Sign In

By signing in or creating an account, you agree with Associated Broadcasting Company's Terms & Conditions and Privacy Policy.

Qatar Mail: ಪರವಾನಗಿ ಎನ್ನುವ ಈ ಪರಮವಿಚಾರ!

Gate Pass : ಮೀಡಿಯಾ ಆಫೀಸನ್ನು ಪ್ರವೇಶಿಸಲು, ಗೇಟ್ ಪಾಸ್ ಬೇಕು ಎಂದು ತಿಳಿದಾಗ ನಾನಾಗ ಇನ್ನೂ ಪ್ರೈಮರಿ ಸ್ಕೂಲಿನಲ್ಲಿದ್ದೆ. ಮಂಡ್ಯದ ಹಳ್ಳಿಯವರಾದ ನಮಗೆ ಬೆಂಗಳೂರು ಯಾವ ವಿದೇಶಕ್ಕೂ ಕಡಿಮೆಯೆನಿಸುತ್ತಿರಲಿಲ್ಲ.

Qatar Mail: ಪರವಾನಗಿ ಎನ್ನುವ ಈ ಪರಮವಿಚಾರ!
ಪ್ರಾತಿನಿಧಿಕ ಚಿತ್ರ : ಚೈತ್ರಾ ಅರ್ಜುನಪುರಿ
Follow us
ಶ್ರೀದೇವಿ ಕಳಸದ
|

Updated on: Mar 18, 2022 | 8:51 AM

ಕತಾರ್ ಮೇಲ್ | Qatar Mail : ದುರಾದೃಷ್ಟಕ್ಕೆ, ಅತಿಕ್ರಮಣ ಪ್ರವೇಶ ಮತ್ತು ಪರವಾನಗಿ ಇಲ್ಲದೆ ಚಿತ್ರೀಕರಣದ ಜೊತೆಜೊತೆಗೆ ಮದ್ಯ ಸೇವನೆಯ ಅಪರಾಧವೂ ಸೇರಿಕೊಂಡು, ಗುರುವಾರ ಜೈಲು ಸೇರಿದ ರಿಚರ್ಡ್​ನನ್ನು ಭಾನುವಾರ ನ್ಯಾಯಾಧೀಶರ ಮುಂದೆ ನಿಲ್ಲಿಸಿ ದಂಡ ತೆರುವವರೆಗೂ ಕಾರಾಗೃಹ ಶಿಕ್ಷೆಗೆ ಗುರಿ ಪಡಿಸಲಾಗಿತ್ತು. ಕೊನೆಗೆ, ಕಂಪನಿಯ ಮಾಲೀಕ ದಂಡ ತೆತ್ತು ರಿಚರ್ಡ್​ನನ್ನು ಜೈಲಿನಿಂದ ಬಿಡಿಸಿದರು. ಅದರ ಬಳಿಕವೂ ಆತ ಇನ್ನೂ ಒಂದೆರಡು ಬಾರಿ ಜೈಲಿನ ಮುಖ ನೋಡುವಂತಾದರೂ ಅದು ಕುಡಿತದ ಕಾರಣಕ್ಕೆ ಮಾತ್ರ, ಆಫೀಸಿನ ವಿಚಾರದಲ್ಲಿ ಅಲ್ಲ. ಎಷ್ಟೇ ಪರಿಚಯವಿರಲಿ, ಇಲ್ಲಿ ಸೆಕ್ಯೂರಿಟಿಗಳು ಗೇಟ್ ಪಾಸ್ ತಪಾಸಣೆ ಮಾಡದೆ ಕಚೇರಿಗಳಿಗೆ ಪ್ರವೇಶಿಸಲು ಬಿಡುವುದಿಲ್ಲ. ಅವರಿಗೆ ಅವರದೇ ಆದ ಸುರಕ್ಷತೆ ಮತ್ತು ಭದ್ರತೆಯ ನಿಯಮಗಳಿರುತ್ತವೆ, ಅವನ್ನು ಅವರು ಮತ್ತು ನಾವು ಪಾಲಿಸಲೇಬೇಕಾಗುತ್ತದೆ. ಈ ನಿಯಮಗಳು ಸರ್ಕಾರಿ ಕಚೇರಿ ಮತ್ತು ಮೀಡಿಯಾ ಆಫೀಸುಗಳಲ್ಲಿ ಬಹಳ ಕಟ್ಟುನಿಟ್ಟಾಗಿರುತ್ತದೆ. ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ನೈಟ್ ಫೋಟೋಗ್ರಾಫರ್ (Chaitra Arjunpuri)

