ಆಧುನಿಕ ಶಕುಂತಲಾ ಕಥನ: ಥೀಸಿಸ್ ಬರೆಯಲು ಗೈಡ್ ನನಗೆ ಬೇಕಾದ ಮಾರ್ಗದರ್ಶನ ನೀಡುತ್ತಿರಲಿಲ್ಲ, ಕಷ್ಟದ ಹಾದಿ ಅದಾಗಿತ್ತು
1972 ರ ಹೊತ್ತಿಗೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿಗಾಗಿ ಕಪ್ಪೆಗಳ ಕುರಿತು ನನ್ನ ಹೆಚ್ಚಿನ ಪ್ರಾಯೋಗಿಕ ಕೆಲಸಗಳು ಒಂದು ನಿರ್ದಿಷ್ಟ ಹಂತಕ್ಕೆ ಬಂದವು.
Adhunika Shakuntala Kathana
1972 ರ ಹೊತ್ತಿಗೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿಗಾಗಿ ಕಪ್ಪೆಗಳ ಕುರಿತು ನನ್ನ ಹೆಚ್ಚಿನ ಪ್ರಾಯೋಗಿಕ ಕೆಲಸಗಳು ಒಂದು ನಿರ್ದಿಷ್ಟ ಹಂತಕ್ಕೆ ಬಂದವು. ಸಾಮಾನ್ಯವಾಗಿ ಒಂದು ಪ್ರಯೋಗ ಪೂರ್ಣಗೊಳಿಸಿದ ನಂತರ, ನನ್ನ ಮಾರ್ಗದರ್ಶಿಯೊಂದಿಗೆ ಬಂದ ಫಲಿತಾಂಶವನ್ನು ಚರ್ಚಿಸಿ, ಮುಂದಿನ ಪ್ರಯೋಗಗಳನ್ನು ಮಾಡುವುದು ನಡೆದು ಬಂದ ದಾರಿ.
ನನ್ನ ಗೈಡ್ ನನಗೆ ಕನಿಷ್ಠ ಮಾಹಿತಿಯನ್ನೂ ತಿಳಿಸುತ್ತಿರಲಿಲ್ಲ. ಅವರು ಫಲಿತಾಂಶಗಳನ್ನು ನೋಡಿ ಮುಂದಿನ ತನಿಖೆಗಳನ್ನು ಕೈಗೊಳ್ಳಲು ಹೇಳುತ್ತಿದ್ದರು. ನನಗೆ ಯಾವುದೇ ಹಿನ್ನೆಲೆ ವಿವರಣೆಯನ್ನು ನೀಡದೆ ಮುಂದಿನ ಪ್ರಯೋಗಗಳನ್ನು ಮಾಡಲು ಹೇಳುತ್ತಿದ್ದರು. ಪ್ರಶ್ನೆಗಳನ್ನು ಕೇಳಿ ಅವರನ್ನು ಅಸಮಾಧಾನಗೊಳಿಸಲು ನಾನು ಹೆದರುತ್ತಿದ್ದೆ.
ಇದು ಹೀಗೆ ಮೂರು ವರ್ಷಗಳ ಕಾಲ ನಡೆಯಿತು. ನಾನೇ ಲೈಬ್ರರಿಗೆ ಹೋಗಿ ಸಂಬಂಧಪಟ್ಟ ತನಿಕಾ ಪ್ರಕಟಣೆಗಳನ್ನು ಓದಿ ನನ್ನ ಫಲಿತಾಂಶಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಇದ್ದಕ್ಕಿದ್ದಂತೆ ಅವರು ನಾನು ಮಹಾ ಪ್ರಬಂಧಕ್ಕಾಗಿ ಸಾಕಷ್ಟು ಸಂಶೋಧನಾ ಡೇಟಾವನ್ನು ಕಲೆಹಾಕಿದ್ದೇನೆಂದೂ, ಇನ್ನು ತನಿಖಾ ಪ್ರಯೋಗಗಳನ್ನು ನಿಲ್ಲಿಸಬಹುದು ಎಂದು ಹೇಳಿದರು.
