ದೇಶದ ಪ್ರಮುಖ 130 ಜಲಾಶಯಗಳಲ್ಲಿ 2020ಕ್ಕಿಂತ ಹೆಚ್ಚು ನೀರು ಸಂಗ್ರಹ

ಕೇಂದ್ರ ಜಲ ಆಯೋಗವು ಮೇಲ್ವಿಚಾರಣೆ ನಡೆಸುವ 130 ಪ್ರಮುಖ ಜಲಾಶಯಗಳು ಈಗಾಗಲೇ ಅವುಗಳ ಒಟ್ಟು ಸಾಮರ್ಥ್ಯದ ಶೇ. 27 ರಷ್ಟು ತುಂಬಿವೆ. ಕಳೆದ10 ವರ್ಷದ ಸರಾಸರಿ ನೀರಿನ ಸಂಗ್ರಹ ಈ ಸಮಯಕ್ಕೆ ಶೇ. 21ರಷ್ಟಿತ್ತು. ಆದರೆ ಈ ವರ್ಷ ನೀರಿನ ಸಂಗ್ರಹದ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ.

ದೇಶದ ಪ್ರಮುಖ 130 ಜಲಾಶಯಗಳಲ್ಲಿ 2020ಕ್ಕಿಂತ ಹೆಚ್ಚು ನೀರು ಸಂಗ್ರಹ
ನರ್ಮದಾ ನದಿ
Follow us
TV9 Web
| Updated By: preethi shettigar

Updated on: Jun 20, 2021 | 2:12 PM

ಈ ಬಾರಿ ಮಳೆಗಾಲ ಆರಂಭಕ್ಕೂ ಮೊದಲೇ ಆಗಾಗ್ಗೆ ಗುಡುಗು ಸಹಿತ ಮಳೆಯಾಗಿದ್ದು, ಇದರ ಜತೆ ತೌಕ್ತೆ ಮತ್ತು ಯಾಸ್ ಎಂಬ ಎರಡು ಚಂಡಮಾರುತಗಳು ದೇಶದ ವಿವಿಧ ಭಾಗಗಳಿಗೆ ಅಪ್ಪಳಿಸಿದ್ದವು.  ಇದರ ಪರಿಣಾಮವಾಗಿ ಈ ವರ್ಷದ ನೈರುತ್ಯ ಮಾರುತಗಳು ಭಾರೀ ಮಳೆ ಸುರಿಸುತ್ತಿದ್ದು, ಮಳೆಗಾಲದ ಆರಂಭಿಕ ಹಂತದಲ್ಲಿಯೇ ನದಿಗಳು ತುಂಬಿವೆ. ಕೇಂದ್ರ ಜಲ ಆಯೋಗವು ಮೇಲ್ವಿಚಾರಣೆ ನಡೆಸುವ 130 ಪ್ರಮುಖ ಜಲಾಶಯಗಳು ಈಗಾಗಲೇ ಅವುಗಳ ಒಟ್ಟು ಸಾಮರ್ಥ್ಯದ ಶೇ. 27 ರಷ್ಟು ತುಂಬಿವೆ. ಕಳೆದ10 ವರ್ಷದ ಸರಾಸರಿ ನೀರಿನ ಸಂಗ್ರಹ ಈ ಸಮಯಕ್ಕೆ ಶೇ. 21ರಷ್ಟಿತ್ತು. ಆದರೆ ಈ ವರ್ಷ ನೀರಿನ ಸಂಗ್ರಹದ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ.

ಜಲಾಶಯದ ನೀರಿನ ಮಟ್ಟ ಜೂನ್ 17 ರ ಹೊತ್ತಿಗೆ, 130 ಜಲಾಶಯಗಳಲ್ಲಿನ ಒಟ್ಟು ನೀರಿನ ಸಂಗ್ರಹ 47.63 ಶತಕೋಟಿ ಘನ ಮೀಟರ್ (ಬಿಸಿಎಂ) ಆಗಿದೆ ಅಥವಾ 174.23 ಶತಕೋಟಿ ಘನ ಮೀಟರ್ ನೀರಿನ ಸಂಗ್ರಹದ ಸಾಮರ್ಥ್ಯದಲ್ಲಿ ಶೇ 27% ರಷ್ಟು ಈಗಾಗಲೇ ತುಂಬಿದೆ. ಕಳೆದ ವರ್ಷ ಜೂನ್‌ನ ಅಂತ್ಯದಲ್ಲಿ 55.11 ಬಿಸಿಎಂ ರಷ್ಟು ನೀರು ಸಂಗ್ರಹವಾಗಿತ್ತು.

