AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Milk Day 2023: ಆಚರಣೆ ಏಕೆ? ಏನಿದರ ಮಹತ್ವ? ಈ ದಿನದ ಇತಿಹಾಸ ತಿಳಿದುಕೊಳ್ಳಿ..

ಪ್ರತಿ ವರ್ಷ, ವಿಶ್ವ ಹಾಲಿನ ದಿನವನ್ನು ಜೂನ್ 1 ರಂದು ಆಚರಿಸಲಾಗುತ್ತದೆ. ಜಾಗತಿಕ ಆಹಾರವಾಗಿ ಹಾಲಿನ ಮಹತ್ವವನ್ನು ಗುರುತಿಸಲು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಈ ದಿನವನ್ನು ಜಾರಿಗೆ ತಂದಿದೆ. ಇಂದು ವಿಶ್ವ ಹಾಲು ದಿನವನ್ನು ಆಚರಿಸಲು ಹಾಗೂ ಈ ದಿನದ ಮಹತ್ವವನ್ನು ತಿಳಿಯಲು ಇದೊಂದು ಬಳ್ಳೆಯ ಸರಿಯಾದ ಸಂದರ್ಭವಾಗಿದೆ.

World Milk Day 2023: ಆಚರಣೆ ಏಕೆ? ಏನಿದರ ಮಹತ್ವ? ಈ ದಿನದ ಇತಿಹಾಸ ತಿಳಿದುಕೊಳ್ಳಿ..
ರಮೇಶ್ ಬಿ. ಜವಳಗೇರಾ
|

Updated on: Jun 01, 2023 | 7:11 AM

Share

ಜೂನ್ 1 ವಿಶ್ವ ಹಾಲು ದಿನ(World Milk Day). ಹಾಲಿನ ಉದ್ಯಮವು ನಮ್ಮ ಸ್ವಾಸ್ಥ್ಯಕ್ಕೆ ಕೊಡುಗೆ ನೀಡುವುದಲ್ಲದೆ, ಲಕ್ಷಾಂತರ ಜನರಿಗೆ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟಿದೆ. ನಾವು ಚಿಕ್ಕವರಿಂದ ದೊಡ್ಡವರಾಗುವ ತನಕ ಹಾಲಿನ ಪ್ರಾಮುಖ್ಯತೆ ಬಗ್ಗೆ ನಮ್ಮ ಹಿರಿಯರು ಹೇಳುತ್ತಲೇ ಬಂದಿದ್ದಾರೆ. ಆರೋಗ್ಯಕರ ಜೀವನ, ಆಹಾರ ಪದ್ಧತಿ ಮತ್ತು ಆಹಾರ ಉತ್ಪಾದನೆಯಲ್ಲಿ ಹಾಲಿನ ಉತ್ಪನ್ನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಭಾರತವು ಹಾಲು ಉತ್ಪಾದಿಸುವ ಅತಿದೊಡ್ಡ ದೇಶ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ವಿಶ್ವ ಹಾಲು ದಿನದ ಮಹತ್ವ ವಿಶ್ವ ಹಾಲು ದಿನದಂದು, ಹಾಲು ಮತ್ತು ಡೈರಿ ಉತ್ಪನ್ನಗಳ ಸೇವನೆಯಿಂದ ಜನರಿಗೆ ಆಗುವ ಪ್ರಯೋಜನಗಳನ್ನು ವಿಶ್ವದಾದ್ಯಂತ ಉತ್ತೇಜಿಸಲು ಹಾಗೂ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲಾಗುತ್ತೆ. ಇದರಲ್ಲಿ ಡೈರಿ ಒಂದು ಶತಕೋಟಿಗೂ ಹೆಚ್ಚು ಜನರ ಜೀವನೋಪಾಯವನ್ನು ಅವಲಂಬಿಸಿದೆ. ಡೈರಿ ಉತ್ಪನ್ನಗಳು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಡೈರಿ ಕ್ಷೇತ್ರವು ಜಾಗತಿಕ ಆಹಾರ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ, ಇದು ವಿಶ್ವದಾದ್ಯಂತದ ಅನೇಕ ಜನರಿಗೆ ಆರ್ಥಿಕ, ಪೌಷ್ಠಿಕಾಂಶ ಮತ್ತು ಸಾಮಾಜಿಕ ಪ್ರಯೋಜನಗಳನ್ನು ನೀಡುತ್ತದೆ. ಭಾರತವು ಕೃಷಿ ರಾಷ್ಟ್ರವಾಗಿರುವುದರಿಂದ, ಇದು ದೇಶದ ಪ್ರಮುಖ ಆಹಾರಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಿರುವುದರಿಂದ ಈ ದಿನವು ಇನ್ನೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.

