
ಪವನ (Wind) ಶಕ್ತಿಯು ಶುದ್ಧ, ನವೀಕರಿಸಬಹುದಾದ ಮತ್ತು ಹೇರಳವಾದ ಶಕ್ತಿಯ ನೈಸರ್ಗಿಕ ಮೂಲವಾಗಿದ್ದು, ಇದರಿಂದ ಶಕ್ತಿಯನ್ನು ಉತ್ಪಾದಿಸಬಹುದು ಅಲ್ಲದೆ ಇದು ಹವಾಮಾನ ಬದಲಾವಣೆಯನ್ನು ತಗ್ಗಿಸುವಲ್ಲಿ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮುಖ್ಯವಾಗಿ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯ ಉಳಿವಿಗೂ ಗಾಳಿ ಬೇಕೇ ಬೇಕು. ಶುದ್ಧ ಗಾಳಿಯ ಮಹತ್ವವನ್ನು ಸಾರಲು, ಈ ಪವನ ಶಕ್ತಿಯ ವಿವಿಧ ಉಪಯೋಗ ಮತ್ತು ಅದರ ಸರಿಯಾದ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಜೂನ್ 15 ರಂದು ವಿಶ್ವ ವಾಯು ದಿನವನ್ನು ಆಚರಿಸಲಾಗುತ್ತದೆ.
ಯುರೋಪಿಯನ್ ವಿಂಡ್ ಎನರ್ಜಿ ಅಸೋಸಿಯೇಷನ್ (EWEA) 2007 ರಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಿಸಿತು. ನಂತರ, 2009 ರಲ್ಲಿ ಈ ಸಂಘಟನೆ ಗ್ಲೋಬಲ್ ವಿಂಡ್ ಎನರ್ಜಿ ಕೌನ್ಸಿಲ್ (GWEC) ಸಹಭಾಗಿತ್ವದಲ್ಲಿ ಈ ದಿನವನ್ನು ವಿವಿಧ ಕಾರ್ಯಕ್ರಮಗಳ ಜೊತೆಗೆ ಜಾಗತಿಕವಾಗಿ ಆಚರಿಸಲು ಪ್ರಾರಂಭಿಸಿತು. ಎರಡೂ ಸಂಸ್ಥೆಗಳು ಈ ದಿನದಂದು ಶುದ್ಧ ಗಾಳಿಯ ಮಹತ್ವದ ಬಗ್ಗೆ ಮತ್ತು ವಾತಾವರಣದಲ್ಲಿನ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡಲು ಜನರಿಗೆ ಅರಿವು ಮೂಡಿಸಲಾಗುತ್ತದೆ.
ಇದನ್ನೂ ಓದಿ: ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಲು ನೆರವಾಗಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