130 ಜಲಾಶಯಗಳಲ್ಲಿ, 49 ಜಲಾಶಯಗಳು 2020 ರ ಜೂನ್‌ನಲ್ಲಿ ಸಂಗ್ರಹಿಸಿದ್ದಕ್ಕಿಂತ ಹೆಚ್ಚಿನ ನೀರನ್ನು ಹೊಂದಿವೆ. ಈ ಜಲಾಶಯಗಳಲ್ಲಿ ಹೆಚ್ಚಿನವು ಜಾರ್ಖಂಡ್, ತ್ರಿಪುರ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿವೆ.

2020 ರ ಜೂನ್​ಗಿಂತಲೂ ಕಡಿಮೆ ನೀರು ಸಂಗ್ರಹವಾಗಿರುವ ಜಲಾಶಯಗಳಲ್ಲಿ ಅನೇಕವು ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ಪಂಜಾಬ್, ಹಿಮಾಚಲ ಪ್ರದೇಶ, ಛತ್ತೀಸ್​ಗಡ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿವೆ. ಈ ವರ್ಷ ಒಡಿಶಾದ ಹರಿಹರ್ಜೋರ್ ಮತ್ತು ಮಹಾರಾಷ್ಟ್ರದ ಉಜ್ಜನಿಯ ಎರಡು ದೊಡ್ಡ ಅಣೆಕಟ್ಟುಗಳು ನೀರಿನ ಸಂಗ್ರಹಣೆಯ ಅಂತಿಮ ಹಂತ ತಲುಪಿವೆ. ಕಳೆದ ವರ್ಷ ಈ ಸಮಯಕ್ಕೆ ಹರಿಹರ್ಜೋರ್ ಅಣೆಕಟ್ಟು ತನ್ನ ಸಾಮರ್ಥ್ಯದ ಶೇ 59 ತುಂಬಿತ್ತು.

ಗಂಗಾ, ನರ್ಮದಾ, ತಾಪಿ, ಕೃಷ್ಣ, ಮಹಾನದಿ ಮತ್ತು ಕಾವೇರಿಗಳಲ್ಲಿ ನೀರಿನ ಮಟ್ಟ ಸಾಧಾರಣ ಸ್ಥಿತಿಯಲ್ಲಿದೆ. ಮಾಹಿ ಮತ್ತು ಸಿಂಧೂ ನದಿಯ ಜಲಾನಯನ ಪ್ರದೇಶಗಳಲ್ಲಿ ಸ್ವಲ್ಪಮಟ್ಟಿಗೆ ನೀರು ಸಂಗ್ರಹವಾಗಿದ್ದು, ಕೆಲವು ಭಾಗಗಳಲ್ಲಿ ನೀರಿನ ಕೊರತೆ ಕಂಡುಬಂದಿದೆ.

ಪ್ರದೇಶವಾರು ಮಳೆ ಮಾಹಿತಿ ಜೂನ್ 17 ರಂದು ಉತ್ತರ ಪ್ರದೇಶದ ಎಂಟು ಜಲಾಶಯಗಳಲ್ಲಿ (ಹಿಮಾಚಲ ಪ್ರದೇಶ, ಪಂಜಾಬ್, ರಾಜಸ್ಥಾನ), ಲಭ್ಯವಿರುವ ನೀರಿನ ಮಟ್ಟ 3.82 ಬಿಸಿಎಂ ಅಥವಾ ಅವುಗಳ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯದ ಶೇ 20ರಷ್ಟಾಗಿದೆ.

ಪೂರ್ವ ಪ್ರದೇಶದ 20 ಜಲಾಶಯಗಳಲ್ಲಿ (ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ತ್ರಿಪುರ, ನಾಗಾಲ್ಯಾಂಡ್), ಲಭ್ಯವಿರುವ ನೀರಿನ ಮಟ್ಟ 4.59 ಬಿಸಿಎಂ ಅಥವಾ ಅವುಗಳ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯದ ಶೇ 23 ರಷ್ಟಿದೆ. ಕಳೆದ ವರ್ಷ ಈ ಜಲಾಶಯಗಳು ಶೇ 28 ನೀರು ಸಂಗ್ರಹಿಸಿದ್ದವು.

