International Womens Day 2024: ಪುರುಷರೇ, ಮಹಿಳೆಯರ ಈ ರಹಸ್ಯಗಳು ನಿಮಗೆ ತಿಳಿದಿರಲೇಬೇಕು!
ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಕಂಡುಹಿಡಿಯಬಹುದು, ಆದರೆ ಹೆಣ್ಣಿನ ಮನಸ್ಸಿನಲ್ಲಿ ಏನಿದೆ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟಕರ ಎಂದು ಹೇಳುವುದನ್ನು ಕೇಳಿರಬಹುದು. ಹೆಣ್ಣು ಮಕ್ಕಳು ಕೆಲವು ವಿಚಾರಗಳನ್ನು ಯಾರೊಂದಿಗೂ ಬಾಯಿ ಬಿಡುವುದೇ ಇಲ್ಲ. ಹೀಗಾಗಿ ಪತಿಯಾದವನು ಎಲ್ಲವನ್ನು ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು. ಆದರೆ ಹೆಣ್ಣು ಗಂಡಿಗೆ ಗೊತ್ತಿಲ್ಲದೇ ಕೆಲವು ರಹಸ್ಯಗಳನ್ನು ಕಾಪಾಡಿಕೊಳ್ಳುತ್ತಾಳೆ. ಕೆಲವು ವಿಚಾರಗಳಲ್ಲಿ ಖುಷಿ ಪಡುತ್ತಾಳೆ. ಆದರೆ ಈ ಬಗ್ಗೆ ತನ್ನ ಎಲ್ಲಿಯೂ ಬಾಯಿ ಬಿಡುವುದೇ ಇಲ್ಲ. ಹೀಗಾಗಿ ಪುರುಷರು ಮಹಿಳೆಯರು ಕಾಪಾಡಿಕೊಳ್ಳುವ ಕೆಲ ಗೌಪ್ಯ ವಿಚಾರಗಳನ್ನು ತಿಳಿದಿರಲೇಬೇಕು.
ಹೆಣ್ಣಿನ ಮನಸ್ಸು ತುಂಬಾ ಚಂಚಲ, ಹೀಗಾಗಿ ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ. ಈಗ ತಾನೇ ನಗು ನಗುತ್ತಾ ಚೆನ್ನಾಗಿ ಮಾತನಾಡುತ್ತಿದ್ದ ನಿಮ್ಮ ಮನೆಯಾಕೆಯು ಏಕಾಏಕಿ ಕೋಪ ಮಾಡಿಕೊಳ್ಳಬಹುದು. ಅಯ್ಯೋ ದೇವರೇ ಈಗ ಸರಿ ಇದ್ಲು ಅಲ್ವಾ, ಹೀಗೆನಾಯಿತು ಎನ್ನುವ ಗೊಂದಲದ ನಡುವೆ ಆ ಸಂದರ್ಭವನ್ನು ನಿಭಾಯಿಸುತ್ತೀರಿ. ಇಂತಹ ಸಾಕಷ್ಟು ಸನ್ನಿವೇಶಗಳನ್ನು ನೀವು ಎದುರಿಸಿದ್ದೀರಿ. ಹೌದು ಈ ಹೆಣ್ಣಿನ ಮನಸ್ಸಿನ ನೂರಾರು ರಹಸ್ಯಗಳಿದ್ದರೂ ತನ್ನ ಸಂಗಾತಿಯ ಬಳಿಯು ಹೇಳಿಕೊಳ್ಳುವುದಿಲ್ಲ. ತನ್ನ ಸಂಗಾತಿಯು ಈ ಎಲ್ಲವನ್ನು ಅರ್ಥಮಾಡಿಕೊಳ್ಳಲಿ ಎಂದು ಬಯಸುತ್ತಾಳೆ. ಆದರೆ ಕೆಲವೊಮ್ಮೆ ಪುರುಷನು ಹೀಗಾಗಿ ಕೋಪಕ್ಕೆ ಗುರಿಯಾಗುವುದು ಹೆಚ್ಚು.