ಆದರೆ ಅವರು ನನಗೆ ಬರೆಯಲು ಪ್ರಾರಂಭಿಸಲು ಹೇಳಲೂ ಇಲ್ಲ, ಅದಕ್ಕೆ ಬೇಕಾದ ಮಾರ್ಗದರ್ಶನವನ್ನೂ ನೀಡಲಿಲ್ಲ. ಈ ಮಧ್ಯೆ ನನ್ನ ದುರಾದೃಷ್ಟಕ್ಕೆ ಅವರು ಅಮೇರಿಕಾದಲ್ಲಿ ನಡೆಯುತ್ತಿದ್ದ ಸಮ್ಮೇಳದಲ್ಲಿ ಭಾಗವಹಿಸಲು, ನಂತರ ವಿದೇಶ ಸುತ್ತಲು ಎರಡು ತಿಂಗಳು ಹೊರಟುಹೋದರು.
ವಿದೇಶಕ್ಕೆ ಹೋಗುವ ಸಂಭ್ರಮ ಅವರದು. ತೀಸಿಸ್ ಬರೆಯಲು ಇನ್ನೂ ಆರಂಭಿಸಿಲ್ಲ ಅನ್ನೋ ಸಂಕಟ ನನ್ನದು. ಅಲ್ಲಿಂದ ಬಂದ ಮೇಲಾದರೂ ಬರೆಯಲಾರಾಂಭಿಸಬಹುದೆಂಬ ನನ್ನಾಸೆ ಮತೊಮ್ಮೆ ಮೂರುಟಿ ಹೋಯಿತು. ಕೆಲವೇ ದಿನಗಳಲ್ಲಿ ಅವರು ಅಸೋಸಿಯೇಟ್ ಪ್ರೊಫೆಸರ್ ಆಗಿ ಬೆಂಗಳೂರು ಕೃಷಿವಿಶ್ವವಿದ್ಯಾನಿಲಯಕ್ಕೆ ಹೊರಟುಹೋದರು.
ನನ್ನದೀಗ ತ್ರಿಶಂಕು ಸ್ವರ್ಗ. ಕೆಲಸ ಮುಗಿದಿದೆ. ಗೈಡ್ ಬೇರೆ ಯೂನಿವರ್ಸಿಟಿಯಲ್ಲಿದ್ದಾರೆ. ಆಗ 1972-73 ರಲ್ಲಿ ಅವರನ್ನು ಭೇಟಿಯಾಗಬೇಕಾದರೆ ಹರಸಾಹಸ ಮಾಡಬೇಕಿತ್ತು. ಹೆಬ್ಬಾಳಕ್ಕೆ ಬರಬೇಕಾದರೆ ಯೆಲಹಂಕದ ಬಸ್ ಹಿಡಿದು ಬರಬೇಕು. ಅದು ಗಂಟೆಗೊಂದೋ ಎರಡು ಗಂಟೆಗೊಂದೊ ಸಿಗುತ್ತಿತ್ತು.
ಇಷ್ಟೆಲ್ಲಾ ಕಷ್ಟು ಪಟ್ಟು ಹೆಬ್ಬಾಳಕ್ಕೆ ಬಂದರೆ, ಅವರದು ಒಂದೇ ಉತ್ತರ : ಬರೆಯೋಣ ನಾನಾಗೇ ಬರೆಯಲು ನನಗೆ ಅವರು ಯಾವುದೇ ತರಬೇತಿ ನೀಡಿರಲಿಲ್ಲ. ನಾನೇ ಧ್ಯರ್ಯ ಮಾಡಿ ಅಷ್ಟು ಇಷ್ಟು ಬರೆದು ತೋರಿಸಿದರೆ ಅದನ್ನ ಅವರು ಒಪ್ಪುತ್ತಿರಲಿಲ್ಲ. ಕೆಲವು ತಿಂಗಳುಗಳ ಕಾದ ನಂತರ ನಾನು ಏನಾದರೂ ಮಾಡಲೇಬೇಕು ಎಂದು ನನಗೆ ಅನ್ನಿಸಿತು.
