World Television Day 2026: ಮನೆಯವರೆಲ್ಲಾ ಒಟ್ಟಿಗೆ ಕುಳಿತು ಸ್ವಲ್ಪ ಹೊತ್ತು ಟಿವಿ ನೋಡುವುದರಿಂದ ಲಭಿಸುವ ಪ್ರಯೋಜನಗಳು

ದೂರದರ್ಶನ ಇಂದು ಪ್ರತಿಯೊಂದು ಮನೆಯ ಅವಿಭಾಜ್ಯ ಅಂಗವಾಗಿದೆ. ಸುದ್ದಿಯಿಂದ ಹಿಡಿದು ಚಲನಚಿತ್ರಗಳು, ಧಾರಾವಾಹಿಗಳು ಮತ್ತು ವಿವಿಧ ಕಾರ್ಯಕ್ರಮಗಳವರೆಗೆ ಈ ದೂರದರ್ಶನ ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಮಾಹಿತಿಯನ್ನು ಒದಗಿಸುತ್ತದೆ. ಟಿವಿಯ ಈ ಮಹತ್ವವನ್ನು ಸಾರಲು, ದೂರದರ್ಶನವು ಸಮಾಜ ಮತ್ತು ವ್ಯಕ್ತಿಗಳ ಮೇಲೆ ಬೀರುವ ಪ್ರಭಾವದ ಬಗ್ಗೆ ತಿಳಿಸಲು ಪ್ರತಿವರ್ಷ ನವೆಂಬರ್‌ 21 ರಂದು ವಿಶ್ವ ದೂರದರ್ಶನ ದಿನವನ್ನು ಆಚರಿಸಲಾಗುತ್ತದೆ.

World Television Day 2026: ಮನೆಯವರೆಲ್ಲಾ ಒಟ್ಟಿಗೆ ಕುಳಿತು ಸ್ವಲ್ಪ ಹೊತ್ತು ಟಿವಿ ನೋಡುವುದರಿಂದ ಲಭಿಸುವ ಪ್ರಯೋಜನಗಳು
ಸಾಂದರ್ಭಿಕ ಚಿತ್ರ
Image Credit source: vecteezy

Updated on: Nov 21, 2026 | 9:54 AM

ಕಪ್ಪು ಬಿಳುಪಿನ ಪರದೆಯಿಂದ ಆರಂಭವಾದ ಟಿವಿಯ (television)  ಪಯಣ ಇಂದು ಸ್ಮಾರ್ಟ್‌ ಟಿವಿ ಇಂಟರ್ನೆಟ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ವಿಷಯದವರೆಗೆ, ದೂರದರ್ಶನ ತಂತ್ರಜ್ಞಾನವು ನಿರಂತರವಾಗಿ ವಿಕಸನಗೊಂಡಿದೆ. ಇಂದಿನ ಈ ಸ್ಮಾರ್ಟ್‌ಫೋನ್‌ ಯುಗದಲ್ಲೂ ಸಹ ಟಿವಿಯ ಮಹತ್ವ ಮಾತ್ರ ಕಡಿಮೆಯಾಗಿಲ್ಲ. ದೂರದರ್ಶನದ ಮೂಲಕ, ಮನರಂಜನೆ, ಶಿಕ್ಷಣ ಮತ್ತು ರಾಜಕೀಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಸುದ್ದಿಗಳ ಬಗ್ಗೆ ನೀವು ತಿಳಿದುಕೊಳ್ಳಬಹುದು. ದೂರದರ್ಶನದ ಈ ಮಹತ್ವವನ್ನು ಸಾರಲು ಪ್ರತಿವರ್ಷ ನವೆಂಬರ್‌ 21 ರಂದು ವಿಶ್ವ ದೂರದರ್ಶನ ದಿನವನ್ನು ಆಚರಿಸಲಾಗುತ್ತದೆ. ಈ ದಿನ ದೂರದರ್ಶನದ ಮಹತ್ವ ಹಾಗೂ ಟಿವಿ ನೋಡುವುದರಿಂದ ಲಭಿಸುವ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ.

ವಿಶ್ವ ದೂರದರ್ಶನ ದಿನದ ಇತಿಹಾಸವೇನು?