- ಹಳೆಯ ಸಂಬಂಧಗಳ ಬಗ್ಗೆ ಎಂದಿಗೂ ಬಾಯಿ ಬಿಡುವುದಿಲ್ಲ : ಹೆಣ್ಣು ಮಕ್ಕಳು ಮದುವೆಗೆ ಮುಂಚಿತವಾಗಿ ತಾವೇನಾದರೂ ಪ್ರೀತಿಯಲ್ಲಿ ಬಿದ್ದಿದ್ದರೆ, ಮದುವೆಯ ಬಗ್ಗೆ ತನ್ನ ಪತಿಯಾದವನಿಗೆ ಹೇಳಿಕೊಳ್ಳುವುದಿಲ್ಲ. ಸಂಸಾರದಲ್ಲಿ ಬಿರುಕು ಮೂಡಬಹುದು ಎನ್ನುವ ಭಯವು ಆಕೆಯನ್ನು ಕಾಡುತ್ತದೆ. ಹಳೆಯ ನೆನಪುಗಳನ್ನು ನೆನೆದು ಒಳಗೊಳಗೆ ಸಂತೋಷಪಟ್ಟುಕೊಳ್ಳುತ್ತಾಳೆ.
- ಮಹಿಳೆಯರಿಗೆ ಕಾಳಜಿ ತೋರುವ ವ್ಯಕ್ತಿಗಳೆಂದರೆ ಇಷ್ಟ : ನೋವಿನ ಹಾಗೂ ದುಃಖದ ಸಂದರ್ಭದಲ್ಲಿ ಕಾಳಜಿ ತೋರುವ ಸಾಂತ್ವನ ತೋರುವ ವ್ಯಕ್ತಿಗಳನ್ನು ಮಹಿಳೆಯರು ಇಷ್ಟ ಪಡುತ್ತಾರೆ. ಸಂಗಾತಿಯಲ್ಲಿ ಇಂತಹ ಗುಣವಿದ್ದರೆ ಆಕೆಯು ಪತಿಯನ್ನು ಕಾಳಜಿ ವಹಿಸಿ ನೋಡಿಕೊಳ್ಳುತ್ತಾಳೆ. ಆದರೆ ಈ ಬಗ್ಗೆ ಹೆಣ್ಣು ಎಲ್ಲಿಯೂ ಹಾಗೂ ಯಾರ ಬಳಿಯೂ ಹೇಳಿಕೊಳ್ಳುವುದೇ ಇಲ್ಲ.
- ತನ್ನನ್ನು ಹೊಗಳುವ ವ್ಯಕ್ತಿಗಳ ಜೊತೆಗೆ ಹೆಚ್ಚು ಇರುತ್ತಾಳೆ : ಮಹಿಳೆಯರು ಅದು ಯಾವುದೇ ಸಂದರ್ಭಗಳಿರಲಿ, ತನ್ನ ಬಗ್ಗೆ ಹೊಗಳಿ ಮಾತನಾಡಿದರೆ ಹೆಚ್ಚು ಖುಷಿಯಾಗುತ್ತಾರೆ. ಸಂಗಾತಿಯಾದವನು ಸದಾ ಹೊಗಳುತ್ತಿದ್ದರೆ ಅದಕ್ಕಿಂತ ಸಂತೋಷವು ಬೇರೆ ಯಾವುದರಲ್ಲಿಯೂ ಆಗುವುದಿಲ್ಲ.
- ಸರ್ ಪ್ರೈಸ್ ನೀಡಿದರೆ ಅದುವೇ ಆಕೆಗೆ ಖುಷಿ : ಸಂಸಾರದಲ್ಲಿ ಪತಿಯು ಪತ್ನಿಗೆ ಆಗಾಗ ಸರ್ಪ್ರೈಸ್ ನೀಡಿದರೆ ಸಂಸಾರವು ಸಂತೋಷದಿಂದ ಕೂಡಿರುತ್ತದೆ. ಸಹಜವಾಗಿ ಎಲ್ಲಾ ಮಹಿಳೆಯರು ಸರ್ಪ್ರೈಸ್ ನೀಡುವ ವ್ಯಕ್ತಿಗಳನ್ನು ಇಷ್ಟ ಪಡುತ್ತಾರೆ. ಸಂಗಾತಿಯಾಗಿರಲಿ, ಸ್ನೇಹಿತರಾಗಲಿ, ತಂದೆ ತಾಯಿಯರಾಗಿ ಅಥವಾ ಸಹೋದರರಾಗಿರಲಿ ಸನ್ನಿವೇಶಕ್ಕೆ ತಕ್ಕಂತೆ ಸರ್ಪ್ರೈಸ್ ನೀಡಿದರೆ ಆಕೆಯ ಖುಷಿಗೆ ಪಾರವೇ ಇರುವುದಿಲ್ಲ. ಆದರೆ ತನ್ನ ಇಷ್ಟ ಕಷ್ಟಗಳ ಬಗ್ಗೆ ಸಂಗಾತಿ ಹಾಗೂ ಮನೆಯವರ ಜೊತೆಗೆ ಮುಕ್ತವಾಗಿ ಹೇಳಿಕೊಳ್ಳುವುದೇ ಇಲ್ಲ.