ನನ್ನ ಎಲ್ಲಾ ಸಂಶೋಧನಗಳ ಡೇಟಾದ ದಾಖಲೆಗಳನ್ನು ಕ್ರಮಬದ್ಧವಾಗಿ ದಾಖಲಿಸುತಿದ್ದೆ ಮೊದಲು ಒರಟು ಟಿಪ್ಪಣಿ (rough data) ನೋಟ್ ಪುಸ್ತಕಗಳಲ್ಲಿ ಬರೆದಿಟ್ಟು, ನಂತರ ಅವುಗಳನ್ನು ಫಾರ್ಮುಲಾ ಬಳಸಿ ಅಂಕಿಅಂಶಗಳನ್ನಾಗಿ ಪರಿವರ್ತಸಿ ಮತ್ತ್ತೊಂದು ರೆಕಾರ್ಡ್ ಪುಸ್ತಕಕ್ಕೆ ಟಿಪ್ಪಣಿ ಸಮೇತ ವರ್ಗಾಯಿಸುತ್ತಿದ್ದೆ.
ನಾನು ಈಗ ಆಡಿಕೆ ಕತ್ತರಿಯಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿದ್ದೆ. ನನಗೆ ಸಹಾಯ ಮಾಡುವ ಏಕೈಕ ವ್ಯಕ್ತಿ ಎಂದರೆ ವಿಭಾಗದ ಮುಖ್ಯಸ್ಥರಾದ ದಿವಂಗತ ಪ್ರೊ.ಪಂಪಾಪತಿ ರಾವ್.
ನಾನು ಅವರನ್ನು ಭೇಟಿ ಮಾಡಿ, ನನ್ನ ಸಮಸ್ಯೆಯನ್ನು ವಿವರಿಸಿದೆ, ನನ್ನ . ನನ್ನ ಎಲ್ಲಾ ಸಂಶೋಧನಗಳ ಡೇಟಾದ ದಾಖಲೆಗಳನ್ನು ಕ್ರಮಬದ್ಧವಾಗಿ ದಾಖಲಿಸುತಿದ್ದೆ ಮೊದಲು ಒರಟು ಟಿಪ್ಪಣಿ (rough data) ನೋಟ್ ಪುಸ್ತಕಗಳಲ್ಲಿ ಬರೆದಿಟ್ಟು, ನಂತರ ಅವುಗಳನ್ನು ಫಾರ್ಮುಲಾ ಬಳಸಿ ಅಂಕಿಅಂಶಗಳನ್ನಾಗಿ ಪರಿವರ್ತಸಿ ಮತ್ತ್ತೊಂದು ರೆಕಾರ್ಡ್ ಪುಸ್ತಕಕ್ಕೆ ಟಿಪ್ಪಣಿ ಸಮೇತ ವರ್ಗಾಯಿಸುತ್ತಿದ್ದೆ.
ಎಲ್ಲಾ ಫಲಿತಾಂಶಗಳನ್ನು ಅವರ ಮೆಜೀನಮೇಲಿಟ್ಟು, ಸಂಶೋಧನಾ ಪ್ರಬಂಧವನ್ನು ಬರೆಯಲು ನನ್ನ ಮಾರ್ಗದರ್ಶಿ ನನಗೆ ಸಹಾಯ ಮಾಡಲು ಹಿಂಜರಿಯುತ್ತಿದ್ದರಿಂದ, ಈ ಡೇಟಾ ನನಗೆ ನಿಷ್ಪ್ರಯೋಜಕವಾಗಿದೆ ಎಂದು ಹೇಳಿದೆ. ಅದ್ದರಿಂದ ನಾನು ಡಾಕ್ಟರೇಟ್ ಪದವಿಗೆ ವಿದಾಯ ಹೇಳುತ್ತಿದ್ದೇನೆoದೂ, ನನಗೆ ಉಪನ್ಯಾಸಕ ಹುದ್ದೆಯನ್ನು ಕೊಡಿಸಬೇಕೆಂದು ವಿನಂತಿಸಿದೆ.
