World Rose Day 2021: ಕ್ಯಾನ್ಸರ್ ರೋಗಿಗಳಿಗೆ ಧೈರ್ಯ ಮತ್ತು ಭರವಸೆ ತುಂಬಲು ಒಂದಾಗೋಣ
ವಿಶ್ವ ಗುಲಾಬಿ ದಿನ: ಧೈರ್ಯ ತುಂಬಲು ಮತ್ತು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಜನರಿಗೆ ಭರವಸೆ ನೀಡಲು ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈ ಖಾಯಿಲೆಯ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸುವ ದಿನವಾಗಿದೆ.

ಜೀವನದಲ್ಲಿ ಬದುಕುವ ಭರವಸೆಯನ್ನು ಹೊತ್ತು ಸಾಗುವುದು ಎಲ್ಲದಕ್ಕಿಂತ ದೊಡ್ಡದು. ಅಂತಹ ಭರವಸೆ ನಮ್ಮಲ್ಲಿಯೂ ಇರಬೇಕು ಜತೆಗೆ ಬೇರೆಯವರಿಗೂ ಭರವಸೆ ತುಂಬುವಂತೆ ಬದುಕಬೇಕು. ಇದರ ಭಾಗವಾಗಿ ಸೆಪ್ಟೆಂಬರ್ 22ರಂದು ವಿಶ್ವ ಗುಲಾಬಿ ದಿನವನ್ನು ಆಚರಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಕ್ಯಾನ್ಸರ್ ರೋಗಿಗಳಿಗೆ ಭರವಸೆಯನ್ನು ತುಂಬುವ ದಿನವಾಗಿದೆ. ದೈಹಿಕ ಪರಿಣಾಮಗಳ ಹೊರತಾಗಿ ಕ್ಯಾನ್ಸರ್ ರೋಗ ಒತ್ತಡ, ಮಾನಸಿಕವಾಗಿ ಪರಿಣಾಮ ಬೀರುವುದು ಜತೆಗೆ ವೇದನೆಯನ್ನು ಉಂಟು ಮಾಡುತ್ತದೆ. ಈ ರೋಗದ ವಿರುದ್ಧ ಹೋರಾಡಲು ವ್ಯಕ್ತಿಯು ಮಾನಸಿಕವಾಗಿ ಸದೃಢರಾಗಬೇಕು. ವ್ಯಕ್ತಿಯಲ್ಲಿ ಧೈರ್ಯ ಮತ್ತು ಭರವಸೆಯನ್ನು ನೀಡುವ ಮೂಲಕ ಬದುಕುವ ಭರವಸೆಯನ್ನು ತುಂಬಲು ಸಾಧ್ಯ. ಈ ಉದ್ದೇಶದಿಂದ ವಿಶ್ವ ಗುಲಾಬಿ ದಿನವನ್ನು ಪ್ರತೀ ವರ್ಷ ಸೆ.22 ರಂದು ಆಸರಿಸಲಾಗುತ್ತದೆ.
ಧೈರ್ಯ ತುಂಬಲು ಮತ್ತು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಜನರಿಗೆ ಭರವಸೆ ನೀಡಲು ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈ ಖಾಯಿಲೆಯನ್ನು ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸುವ ದಿನವಾಗಿದೆ.
ವಿಶ್ವ ಗುಲಾಬಿ ದಿನವನ್ನು ಕೆನಡಾದ ಮೆಲಿಂಡಾ ರೋಸ್ ಎಂಬ 12 ವರ್ಷದ ಹುಡುಗಿಯ ಸ್ಮರಣಾರ್ಥವಾಗಿ ಈ ದಿನವನ್ನು ಗುರುತಿಸಲಾಗಿದೆ. ಮೆಲಿಂಡಾ ರೋಸ್ ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಮಾರಣಾಂತಿಕ ಖಾಯಿಲೆಗೆ ತುತ್ತಾದ ಇವರು, ಕೊನೆಯುಸಿರು ಇರುವವರೆಗೂ ಬದುಕುವ ಭರವಸೆಯನ್ನು ಬಿಟ್ಟುಕೊಡಲಿಲ್ಲ. ತನ್ನ ಸುತ್ತ ಮುತ್ತಲಿರುವ ಜನರಲ್ಲಿ ಧೈರ್ಯ ತುಂಬುವ ಮೂಲಕ ಕೊನೆಯ ಆರು ತಿಂಗಳೂ ಸಹ ಧೈರ್ಯದಿಂದ ಹೋರಾಡಿದರು.
ರೋಸ್ ತನ್ನ ಸುತ್ತಲಿದ್ದ ಕ್ಯಾನ್ಸರ್ ರೋಗಿಗಳಿಗೆ ಕವಿತೆ, ಪತ್ರಗಳನ್ನು ಬರೆದು ಕಳುಹಿಸಿಕೊಟ್ಟಿದ್ದರು. ತಾನು ಬದುಕುವ ಕೊನೆಯ ಕ್ಷಣದವರೆಗೂ ಆಸ್ಪತ್ರೆಯಲ್ಲಿ ಸಂತೋಷದಿಂದ ಜನರನ್ನು ನಗಿಸುತ್ತ ಸಮಯ ಕಳೆದರು. ಆಕೆಯ ಜೀವನದಲ್ಲಿನ ಮುಖ್ಯ ಧ್ಯೇಯ, ರೋಗಿಗಳಲ್ಲಿ ಬದುಕುವ ಭರವಸೆ ತುಂಬುವುದಾಗಿತ್ತು. ರೋಸ್ ಅವರ ನೆನಪಿಗಾಗಿ ಪ್ರತೀ ವರ್ಷ ವಿಶ್ವ ಗುಲಾಬಿ ದಿನವನ್ನು ಆಚರಿಸಲಾಗುತ್ತದೆ.
ಕ್ಯಾನ್ಸರ್ ರೋಗಿಗಳು ಮತ್ತು ಅವರ ಆರೈಕೆ ಮಾಡುತ್ತಿರುವವರಿಗೆ ಗುಲಾಬಿಯನ್ನು ಕಳುಹಿಸಿಕೊಡುವ ಮೂಲಕ ತಮ್ಮ ಪ್ರೀತಿಯ ಬೆಂಬಲವನ್ನು ತಿಳಿಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ನಿಮ್ಮ ಆ ಒಂದು ನಗು ರೋಗಿಯ ಮುಖದಲ್ಲಿ ಸಂತೋಷವನ್ನು ಮೂಡಿಸುತ್ತದೆ. ಕ್ಯಾನ್ಸರ್ ರೋಗಿಗಳಿಗೆ ಭರವಸೆಯ ಜತೆಗೆ ಧೈರ್ಯ ತುಂಬಲು ಎಲ್ಲರೋ ಒಂದಾಗೋಣ.
ಇದನ್ನೂ ಓದಿ:
Women Health: ಮಹಿಳೆಯರೇ ಸ್ತನ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ! ಈ ಖಾಯಿಲೆಯ ಲಕ್ಷಣಗಳೇನು ತಿಳಿಯಿರಿ
(World rose day 2021 history significance and importance welfare of cancer patients)
Published On - 10:35 am, Wed, 22 September 21