- ಅನಾರೋಗ್ಯ ಕೈ ಕೊಟ್ಟಾಗ ಹೇಳಿಕೊಳ್ಳುವುದಿಲ್ಲ : ಮಹಿಳೆಯೂ ಪುರುಷರ ಬಳಿ ತನ್ನ ಆರೋಗ್ಯ ಸರಿಯಿಲ್ಲ ಎಂದಾಗ ಹೇಳಿಕೊಳ್ಳುವುದಿಲ್ಲ. ಅನಾರೋಗ್ಯವಿದ್ದರೂ ಮನೆಯ ಎಲ್ಲಾ ಕೆಲಸಗಳನ್ನು ತಾನೇ ಮಾಡುತ್ತಾಳೆ. ಅದಲ್ಲದೇ ತನ್ನ ಸಂಗಾತಿಯು ತನ್ನ ಅನಾರೋಗ್ಯದ ಬಗ್ಗೆ ಕಾಳಜಿ ವಹಿಸಲಿ ಎಂದುಕೊಳ್ಳುತ್ತಾಳೆ. ತಿಂಗಳ ಮುಟ್ಟಿನ ಸಮಯದಲ್ಲಿ ಸಂಗಾತಿಯು ತನ್ನ ಆರೈಕೆ ಮಾಡಲಿ ಎನ್ನುವ ಆಸೆಯೂ ಆಕೆಯಲ್ಲಿರುತ್ತದೆ, ಬಗ್ಗೆ ಎಲ್ಲಿಯೂ ಬಾಯಿ ಬಿಡುವುದಿಲ್ಲ.
- ತಮ್ಮ ಸೌಂದರ್ಯದ ಗುಟ್ಟನ್ನು ಯಾರಿಗೂ ಹೇಳಲ್ಲ : ಹೆಣ್ಣು ಸದಾ ಸುಂದರವಾಗಿರಬೇಕೆಂದು ಬಯಸುತ್ತಾಳೆ. ಇದಕ್ಕಾಗಿ ನಾನಾ ರೀತಿಯ ಕಸರತ್ತು ಮಾಡುತ್ತಾಳೆ. ಆದರೆ ತನ್ನ ಸೌಂದರ್ಯ ಗುಟ್ಟನ್ನು ಮಹಿಳೆರೊಂದಿಗೆ ಬಿಡಿ ತನ್ನ ಪಾಲುದಾರನೊಂದಿಗೂ ಹಂಚಿಕೊಳ್ಳುವುದಿಲ್ಲ.
- ಕೂಡಿಟ್ಟ ಹಣದ ಬಗ್ಗೆ ಬಾಯಿ ಬಿಡುವುದಿಲ್ಲ : ಸಾಮಾನ್ಯವಾಗಿ ಮಹಿಳೆಯರ ಬಳಿ ಎಷ್ಟು ಹಣ ಗುಟ್ಟಾಗಿ ಕೂಡಿಟ್ಟಿದ್ದೀರಾ ಎಂದು ಹೇಳಿದರೆ ಸರಿಯಾದ ಲೆಕ್ಕ ಸಿಗುವುದೇ ಇಲ್ಲ. ಈ ಹಣ್ಣವನ್ನು ಕಷ್ಟದ ಸಮಯದಲ್ಲಿ ಮನೆಗಾಗಿಯೇ ವಿನಿಯೋಗಿಸುತ್ತಾಳೆ. ಆದರೆ ಪತಿಯಾದವನಿಗೂ ಈ ಬಗ್ಗೆ ಲೆಕ್ಕವನ್ನು ಕೊಡುವುದಿಲ್ಲ..
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