್ತು ಸಂಖ್ಯೆ, ಚಾಲಕನ ಹೆಸರು ಮತ್ತು ಅವರ ಸಂಪರ್ಕ ಸಂಖ್ಯೆ ಇತ್ಯಾದಿಗಳನ್ನು ನಿಮ್ಮ ಫೋನ್ ಸ್ಕ್ರೀನ್ ಮೇಲೆ ಬರುತ್ತದೆ. ಇದನ್ನು ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡು, ಅವುಗಳನ್ನು ನಿಮ್ಮ ಕುಟುಂಬ ಮತ್ತು ಆಪ್ತ ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಕು, ಇದರಿಂದ ನೀವು ಯಾವ ಕ್ಯಾಬ್‌ನಲ್ಲಿದ್ದೀರಿ ಮತ್ತು ಡ್ರೈವರ್ ಯಾರು ಇತ್ಯಾದಿಗಳ ಬಗ್ಗೆ ನಿಮ್ಮ ಆತ್ಮೀಯರಿಗೂ ತಿಳಿಯುತ್ತದೆ.
- ಕ್ಯಾಬ್‌ಗೆ ಹತ್ತುವ ಮುನ್ನ ನಿಮ್ಮ ಸ್ಪೀಡ್ ಡಯಲ್ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಿ : ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಫೋನ್ ಸಂಖ್ಯೆಗಳನ್ನು ಸ್ಪೀಡ್ ಡಯಲ್ ಪಟ್ಟಿಯಲ್ಲಿ ಇರಿಸುವುದು ಮುಖ್ಯ. ಅಪಾಯದ ಸಮಯದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರನ್ನು ಕೂಡಲೇ ಸಂಪರ್ಕಿಸಬಹುದು
- ನಿಮ್ಮ ಮೊಬೈಲ್ ನಲ್ಲಿ ಚಾರ್ಜ್ ಇರಲಿ : ಕ್ಯಾಬ್ ಹತ್ತುವ ಮೊದಲು ಅಥವಾ ಎಲ್ಲಿಗಾದರೂ ಹೋಗುವ ಮೊದಲು ನಿಮ್ಮ ಮೊಬೈಲ್ ಅನ್ನು ಚಾರ್ಜ್ ಮಾಡಲು ಮರೆಯದಿರಿ. ಅದಲ್ಲದೇ ನಿಮ್ಮೊಂದಿಗೆ ಪವರ್ ಬ್ಯಾಂಕ್ ಕೂಡ ಇರಲಿ. ಕರೆ ಮತ್ತು ಡೇಟಾ ಪ್ಯಾಕ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ.
- ನಿಮ್ಮ ಫೋನ್‌ನ ಜಿಪಿಎಸ್ ಅನ್ನು ಆನ್ ಮಾಡಿಟ್ಟುಕೊಳ್ಳಿ : ನೀವು ತಲುಪುವ ಸ್ಥಳದವರೆಗೂ ನಿಮ್ಮ ಮೊಬೈಲ್‌ನಲ್ಲಿ ಜಿಪಿಎಸ್ ಅನ್ನು ಆನ್ ಇರಿಸಿಕೊಳ್ಳಿ. ಇದು ಅಪಾಯದ ಸನ್ನಿವೇಶಗಳಲ್ಲಿ ನಿಮ್ಮನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಅನೇಕ ಬಾರಿ ಕ್ಯಾಬ್ ಚಾಲಕರು ಶಾರ್ಟ್‌ಕಟ್‌ಗಳನ್ನು ರಸ್ತೆಯಲ್ಲಿ ವಾಹನಗಳನ್ನು ತೆಗೆದುಕೊಂಡು ಹೋಗುವುದೆಯೇ ಎಂದು ನಿಮ್ಮ ಬಳಿ ಕೇಳಬಹುದು. ಆದರೆ ಶಾರ್ಟ್‌ಕಟ್ ಗಳಿಗೆ ಎಂದಿಗೂ ಒಪ್ಪಿಗೆ ಸೂಚಿಸಬೇಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:04 pm, Fri, 13 September 24