ಅವರು ನನ್ನಿ ನಿರ್ಧಾರ ಕೇಳಿ ಹೌಹಾರಿದರು. ನಾನು ಮೂರು ವರ್ಷಗಳ ಸಂಶೋಧನೆಯನ್ನು ತ್ಯಾಗ ಮಾಡುತ್ತಿದ್ದೇನೆ ಎಂದು ನಂಬಲು ಅವರಿಗೆ ಸಾಧ್ಯವಾಗಲಿಲ್ಲ. ಸಮಸ್ಯೆಗೆ ಪರಿಹಾರದ ದಾರಿ ಕಂಡುಕೊಳ್ಳುವವರೆಗೂ ತಾಳ್ಮೆಯಿಂದ ಇರುವಂತೆ ಹೇಳಿದರು. ಕೊನೆಗೆ ಅವರು ನನ್ನ ಗೈಡ್‌ನೊಂದಿಗೆ, ನನ್ನನ್ನೂ ಕೂರಿಸಿಕೊಂಡು ಒಂದು ಸಭೆಯನ್ನು ಏರ್ಪಡಿಸಿದರು.
ನಮ್ಮಿಬ್ಬರೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಮೂರು ತಿಂಗಳೊಳಗೆ ನನ್ನ ಪ್ರಬಂಧವನ್ನು ಪೂರ್ಣಗೊಳಿಸಲು ವೇಳಾಪಟ್ಟಿಯನ್ನು ರಚಿಸಿದರು.ನನ್ನ ಗೈಡ್ ಅವರ ಶಿಷ್ಯನಾದ ಕಾರಣ ಕೋಲೆ ಬಸವನoತೆ ಎಲ್ಲದಕ್ಕೂ ತಲೆಯಾಡಿಸಿ ಒಪ್ಪಿಗೆ ಸೂಚಿಸಿದರು. ನನ್ನ ಎಲ್ಲಾ ಸಮಸ್ಯೆಗಳು ಗಾಳಿಯಲ್ಲಿ ಮಾಯವಾದಂತೆ ತೋರಿತು.
ನನ್ನ ಸಂಶೋಧನಾ ಮಾರ್ಗದರ್ಶಿ ಅಂತಿಮವಾಗಿ ನನ್ನ ಪ್ರಬಂಧವನ್ನು ಬರೆಯಲು ನನಗೆ ಸಹಾಯ ಮಾಡಲು ಕುಳಿತಾಗ ವಿಧಿ ಮತ್ತೆಮ್ಮೆ ಮುಗುಳ್ನಕ್ಕಿತು. ಇತರ ಮಾರ್ಗದರ್ಶಿಗಳ ಬಗ್ಗೆ ನನಗೆ ತಿಳಿದಿರಲಿಲ್ಲ. ಆದರೆ ನನ್ನ ಗೈಡ್ ಲ್ಯಾಬ್ ಫಲಿತಾಂಶಗಳನ್ನು ಅರ್ಥೈಸುವ ಸೂಕ್ಷಗಳ ತರಬೇತಿ ನನಗೆ ನೀಡಲಿಲ್ಲ. ಪ್ರತಿದಿನ ಬೆಳಿಗ್ಗೆ ನನ್ನ ಪ್ರಬಂಧವನ್ನು ಬರೆಯಲು ಅವರೊಂದು ಸುಲಭ ದಾರಿ ಕಂಡುಕೊಂಡಿದ್ದರು.