(ಪತ್ರ 6, ಭಾಗ 3)

ಅಷ್ಟಕ್ಕೂ, ಕಚೇರಿಯೊಂದನ್ನು, ಅದರಲ್ಲೂ ಮೀಡಿಯಾ ಆಫೀಸನ್ನು ಪ್ರವೇಶಿಸಲು, ಅನುಮತಿ, ಗೇಟ್ ಪಾಸ್ ಬೇಕು ಎನ್ನುವುದು ಮೊದಲ ಬಾರಿಗೆ ತಿಳಿದದ್ದು ಬೆಂಗಳೂರಿನಲ್ಲಿ. ನಾನಾಗ ಇನ್ನೂ ಪ್ರೈಮರಿ ಸ್ಕೂಲಿನಲ್ಲಿ ಓದುತ್ತಿದ್ದೆ. ಮಂಡ್ಯದ ಹಳ್ಳಿ ಜನರಾದ ನಮಗೆ ಬೆಂಗಳೂರು ಯಾವ ವಿದೇಶಕ್ಕೂ ಕಡಿಮೆಯೆನಿಸುತ್ತಿರಲಿಲ್ಲ. ವರ್ಷಕ್ಕೊಮ್ಮೆ ಮೌಲ್ಯಮಾಪನಕ್ಕೆಂದು ಅಪ್ಪ ಬೆಂಗಳೂರಿಗೆ ಹೋಗುವಾಗ, ಕೊನೆಯ ದಿನ ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದರು. ಮೌಲ್ಯಮಾಪನ ಮುಗಿದ ಮೇಲೆ, ಮಧ್ಯಾಹ್ನ ಪ್ರಜಾವಾಣಿ ಕಚೇರಿಗೂ ಹೋಗುತ್ತಿದ್ದೆವು. ಆ ಕಚೇರಿ ನನಗೆ ಬಹಳ ಇಷ್ಟವಾಗುತ್ತಿದ್ದುದ್ದಕ್ಕೆ ಕಾರಣ ಅಲ್ಲಿದ್ದ ಲಿಫ್ಟ್. ನಿಜ ಹೇಳಬೇಕೆಂದರೆ, ನಾನು ಮೊದಲ ಬಾರಿ ಲಿಫ್ಟ್ ನೋಡಿದ್ದು, ಹತ್ತಿದ್ದು ಪ್ರಜಾವಾಣಿಯಲ್ಲೇ! ಮಾತ್ರವಲ್ಲ, ಬೆಂಗಳೂರೆಂದರೆ ಆಗ ನನ್ನ ಪಾಲಿಗೆ ಎಂ.ಜಿ. ರಸ್ತೆಯ ಪ್ರಜಾವಾಣಿ ಮತ್ತು ಇಟ್ಟಿಗೆ ಬಣ್ಣದ ಸೆಂಟ್ರಲ್ ಕಾಲೇಜು.