2001 ರಲ್ಲಿ ಮೊದಲ ಬಾರಿಗೆ ಆಚರಣೆ

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) 2001 ರಲ್ಲಿ ಮೊದಲ ಬಾರಿಗೆ ವಿಶ್ವ ಹಾಲು ದಿನ ಆಚರಿಸಿತು. ಜೂನ್ 1 ಅನ್ನು ವಿಶ್ವ ಹಾಲು ದಿನ ಆಯ್ಕೆ ಮಾಡಲಾಗಿದೆ. ಏಕೆಂದರೆ ಆ ಸಮಯದಲ್ಲಿ ಅನೇಕ ದೇಶಗಳು ಈಗಾಗಲೇ ಹಾಲಿನ ದಿನವನ್ನು ಆಚರಿಸುತ್ತಿದ್ದವು. ಹಾಲು ಮತ್ತು ಇತರ ಡೈರಿ ಉತ್ಪನ್ನಗಳ ಪ್ರಯೋಜನಗಳನ್ನು ತಿಳಿಯಲು ಈ ದಿನ ಆಚರಿಸಲಾಗುತ್ತದೆ. ಹಾಲು ಆರೋಗ್ಯಕರ ಪಾನೀಯವಾಗಿದೆ. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳಿವೆ. ಪ್ರಪಂಚದಾದ್ಯಂತ ಹಾಲು ಮತ್ತು ಹಾಲು ಉತ್ಪಾದಿಸುವ ಕೈಗಾರಿಕೆಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಪ್ರಚಾರ ಮಾಡಲು ಪ್ರತಿ ವರ್ಷ ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ. ಆದ್ದರಿಂದ ಇದನ್ನು ವಿಶ್ವ ಡೈರಿ ದಿನ ಎಂದೂ ಕರೆಯುತ್ತಾರೆ.

​ಈ ದಿನದ ಮಹತ್ವ

ಹಾಲಿನ ಪ್ರಾಮುಖ್ಯತೆ ಬಗ್ಗೆ ತಿಳಿದುಕೊಳ್ಳಲು ಮತ್ತು ತಮ್ಮ ದೈನಂದಿನ ಆಹಾರದಲ್ಲಿ ಡೈರಿ ಉತ್ಪನ್ನಗಳನ್ನು ಸೇವಿಸುವುದು ಎಷ್ಟು ಮುಖ್ಯ ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ದಿನವು ಅವಕಾಶವನ್ನು ಒದಗಿಸುತ್ತದೆ. ಅಲ್ಲದೆ, ಎಫ್‌ಒಒ ದತ್ತಾಂಶದಿಂದ ಹಾಲಿನ ಮಹತ್ವವನ್ನು ಸರಿಯಾಗಿ ಎತ್ತಿ ತೋರಿಸಲಾಗಿದೆ. 1 ಬಿಲಿಯನ್‌’ಗಿಂತಲೂ ಹೆಚ್ಚು ಜನರ ಜೀವನೋಪಾಯವನ್ನು ಡೈರಿ ವಲಯವು ಬೆಂಬಲಿಸುತ್ತದೆ ಎಂದು ಅದು ಹೇಳುತ್ತದೆ. ಹಾಲು ಉದ್ಯಮಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳ ಬಗ್ಗೆ ಗಮನ ಸೆಳೆಯಲು ಈ ದಿನವನ್ನು ಆಚರಿಸಲಾಗುತ್ತದೆ. ಡೈರಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿರುವುದರಿಂದ, ಇದಕ್ಕೆ ಸಂಬಂಧಿಸಿದ ಕ್ಷೇತ್ರಗಳಾದ ಡೈರಿ ಶಿಕ್ಷಣ, ಪಶುವೈದ್ಯಕೀಯ ಔಷಧಗಳು, ಸಂಶೋಧನೆ ಮತ್ತು ಜಾನುವಾರು ಆಹಾರ ಪೂರೈಕೆಯೂ ಪ್ರಯೋಜನ ಪಡೆಯುತ್ತದೆ.