ದಿನ ಮಧ್ಯಾಹ್ನ ಊಟದ ವೇಳೆ ಯವರೆಗೆ ಥೀಸಿಸ್ನ ಒಂದೊಂದೇ, ಕೆಲವೊಮ್ಮೆ ಇನ್ನೂ ಕಡಿಮೆ ಭಾಗಗಳನ್ನ dictate ಮಾಡುತಿದ್ದರು. ಊಟದ ನಂತರ ನಾನು ಅವರು ಬೆಳಿಗ್ಗೆ dictate ಮಾಡಿದ್ದನ್ನ ಅವರದೇ ಪೋರ್ಟಬಲ್ ಟೈಪ್ ರೈಟರ್ನಲ್ಲಿ ನಾನು ಟೈಪ್ ಮಾಡಿಬಿಡುತ್ತಿದ್ದೆ.
ಅದನ್ನು ಅವರು ಅಂದೇ ತಿದ್ದಿ, ತೀಡಿ ಒಪ್ಪ ಮಾಡಿ ಮಾರನೇ ದಿನ ಕೊಡುತಿದ್ದರು.ನನ್ನ ಕೆಲಸವು ಅತ್ಯಂತ ವೇಗವಾಗಿ ಸಾಗಿತು. ಒಂದೇ ತಿಂಗಳ ಅವಧಿಯಲ್ಲಿ ಥಿಸಿಸ್ ಡ್ರಾಫ್ಟ್, ಅಂತಿಮ ಟೈಪಿಂಗ್ ಮತ್ತು ಬೈಂಡಿಂಗ್‌ಗೆ ಸಿದ್ಧವಾಯಿತು. ಆದರೆ ನಾನು ಬೇರೆಯದೆ ರೀತಿಯ ತೊಂದರೆ ಅನುಭವಿಸಬೇಕಾಗಿತ್ತು. ನನ್ನಮನೆ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿತ್ತು.
ಬೆಳಿಗ್ಗೆ ಬಸ್ಸಿನಲ್ಲಿ ಹೆಬ್ಬಾಳ ತಲುಪುವುದು ಸುಲಭವಾಗಿತ್ತು. ಆದರೆ ನಗರ ಸಾರಿಗೆ ಬಳಸಿ ಮನೆಗೆ ಹಿಂತಿರುಗುವುದು ಅಸಾಧ್ಯವಾಗಿತ್ತು. ಬಸ್ಸುಗಳು ಬಹಳ ವಿರಳವಾಗಿದ್ದವು, ಆ ಪ್ರದೇಶದಲ್ಲಿ ಆಟೋಗಳು ಎಂದಿಗೂ ಸಂಚರಿಸುತ್ತಿರಲಿಲ್ಲ.
ಸಿಟಿ ಬಸ್‌ಗಾಗಿ ಗಂಟೆಗಟ್ಟಲೆ ಕಾಯುವ ಆರಂಭದ ಕಷ್ಟಕರ ಪ್ರಯತ್ನಗಳ ನಂತರ ನಾನು ಹೆಬ್ಬಾಳದ ಕಾಲೇಜಿನಿಂದ ಮನೆಗೆ ನಡೆಯಲು ಪ್ರಾರಂಭಿಸಿದೆ. ಸುಮಾರು 5 ಕಿ.ಮೀ ದೂರದಲ್ಲಿದ್ದ ಪ್ಯಾಲೇಸ್ ಗುಟ್ಟಹಳ್ಳಿಯಿಂದ ಪಶುವೈದ್ಯಕೀಯ ಕಾಲೇಜುವರೆಗಿನ ಖಾಲಿ ರಸ್ತೆಗಳು ಭಯಾನಕವಾಗಿದ್ದವು.
