AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Poetry: ಅವಿತಕವಿತೆ; ಅಳುವ ತಾಯಿಯ ಮುಖಕ್ಕೆ ಮೈಕಿಟ್ಟು

Poem : ‘ಸುದ್ದಿ ಮಾಧ್ಯಮದಲ್ಲಿರುವ ಕಾರಣ ಜಗತ್ತಿನ ಆಗುಹೋಗುಗಳು ಮನಸ್ಸಿನ ಮೇಲೆ ಸಣ್ಣದೊಂದು ನೋವಿನ ಗೆರೆಎಳೆಯುತ್ತಲೇ ಇರುತ್ತವೆ. ಇವುಗಳಿಗೆ ಹೇಗೆ ಸ್ಪಂದಿಸಬೇಕು ಎಂಬ ಇಕ್ಕಟ್ಟಿನಲ್ಲಿಯೇ ಕವನ ಹುಟ್ಟುತ್ತದೆ.’

Poetry: ಅವಿತಕವಿತೆ; ಅಳುವ ತಾಯಿಯ ಮುಖಕ್ಕೆ ಮೈಕಿಟ್ಟು
Follow us
ಶ್ರೀದೇವಿ ಕಳಸದ
|

Updated on:Mar 20, 2022 | 11:17 AM

AvithaKavite | ಅವಿತಕವಿತೆ : ಕವನ ನನ್ನಿಷ್ಟದ ಸಂಗತಿ. ಮನಸ್ಸಿಗೆ ತುಂಬಾ ಬೇಜಾರಾದಾಗಲೇ ನನ್ನಲ್ಲಿ ಕವನ ಹುಟ್ಟುವುದು. ನೋವುಗಳನ್ನು ಹೊರ ಹಾಕಲಿರುವ ಅಥವಾ ನನಗೆ ಹೇಳಬೇಕೆಂದು ಅನಿಸಿದನ್ನು ಹೇಳಲಿರುವ ಮಾಧ್ಯಮ ಅದು. ಬದುಕಿನ ಸುತ್ತಲೂ ನಡೆಯುತ್ತಿರುವ ಸಂಗತಿಗಳಿಗೆ ನಾನು ಸ್ಪಂದಿಸುವುದು ಕವನದ ಮೂಲಕವೇ. ನನ್ನ ಪಾಲಿಗೆ ಕವನ ಎಂದರೆ ಬಿದ್ದಾಗ ಕೈಹಿಡಿವ ಸಾಧನ. ನೋವು, ದುಃಖಗಳಿಂದ ಮೈಂಡ್ ಡೈವರ್ಟ್ ಮಾಡಲು ನಾನು ಕವಿತೆಗಳ ಮೊರೆ ಹೋಗುತ್ತೇನೆ. ಏಕಾಂತ ಬೇಕೆಂದಾಗ, ಒಬ್ಬಂಟಿ ಎಂದೆನಿಸಿದಾಗ ನಾನು ಕವಿತೆಗಳ ಮೊರೆ ಹೋಗುತ್ತೇನೆ. ಹಾಗಾಗಿ ಅದೊಂದು ಥೆರಪಿ. ಸುದ್ದಿ ಮಾಧ್ಯಮದಲ್ಲಿರುವ ಕಾರಣ ಜಗತ್ತಿನ ಆಗುಹೋಗುಗಳು ಮನಸ್ಸಿನ ಮೇಲೆ ಸಣ್ಣದೊಂದು ನೋವಿನ ಗೆರೆಎಳೆಯುತ್ತಲೇ ಇರುತ್ತವೆ. ಇವುಗಳಿಗೆ ಹೇಗೆ ಸ್ಪಂದಿಸಬೇಕು ಎಂಬ ಇಕ್ಕಟ್ಟು ನನ್ನಲ್ಲಿ ಇದ್ದೇ ಇರುತ್ತದೆ. ಇವುಗಳಿಂದ ಒಂದು ಕ್ಷಣ ಹೊರಗಿರಬೇಕು ಎಂದೆನಿಸಿದಾಗ ಕೆಲವೊಂದು ಸಾಲುಗಳನ್ನು ಗೀಚುತ್ತೇನೆ. ಆ ಸಾಲುಗಳು ಕವನದ ರೂಪ ಪಡೆಯಲು ಮತ್ತಷ್ಟು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಆಗೊಮ್ಮೆ ಈಗೊಮ್ಮೆ ಮಾತ್ರ ಕವನಗಳನ್ನು ಬರೆಯುತ್ತಿರುತ್ತೇನೆ. ರಶ್ಮಿ ಕಾಸರಗೋಡು, ಕವಿ, ಪತ್ರಕರ್ತೆ (Rashmi Kasaragodu)