ಎಂ.ಜಿ.ರಸ್ತೆಯಲ್ಲಿರುವ ಆ ಕಟ್ಟಡದ ಕೆಳಗೆ ಕಾಲಿಡುತ್ತಿದ್ದಂತೆಯೇ ಪ್ರಜಾವಾಣಿ ಆಫೀಸಿಗೋ, ಡೆಕ್ಕನ್ ಹೆರಾಲ್ಡ್ ಆಫೀಸಿಗೋ ಎಂದು ವಿಚಾರಿಸಿ, ಯಾರನ್ನು ಭೇಟಿ ಮಾಡಬೇಕು ಎಂದು ಕೇಳುತ್ತಿದ್ದರು. ಅಪ್ಪ ಹೇಳುತ್ತಿದ್ದ ಹೆಸರಿನ ಎಡಿಟರ್ ಅಥವಾ ಡೆಸ್ಕ್ ಎಡಿಟರ್ ಬಂದಿದ್ದರೆ ಅವರಿಗೆ ಕರೆ ಮಾಡಿ, ಇಂಥವರು ಮದ್ದೂರಿನ ಸ್ಟ್ರಿಂಗರ್ ಬಂದಿದ್ದಾರೆ, ಕಳುಹಿಸಬಹುದೇ ಎಂದು ವಿಚಾರಿಸುತ್ತಿದ್ದರು. ಅವರು ಆ ದಿನ ರಜೆಯಲ್ಲಿದ್ದರೆ ಬೇರೆಯವರನ್ನು ಭೇಟಿ ಮಾಡಬೇಕೆ ಎಂದು ವಿಚಾರಿಸಿ ಅವರ ಅನುಮತಿಯನ್ನು ಪಡೆದು, ಸಂದರ್ಶಕರ ಹಾಜರಿ ಪುಸ್ತಕದಲ್ಲಿ, ಹೆಸರು, ದಿನಾಂಕ, ಸಮಯ, ಸಹಿ, ಯಾರನ್ನು ಭೇಟಿ ಮಾಡುತ್ತಿದ್ದೇವೆ, ಭೇಟಿಯ ಕಾರಣವನ್ನು ಬರೆಯಿಸಿಕೊಂಡು ಒಳಗೆ ಹೋಗಲು ಬಿಡುತ್ತಿದ್ದರು. ಪ್ರಿಂಟಿಂಗ್ ಮಷೀನ್ ಗಳನ್ನು ಹಾದು, ಲಿಫ್ಟ್ ಹತ್ತಿ ಮೂರನೇ ಮಹಡಿಯಲ್ಲಿರುವ ಪ್ರಜಾವಾಣಿಯಲ್ಲಿ ಸಂಪಾದಕರನ್ನು ಭೇಟಿ ಮಾಡಿ, ಕೆಲವೊಮ್ಮೆ ಅಲ್ಲಿನ ಮೆಸ್ ನಲ್ಲಿ ಊಟ ಮಾಡಿ ಬರುತ್ತಿದ್ದೆವು. ಬೇರೆ ಪತ್ರಿಕೆಯ ಕಚೇರಿಗಳಲ್ಲಿಲ್ಲದ ಸೆಕ್ಯೂರಿಟಿ ಪ್ರಜಾವಾಣಿ ಕಟ್ಟಡದಲ್ಲಿ ಮಾತ್ರವೇಕೆ ಎನ್ನುವುದು ಆಗ ಅರ್ಥವಾಗುತ್ತಿರಲಿಲ್ಲ.

