World Biriyani Day 2024: ರುಚಿಯಲ್ಲಿ ಅತ್ಯದ್ಭುತ ಗೋವಾ ಫಿಶ್ ಬಿರಿಯಾನಿ

ನಾನ್ ಪ್ರಿಯರ ಫೇವರಿಟ್ ಫುಡ್ ಯಾವುದೆಂದು ಕೇಳಿದರೆ ಬಿರಿಯಾನಿ ಎಂದು ಉತ್ತರ ಬಂದೇ ಬರುತ್ತದೆ. ಮಟನ್ ಹಾಗೂ ಚಿಕನ್ ಬಿರಿಯಾನಿಯ ರುಚಿಯನ್ನು ಸವಿದಿರುತ್ತಾರೆ. ಆದರೆ ನೀವೇನಾದರೂ ಗೋವಾಕ್ಕೆ ಪ್ರವಾಸ ಹೋದರೆ ಅಲ್ಲಿನ ಫಿಶ್ ಬಿರಿಯಾನಿ ರುಚಿ ಸವಿದು ನೋಡಿ. ಈ ಮೀನಿನ ಬಿರಿಯಾನಿ ರುಚಿ ನೋಡಬೇಕೆನ್ನುವವರು ಈ ಐಟಂ ಗಳಿದ್ದರೆ ಮನೆಯಲ್ಲಿಯೇ ಈ ರೆಸಿಪಿ ಮಾಡಿ ಸವಿಯಬಹುದು.

World Biriyani Day 2024: ರುಚಿಯಲ್ಲಿ ಅತ್ಯದ್ಭುತ ಗೋವಾ ಫಿಶ್ ಬಿರಿಯಾನಿ
ಫಿಶ್ ಬಿರಿಯಾನಿ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 06, 2024 | 3:44 PM

ಭಾರತೀಯರು ಬಿರಿಯಾನಿ ಪ್ರಿಯರು. ಭಾರತದ ವಿವಿಧ ಸ್ಥಳಗಳಲ್ಲಿ ಬಗೆ ಬಗೆಯ ಬಿರಿಯಾನಿಯೂ ದೊರೆಯುತ್ತದೆ. ಅದರಲ್ಲಿಯೂ ಈ ಗೋವಾದ ಫಿಶ್ ಬಿರಿಯಾನಿಯ ರುಚಿಯನ್ನು ಒಮ್ಮೆ ನಾಲಿಗೆಗೆ ಹತ್ತಿಸಿಕೊಂಡು ಬಿಟ್ಟರೆ, ಬೆಳಗ್ಗೆ , ಮಧ್ಯಾಹ್ನ ಮತ್ತು ರಾತ್ರಿ ಮೂರು ಹೊತ್ತು ಕೊಟ್ಟರೂ ತಿನ್ನುವುದಂತೂ ಖಂಡಿತ. ಹಾಗಾದ್ರೆ ಈ ರೆಸಿಪಿಯನ್ನು ಸುಲಭವಾಗಿ ಮಾಡಿ ಮನೆ ಮಂದಿಯೆಲ್ಲಾ ಸೇರಿ ಇದರ ರುಚಿಯನ್ನು ಸವಿಯಬಹುದು.

ಗೋವಾ ಫಿಶ್ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು

ಮೀನು, ಮೂರರಿಂದ ನಾಲ್ಕು ಈರುಳ್ಳಿ, ಎರಡು ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಒಂದು ಚಮಚದಷ್ಟು ಜೀರಿಗೆ, ಬಿರಿಯಾನಿ ಮಸಾಲಾ, ಗರಂ ಮಸಾಲಾ, ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಅರಿಶಿನ ಪುಡಿ, ಒಂದು ಕಪ್ ಮೊಸರು ಒಂದು ಕಪ್ ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ, ಅಕ್ಕಿ, ನಾಲ್ಕರಿಂದ ಐದು ಲವಂಗ, ಒಂದೆರಡು ದಾಲ್ಚಿನ್ನಿ, ನಾಲ್ಕು ಏಲಕ್ಕಿ, ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ಇದನ್ನೂ ಓದಿ: ತಲಚೇರಿ ಚಿಕನ್ ಬಿರಿಯಾನಿ, ಮಾಡೋದು ಹೇಗೆ?

ಗೋವಾ ಫಿಶ್​ ಬಿರಿಯಾನಿ ಮಾಡುವ ವಿಧಾನ

  1. ಮೊದಲಿಗೆ ಮೀನನ್ನು ಸ್ವಚ್ಛಗೊಳಿಸಿ ಕತ್ತರಿಸಿಟ್ಟುಕೊಳ್ಳಿ.
  2. ಇನ್ನೊಂದೆಡೆ ಈರುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ನುಣ್ಣಗೆ ಕತ್ತರಿಸಿಟ್ಟುಕೊಳ್ಳಿ.
  3. ಬಾಣಲೆಯನ್ನು ಸ್ಟವ್ ಮೇಲೆ ಇಟ್ಟು ಎಣ್ಣೆ ಹಾಕಿ ಬಿಸಿಯಾಗುತ್ತಿದ್ದಂತೆ ಜೀರಿಗೆ, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಫ್ರೈ ಮಾಡಿಕೊಳ್ಳಿ.
  4. ಇದಕ್ಕೆ ಗರಂ ಮಸಾಲಾ, ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಅರಿಶಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ.
  5. ನಂತರ ಇದಕ್ಕೆ ಮೊಸರು, ಉಪ್ಪು ಮತ್ತು ಹಸಿರು ಮೆಣಸಿನಕಾಯಿ ಸೇರಿಸಿಕೊಳ್ಳಿ. ಈಗಾಗಲೇ ಕತ್ತರಿಸಿಟ್ಟ ಮೀನಿನ ತುಂಡುಗಳನ್ನು ಸೇರಿಸಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿಕೊಂಡರೆ ಮಸಾಲಾ ರೆಡಿಯಾಗುತ್ತದೆ.
  6. ಇನ್ನೊಂದೆಡೆ ಕುಕ್ಕರ್ ಗೆ ಎಣ್ಣೆ ಹಾಕಿ ಬಿಸಿಯಾಗುತ್ತಿದ್ದಂತೆ, ಲವಂಗ, ಬಿರಿಯಾನಿ ಎಲೆ ಮತ್ತು ಮೆಣಸು, ಅಕ್ಕಿ ಹಾಕಿ ಹುರಿದುಕೊಳ್ಳುತ್ತಿದ್ದಂತೆ ಬಣ್ಣ ಬದಲಾಗುತ್ತದೆ. ಆ ಬಳಿಕ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿಕೊಂಡು ಮೂರು ಸೀಟಿ ಬಂದ ನಂತರ ಗ್ಯಾಸ್ ಆಫ್ ಮಾಡಿ.
  7. ಈಗಾಗಲೇ ತಯಾರಿಸಿಟ್ಟ ಅನ್ನಕ್ಕೆ ಮೀನಿನ ಮಸಾಲಾವನ್ನು ಸೇರಿಸಿಕೊಂಡರೆ ಘಮ್ ಎನ್ನುವ ಫಿಶ್ ಬಿರಿಯಾನಿ ಸವಿಯಲು ಸಿದ್ಧ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