ಮೂಟೆ

ಈ ಮೂಟೆಗಳನ್ನು ಇಲ್ಲೇ ಕೆಳಗಿಡುತ್ತಿದ್ದೇನೆ ಪ್ರಯಾಣ ಹೊರಟಾಗ ಬಸ್ಸು, ಕಾರಿನ ಕಿಟಕಿಯಿಂದ ತಿಂದು ಬಿಸಾಡಿದ ಪ್ಲಾಸ್ಟಿಕ್ ಪೊಟ್ಟಣಗಳು ಕಕ್ಕಿದ ತ್ಯಾಜ್ಯಗಳೆಲ್ಲವೂ ಪ್ರಯಾಣಿಕರಿಗಾಗಿ ಇರಿಸಿದ್ದೇನೆ

ಯಾರನ್ನೋ ಅವಮಾನಿಸಿ ಹೊಡೆದು ಬಡಿದು ಲೂಟಿ ಮಾಡಿ ನೀವು ತಿಂದುಂಡು ತೇಗಿದ ಆಹಾರ-ಅಹಂಕಾರದ ಬಿಲ್ ಇದರೊಟ್ಟಿಗೆ ಇಟ್ಟಿದ್ದೇನೆ

ಯಾರದ್ದೋ ಖಾಸಗಿ ದೃಶ್ಯಗಳ ವೈರಲ್ ವಿಡಿಯೋಗಳು ಸೆಲೆಬ್ರಿಟಿಗಳನ್ನು ಬೆನ್ನಟ್ಟಿ ಪಾಪರಾಜಿಗಳು ತಂದ ಹಸಿ-ಬಿಸಿ ದೃಶ್ಯಗಳು ಅಳುವ ತಾಯಿಯ ಮುಖಕ್ಕೆ ಮೈಕಿಟ್ಟು ಹೇಗನಿಸುತ್ತೇ ಎಂದು ಕೇಳಿದ ಮಾಧ್ಯಮದವರ ಬೈಟುಗಳು

ದನದ ಮಾಂಸ ತಿಂದನೆಂದು ಗುಂಪು ಹಲ್ಲೆಯಲ್ಲಿ ಸತ್ತ ಮನುಷ್ಯನ ದೇಹದ ಹಿಡಿ ಮಾಂಸ ಹೆಣ್ಣು ಭೋಗದ ವಸ್ತು ಎಂದು ಹಸುಳೆಯನ್ನೂ ಹದಿಹರಿಯದವಳನ್ನೂ ಮುಕ್ಕಿ ತಿಂದು ಕತ್ತು ಹಿಸುಕಿದ ದುಪಟ್ಟಾ ಜಾತಿ, ಮರ್ಯಾದೆಯ ಹೆಸರಲ್ಲಿ ನೀವು ಹೊಡೆದು ಸಾಯಿಸಿದ ಹೆಣ್ಣು- ಗಂಡಿನ ಹೃದಯದ ಚೂರು ಕಾಗದದಲ್ಲಿ ಸುತ್ತಿಟ್ಟಿದ್ದೇನೆ

ಧರ್ಮದ ಹೆಸರಲ್ಲಿ ಹೊಡೆದಾಡಿ ಸತ್ತವರ ಕೆಂಪು ನೆತ್ತರು ಹೊಗಳಿಕೆಯ ತೆಗಳಿಕೆಯ ಮಾತು-ಬೈಗುಳ

ತೊಟ್ಟ ಉಡುಗೆ ನೋಡಿ ನೀವು ಕೊಟ್ಟ ನಡತೆಯ ಸರ್ಟಿಫಿಕೇಟ್ ಗಾಸಿಪ್ ಸ್ಟೋರಿಗಳಿಂದ ಒಡೆದ ಮನೆ-ಮನ ನಿಮಗೆ ಸಿಕ್ಕ ಲೈಕ್, ಶೇರ್​ಗಳು ಬೇರೇಯೇ ಇದೆ

ಈ ಮೂಟೆಯನ್ನು ಹೊರಲಾಗದೆ ಬಿಟ್ಟು ಹೋಗುತ್ತೇನೆ ಕ್ಷಮಾಪಣೆ ಪತ್ರಕ್ಕೆ ಸಹಿ ಹಾಕಿ ಹಾರಿ ಹೋಗದಂತೆ ಕಲ್ಲನ್ನಿರಿಸಿದ್ದೇನೆ

ಅದೇ ಕಲ್ಲು ಪ್ರತಿಭಟನೆಯ ವೇಳೆ ಪೊಲೀಸಪ್ಪನ ಹಣೆ ಒಡೆದದ್ದು

ಹೇಸಿಗೆಯಿಂದ ಮೂಗು ಮುಚ್ಚಿ ಅತ್ತಿತ್ತ ನೋಡಬೇಡ ಕ್ಯಾಮೆರಾ ತೋರಿಸಿ It’s a Prank ಎಂದು ಹೇಳಲು ಅಲ್ಲಿ ಯಾರೂ ಇರುವುದಿಲ್ಲ

ಇದನ್ನೂ ಓದಿ : Poetry: ಅವಿತಕವಿತೆ; ನನ್ನ ಪುಟ್ಟತಂಗಿಯ ಪುಟ್ಟಪುಟ್ಟ ಪಾದಗಳನ್ನೂ ಹೊತ್ತೊಯ್ದರು ಅವರು

Avithakavithe Poetry Column by Kannada Writer Journalist Rashmi Kasaragodu

ಕೈಬರಹದೊಂದಿಗೆ ರಶ್ಮಿ ಕಾಸರಗೋಡು

ರಶ್ಮಿ ಕಾಸರಗೋಡು : ಊರು ಗಡಿನಾಡು ಜಿಲ್ಲೆಯ ಕಾಸರಗೋಡಿನ ಪುಟ್ಟ ಗ್ರಾಮ ಕಲ್ಲಕಟ್ಟ. ಓದಿದ್ದು ಇಂಜಿನಿಯರಿಂಗ್ ಆದರೂ ಕೈಹಿಡಿದದ್ದು ಸುದ್ದಿ ಮಾಧ್ಯಮ. ಸಾಹಿತ್ಯದ ಒಡನಾಟವಿರುವ ಪರಿಸರದಲ್ಲಿ ಬೆಳೆದ ಇವರಿಗೆ ಶಾಲಾ ಕಾಲೇಜುಗಳಲ್ಲಿ ಕತೆ, ಕವನ, ಪ್ರಬಂಧ ಸ್ಪರ್ಧೆಗಳು ಬರವಣಿಗೆಯ ಆಸಕ್ತಿ ಹೆಚ್ಚುವಂತೆ ಮಾಡಿತು.  ಕಾಸರಗೋಡಿನ ಭಾಷಾ ವೈವಿಧ್ಯತೆ ಕನ್ನಡದ ಜತೆಗೆ ಮಲಯಾಳಂನ್ನೂ ಕಲಿಸಿತು. ಮಲಯಾಳಂ ಸಾಹಿತ್ಯವನ್ನು ಹೈಸ್ಕೂಲ್​ನಿಂದಲೇ ಓದಲಾರಂಭಿಸಿದರು. ಇವರು ಓದಿದ ಶಾಲಾ ಕಾಲೇಜುಗಳಲ್ಲಿ ಕನ್ನಡ ಇಲ್ಲದೇ ಇದ್ದರೂ ಕನ್ನಡ ಪುಸ್ತಕಗಳನ್ನು ಹೆಚ್ಚೆಚ್ಚು ಓದುವಂತೆ ಮಾಡಿದ್ದು ಇವರ ತಾಯಿ. ಕಾಲೇಜು ಮುಗಿಸಿ ಕೆಲಸಕ್ಕೆ ಸೇರಿದ ಮೇಲೆ ಪತ್ರಿಕೆಗಳಲ್ಲಿ ಓದುಗರ ಪತ್ರ, ಕವನ ಬರೆಯುತ್ತ ಬ್ಲಾಗ್​ ಬರೆಯತೊಡಗಿದರು. ಆನ್​ಲೈನ್​ ಮಾಧ್ಯಮದ ಮೂಲಕ ಪತ್ರಿಕೋದ್ಯಮಕ್ಕೆ ಬಂದ ಇವರು, ಕನ್ನಡಪ್ರಭ, ಪ್ರಜಾವಾಣಿಯಲ್ಲಿ ಪತ್ರಕರ್ತೆಯಾಗಿದ್ದರು. ‘ನೆನಪಿನ ಮಳೆಯಲ್ಲಿ’  ಮೊದಲ ಕವನ ಸಂಕಲನ. ಸಾಧಕಿಯರ ಬಗ್ಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಬರೆದ ಲೇಖನಗಳ ಗುಚ್ಛ- ‘ಅವಳು ಮತ್ತೊಬ್ಬಳು’ ಎಂಬ ಕೃತಿ. ಸದ್ಯ ಟಿವಿ9 ಕನ್ನಡ ಡಿಜಿಟಲ್​ ಉದ್ಯೋಗಿ.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ : Poetry: ಅವಿತಕವಿತೆ: ಹಾಸಿದ ಚಾಪೆಯ ಖಾಲಿತನ ರಾತ್ರಿಗಳ ಬೆನ್ನ ಮೇಲಿನ ಗುರುತು

Published On - 11:05 am, Sun, 20 March 22

ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