ಎಲ್ಲೋ ಒಮ್ಮೆ ಬಸ್ ಅಥವಾ ಲಾರಿ ಹೊರತುಪಡಿಸಿದರೆ ಬೀದಿಗಳು ವಿಲಕ್ಷಣವಾಗಿ ಖಾಲಿಯಾಗಿದ್ದವು. ಒಂದೆಡೆ ಬೆಂಗಳೂರು ಅರಮನೆಯ ಗೋಡೆ ಮತ್ತೊಂದೆಡೆ ಸದಾಶಿವನಗರದ ಶ್ರೀಮಂತರ, ದೊಡ್ಡ ಕಾಂಪೌಂಡಿದ್ದ ಬೃಹತ್ ಬಂಗಲೆ ಗಳು. ಮನುಷ್ಯರ ಸುಳಿವು ವಿರಳ. ಮೇಖ್ರಿ ವೃತ್ತವು ಬೆಂಗಳೂರು ನಗರದ ಗಡಿ ಯಾಗಿತ್ತು ಮತ್ತು ಹಗಲು ಕಳ್ಳತನದಂತಹ ಸಣ್ಣ ಅಪರಾಧಗಳಿಗೆ ಹೆಸರುವಾಸಿಯಾಗಿತ್ತು. ನಾನು ಮನೆಗೆ ಹಿಂತಿರುಗಲು ಹೆದರುತ್ತಿದ್ದೆ ಆದರೆ ಬೇರೆ ಯಾವುದೇ ದಾರಿ ಇರಲಿಲ್ಲ.
ಮಳೆಗಾಲದಲ್ಲಿ ಬೆಂಗಳೂರು ಮಳೆಯು ಜೋರಾಗಿ ಬಿಡುವಿಲ್ಲದಂತೆ ಸುರಿಯುತ್ತಿದ್ದರೆ ರಕ್ಷಣೆಗಾಗಿ ಮೈಲಿಗಟ್ಟಲೆ ಒಂದೇ ಒಂದು ಬಸ್ ಶೆಲ್ಟರ್ ಸಹ ಇರುತ್ತಿರಲಿಲ್ಲ ರಸ್ತೆ ಪೂರ್ತ ನೆನೆದು ಹಿಂಡಿ ಹಿಪ್ಪಯಾಗಿ ಮನೆ ಸೇರುತ್ತಿದ್ದೆ. ಅದೊಂದು ದುಃಸ್ವಪ್ನವಾಗಿತ್ತು.ಆದರೆ ಪ್ರಯತ್ನ ಫಲ ನೀಡಿತು. ನನ್ನ Ph. D. ಪ್ರಬಂಧ ಸುಸುತ್ರವಾಗಿ, ಶರ ವೇಗವಾಗಿ ಸಿದ್ದವಾಗಿ ಹೋಯಿತು.
ಒಂದೆರೆಡು ತಿಂಗಳು ಏನೂ ಕೆಲಸ ಇಲ್ಲದೆ ಮನೆಯಲ್ಲಿದ್ದೆ. ಇನ್ನೊಮ್ಮೆ ಸಣ್ಣದೊಂದು ಅದೃಷ್ಟದ stroke. ಅಮೆರಿಕದ ಅನಿವಾಸಿ ಭಾರತೀಯ ಡಾ. ಪ್ರಸಾದ್ ಎಂಬ ವಿಜ್ಞಾನಿ ಯೊಬ್ಬರು ಮೂರು ತಿಂಗಳ ಮಟ್ಟಿಗೆ ಸೆಂಟ್ರಕ್ ಕಾಲೇಜಿನಲ್ಲಿ ಬಾವುಲಿಯ ಮೇಲೆ ಕೆಲಸ ಮಾಡಲು ಬಂದರು. ಅವರಿಗೊಬ್ಬ ಸಂಶೋಧನಾ ಸಹಾಯಕಿ ಬೇಕಾಗಿತ್ತು. ನಾನೊಳ್ಳೆ physiologist ಅಂತ ಹೆಸರಿಸುತ್ತಿಲ್ಲ.