ಹಾಲು ಕುಡಿಯುವುದರಿಂದ ಆರೋಗ್ಯ ಸುಧಾರಣೆ ಹಾಲು ಪೋಷಕಾಂಶಗಳಿಂದ ಕೂಡಿದೆ. ಹಾಲಿನಂದ ಮಾನವ ಶರೀರದ ಬೆಳವಣೆಗೆ ಹಾಗೂ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಬೇಕಾಗುವ ಎಲ್ಲಾ ಪೋಷಕಾಂಶಗಳು ಸಿಗುತ್ತವೆ. ಹಾಲಿನ ಪ್ರಯೋಜನಗಳನ್ನು ಇಲ್ಲಿ ತಿಳಿಯಿರಿ.

1. ಪೌಷ್ಟಿಕಾಂಶ: ಹಾಲಿನಲ್ಲಿ ಸಸಾರಜನಕ, ಪ್ರೋಟಿನ್, ಜಿಡ್ಡು, ಸಕ್ಕರೆ ಮತ್ತು ಪಿಷ್ಟ-ಕಾರ್ಬೋಹೈಡ್ರೇಟ್, ಲವಣಗಳು, ಮಿನರಲ್, ಜೀವಸತ್ವಗಳು ಹಾಗೂ ನೀರಿನಾಂಶ ಇರುತ್ತದೆ. ಇದು ದೇಹದ ಆರೋಗ್ಯಕ್ಕೆ ಉತ್ತಮವಾದ ಆಹಾರ. ಹಾಗೂ ದೇಹದಲ್ಲಿನ ರೋಗ ನಿರೋಧಕ ಶಕ್ತಿ ತರಲು ಮುಖ್ಯ ಅಂಶಗಳಾಗಿವೆ.

2. ಮೂಳೆಗಳ ಆರೋಗ್ಯಕ್ಕೆ ಪ್ರಯೋಜನಕಾರಿ: ಹಾಲು ಕುಡಿಯುವುದರಿಂದ ಮೂಳೆಗಳು ಸಧೃಡವಾಗಿರುತ್ತವೆ. ಹಾಳಿನಲ್ಲಿರುವ ಕ್ಯಾಲ್ಸಿಯಂ, ರಂಜಕ ಮತ್ತು ಪೊಟ್ಯಾಸಿಯಮ್, ಮಿಟಮಿನ್-ಡಿ ಮಕ್ಕಳಲ್ಲಿ ಮೂಳೆ ಮತ್ತು ಹಲ್ಲುಗಳ ಬೆಳವಣೆಗೆಗೆ ಸಹಾಯ ಮಾಡುತ್ತೆ.

3. ಹಾಲು ಒಂದು ಬಹುಮುಖ ಘಟಕಾಂಶವಾಗಿದ್ದು ಅದನ್ನು ನಿಮ್ಮ ಆಹಾರಕ್ರಮದಲ್ಲಿ ಸುಲಭವಾಗಿ ಸೇರಿಸಬಹುದು. ಓಟ್ ಮೀಲ್, ಕಾಫಿ, ಸೂಪ್ ಸೇರಿದಂತೆ ಅನೇಕ ಆಹಾರ ಬಗೆಯ ಆಹಾರ ತಯಾರಿಸಲು ಇದನ್ನು ಬಳಸಬಹುದು. ಹಾಲಿನಿಂದ ಅನೇಕ ಉತ್ಪನ್ನಗಳನ್ನು ತಯಾರಿಸಬಹುದು. ಮುಖ್ಯವಾಗಿ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ, ಚೀಸ್, ಪನ್ನೀರ್, ಪೇಡ, ಕುಂದ, ಐಸ್ಕ್ರೀಮ್ ಸೇರಿದಂತೆ ಅನೇಕ ಪದಾರ್ಥಗಳನ್ನು ಉತ್ಪಾದಿಸಿ ಪ್ರಯೋಜನ ಪಡೆಯಬವುದು.

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು