ಪ್ರವಾಸೋದ್ಯಮವು ವಿಶ್ವದ ಅತಿದೊಡ್ಡ ಉದ್ಯಮಗಳಲ್ಲಿ ಒಂದಾಗಿದೆ. ಈ ಪ್ರವಾಸೋದ್ಯಮದಿಂದಲೇ ಅನೇಕ ದೇಶಗಳ ಆದಾಯವು ಹೆಚ್ಚಳವಾಗುತ್ತಿದೆ. ಇದೀಗ ಟಿವಿ9 ನೆಟ್‌ವರ್ಕ್ ಹಾಗೂ ರೆಡ್ ಹ್ಯಾಟ್ ಕಮ್ಯುನಿಕೇಷನ್ ಜಂಟಿಯಾಗಿ ಮೂರು ದಿನಗಳ ಕಾಲ ವರ್ಲ್ಡ್ ಟ್ರಾವೆಲ್ ಅಂಡ್ ಟೂರಿಸಂ ಫೆಸ್ಟಿವಲ್ 2025 ಆಯೋಜಿಸಿದೆ. ಈ ಉತ್ಸವವು ಫೆಬ್ರವರಿ 14 ರಿಂದ 16 ರವರೆಗೆ ನವದೆಹಲಿಯ ಐಕಾನಿಕ್ ಮೇಜರ್ ಧ್ಯಾನ್ ಚಂದ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಉತ್ಸವವು ಭಾರತೀಯ ಪ್ರಯಾಣಿಕರು ಜಗತ್ತನ್ನು ಅನ್ವೇಷಿಸುವ ವಿಧಾನವನ್ನು ಮರು ವ್ಯಾಖ್ಯಾನಿಸಲು ಅನುವು ಮಾಡಿಕೊಡುತ್ತದೆ.
ಬಹುನಿರೀಕ್ಷಿತ ಈವೆಂಟ್ ಪ್ರಯಾಣದ ಉತ್ಸಾಹಿಗಳಿಗೆ ಮತ್ತು ಉದ್ಯಮದ ಮಧ್ಯಸ್ಥಗಾರರಿಗೆ ಗೇಮ್ ಚೇಂಜರ್ ಆಗಲಿದೆ. ಭಾರತದ ಮೊದಲ ಬಿ2ಸಿ ಪ್ರಯಾಣ ಮತ್ತು ಪ್ರವಾಸೋದ್ಯಮ ಕಾರ್ಯಕ್ರಮವು ಇದಾಗಿದ್ದು, ಇದು ಪ್ರಯಾಣಿಕರು, ಪ್ರವಾಸೋದ್ಯಮ ಮಂಡಳಿಗಳು ಮತ್ತು ಬ್ರ್ಯಾಂಡ್‌ಗಳು ಒಟ್ಟುಗೂಡಲು ಒಂದು ಅನನ್ಯ ವೇದಿಕೆಯನ್ನು ಒದಗಿಸುತ್ತದೆ. ಈ ವೇದಿಕೆಯು ಭಾರತೀಯ ಪ್ರಯಾಣಿಕರಿಗೆ ಹಿಂದೆಂದಿಗಿಂತಲೂ ಜಾಗತಿಕ ಪ್ರಯಾಣವನ್ನು ಕೈಗೊಳ್ಳಲು ಸಹಾಯ ಮಾಡುತ್ತದೆ.
ಈ ಉತ್ಸವದಲ್ಲಿ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮಂಡಳಿಗಳು, ರಾಜ್ಯ ಪ್ರವಾಸೋದ್ಯಮ ಪ್ರತಿನಿಧಿಗಳು, ವಿಮಾನಯಾನ ಸಂಸ್ಥೆಗಳು ಸೇರಿಕೊಂಡಿವೆ. ಪ್ರಯಾಣದ ಪ್ರವೃತ್ತಿಗಳು ಹಾಗೂ ಹಾಟ್ ಸ್ಪಾಟ್‌ಗಳ ಕುರಿತು ಉದ್ಯಮದ ತಜ್ಞರಿಂದ ಮಾಹಿತಿ ಪಡೆಯಬಹುದು. ಪ್ರಯಾಣದ ಛಾಯಾಗ್ರಹಣ, ಪ್ರಯಾಣ ಯೋಜನೆ ಕುರಿತು ಸೆಷನ್‌ಗಳು ಇರುತ್ತವೆ. ಪ್ರವಾಸದಲ್ಲಿ ಆಸಕ್ತಿ ಇರುವ ಪ್ರಯಾಣಿಕರಿಗೆ ನೋಡಲೇಬೇಕಾದ ಸ್ಥಳಗಳ ಪೂರ್ವವೀಕ್ಷಣೆಯನ್ನು ಸಹ ಒದಗಿಸುತ್ತದೆ. ಅದಲ್ಲದೇ, 100 ಕ್ಕೂ ಹೆಚ್ಚು ಪ್ರಭಾವಿಗಳು ಮತ್ತು ಸಾಮಾಜಿಕ ಮಾಧ್ಯಮ ರಚನೆಕಾರರು ಭಾಗವಹಿಸಲಿದ್ದಾರೆ. ಈ ಉತ್ಸವದಲ್ಲಿ ನೀವು ಭಾಗವಹಿಸಿ ಹೊಸ ಅನುಭವ ಪಡೆಯುವ ಮೂಲಕ ಮೂರು ದಿನಗಳ ಉತ್ಸವವನ್ನು ಎಂಜಾಯ್ ಮಾಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:33 pm, Fri, 17 January 25