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 17, 1996 ರಂದು ವಿಶ್ವ ದೂರದರ್ಶನ ದಿನವನ್ನು ಸ್ಥಾಪಿಸುವ ನಿರ್ಣಯವನ್ನು ಅಂಗೀಕರಿಸಿತು. ಇದಕ್ಕೂ ಮೊದಲು, ವಿಶ್ವಸಂಸ್ಥೆಯು ನವೆಂಬರ್ 21 ಮತ್ತು 22, 1996 ರಂದು ವಿಶ್ವ ದೂರದರ್ಶನ  ( ಟೆಲಿವಿಷನ್ ಫೋರಂ) ವೇದಿಕೆಯನ್ನು ಸ್ಥಾಪಿಸಿತು. ಮತ್ತು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ  ದೂರದರ್ಶನದ ಮಹತ್ವದ ಬಗ್ಗೆ ಹಾಗೂ ಸಂವಹನ ಮತ್ತು ಜಾಗತೀಕರಣದಲ್ಲಿ ದೂರದರ್ಶನವು ವಹಿಸಿದ ಮಹತ್ತರ ಪಾತ್ರದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ  ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನವೆಂಬರ್ 21 ರಂದು ವಿಶ್ವ ದೂದರ್ಶನ ದಿನವನ್ನು ಆಚರಿಸುವ ನಿರ್ಣಯವನ್ನು ಅಂಗೀಕರಿಸಿತು. ಅಂದಿನಿಂದ ಪ್ರತಿವರ್ಷ ನವೆಂಬರ್ 21 ರಂದು ವಿಶ್ವ ದೂರದರ್ಶನ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

Loading...

ಸಮಾಜ ಹಾಗೂ ನಮ್ಮ ಜೀವನದಲ್ಲಿ ದೂದರ್ಶನದ ಪಾತ್ರ:

  • ಇದು ಪ್ರಪಂಚದ ಮೂಲೆ ಮೂಲೆಗೂ ಸಮಾನ ಮಾಹಿತಿಯನ್ನು ಒದಗಿಸುವ ಮೂಲಕ ಸಾಮಾಜಿಕ ಜಾಗೃತಿಯನ್ನು ಉತ್ತೇಜಿಸುತ್ತದೆ. ಶಿಕ್ಷಣ, ಆರೋಗ್ಯ, ಹವಾಮಾನ, ಪರಿಸರ, ವಿಪತ್ತು ನಿರ್ವಹಣೆ ಮತ್ತು ಮಾನವ ಹಕ್ಕುಗಳಂತಹ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಟಿವಿ ಪ್ರಮುಖ ಪಾತ್ರ ವಹಿಸುತ್ತಿದೆ.
  • ಬಡತನ, ಸಂಘರ್ಷ, ಹವಾಮಾನ ಬದಲಾವಣೆ ಮತ್ತು ಮಾನವೀಯ ಬಿಕ್ಕಟ್ಟುಗಳಂತಹ ಹೆಚ್ಚಾಗಿ ಕಡೆಗಣಿಸಲ್ಪಡುವ ಸಮಸ್ಯೆಗಳನ್ನು ಟಿವಿ ಎತ್ತಿ ತೋರಿಸುತ್ತದೆ. ಇದು ಜನರಿಗೆ ಮಾಹಿತಿ ನೀಡುವುದಲ್ಲದೆ, ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸಮಾಜದಲ್ಲಿ ಸಕ್ರಿಯ ಪಾತ್ರ ವಹಿಸಲು ಅವರನ್ನು ಪ್ರೇರೇಪಿಸುತ್ತದೆ.
  • ಇದು ವಿಪತ್ತುಗಳು, ಯುದ್ಧಗಳು, ಬಿಕ್ಕಟ್ಟುಗಳು ಮತ್ತು ಮಾನವೀಯ ಸಮಸ್ಯೆಗಳ ಬಗ್ಗೆ ತ್ವರಿತ ಮಾಹಿತಿಯನ್ನು ಒದಗಿಸುತ್ತದೆ.
  • ಶಿಕ್ಷಣ, ಜಾಗೃತಿ ಮತ್ತು ಸಾಮಾಜಿಕ ಅಭಿವೃದ್ಧಿಗೆ ಟಿವಿಯ ಕೊಡುಗೆ ಮಹತ್ತರವಾದದ್ದು.
  • ಇದು ಪ್ರಜಾಪ್ರಭುತ್ವದ ಧ್ವನಿಯನ್ನು ಬಲಪಡಿಸುತ್ತದೆ ಮತ್ತು ಚರ್ಚೆ, ಸಂವಾದ ಮತ್ತು ವಿಚಾರ ವಿನಿಮಯಕ್ಕೆ ವೇದಿಕೆಯನ್ನು ಒದಗಿಸುತ್ತದೆ.
  • ಟಿವಿ ಸಾಂಸ್ಕೃತಿಕ ವೈವಿಧ್ಯತೆ, ಕಲೆ ಮತ್ತು ಮನರಂಜನೆಯನ್ನು ಪ್ರಸಾರ ಮಾಡುವುದರ ಜೊತೆಗೆ ಕಲೆಯನ್ನು ಸಂರಕ್ಷಿಸುವಂತಹ ಕೆಲಸವನ್ನು ಮಾಡುತ್ತಿದೆ.

ಇದನ್ನೂ ಓದಿ: ಸ್ತ್ರೀಯರಂತೆ ಪುರುಷರಿಗೂ ಭಾವನಾತ್ಮಕ ಬೆಂಬಲದ ಅವಶ್ಯಕತೆ ಇದೆ

ಟಿವಿ ನೋಡುವುದರಿಂದಲೂ ಪ್ರಯೋಜನಗಳಿವೆಯೇ?

  • ಕುಟುಂಬದೊಂದಿಗೆ ಕುಳಿತು ಚಲನಚಿತ್ರ ಅಥವಾ ಕಾರ್ಯಕ್ರಮವನ್ನು ನೋಡುವುದರಿಂದ ಪರಸ್ಪರ ಮಾತುಕತೆ ಹೆಚ್ಚಾಗುತ್ತದೆ. ಇದು ಕುಟುಂಬ ಸದಸ್ಯರ ನಡುವೆ ಉತ್ತಮ ಬಾಂಧವ್ಯವನ್ನು ರೂಪಿಸುತ್ತದೆ.
  • ದಿನವಿಡೀ ಕೆಲಸ ಮಾಡಿ ಮನೆಗೆ ಬಂದು ಸ್ವಲ್ಪ ಹೊತ್ತು ಧಾರಾವಾಹಿ, ಸಿನಿಮಾ, ಹಾಸ್ಯ ಕಾರ್ಯಕ್ರಮಗಳನ್ನು ನೋಡುವುದರಿಂದ ಮನಸ್ಸಿಗೆ ಉಲ್ಲಾಸ ಸಿಗುತ್ತದೆ, ಒತ್ತಡ ಕಡಿಮೆಯಾಗುತ್ತದೆ.
  • ನಿಮ್ಮ ಕುಟುಂಬದೊಂದಿಗೆ ಟಿವಿ ಅಥವಾ ಚಲನಚಿತ್ರಗಳನ್ನು ನೋಡುವುದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ.
  • ಮಕ್ಕಳೊಂದಿಗೆ ಉತ್ತಮ ಸಂವಹನ ಮತ್ತು ಸಂಬಂಧಗಳನ್ನು ಬೆಳೆಸಿಕೊಳ್ಳಲು ಇದು ಪ್ರಯೋಜನಕಾರಿಯಾಗಿದೆ. ಏಕೆಂದರೆ ಮಕ್ಕಳು ಟಿವಿ ನೋಡುವಾಗ ಆಗಾಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಇದು ಅವರ ಜೊತೆಗೆ ನಿಮ್ಮ ಸಂಪರ್ಕವನ್ನು ಹೆಚ್ಚಿಸುತ್ತದೆ.
  • ಸ್ವಲ್ಪ ಹೊತ್ತು ಟಿವಿ ನೋಡುವುದು ಒಳ್ಳೆಯದು. ಇದು ಮನೋರಂಜನೆಯನ್ನು ನೀಡುವ ಮೂಲಕ ಒತ್ತಡವನ್ನು ಕಡಿಮೆ ಮಾಡುತ್ತದೆ, ಮನಸ್ಥಿತಿಯನ್ನು ಸುಧಾರಿಸುತ್ತದೆ. ಆದರೆ ಜಾಸ್ತಿ ಹೊತ್ತು ಟಿವಿ ನೋಡುವುದು ಒಳ್ಳೆಯದಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us