ನಮ್ಮ ಪ್ರೊಫೆಸರ್ ನನ್ನನ್ನು ಆ ಕೆಲಸಕ್ಕೆ ಶಿಪಾರಸು ಮಾಡಿ ತಿಂಗಳಿಗೆ ಐನೂರು ರೂಗಳ ಫೆಲೋಶಿಪ್ ಕೊಡಿಸಿದರು. ನಾನು ಹೆಣ್ಣು ಬಾವುಲಿಯ ಗರ್ಭಕೋಶದ RNA ಪ್ರಮಾಣವನ್ನ ( Ribonuclic acid) ಅಳೆಯಬೇಕಾಗಿತ್ತು. ಅದೊಂದು ಕ್ಲಿಷ್ಟಕರವಾದ experiment ಆಗಿದ್ದು ಪ್ರಥಮ ಬಾರಿಗೆ ನಮ್ಮ ವಿಭಾಗದಲ್ಲಿ ನಾನೇ ಮಾಡಿದ್ದು.
ಹೆಮ್ಮೆಯ ವಿಷಯವೆಂದರೆ ಅದನ್ನು ಕಲಿಯಲು ಆಗಿನ ಡ್ರಗ್ ಕಂಟ್ರೋಲರ್, ಡಾ.ದೇಸಾಯಿಯವರೇ ನನ್ನ ಬಳಿ ಬಂದಿದ್ದರು.ಈ ಕೆಲಸ ಮಾಡುತ್ತಾ ಮೂರು ತಿಂಗಳು ಮುಗಿದೇ ಹೋದವು. ನನ್ನ ಜೀವನದುದ್ದಕ್ಕೂ ನಾನೆಂದೂ ಕೆಲಸವಿಲ್ಲದೆ, ನಿರಾಶಳಾಗಿ ಕೈಕಟ್ಟಿ ಕೂತಿಲ್ಲ. ಪ್ರಸಾದ್ ಅವರ ಕೆಲಸ ಮುಗಿಯತ್ತಿದ್ದಂತೆ ನಾನು ಕನಸಲ್ಲೂ ಅಂದುಕೊಳ್ಳದ ರೀತಿಯಲ್ಲಿ ಲೆಕ್ಚರರ್ ಕೆಲಸವೊಂದು ಹುಡುಕಿ ಬಂದಿತು.
ಶಿರಾ ಪಟ್ಟಣದಲ್ಲಿ ಕೆಲ ಗಣ್ಯರು ಹೆಣ್ಣು ಮಕ್ಕಳಿಗೂ ಕಾಲೇಜು ಶಿಕ್ಷಣ ದೊರೆಯಬೇಕೆಂಬ ಸಧುದ್ದೇಶದಿಂದ ಒಂದು ಫಸ್ಟ್ ಗ್ರೇಡ್ ಕಾಲೇಜ್ ಸ್ಥಾಪಿಸಿದ್ದರು. ಆದರೆ ಉಪನ್ಯಾಸಕರೆಲ್ಲಾ ಗಂಡಸರೇ ಆದ ಕಾರಣ ಹುಡುಗಿಯರಿನ್ನೂ ಕಡಿಮೆ ಸಂಖ್ಯೆಯಲ್ಲೇ ಬರುತ್ತಿದ್ದರು. ಒಂದಿಬ್ಬರು ಹೆಂಗಸು ಲೆಕ್ಚರರ್ಗಳಿದ್ದರೆ ಪರಿಸ್ಥಿತಿ ಸುಧಾರಿಸುವ ಸಂಭವವಿತ್ತು.
ಅಲ್ಲಿಯ ಸಂಸ್ಥಾಪಕರೊಬ್ಬರ ಸಂಬಂಧಿ, ನಾಗರಾಜ ಎಂಬುವರೊಬ್ಬರು ನನ್ನ ತಂಗಿ ಗಂಡನ ಖಾಸ ದೋಸ್ತ. ನಮ್ಮ ಮನೆಗೂ ಬಂದು ಹೋಗುತ್ತಿದ್ದರು. ಅವರು ನನ್ನನ್ನು ಆ ಕಾಲೇಜಿಗೆ ಉಪನ್ಯಾಸಕಿಯಾಗಿ ಬರುವಂತೆ ಕೇಳಿಕೊಂಡರು.