ಭಾಗ 2 : Qatar Mail: ಪ್ರವೇಶ ಪರವಾನಗಿ ಮುಗಿದಲ್ಲಿ ಜೈಲಿನಲ್ಲಿ ಉಪಚಾರ ಗ್ಯಾರಂಟಿ

ಓದು ಮುಗಿಸಿ ಬೆಂಗಳೂರಿಗೆ ಹೋದ ಮೇಲೆ, ನನ್ನ ರೂಮ್ ಮೇಟ್ ಕೆಲಸ ಮಾಡುತ್ತಿದ್ದ ಇಂಡಿಯನ್ ಎಕ್ಸ್‌ಪ್ರೆಸ್/ಕನ್ನಡಪ್ರಭ ಕಚೇರಿಗೆ ಮೊದಲ ಬಾರಿಗೆ ಭೇಟಿ ಕೊಟ್ಟಾಗ ದೊಡ್ಡ ಅಚ್ಚರಿ ಕಾದಿತ್ತು. ಅಲ್ಲಿ ಯಾವುದೇ ಸೆಕ್ಯೂರಿಟಿ ಚೆಕ್ ಆಗಲಿ, ಸಂದರ್ಶಕರ ಹಾಜರಿ ಪುಸ್ತಕವಾಗಲಿ ಇರಲಿಲ್ಲ. ಯಾರು ಬೇಕಾದರೂ ಪತ್ರಿಕೆಯ ಕಚೇರಿಗೆ ಭೇಟಿ ನೀಡಬಹುದಿತ್ತು. ಆಗ ಅಪ್ಪ ಅದರ ಹಿಂದಿನ ಕಾರಣವನ್ನು ವಿವರಿಸಿದ್ದರು. ಇತರೆ ಪತ್ರಿಕೆಗಳ ಹಾಗೆ ಪ್ರಜಾವಾಣಿ/ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಪ್ರಿಂಟಿಂಗ್ ಬೇರೆಡೆಯಾಗದೆ ಅದೇ ಕಟ್ಟಡದಲ್ಲಾಗುತ್ತದೆ, ಹಾಗಾಗಿ ಸುರಕ್ಷತೆಯ ಬಗ್ಗೆ ಸದಾ ಎಚ್ಚರ ವಹಿಸಬೇಕಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಕಳೆದ ಸಲ ಭಾರತಕ್ಕೆ ಬಂದಾಗ ಪ್ರಜಾವಾಣಿಯ ಕಟ್ಟಡಕ್ಕೆ ಹೋಗಿದ್ದೆ, ಅಲ್ಲಿ ಕೆಲಸ ಮಾಡುತ್ತಿರುವ ಗೆಳೆಯ ತಾನೇ ಕೆಳಗೆ ಬಂದು ಮಾತನಾಡಿಸಿಕೊಂಡು ಹೋಗಿದ್ದ!

ಯಾವುದೇ ದೇಶವಿರಲಿ, ಒಂದು ಸಂಸ್ಥೆಯಲ್ಲಿ ಗೇಟ್ ಪಾಸ್ ವ್ಯವಸ್ಥೆ ಜಾರಿಯಲ್ಲಿದ್ದರೆ ಅಲ್ಲಿನ ಆವರಣದಲ್ಲಿ ಅನಧಿಕೃತ ಚಲನೆಯನ್ನು ನಿರ್ಬಂಧಿಸುವುದು ಮಾತ್ರವಲ್ಲದೆ, ಉದ್ಯೋಗಿಗಳ ಚಲನೆಯ ಸಮಯವನ್ನೂ ದಾಖಲಿಸುತ್ತಿದ್ದಾರೆ ಎಂದರ್ಥ. ಒಟ್ಟಿನಲ್ಲಿ, ಯಾರನ್ನಾದರೂ ಭೇಟಿ ಮಾಡಬೇಕಾದರೆ ಅಥವಾ ಒಂದು ಕಚೇರಿಗೆ ಹೋಗಬೇಕಾದರೆ ಅಲ್ಲಿ ಕೆಲಸ ಮಾಡುವ ಗೆಳೆಯರು, ಪರಿಚಯಸ್ಥರಿದ್ದರೆ ಸಾಲದು, ಕಡ್ಡಾಯವಾಗಿ ಪ್ರವೇಶ ಪರವಾನಗಿ ಇರಲೇಬೇಕು. ಪರವಾನಗಿ ಎನ್ನುವುದು ಏನೆಲ್ಲ ವಿಷಯಗಳಿಗಾಗಿ ಅದೆಷ್ಟೊಂದು ಮುಖ್ಯ!

(ಮುಗಿಯಿತು)

(ಮುಂದಿನ ಪತ್ರ : 1.4.2022)

ಎಲ್ಲ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/qatar-mail

ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್