ಗುಜರಾತ್ ಮತ್ತು ಮಹಾರಾಷ್ಟ್ರಗಳನ್ನು ಒಳಗೊಂಡಿರುವ ಪಶ್ಚಿಮ ಪ್ರದೇಶದಲ್ಲಿ 42 ಪ್ರಮುಖ ಜಲಾಶಯಗಳಿವೆ. ಇಲ್ಲಿ 9.95 ಬಿಸಿಎಂ ಅಥವಾ ಅವುಗಳ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯದ ಶೇ 28 ರಷ್ಟು ನೀರಿದೆ. ಜೂನ್ 2020 ರಲ್ಲಿ, ಈ ಜಲಾಶಯಗಳು ಶೇ 36ರಷ್ಟು ನೀರು ಸಂಗ್ರಹಿಸಿದ್ದವು.

ಮಧ್ಯ ಭಾರತದ 23 ಜಲಾಶಯಗಳಲ್ಲಿ (ಯುಪಿ, ಉತ್ತರಾಖಂಡ್, ಮಧ್ಯಪ್ರದೇಶ, ಛತ್ತೀಸ್​ಗಡ) ಪ್ರಸ್ತುತ ನೀರಿನ ಸಂಗ್ರಹವು 12.73 ಬಿಸಿಎಂ ಅಥವಾ ಅವುಗಳ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯದ ಶೇ 28 ಆಗಿದೆ.

ದಕ್ಷಿಣ ಪ್ರದೇಶವಾದ ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ಮತ್ತು ತಮಿಳುನಾಡು 37 ಜಲಾಶಯಗಳನ್ನು ಹೊಂದಿದ್ದು, ಇದರಲ್ಲಿ ಲಭ್ಯವಿರುವ ನೀರು ಶೇ 16.55 ಬಿಸಿಎಂ ಅಥವಾ ಒಟ್ಟು ಶೇ 30 ಸಾಮರ್ಥ್ಯ ಹೊಂದಿದೆ. 2020 ರಲ್ಲಿ, ಈ ಜಲಾಶಯಗಳು ಶೇ 24ರಷ್ಟು ನೀರು ಸಂಗ್ರಹಿಸಿದ್ದವು.

ಹವಾಮಾನ ಮತ್ತು ಸಂಗ್ರಹಣೆ 2021ರ ಬೇಸಿಗೆ ಸಮಯದಲ್ಲೂ ಸಹ ಕೆಲ ಪ್ರದೇಶಗಳಲ್ಲಿ ತಂಪಾದ ವಾತಾವರಣ ಕಂಡು ಬಂದಿದೆ. ಮಾರ್ಚ್ ಮತ್ತು ಮೇ ನಡುವೆ ಅನೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆ ಉಂಟಾಗಿದ್ದು, ಬೇಸಿಗೆಯಲ್ಲೂ ತಂಪಾದ ಇಳೆಗೆ ಇದು ಕಾರಣವಾಗಿದೆ.

ಮೇ ಎರಡನೇ ಮತ್ತು ಮೂರನೇ ವಾರಗಳಲ್ಲಿ, ತೌಕ್ತೆ ಮತ್ತು ಯಾಸ್ ಚಂಡಮಾರುತಗಳು ದೇಶದ ಮೂರನೇ ಎರಡರಷ್ಟು ಭಾಗಗಳಲ್ಲಿ ಅಂದರೆ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಉತ್ತರ ಪ್ರದೇಶ, ದೆಹಲಿ, ಬಿಹಾರ ಮತ್ತು ಈಶಾನ್ಯದ ಕೆಲವು ಕಡೆ ವ್ಯಾಪಕ ಮಳೆಯಾಗಲು ಕಾರಣವಾಯಿತು. .

ಅಖಿಲ ಭಾರತ ಸಾಪ್ತಾಹಿಕ ಮಳೆಯ ಪ್ರಮಾಣ ಮೇ 12ರಿಂದ19 ಮತ್ತು ಮೇ 20ರಿಂದ26ರ ಅವಧಿಯಲ್ಲಿ ಶೇ 127 ಮತ್ತು ಶೇ 94 ರಷ್ಟಿದೆ.

ಇದನ್ನೂ ಓದಿ: Karnataka Monsoon 2021: ಮೈಸೂರಿನ ಕಬಿನಿ ಜಲಾಶಯದಲ್ಲಿ ಗರಿಷ್ಠ ನೀರು ಶೇಖರಣೆ; ಮಳೆಯಿಂದ ಸಂತಸ

Coastal Karnataka Monsoon: ಕರಾವಳಿ ಭಾಗದಲ್ಲಿ ಕೊಂಚ ತಗ್ಗಿದ ಮಳೆರಾಯನ ಆರ್ಭಟ

ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!