ಬೆಂಗಳೂರಿನಲ್ಲಿ ಹೆಚ್ಚು ಕಡಿಮೆ ನನ್ನ ಜೀವಮಾನವನ್ನೇ ಕಳೆದು, ವೆಂಟ್ರಲ್ ಕಾಲೇಜಿನಂಥ ಪ್ರತಿಷ್ಟಿತ, ಆತ್ಯಾಧುನಿಕ ವಿದ್ಯಾನಿಲಯದಲ್ಲಿ ಆರು ವರ್ಷ್ ಕಳೆದು, Ph. D. ಮಾಡಿದ ನನಗೆ ಶಿರಾದಂಥ ಸಣ್ಣ ಪಟ್ಟಣದಲ್ಲಿ, ಅದೂ undergraduate ಕಾಲೇಜಿನಲ್ಲಿ ಕೆಲಸ ಮಾಡುವುದೆಂದರೆ ಹಾಸ್ಯಸ್ಪದವಾಗಿತ್ತು.
ಮೊದಲನೆಯದಾಗಿ ನಾನೇನೂ ಬೇರೆ ಮನೆ ಮಾಡ ಬೇಕಾಗಿಲ್ಲ. ಊಟ ತಿಂಡಿಗೆ ಯೋಚನೆಯಿಲ್ಲ. ಪಾಠ ದಿನಕ್ಕೆ ಹೆಚ್ಚoದರೆ ಎರಡು ಗಂಟೆ, ಅದೂ ಬೆಳಿಗ್ಗೆ ಹನ್ನೊಂದರೊಳಗೆ. ನಾನು ಇರಬೇಕಾಗಿದ್ದದ್ದು ಸಾಮಾನ್ಯರ ಮನೆ ಅಲ್ಲ. ನಾಗರಾಜ ಅವರ ತಂದೆ ಸ್ವಾತಂತ್ರ ಹೋರಾಟಗಾರರೂ,ಮೈಸೂರಿನ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾಗಿದ್ದ ದಿ.ಮಾಲಿ ಮರಿಯಪ್ಪನವರು.
ಶಿರಾದಲ್ಲಿ ಒಂದು ದೊಡ್ಡ ಮನೆಯಲ್ಲಿ ದಿ. ಮರಿಯಪ್ಪನವರ ಇಬ್ಬರು ತಮ್ಮಂದಿರ ಕುಟುಂಬಗಳು, ಅವರ ಒಬ್ಬ ಮೊಮ್ಮಗಳೂ ಮತ್ತು ಮನೆಗೆ ಹಿರಿಯರಾಗಿ,ಯಜಮಾನತಿಯಾಗಿ ಮರಿಯಪ್ಪನವರ ವಿಧವಾ ಪತ್ನಿಯೂ ಇದ್ದರು. ನನಗೆ ಒಂದು ಪ್ರತ್ಯೇಕ ಕೊಠಡಿ.
ಇದೊಂಥರ ಬೇರೆಯದೆ ಪ್ರಪಂಚ ಅನ್ನಿಸಿತು. ನಾನಾಗಲೇ ಬೆಂಗಳೂರು ಕೃಷಿ ವಿದ್ಯಾನಿಲಯದಲ್ಲಿ Ford Foundation ನವರು ಕೊಟ್ಟ ಅನುದಾನದ ಒಂದು project ನಡಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದೆ. ಬಹಶಃ ಸಂದರ್ಶನೂ ಮುಗಿದಿತ್ತು. ಸರಿ, ಅದು ಸಿಗುವವರೆಗೆ ಶಿರಾಕ್ಕೆ ಹೋಗಿಬಿಟ್ಟೆ.
Published On - 10:19 am, Sun, 28 August 22